ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆರೋಗ್ಯ ಮತ್ತು ಔಷಧಿ ಕ್ಷೇತ್ರಗಳ ಸಹಕಾರ ಕುರಿತು ಭಾರತ ಮತ್ತು ಸುರಿನಾಮ್ ನಡುವಿನ ಒಪ್ಪಂದಕ್ಕೆ ಸಂಪುಟದ ಅನುಮೋದನೆ

प्रविष्टि तिथि: 09 DEC 2020 3:50PM by PIB Bengaluru

ಆರೋಗ್ಯ ಮತ್ತು ಔಷಧಿ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು, ಭಾರತ ಗಣರಾಜ್ಯ ಸರ್ಕಾರ ಮತ್ತು ಸುರಿನಾಮ್ ಗಣ ರಾಜ್ಯದ ಆರೋಗ್ಯ ಸಚಿವಾಲಯದ ನಡುವಿನ ಒಪ್ಪಂದಕ್ಕೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಆರೋಗ್ಯ ಕ್ಷೇತ್ರದಲ್ಲಿ ಜಂಟಿ ಉಪಕ್ರಮಗಳು ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಮೂಲಕ ದ್ವಿಪಕ್ಷೀಯ ಒಪ್ಪಂದ, ಭಾರತ ಗಣರಾಜ್ಯದ ಆರೋಗ್ಯ ಮತ್ತು ಕುಟುಂನ ಕಲ್ಯಾಣ ಸಚಿವಾಲಯ ಮತ್ತು ಸುರಿನಾಮ್ ಗಣ ರಾಜ್ಯದ ಆರೋಗ್ಯ ಸಚಿವಾಲಯದ ನಡುವಿನ ಸಹಕಾರವನ್ನು ಉತ್ತೇಜಿಸುತ್ತದೆ. ಇದು ಭಾರತ ಮತ್ತು ಸುರಿನಾಮ್ ನಡುವಿನ ದ್ವಿಪಕ್ಷೀಯ ಸಂಬಂಧಗಳಿಗೆ ಪುಷ್ಠಿ ನೀಡುತ್ತದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪರಿಣಿತಿಯನ್ನು ಹಂಚಿಕೊಳ್ಳುವ ಮೂಲಕ ಮತ್ತು ವಿವಿಧ ಸಂಬಂಧಿತ ಕ್ಷೇತ್ರಗಳಲ್ಲಿ ಪರಸ್ಪರ ಸಂಶೋಧನೆಗಳನ್ನು ಉತ್ತೇಜಿಸುವ ಮೂಲಕ ಸ್ವಾವಲಂಬಿ ಭಾರತದ ಗುರಿಯನ್ನು ತಲುಪುವತ್ತ ಸಾಗಲಿದೆ.

ಪ್ರಮುಖ ಅಂಶಗಳು:

ಎರಡೂ ಸರ್ಕಾರಗಳ ಮಧ್ಯೆ ಸಹಕಾರದ ಪ್ರಮುಖ ಕ್ಷೇತ್ರಗಳು ಕೆಳಗಿನಂತಿವೆ:

I. ವೈದ್ಯರು, ವೈದ್ಯಕೀಯ ಅಧಿಕಾರಿಗಳು, ಇತರ ಆರೋಗ್ಯ ವೃತ್ತಿಪರರು ಮತ್ತು ಪರಿಣಿತರ ತರಬೇತಿ ಮತ್ತು ವಿನಿಮಯ;

II. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನೆರವು ಮತ್ತು ಆರೋಗ್ಯ ಚಿಕಿತ್ಸಾ ಸೌಲಭ್ಯಗಳ ನಿರ್ಮಾಣ;

III. ಆರೋಗ್ಯ ವಲಯದಲ್ಲಿ ಮಾನವ ಸಂಪನ್ಮೂಲಗಳ ಅಲ್ಪಾವಧಿ ತರಬೇತಿ

IV. ಔಷಧೀಯ, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ನಿಯಂತ್ರಣ ಹಾಗೂ ಅವುಗಳ ಕುರಿತಾದ ಮಾಹಿತಿ ವಿನಿಮಯ;

V. ಔಷಧಿ ವಲಯದಲ್ಲಿ ವ್ಯಾಪಾರ ಅಭಿವೃದ್ಧಿ ಅವಕಾಶಗಳಿಗೆ ಉತ್ತೇಜನ;

VI. ಜೆನೆರಿಕ್ ಮತ್ತು ಅವಶ್ಯಕ ಔಷಧಿಗಳ ಖರೀದಿ ಹಾಗೂ ಔಷಧಿಗಳ ಸರಬರಾಜಿನ ಹಂಚಿಕೆಯಲ್ಲಿ ನೆರವು;

VII. ಆರೋಗ್ಯ ಪರಿಕರಗಳ ಮತ್ತು ಔಷಧೀಯ ಉತ್ಪನ್ನಗಳ ಖರೀದಿ

VIII. ತಂಬಾಕು ನಿಯಂತ್ರಣ;

IX. ಮಾನಸಿಕ ಆರೋಗ್ಯದ ಕುರಿತು ಪ್ರಚಾರ;

X. ಖಿನ್ನತೆಯ ಆರಂಭಿತ ಪತ್ತೆ ಮತ್ತು ನಿರ್ವಹಣೆ

XI. ಡಿಜಿಟಲ್ ಆರೋಗ್ಯ ಮತ್ತು ಟೆಲಿ ಮೆಡಿಸಿನ್; ಮತ್ತು

XII. ಪರಸ್ಪರ ನಿರ್ಧರಿಸಲ್ಪಡಃವಂತಹ ಸಹಕಾರದ ಯಾವುದೇ ಕ್ಷೇತ್ರ

***


(रिलीज़ आईडी: 1679601) आगंतुक पटल : 245
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Punjabi , Gujarati , Odia , Telugu , Malayalam