ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತವು ತನ್ನ ದ್ವೀಪಗಳಾದ- ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷ ದ್ವೀಪವನ್ನು ಹಸಿರು ಇಂಧನವಾಗಿಸುವ ಗುರಿ ಹೊಂದಿದೆ: 3 ನೇ ಜಾಗತಿಕ ಮರು-ಹೂಡಿಕೆಯ ಸಂದರ್ಭದಲ್ಲಿ ಮಾಲ್ಡೀವ್ಸ್ ನ ಕಂಟ್ರಿ ಅಧಿವೇಶನದಲ್ಲಿ ಶ್ರೀ ಆರ್.ಕೆ. ಸಿಂಗ್
ಆರ್.ಇ ಯೋಜನೆಗಳನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಮಾಲ್ಡೀವ್ಸ್ ಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಿದ್ಯುತ್ ಸಚಿವರ ಭರವಸೆ
Posted On:
28 NOV 2020 7:31PM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಇಂಧನ ಖಾತೆ ಸಚಿವ ಶ್ರೀ ಆರ್.ಕೆ. ಸಿಂಗ್ ಅವರು ಆರ್.ಇ. ಯೋಜನೆಗಳಲ್ಲಿ ದ್ವೀಪರಾಷ್ಟ್ರ ಮಾಲ್ಡೀವ್ಸ್ ಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ. 3ನೇ ಜಾಗತಿಕ ಮರು ಹೂಡಿಕೆಯ ಕಂಟ್ರಿ ಅಧಿವೇಶನದಲ್ಲಿ ಮಾತನಾಡಿದ ಶ್ರೀ ಸಿಂಗ್ ಭಾರತವು ತನ್ನ ದ್ವೀಪಗಳನ್ನು ಸಂಪೂರ್ಣವಾಗಿ ಹಸಿರು ಇಂಧನವಾಗಿಡಲು ಆದ್ಯತೆ ನೀಡಿದೆ. ನಮ್ಮ ದ್ವೀಪಗಳಿಗೆ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷ ದ್ವೀಪ) ಸಂಪೂರ್ಣವಾಗಿ ಹಸಿರು ಇಂಧನ ಹೊಂದುವ ಗುರಿ ನೀಡಿದ್ದೇವೆ, ಅಂದರೆ ಅವುಗಳ ಇಂಧನ ಶಕ್ತಿಯ ಅಗತ್ಯಗಳನ್ನು ನವೀಕರಿಸಬಹುದಾದ ಇಂಧನದಿಂದ ಪೂರೈಸಬೇಕು ಎಂದು ವಿದ್ಯುತ್ ಸಚಿವರು ಹೇಳಿದರು.

ಹವಾಮಾನ ಬದಲಾವಣೆಯನ್ನು ಶೇ.1ರೊಳಗೆ ನಿರ್ವಹಿಸುವ ಬದ್ಧತೆಯನ್ನು ಪೂರೈಸಿದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಅವರು ಪುನರುಚ್ಚರಿಸಿದರು. ಭಾರತವು 136000 ಮೆ.ವ್ಯಾ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಿದೆ ಇನ್ನೂ 57000 ಮೆ.ವ್ಯಾ. ಹೆಚ್ಚುವರಿ ಸಾಮರ್ಥ್ಯದ ಸ್ಥಾಪನೆ ಪ್ರಗತಿಯಲ್ಲಿದೆ ಎಂದರು.
ಭಾರತವು ದೃಢವಾದ ಇಂಧನ ದಕ್ಷತೆಯ ಕಾರ್ಯಕ್ರಮವನ್ನು ಹೊಂದಿದೆ ಎಂದ ಶ್ರೀ ಸಿಂಗ್, ಇದರ ಅಡಿಯಲ್ಲಿ 11 ದಶಲಕ್ಷಕ್ಕೂ ಹೆಚ್ಚು ಎಲ್.ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ, "ಎಲ್ಇಡಿ ಅಲ್ಲದ ಬಲ್ಬ್ ಅನ್ನು ಹುಡುಕಲು ನೀವು ತುಂಬಾ ಶ್ರಮಿಸಬೇಕಾಗುತ್ತದೆ" ಎಂದು ಹೇಳಿದರು. ಸಿಓ2 ತ್ಯಾಜ್ಯ ಹೊರಸೂಸುವಿಕೆ ತಗ್ಗಿಸಲು ಹಸಿರು ಇಂಧನ ಮೂಲಗಳಿಗೆ ಉನ್ನತ ಆದ್ಯತೆ ನೀಡಲಾಗುತ್ತಿದೆ ಎಂದರು. ಸುಂದರ ರಾಷ್ಟ್ರವಾದ ಮಾಲ್ಡೀವ್ಸ್ ಆಕರ್ಷಕ ಪ್ರವಾಸಿ ತಾಣವಾಗಿಸಲು ಹೆಚ್ಚಿನ ಸೌಂದರ್ಯೀಕರಣ ಮತ್ತು ನಿರ್ವಹಣೆಗೆ ಒತ್ತು ನೀಡಬೇಕು ಎಂದರು. ಆದ್ದರಿಂದ, ಮಾಲ್ಡೀವ್ಸ್ ನಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಗಮನವನ್ನು ನೀಡುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಭಾರತದ ಆರ್. ಇ. ವಲಯದಲ್ಲಿ ಮುಕ್ತ ಬಿಡ್ ಮತ್ತು ಮುಕ್ತ ಸ್ಪರ್ಧೆಯೊಂದಿಗೆ ಬೃಹತ್ ಆರ್.ಇ. ಸಾಮರ್ಥ್ಯ ಹೆಚ್ಚಳ ಸೇರ್ಪಡೆ ಕುರಿತು ಮಾತನಾಡಿದ ಶ್ರೀ ಸಿಂಗ್, ನಾವು ಹೂಡಿಕೆ ಮಾಡಬೇಕಾಗಿಲ್ಲ, ಹೂಡಿಕೆಗಳು ಪ್ರಪಂಚದಾದ್ಯಂತ ಬಂರುತ್ತವೆ ಎಂದು ಹೇಳಿದರು., ಆರ್.ಇ ಸಚಿವಾಲಯದಲ್ಲಿನ ಒಂದು ಗುಂಪಿನ ಮೂಲಕ ಯೋಜನೆ ಕಾರ್ಯಗತಗೊಳಿಸುವಿಕೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲಾಗುತ್ತಿದೆ, ಪಾವತಿ ಭದ್ರತೆ, ಒಪ್ಪಂದದ ವಿವಾದಗಳಿವೆಯೇ ಎಂದು ನಿರ್ಧರಿಸಲು ಪ್ರತ್ಯೇಕ / ತಟಸ್ಥ ಸಂಸ್ಥೆಯೊಂದಿಗೆ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆಯೊಂದನ್ನು ನಮ್ಮಲ್ಲಿ ಹೊಂದಿದ್ದೇವೆ ಎಂದೂ ಹೇಳಿದರು. ಅದೆಲ್ಲ ನಮಗೆ ಸಹಾಯ ಮಾಡಿದೆ ಎಂದರು. ನಮಗೆ ಪರಿಸರ ನಂಬಿಕೆಯ ವಸ್ತುವಾಗಿದೆ ಎಂದು ಸಚಿವರು ಹೇಳಿದರು. "ಆದ್ದರಿಂದ ನಾವು ನಮ್ಮ ಇಂಗಾಲದ ಹೆಜ್ಜೆ ಗುರುತುಗಳನ್ನು ತಗ್ಗಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದೂ ಅವರು ಹೇಳಿದರು.
ಈಗ ನಮ್ಮ ಗುರಿ 450 ಗಿ.ವ್ಯಾ ಅಥವಾ 4,50,000 ಮೆ.ವ್ಯಾ ಆರ್.ಇ. ಸಾಮರ್ಥ್ಯವನ್ನು 2030ರ ಹೊತ್ತಿಗೆ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಶ್ರೀ ಸಿಂಗ್ ಹೇಳಿದರು. ನವೀಕರಿಸಬಹುದಾದ ಇಂಧನ ದ್ವೀಪ ರಾಜ್ಯಗಳಿಗೆ ಮಾತ್ರವೇ ಅಲ್ಲ ಇಡೀ ವಿಶ್ವಕ್ಕೇ ಅಗತ್ಯ ಎಂದು ಪ್ರತಿಪಾದಿಸಿದರು. ಭೂಗ್ರಹವನ್ನು ಸಂರಕ್ಷಿಸಲು ನಮ್ಮ ಇಂಗಾಲದ ಹೆಜ್ಜೆ ಗುರುತುಗಳನ್ನು ನಾವು ತಗ್ಗಿಸಬೇಕಾಗಿದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಿದೆ. ದ್ವೀಪದ ತಾಪಮಾನ / ಪ್ರದೇಶಗಳು ಜಾಗತಿಕ ತಾಪಮಾನ ಏರಿಕೆಗೆ ಹೆಚ್ಚು ಗುರಿಯಾಗುತ್ತವೆ ಎಂಬ ಅವರ ಭಾವನೆಗಳನ್ನು ಮಾರ್ಧನಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮಾಲ್ಡೀವ್ಸ್ ಸರ್ಕಾರದ ಸಚಿವ ಹುಸೇನ್ ರಶೀದ್ ಹಸನ್ (ಎಂಇ) ತೈಲ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಪ್ರತಿಕೂಲ ಹವಾಮಾನ ಬದಲಾವಣೆಗಳ ಪ್ರಭಾವ ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ನವೀಕರಿಸಬಹುದಾದ ಇಂಧನ ಮೂಲದ ಮಹತ್ವವನ್ನು ಅವರು ಒತ್ತಿ ಹೇಳಿದರು. ಆರ್.ಇ ಅನ್ನು ಉತ್ತೇಜಿಸಲು ಹೂಡಿಕೆದಾರ ಸ್ನೇಹಿ ಕ್ರಮಗಳು / ನೀತಿಗಳನ್ನು ಅವರು ವಿವರಿಸಿದರು.

2013ರಿಂದ, ಮಾಲ್ಡೀವ್ಸ್ ಸರ್ಕಾರವು ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲು ನವೀಕರಿಸಬಹುದಾದ ಇಂಧನ ಗುರಿಗಳನ್ನು ಪೂರ್ವಭಾವಿಯಾಗಿ ಅನುಸರಿಸುತ್ತಿದ್ದು. ದೇಶದಲ್ಲಿ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸಲು ಮತ್ತು ಖಾಸಗಿ ವಲಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯನ್ನು ಅದರ ಒಂಬತ್ತು ಪ್ರಮುಖ ನೀತಿಗಳಲ್ಲಿ ಒಂದಾಗಿ ಉತ್ತೇಜಿಸಲು ಪ್ರಯತ್ನಿಸುವ ಕಾರ್ಯತಂತ್ರ 2016 (“2016 ಇಂಧನ ನೀತಿ”), ಮಾಲ್ಡೀವ್ಸ್ ನ ಇತ್ತೀಚಿನ ರಾಷ್ಟ್ರೀಯ ಕಾರ್ಯತಂತ್ರದ ಕ್ರಿಯಾ ಯೋಜನೆಗೆ (2019- 2023) (ಎಸ್‌ಎಪಿ), 2023 ರ ವೇಳೆಗೆ ನವೀಕರಿಸಬಹುದಾದ ಇಂಧನ ಪಾಲನ್ನು ಶೇಕಡಾ 20ರಷ್ಟು ಹೆಚ್ಚಿಸಲು ನವೀಕರಿಸಬಹುದಾದ ಇಂಧನ ಗುರಿಗಳೊಂದಿಗೆ ಶುದ್ಧ ಇಂಧನ ನಿರ್ದಿಷ್ಟ ಸ್ತಂಭವನ್ನು ಒಳಗೊಂಡಿದೆ. ಮಾಲ್ಡೀವ್ಸ್ ನಾದ್ಯಂತ ನವೀಕರಿಸಬಹುದಾದ ಶಕ್ತಿಯನ್ನು ಹೆಚ್ಚಿಸುವ ಅವಕಾಶವು ಅಪಾರವಾಗಿದ್ದು, ಇದು ಪ್ರತಿವರ್ಷ ಲಕ್ಷಾಂತರ ಡಾಲರ್ ಗಳನ್ನು ಉಳಿಸುವ ಮೂಲಕ ಸರ್ಕಾರದ ಬಜೆಟ್ ಪರಿಹಾರವನ್ನು ಒದಗಿಸುತ್ತದೆ, ಇದನ್ನು ಪ್ರಸ್ತುತ ಡೀಸೆಲ್ ಆಮದು ಮತ್ತು ಸಬ್ಸಿಡಿಗಾಗಿ ಬಳಸಲಾಗುತ್ತಿದೆ. ವಿಶ್ವ ಬ್ಯಾಂಕ್ ವೇಗವರ್ಧಕ ಸುಸ್ಥಿರ ಖಾಸಗಿ ಹೂಡಿಕೆಗಳನ್ನು ನವೀಕರಿಸಬಹುದಾದ ಇಂಧನ (ಎಎಸ್.ಪಿ.ಐಆರ್) ಯೋಜನೆಯಡಿ 5 ಮೆಗಾ ವ್ಯಾಟ್ ಪಿಪಿಎಗೆ ಸಹಿ ಮಾಡಿರುವುದು ಮಾಲ್ಡೀವ್ಸ್ ನ ನವೀಕರಿಸಬಹುದಾದ ಇಂಧನ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ. ಈ ಯೋಜನೆಯು ಮಾಲ್ಡೀವ್ಸ್ ಗೆ ಗಾತ್ರದಿಂದ ಪ್ರಪ್ರಥಮವಾದುದಾಗಿದ್ದು, 10.9 ಸೆಂಟ್ಸ್ ಅಮೆರಿಕನ್ ಡಾಲರ್ ದರವನ್ನು ಸಾಧಿಸಿದೆ. ಇದು ಮಾಲ್ಡೀವ್ಸ್ ನಂತಹ ಸಣ್ಣ ಅಭಿವೃದ್ಧಿಶೀಲ ದ್ವೀಪರಾಷ್ಟ್ರಕ್ಕೆ (ಎಸ್.ಐಡಿಎಸ್) ಕಡಿಮೆ ದರಗಳಲ್ಲಿ ಒಂದಾಗಿದ್ದು, ಸೂಕ್ತ ಸ್ಥಾನ ಪಡೆಯಲು ಆರ್.ಇ. ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತದೆ. ಪಳೆಯುಳಿಕೆ ಇಂಧನ ಮುಕ್ತ ಭವಿಷ್ಯಕ್ಕಾಗಿ ತಮ್ಮ ಕನಸನ್ನು ಸಾಧಿಸುವಲ್ಲಿ ಮುಂಬರುವ ವೇಗವರ್ಧಕ ನವೀಕರಿಸಬಹುದಾದ ಇಂಧನ ಏಕೀಕರಣ ಮತ್ತು ಸುಸ್ಥಿರ ಇಂಧನ (ಎ.ಆರ್.ಐ.ಎಸ್.ಇ.) ಯೋಜನೆಯ ಮೂಲಕ ವಿಶ್ವ ಬ್ಯಾಂಕ್ ಮಾಲ್ಡೀವ್ಸ್ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
***
(Release ID: 1676936)