ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 50,000ಕ್ಕೂ ಅಧಿಕ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ (ಎಚ್ ಡಬ್ಲ್ಯೂಸಿಎಸ್) ಕಾರ್ಯಾರಂಭದೊಂದಿಗೆ ಮಹತ್ವದ ಮೈಲಿಗಲ್ಲು


ಈ ಸಾಧನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಡಾ. ಹರ್ಷವರ್ದನ್ ಅಭಿನಂದನೆ

ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಎಚ್ ಡಬ್ಲ್ಯೂಸಿಎಸ್ ಪಾತ್ರ ವಿಶಿಷ್ಟ: ಡಾ. ಹರ್ಷವರ್ಧನ್

ಅಧಿಕ ರಕ್ತದೊತ್ತಡದ 6.43 ಕೋಟಿ ಜನರ ತಪಾಸಣೆ, 5.23 ಕೋಟಿ ಮಧುಮೇಹಿಗಳು ಮತ್ತು 6.14 ಕೋಟಿ ಕ್ಯಾನ್ಸರ್ ರೋಗಿಗಳ ತಪಾಸಣೆ

Posted On: 20 NOV 2020 9:19AM by PIB Bengaluru

ಭಾರತ ಸಾರ್ವತ್ರಿಕ ಆರೋಗ್ಯ ರಕ್ಷಣಾ ವಲಯದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು ದಾಟಿದೆ. ದೇಶಾದ್ಯಂತ 50,000ಕ್ಕೂ ಅಧಿಕ(50,025) ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳು(ಎಬಿ-ಎಚ್ ಡಬ್ಲ್ಯೂಸಿಎಸ್) ಕಾರ್ಯಾರಂಭ ಮಾಡಿವೆ. ಜನರಿಗೆ ತಮ್ಮ ಮನೆಯ ಸನಿಹವೇ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ(ಸಿಪಿಎಚ್ ಸಿ) ಸೇವೆಗಳನ್ನು ಒದಗಿಸುವ ಗುರಿ ಹೊಂದಿರುವ ಈ ಯೋಜನೆ ಅಡಿ 2022ರ ಡಿಸೆಂಬರ್ ವೇಳೆಗೆ 1.5 ಲಕ್ಷ ಎಬಿ- ಎಚ್ ಡಬ್ಲ್ಯೂಸಿಎಸ್ ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದೀಗ 50,000ಕ್ಕೂ ಅಧಿಕ ಕೇಂದ್ರಗಳ ಸ್ಥಾಪನೆಯೊಂದಿಗೆ ಗುರಿಯ ಮೂರನೇ ಒಂದು ಭಾಗ ತಲುಪಿದಂತಾಗಿದೆ. ಇದರಿಂದಾಗಿ 25 ಕೋಟಿಗೂ ಅಧಿಕ ಜನರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಕೈಗೆಟಕುವ ದರದಲ್ಲಿ ನೀಡಿದಂತಾಗಿದೆ.

ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲುಗಳ ನಡುವೆಯೂ ಎಚ್ ಡಬ್ಲ್ಯೂಸಿಎಸ್ ಕಾರ್ಯಾರಂಭ ಮಾಡಿರುವ ಸಾಧನೆಗಳಿಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಭಿನಂದಿಸಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜಂಟಿ ಪ್ರಯತ್ನಗಳು, ಯೋಜನೆಗಳು, ಎಲ್ಲ ಹಂತದಲ್ಲಿ ಮೇಲ್ವಿಚಾರಣೆ, ನಿರ್ದಿಷ್ಟ ಪ್ರಕ್ರಿಯೆಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿರುವ ಸರಳ ನೀತಿಗಳು ಮತ್ತು ಈವರೆಗಿನ ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿ ಈ ಎಲ್ಲ ಕಾರಣಗಳಿಂದಾಗಿ ಇದು ಸಾಧ್ಯವಾಗಿದೆಎಂದು ಹೇಳಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಆರೋಗ್ಯ ವಲಯದ ಮುಂಚೂಣಿ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತರು ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆ ಒದಗಿಸುವ ಬದ್ಧತೆಯನ್ನು ಪ್ರಶಂಸಿಸಿದರು ಮತ್ತು ಅವರು ಸಂಕಷ್ಟದ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ಅಗತ್ಯ ಸೇವೆಗಳಿಗೆ ಬೆಂಬಲ ನೀಡಿದ್ದಾರೆ ಎಂದರು. “ಅವರೆಲ್ಲ ನಮ್ಮ ಆರೋಗ್ಯ ವಿತರಣಾ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರ ಕೊಡುಗೆ ಅಸಮಾನ್ಯಎಂದು ಹೇಳಿದರು. ಅಲ್ಲದೆ ಅಪಾಯ ಸಂವಹನ, ಸಂಪರ್ಕ ಪತ್ತೆ, ಸಮುದಾಯದ ಮೇಲೆ ನಿಗಾ ಇರಿಸುವುದು ಮತ್ತು ಶೀಘ್ರ ಸೋಂಕು ಪ್ರಕರಣಗಳ ಪತ್ತೆ ಮತ್ತು ಕೋವಿಡೇತರ ಅಗತ್ಯ ಸೇವೆಗಳನ್ನು ಸೂಕ್ಷ್ಮ ವರ್ಗದವರಿಗೆ ಒದಗಿಸುವುದು, ನವಜಾತ ಶಿಶುಗಳು, ವೃದ್ಧರು ಮತ್ತು ಅನಾರೋಗ್ಯ ಪೀಡಿತರಿಗೆ ಸೇವೆ ಒದಗಿಸುವ ಅವರ ಕಾರ್ಯ ಸಾಕಷ್ಟು ಉಪಕಾರಿಯಾಗಿದೆ ಎಂದು ಹೇಳಿದರು.

ಅಸ್ಸಾಂನ ಎಚ್ ಡಬ್ಲ್ಯೂಸಿ ನಲ್ಲಿ ಕೋವಿಡ್-19 ತಪಾಸಣೆ

2018ರಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ ನೀಡಲಾಯಿತು. ಇದರಲ್ಲಿ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳು(ಎಚ್ ಡಬ್ಲ್ಯೂಸಿಎಸ್) ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ) – ಎರಡೂ ಆಧಾರಸ್ಥಂಬಗಳಿದ್ದು, ಎರಡು ಯೋಜನೆಗಳ ಮೂಲಕ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ಮೊದಲ ಎಬಿ-ಎಚ್ ಡಬ್ಲ್ಯೂಸಿ ಅನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2018 ಏಪ್ರಿಲ್ 14ರಂದು ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯ ಝಾಂಗ್ಲಾದಲ್ಲಿ ಉದ್ಘಾಟಿಸಿದ್ದರು.

ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳು  ಜನರಿಗೆ ಸಿಪಿಎಚ್ ಸಿ ಸೇವೆಗಳನ್ನು ಒದಗಿಸುತ್ತವೆ ಮತ್ತು ಸಂತಾನೋತ್ಪತ್ತಿ, ಬಾಣಂತಿಯರು, ನವಜಾತ ಶಿಶುಗಳು, ಮಕ್ಕಳು, ಅಪ್ರಾಪ್ತೆಯರಿಗೆ ಮತ್ತು ಪೌಷ್ಠಿಕತೆ (ಆರ್ ಎಂಎನ್ ಸಿಎಚ್ಎ+ಎನ್) ಸೇವೆಗಳು ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸಲಿವೆ. ಅಲ್ಲದೆ ಅವುಗಳು ರೋಗ ನಿಯಂತ್ರಣ ವಿಶೇಷವಾಗಿ ಸಾಂಕ್ರಾಮಿಕ ಮತ್ತು ಮಾರಕ ರೋಗಗಳ ನಿಯಂತ್ರಣಕ್ಕೆ ಒತ್ತು ನೀಡುವುದಲ್ಲದೆ, ಸಮುದಾಯ ಬಾಗಿದಾರಿಕೆ ಮೂಲಕ ಯೋಗಕ್ಷೇಮ ಹಾಗೂ ಜೀವನಶೈಲಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು, ಸೂಕ್ತ ಪೌಷ್ಠಿಕಾಂಶಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಯೋಗದಂತಹ ದೈಹಿಕ ಚಟುವಟಿಕೆಗಳ ಬಗ್ಗೆ ಜಾಗೃತಿ ಮೂಡಿಸಲಿವೆ. ಎಚ್ ಡಬ್ಲ್ಯೂಸಿ ತಂಡದಲ್ಲಿ ತರಬೇತಿ ಹೊಂದಿದ ಓರ್ವ ಸಮುದಾಯ ಆರೋಗ್ಯಾಧಿಕಾರಿ, ಒಬ್ಬರು ಅಥವಾ ಇಬ್ಬರು ಆರೋಗ್ಯ ಕಾರ್ಯಕರ್ತರು ಮತ್ತು 5 ರಿಂದ 8 ಆಶಾ ಕಾರ್ಯಕರ್ತರು ಇರಲಿದ್ದಾರೆ. ತಂಡ ನಿರ್ದಿಷ್ಟ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ನೀಡುವ ಜೊತೆಗೆ ಸಮುದಾಯಕ್ಕೆ ಹತ್ತಿರವಾಗಿ ಪ್ರಾಥಮಿಕ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸಲಿದೆ.

ದೇಶಾದ್ಯಂತ ಇದೀಗ 50,025 ಎಬಿ- ಎಚ್ ಡಬ್ಲ್ಯೂಸಿಎಸ್ ಗಳು 678 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 27,890 ಉಪ ಆರೋಗ್ಯ ಕೇಂದ್ರಗಳು, 18,536 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 3,599 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿವೆ. ಒಟ್ಟಾರೆ ಎಬಿ- ಎಚ್ ಡಬ್ಲ್ಯೂಸಿಎಸ್ ಗಳಿಗೆ 28.10 ಕೋಟಿ ಜನರು ಭೇಟಿ ನೀಡಿದ್ದು, ಅವರಲ್ಲಿ ಶೇ.53ರಷ್ಟು ಮಹಿಳೆಯರು. ಪೈಕಿ 6.43 ಕೋಟಿ ಜನರಿಗೆ ರಕ್ತದೊತ್ತಡ, 5.23 ಕೋಟಿ ಜನರಿಗೆ ಮಧುಮೇಹ ಮತ್ತು 6.14 ಕೋಟಿ ಜನರಿಗೆ ಕ್ಯಾನ್ಸರ್ ತಪಾಸಣೆ ನಡೆಸಲಾಗಿದೆ. ಸುಮಾರು 1.0 ಕೋಟಿ ಜನರಿಗೆ ರಕ್ತದೊತ್ತಡ ಚಿಕಿತ್ಸೆಗಾಗಿ ಮತ್ತು 60 ಲಕ್ಷ ಮಧುಮೇಹಿಗಳಿಗೆ ಉಚಿತ ಔಷಧಗಳನ್ನು ನೀಡಲಾಗಿದೆ

ತ್ರಿಪುರಾದ ಎಚ್ ಡಬ್ಲ್ಯೂಸಿ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರು ಅಧಿಕ ರಕ್ತದೊತ್ತಡ ತಪಾಸಣೆ ನಡೆಸುತ್ತಿರುವುದು

ಎಬಿ ಎಚ್ ಡಬ್ಲ್ಯೂಸಿ ಕಾರ್ಯಕ್ರಮದಲ್ಲಿ ನಾವಿನ್ಯ ರೀತಿಯಲ್ಲಿ ಯೋಗಕ್ಷೇಮ ಅಥವಾ ಸೌಖ್ಯಕ್ಕೆ ಒತ್ತು ನೀಡಲಾಗಿದೆ. ಕೇಂದ್ರಗಳಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಸೌಖ್ಯ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅಲ್ಲಿ ಯೋಗ, ಜುಂಬಾ, ಸಮುದಾಯ ನಡಿಗೆ, ಶಿರೋಧಾರಾ, ಧ್ಯಾನ ಮತ್ತಿತರ ಚಟುವಟಿಕೆಗಳನ್ನು ಹೇಳಿಕೊಡಲಾಗಿದೆ.

ಒಡಿಶಾದ ಫುಬಾಸಹಿ ಖೋರ್ಧಾ ಎಚ್ ಡಬ್ಲ್ಯೂಸಿಯಲ್ಲಿ ಯೋಗ ತರಬೇತಿ

ಆರೋಗ್ಯ ಸಚಿವಾಲಯದ -ಸಂಜೀವಿನಿ ಯೋಜನೆ ಜಾರಿಯಲ್ಲಿ ಎಚ್ ಡಬ್ಲ್ಯೂಸಿಎಸ್ ಗಳು ಬಲಿಷ್ಠ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ -ಸಂಜೀವಿನಿ ರೋಗಿಗಳು ಮತ್ತು ವೈದ್ಯರ ಒಪಿಡಿ ಹಾಗೂ -ಸಂಜೀವಿನಿ - ಎಚ್ ಡಬ್ಲ್ಯೂಸಿ ಅಡಿ ವೈದ್ಯರಿಂದ ವೈದ್ಯರ ದೂರವಾಣಿ ಸಮಾಲೋಚನೆ ಅವಕಾಶವಿದೆ. 23,103 ಎಚ್ ಡಬ್ಲ್ಯೂಸಿಎಸ್ ಗಳಲ್ಲಿ ನಾಗರಿಕರಿಗೆ ಟೆಲಿ ಸಮಾಲೋಚನಾ ಸೇವೆಯನ್ನು ಆರಂಭಿಸಲಾಗಿದೆ. ಈವರೆಗೆ 7.5 ಲಕ್ಷಕ್ಕೂ ಅಧಿಕ ಟೆಲಿ ಸಮಾಲೋಚನೆಗಳನ್ನು ವೇದಿಕೆಯ ಮೂಲಕ ಮಾಡಲಾಗಿದೆ. -ಸಂಜೀವಿನಿ- ಎಚ್ ಡಬ್ಲ್ಯೂಸಿ ಅನ್ನು 2019 ನವೆಂಬರ್ ನಲ್ಲಿ ಆರಂಭಿಸಲಾಯಿತು. ಇದನ್ನು ಎಲ್ಲಾ 1.5 ಲಕ್ಷ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳಲ್ಲಿ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಬ್ ಮತ್ತು ಸ್ಪೋಕ್ಮಾದರಿಯನ್ನು ಡಿಸೆಂಬರ್ 2022ರೊಳಗೆ ಆರಂಭಿಸಲಾಗುವುದು. ರಾಜ್ಯಗಳು ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಬ್ ಗಳನ್ನು ಸ್ಥಾಪಿಸಬೇಕು ಮತ್ತು ಆರೋಗ್ಯ ಹಾಗೂ ಸೌಖ್ಯ ಕೇಂದ್ರಗಳಲ್ಲಿ(ಎಚ್ ಡಬ್ಲ್ಯೂಸಿ)ಗಳಲ್ಲಿ ಟೆಲಿ ಸಮಾಲೋಚನಾ ಸೇವೆಗಳಿಗೆ ಸ್ಪೋಕ್ ಸೇವೆ ಒದಗಿಸಬೇಕು.

8.11.2020 ವರೆಗೆ ಕಾರ್ಯಾರಂಭ ಮಾಡಿರುವ ಎಬಿ-ಎಚ್ ಡಬ್ಲ್ಯೂಸಿಎಸ್

ಕ್ರ.ಸಂ

ರಾಜ್ಯ

18.11.2020 ವರೆಗೆ ಕಾರ್ಯಾರಂಭ ಮಾಡಿರುವ ಎಬಿ-ಎಚ್ ಡಬ್ಲ್ಯೂಸಿಎಸ್

 

 

ಎಸ್ಎಚ್ ಸಿ

ಪಿಎಚ್ ಸಿ

ಯುಪಿಎಚ್ ಸಿ

ಒಟ್ಟು

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

58

17

5

80

2

ಆಂಧ್ರಪ್ರದೇಶ

1122

1145

241

2508

3

ಅರುಣಾಚಲಪ್ರದೇಶ

91

38

4

133

4

ಅಸ್ಸಾಂ

878

379

52

1309

5

ಬಿಹಾರ

207

877

98

1182

6

ಚಂಡಿಗಢ

 

33

2

35

7

ಛತ್ತೀಸ್ ಗಢ

1450

402

45

1897

8

ದಾದ್ರ ಮತ್ತು ನಗರ್ ಹವೇಲಿ

52

8

0

60

9

ದಾಮನ್ ಮತ್ತು ದಿಯು

26

4

0

30

10

ದೆಹಲಿ

ಕಾರ್ಯಕ್ರಮ ಜಾರಿಯಾಗಿಲ್ಲ

11

ಗೋವಾ

9

54

5

68

12

ಗುಜರಾತ್

3523

1108

222

4853

13

ಹರಿಯಾಣ

159

364

100

623

14

ಹಿಮಾಚಲಪ್ರದೇಶ

275

422

6

703

15

ಜಮ್ಮು ಮತ್ತು ಕಾಶ್ಮೀರ

505

305

16

826

16

ಜಾರ್ಖಂಡ್

852

132

52

1036

17

ಕರ್ನಾಟಕ

1572

1896

336

3804

18

ಕೇರಳ

0

733

83

816

19

ಲಡಾಖ್

0

0

0

0

20

ಲಕ್ಷದ್ವೀಪ

0

3

0

3

21

ಮಧ್ಯಪ್ರದೇಶ

3026

1128

130

4284

22

ಮಹಾರಾಷ್ಟ್ರ

4117

1825

439

6381

23

ಮಣಿಪುರ

111

39

1

151

24

ಮೇಘಾಲಯ

70

34

19

123

25

ಮಿಝೋರಾಂ

44

54

8

106

26

ನಾಗಾಲ್ಯಾಂಡ್

101

47

7

155

27

ಒಡಿಶಾ

304

1225

86

1615

28

ಪುದುಚೆರಿ

77

37

2

116

29

ಪಂಜಾಬ್

1607

346

93

2046

30

ರಾಜಸ್ಥಾನ

131

1859

116

2106

31

ಸಿಕ್ಕಿಂ

43

13

0

56

32

ತಮಿಳುನಾಡು

858

1371

453

2682

33

ತೆಲಂಗಾಣ

274

624

221

1119

34

ತ್ರಿಪುರ

266

32

5

303

35

ಉತ್ತರ ಪ್ರದೇಶ

3509

1468

391

5368

36

ಉತ್ತರಾಖಂಡ

262

246

36

544

37

ಪಶ್ಚಿಮ ಬಂಗಾಳ

2311

268

325

2904

 

ಒಟ್ಟು

27890

18536

3599

50025

               

***


(Release ID: 1674545) Visitor Counter : 398