ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಔಷಧ ಉದ್ಯಮಗಳ ಅಭಿವೃದ್ಧಿಗೆ ಕೈಗಾರಿಕಾ ಪಾರ್ಕ್ ಗಳ ಸೌಲಭ್ಯ: ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ

Posted On: 22 NOV 2020 7:06PM by PIB Bengaluru

ಔಷಧ ಉದ್ಯಮಗಳ (.ಪಿ..) ಅಭಿವೃದ್ಧಿಗೆ ಕೈಗಾರಿಕಾ ಪಾರ್ಕ್ ಗಳ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ತಿಳಿಸಿದ್ದಾರೆ.

ರಾಷ್ಟ್ರೀಯ ಔಷಧ ಸಪ್ತಾಹ (ಎನ್.ಪಿ.ಡಬ್ಲ್ಯು) ಕುರಿತ ಅಂತಾರಾಷ್ಟ್ರೀಯ ಔಷಧಕಾರರ ವೆಬಿನಾರ್ ಗೆ ಸಂದೇಶ ನೀಡಿದ ಸಚಿವರು, ರಾಷ್ಟ್ರೀಯ ಔಷಧ ಸಪ್ತಾಹ 2020, ಔಷಧಕಾರರ ವೃತ್ತಿಪರತೆಯ ಚಿತ್ರಣವನ್ನು ರೂಪಿಸುವ ಉದ್ದೇಶದ ಮೇಲೆ ಕೇಂದ್ರೀಕರಿಸಿದೆ ಎಂದರು. ಪ್ರಾಸ್ತಾವಿಕ ನುಡಿಯಲ್ಲಿ ಅವರು, ಎನ್.ಪಿ.ಡಬ್ಲ್ಯು. ಆಚರಣೆಯ ಕಲ್ಪನೆಯನ್ನು ಶ್ಲಾಘಿಸಿ, ಕೋವಿಡ್-19 ಸಂದರ್ಭದಲ್ಲಿ ಔಷಧ ಮಾರಾಟಗಾರರು ಮುಂಚೂಣಿಯ ಮಹತ್ವದ ಪಾತ್ರ ವಹಿಸಿದರು ಎಂದು ತಿಳಿಸಿದರು.

ಜಾಗತಿಕ ಬಳಕೆಗಾಗಿ ಉತ್ತಮ ಗುಣಮಟ್ಟದ ಜನೌಷಧ ಮತ್ತು ವಿಶ್ವಕ್ಕೆ ಲಸಿಕೆಗಳನ್ನು ಉತ್ಪಾದಿಸುವ ಉದ್ಯಮ ಸೇರಿದಂತೆ ಔಷಧಾಲಯ ವೃತ್ತಿಪರರು ಯಾವಾಗಲೂ ಸಂದರ್ಭಕ್ಕೆ ಅನುಗುಣವಾಗಿ ಸಹಕರಿಸಿದ್ದಾರೆ, ದಿನಗಳಲ್ಲಿ, ಕೋವಿಡ್ -19 ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಭಾರತದ  ಔಷಧ ವೃತ್ತಿ ಮತ್ತು ಕೈಗಾರಿಕೆಯ ಸುಧಾರಣೆಗೆ ಭಾರತ ಸರ್ಕಾರ ಸಹ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು. ಎಪಿಐ, ಔಷಧ ಮತ್ತು ಪೌಷ್ಟಿಕ ಔಷಧ ಉದ್ಯಮವನ್ನು ಬೆಳೆಸಲು ಕೈಗಾರಿಕಾ ಪಾರ್ಕ್ ಗಳಿಗೆ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ನೋಡುತ್ತಿದೆ ಎಂದು ಸಚಿವರು ಹೇಳಿದರು. ರೀತಿಯಲ್ಲಿ, ಭಾರತೀಯ ಔಷಧ ಉದ್ಯಮ ವಿಶ್ವದ ಔಷಧಾಲಯವಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದೂ ಹೇಳಿದರು. ನಾವು ಔಷಧ ಮತ್ತು ವೈದ್ಯಕೀಯ ಸಾಧನಗಳಲ್ಲಿ ನಾವಿನ್ಯತೆಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸಂಶೋಧನೆ ಮತ್ತು ಅಭಿವೃದ್ಧಿ ನಿಧಿಗಳು ಮತ್ತು ಇತರ ಸೌರಲಭ್ಯ ಕಾರ್ಯಕ್ರಮಗಳು ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರದ ಕೇಂದ್ರಬಿಂದುವಾಗಿದೆ ಮತ್ತು ಇದು ಔಷಧ ಕೊಡುಗೆಗಳನ್ನು ಉತ್ತಮಪಡಿಸಲು ನೆರವಾಗುತ್ತದೆ. ನಾವು ಔಷಧಕಾರರ ಕುಂದುಕೊರತೆಗಳ ಬಗ್ಗೆಯೂ ಸಂವೇದನಾಶೀಲರಾಗಿದ್ದೇವೆ. ನಾವು ಸಾಕಷ್ಟು ಔಷಧ ತಜ್ಞರನ್ನು ಸುಧಾರಿಸಲು ಬದ್ಧರಾಗಿದ್ದೇವೆ ಎಂದು ಶ್ರೀ ಸದಾನಂದ ಗೌಡ ಹೇಳಿದರು.

***



(Release ID: 1674958) Visitor Counter : 180