ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 28ರಂದು ದೆಹಲಿ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಪ್ರಥಮ ಚಾಲಕ ರಹಿತ ರೈಲು ಸಂಚಾರ ಉದ್ಘಾಟಿಸಲಿರುವ ಪ್ರಧಾನಮಂತ್ರಿ


ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯಾಚರಣೆಯ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

Posted On: 26 DEC 2020 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ  ಸಂಪೂರ್ಣ ಕಾರ್ಯಾಚರಣೆಯ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯೊಂದಿಗೆ ದೆಹಲಿ ಮೆಟ್ರೋದ ನೇರಳೆ ಮಾರ್ಗದಲ್ಲಿ (ಜನಕ್'ಪುರಿ ಪಶ್ಚಿಮ – ಸಸ್ಯೋದ್ಯಾನ -ಬಟಾನಿಕಲ್ ಗಾರ್ಡನ್) ನಡುವೆ ಭಾರತದ ಪ್ರಪ್ರಥಮ ಚಾಲಕ ರಹಿತ ರೈಲು ಸಂಚಾರಕ್ಕೆ 2020ರ ಡಿಸೆಂಬರ್ 28ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಆವಿಷ್ಕಾರಗಳು ಪ್ರಯಾಣ ಸೌಕರ್ಯ ಮತ್ತು ವರ್ಧಿತ ಚಲನಶೀಲತೆಯ ಹೊಸ ಯುಗದ ಹರಿಕಾರ ಆಗಲಿವೆ. ಚಾಲಕ ರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರಲಿದ್ದು, ಇದು ಮಾನವರಿಂದಾಗುವ ಲೋಪದ ಸಾಧ್ಯತೆಯನ್ನು ನಿವಾರಿಸುತ್ತವೆ. ನೇರಳೆ ಮಾರ್ಗದಲ್ಲಿ ಚಾಲಕರಹಿತ ಸೇವೆಗಳು ಪ್ರಾರಂಭವಾದ ನಂತರ, ದೆಹಲಿ ಮೆಟ್ರೋದ ನೇರಳೆ ಮಾರ್ಗ 2021ರ ಮಧ್ಯಭಾಗದ ಹೊತ್ತಿಗೆ ಚಾಲಕರಹಿತ ಕಾರ್ಯಾಚರಣೆಯನ್ನು ನಡೆಸುವ ನಿರೀಕ್ಷೆಯಿದೆ.
ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ  ಸಂಪೂರ್ಣ ಕಾರ್ಯಾಚರಣೆಗೆ ಬರುವ ರಾಷ್ಟ್ರೀಯ ಸಮಾನ ಚಲನಶೀಲತೆ ಕಾರ್ಡ್ ಸೇವೆಯು ದೇಶದ ಯಾವುದೇ ಭಾಗದಲ್ಲಿ ನೀಡಲಾಗಿರುವ ರೂಪೇ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಆ ಕಾರ್ಡ್ ಬಳಸಿ ಸಂಚರಿಸಲು ಅವಕಾಶ ಕಲ್ಪಿಸುತ್ತದೆ. ಈ ಸೇವೆ ಇಡೀ ದೆಹಲಿ ಮೆಟ್ರೋ ಜಾಲದಲ್ಲಿ 2022ರ ಹೊತ್ತಿಗೆ ಲಭ್ಯವಾಗಲಿದೆ.

******


(Release ID: 1683809) Visitor Counter : 185