ಸಂಪುಟ
ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐಸಿಎಐ) ಮತ್ತು ನೆದರ್ ಲ್ಯಾಂಡ್ಸ್ ನ ವೆರೆನಿಜಿಂಗ್ ವ್ಯಾನ್ ರಿಜಿಸ್ಟರ್ ಕಂಟ್ರೋಲರ್ಸ್ (ವಿಆರ್.ಸಿ.) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ
Posted On:
25 NOV 2020 3:27PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐಸಿಎಐ) ಮತ್ತು ನೆದರ್ ಲ್ಯಾಂಡ್ಸ್ ನ ವೆರೆನಿಜಿಂಗ್ ವ್ಯಾನ್ ರಿಜಿಸ್ಟರ್ ಕಂಟ್ರೋಲರ್ಸ್ (ವಿಆರ್.ಸಿ.) ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ಅಂಕಿತ ಹಾಕಲು ತನ್ನ ಸಮ್ಮತಿ ಸೂಚಿಸಿದೆ.
ಈ ಒಪ್ಪಂದವು ನೆದರ್ ಲ್ಯಾಂಡ್ಸ್ ಮತ್ತು ಭಾರತದ ನಡುವಿನ ಲೆಕ್ಕಪತ್ರ ನಿರ್ವಹಣೆ, ಹಣಕಾಸು ಮತ್ತು ಲೆಕ್ಕಪರಿಶೋಧನಾ ಜ್ಞಾನ ನೆಲೆಯ ಬಲವರ್ಧನೆ ಮತ್ತು ಅಭಿವೃದ್ಧಿಗೆ ನೆರವಾಗುತ್ತದೆ.
ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು:
i. ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಸಮ್ಮೇಳನವನ್ನು ನೆದರ್ ಲ್ಯಾಂಡ್ ನಲ್ಲಿ ಆಯೋಜಿಸಲು ಐಸಿಎಐ ಮತ್ತು ವಿ.ಆರ್.ಸಿ. ಒಟ್ಟಿಗೆ ಕಾರ್ಯ ನಿರ್ವಹಿಸಲಿವೆ;
- ಸದಸ್ಯರ ನಿರ್ವಹಣೆ, ವೃತ್ತಿಪರ ಸಿದ್ಧಾಂತ, ತಾಂತ್ರಿಕ ಸಂಶೋಧನೆ, ಮುಂದುವರಿದ ವೃತ್ತಿಪರ ಶಿಕ್ಷಣ, ವೃತ್ತಿಪರ ಲೆಕ್ಕಶಾಸ್ತ್ರದ ತರಬೇತಿ, ಶಿಕ್ಷಣ ಮತ್ತು ಪರೀಕ್ಷೆಗಳು, ಹಾಗೆಯೇ ಲೆಕ್ಕಿಗರ ವೃತ್ತಿಯ ಸಾಂಸ್ಥಿಕ ಸಾಮರ್ಥ್ಯ ವೃದ್ಧಿ ಸಂಬಂಧಿಸಿದಂತೆ ಸಾಧ್ಯವಾದ ಸಹಕಾರ ಸ್ಥಾಪಿಸುವುದು;
- ನೆದರ್ ಲ್ಯಾಂಡ್ಸ್ ನಲ್ಲಿ ಅಕೌಂಟಿಂಗ್, ಹಣಕಾಸು, ಮಾಹಿತಿ ತಂತ್ರಜ್ಞಾನ ಮತ್ತು ಲೆಕ್ಕ ಪರಿಶೋಧನೆಯ ಕ್ಷೇತ್ರದಲ್ಲಿ ಅಲ್ಪಾವಧಿಯ ವೃತ್ತಿಪರ ಕೋರ್ಸ್ ಗಳ ಅವಕಾಶ ನೀಡಲು;
- ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳ ರೂಪದಲ್ಲಿ ಸಂಭಾವ್ಯ ಹೊರಹೊಮ್ಮುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು;
- ಅಗತ್ಯವಿದ್ದಾಗ ಭಾರತ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಕೌಂಟನ್ಸಿ ವೃತ್ತಿಗೆ ಸಂಬಂಧಿಸಿದ ಅನಿರ್ಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವುದು.
ಪ್ರಯೋಜನಗಳು:
ಎರಡೂ ದೇಶಗಳ ಪ್ರಮುಖ ಸಂಸ್ಥೆಗಳ ನಡುವಿನ ಕಾರ್ಯಕ್ರಮವು ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಭಾರತಕ್ಕೆ ಹೆಚ್ಚಿನ ಗಳಿಕೆ ತರುತ್ತದೆ.
ಪರಿಣಾಮ:
ಐಸಿಎಐ ಯುರೋಪಿಯನ್ ವಲಯದಲ್ಲಿ 1500ಕ್ಕೂ ಹೆಚ್ಚು ಸದಸ್ಯರನ್ನು ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ಸುಮಾರು 80 ಸದಸ್ಯರನ್ನು ಹೊಂದಿದೆ. ಉದ್ದೇಶಿತ ತಿಳಿವಳಿಕೆ ಒಪ್ಪಂದ ನೆದರ್ ಲ್ಯಾಂಡ್ಸ್ ನಲ್ಲಿ ವಿ.ಆರ್.ಸಿ.ಗೆ ನೆರವು ನೀಡಲಿದ್ದು, ಈ ವಲಯದ ಐಸಿಎಎಲ್ ಸದಸ್ಯರಿಗೆ ಪ್ರಯೋಜನಕಾರಿಯಾಗಿದೆ ಮತ್ತು ನೆದರ್ ಲ್ಯಾಂಡ್ಸ್ ನಲ್ಲಿ ವೃತ್ತಿಪರ ಅವಕಾಶಗಳನ್ನು ಪಡೆಯಲು ಐಸಿಎಐ ಸದಸ್ಯರ ವೃತ್ತಿಭವಿಷ್ಯಕ್ಕೆ ಹೆಚ್ಚುವರಿ ಉತ್ತೇಜನವನ್ನು ನೀಡುತ್ತದೆ.
ಹಿನ್ನೆಲೆ:
ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟರುಗಳ ವೃತ್ತಿಯನ್ನು ನಿಯಂತ್ರಿಸಲು ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949ರ ಅಡಿಯಲ್ಲಿ ಸ್ಥಾಪನೆಯಾದ ಶಾಸನಾತ್ಮಕ ಕಾಯವಾಗಿದೆ. ವೆರೆನಿಜಿಂಗ್ ವ್ಯಾನ್ ರಿಜಿಸ್ಟರ್ ಕಂಟ್ರೋಲರ್ಸ್ (ವಿಆರ್.ಸಿ.) 1988ರಲ್ಲಿ ಸ್ಥಾಪನೆಯಾದ ಸ್ವಯಂ ವೃತ್ತಿಪರ ಸಂಘಟನೆಯಾಗಿದ್ದು, ಸದಸ್ಯರು ನಿರ್ವಹಣಾ ಅಕೌಂಟಿಂಗ್, ಫೈನಾನ್ಷಿಯಲ್ ಅಕೌಂಟಿಂಗ್, ಸಮಗ್ರ ವರದಿಗಾರಿಕೆ, ವ್ಯೂಹಾತ್ಮಕ ನಿಯಂತ್ರಣ ಮತ್ತು ಅಪಾಯದ ನಿರ್ವಹಣೆ ಮತ್ತು ಸಾಂಸ್ಥಿಕ ಆಡಳಿತದಲ್ಲಿ ಸೇವೆಯನ್ನು ಒದಗಿಸುತ್ತಾರೆ.
***
(Release ID: 1675652)
Visitor Counter : 165
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam