ಸಂಸ್ಕೃತಿ ಸಚಿವಾಲಯ

13ನೇ ಶತಮಾನದ ಶ್ರೀರಾಮ, ಲಕ್ಷ್ಮಣ, ಸೀತಾಮಾತೆಯ ಪ್ರಾಚೀನ ಕಲಾಕೃತಿಗಳನ್ನು ತಮಿಳುನಾಡಿಗೆ ಹಸ್ತಾಂತರಿಸಿದ ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್

Posted On: 18 NOV 2020 5:57PM by PIB Bengaluru

ದೆಹಲಿಯ ತಿಲಕ್ ಮಾರ್ಗದ ಧಾರೋಹರ್ ಭವನದಲ್ಲಿರುವ ಎಎಸ್ಐ ಕೇಂದ್ರಸ್ಥಾನ (ಹೆಡ್ಕ್ವಾರ್ಟರ್ಸ್)ದಲ್ಲಿ ಆಯೋಜಿಸಲಾಗಿದ್ದ  ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು 13ನೇ ಶತಮಾನದ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯ ಪ್ರಾಚೀನ ಕಂಚಿನ ವಿಗ್ರಹಗಳನ್ನು ತಮಿಳುನಾಡು ಸರಕಾರಕ್ಕೆ ಹಸ್ತಾಂತರಿಸಿದರು.

ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ(ಎಎಸ್ಐ), ತಮಿಳುನಾಡು ಸರಕಾರದ ಉನ್ನತ ಅಧಿಕಾರಿಗಳು ಸಂದರ್ಭದಲ್ಲಿ ಹಾಜರಿದ್ದರು.

ಇದಕ್ಕೂ ಮುನ್ನ, 2020 ಸೆಪ್ಟೆಂಬರ್ 15ರಂದು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಮೂರು ಕಂಚಿನ ವಿಗ್ರಹಗಳನ್ನು ಲಂಡನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರಿಸಿದ್ದರು. 1958ರಲ್ಲಿ ಮಾಡಲಾಗಿದ್ದ ಛಾಯಾಚಿತ್ರ ಸಾಕ್ಷ್ಯ ಸಂಕಲನದ (ಡಾಕ್ಯುಮೆಂಟೇಷನ್-ದಸ್ತಾವೇಜು) ಪ್ರಕಾರ, ವಿಗ್ರಹಗಳು ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ  ಆನಂದಮಂಗಳಂನಲ್ಲಿರುವ ಶ್ರೀ ರಾಜಗೋಪಾಲ್ ವಿಷ್ಣು ದೇವಾಲಯಕ್ಕೆ  ಸೇರಿದ್ದಾಗಿವೆ. ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿತ್ತು ಎಂಬ ಗಮನಾರ್ಹ ವಿಚಾರ ಇತಿಹಾಸ ಪುಟಗಳಿಂದ ತಿಳಿದುಬಂದಿದೆ. ತಮಿಳುನಾಡು ಪೊಲೀಸ್ ಇಲಾಖೆಯಪುರಾತನ ವಿಗ್ರಹಗಳ ತನಿಖಾ ವಿಭಾಗನಡೆಸಿರುವ ಸಮಗ್ರ ತನಿಖೆಯ ಪ್ರಕಾರ, 1978 ನವೆಂಬರ್  23-24ರಂದು ಶ್ರೀ ರಾಜಗೋಪಾಲ ವಿಷ್ಣು ದೇವಾಲಯದಲ್ಲಿ ಕಂಚಿನ ಮೂರು ವಿಗ್ರಹಗಳನ್ನು ಕಳವು ಮಾಡಿರುವುದು ದೃಢಪಟ್ಟಿದೆ.

ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿಯ ಕಂಚಿನ ವಿಗ್ರಹಗಳು ಭಾರತೀಯ ಲೋಹ ಕಲೆಯ ಮೇರು ಕಲಾಕೃತಿಗಳಾಗಿವೆ. ಇವು ಕ್ರಮವಾಗಿ 90.5, 78 ಮತ್ತು 74.5 ಸೆಂಟಿ ಮೀಟರ್ ಎತ್ತರ ಹೊಂದಿವೆ. ಕಲಾಕೃತಿಗಳ ಶಿಲ್ಪಶೈಲಿ ಗುರುತಿಸಿದರೆ, ಇವು 13ನೇ ಶತಮಾನದಲ್ಲಿ ನಿರ್ಮಾಣವಾಗಿರುವುದು ದೃಢಪಟ್ಟಿದೆ.

ವಿಗ್ರಹಗಳ ಹಸ್ತಾಂತರ ಸಮಾರಂಭದಲ್ಲಿ ಮಾಧ್ಯಮಗಳಿಗೆ ವಿವರ ನೀಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ 2014ರಿಂದ ಇದುವರೆಗೆ ಹೊರರಾಷ್ಟ್ರಗಳಿಂದ ಸುಮಾರು 40 ಪ್ರಾಚೀನ ಶಿಲ್ಪ ಕಲಾಕೃತಿಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಅದಕ್ಕೂ ಮುನ್ನ 1976ರಿಂದ 2014 ವರೆಗೆ ಇಂತಹ 13 ಪುರಾತನ ಶಿಲ್ಪ ಕಲಾಕೃತಿಗಳನ್ನು ವಿದೇಶಗಳಿಂದ ಭಾರತಕ್ಕೆ ವಾಪಸ್ ತರಲಾಗಿತ್ತು ಎಂದರು.

ವಿಗ್ರಹಗಳನ್ನು ತಾಯ್ನಾಡಿಗೆ ವಾಪಸ್ ತರಲು ನಿರಂತರ ಶ್ರಮಿಸಿದ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ, ತಮಿಳುನಾಡು ಸರಕಾರದ ವಿಶೇಷ ವಿಗ್ರಹ ಸಂರಕ್ಷಣಾ ವಿಭಾಗ, ಲಂಡನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಸಚಿವರು ಅಭಿನಂದಿಸಿದರು.

ಭಾರತವು ಸ್ವಾತಂತ್ರ್ಯ ಗಳಿಸಿದ 75ನೇ ವರ್ಷಾಚರಣೆಯ ಸ್ಮರಣಾರ್ಥ ಸಚಿವರು, ಪ್ರಾಚೀನ ವಿಗ್ರಹಗಳ ಶೂಟಿಂಗ್ ಮತ್ತು ಛಾಯಾಗ್ರಹಣಕ್ಕೆ ಶುಲ್ಕ ವಿನಾಯಿತಿ ಪ್ರಕಟಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಸಂಪ್ರದಾಯಗಳು, ಪರಂಪರೆ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉತ್ತೇಜನ ಹಾಗೂ ರಾಷ್ಟ್ರೀಯ ಪ್ರಾಮುಖ್ಯತೆಗೆ (ಮಹತ್ವ) ಸಂಬಂಧಿಸಿದ ಇತರೆ ವಿಷಯಗಳ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು(ಅರ್ಜಿದಾರರು) ಮತ್ತು ಸಂಸ್ಥೆಗಳಿಗೆ ಮಾತ್ರ ವಿನಾಯಿತಿ ಸೌಲಭ್ಯ ಸಿಗಲಿದೆ.

ದೇಶದ ವಿವಿಧೆಡೆ ಇರುವ ಭಾರತೀಯ ಪುರಾತತ್ವ ಇಲಾಖೆಯ ಪುರಾತನ ಕಲಾಕೃತಿಗಳು ಮತ್ತು ಸ್ಮಾರಕಗಳ (ವಿಶ್ವ ಪಾರಂಪರಿಕ ಮತ್ತು ಪವಿತ್ರ ತಾಣಗಳನ್ನು ಹೊರತುಪಡಿಸಿ) ಶೂಟಿಂಗ್ ಮತ್ತು ಛಾಯಾಗ್ರಹಣ ನಡೆಸಲು ಅನುಮತಿ ಸಿಗಲಿದೆ. ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿಯನ್ನು 2020 ಡಿಸೆಂಬರ್ 25ರಿಂದ 2021 ಆಗಸ್ಟ್ 15 ವರೆಗೆ ಆಚರಿಸಲಾಗುತ್ತಿದೆ. ಅವಧಿಯಲ್ಲಿ ಮೇಲ್ಕಂಡ ಕ್ಷೇತ್ರಗಳ ಅರ್ಜಿದಾರರು ಮತ್ತು ಏಜೆನ್ಸಿಗಳು ಶೂಟಿಂಗ್ ಮತ್ತು ಛಾಯಾಗ್ರಹಣ ಚಟುವಟಿಕೆ ನಡೆಸಲು ಬಯಸಿದರೆ, ಭಾರತೀಯ ಪುರಾತತ್ವ ಇಲಾಖೆಗೆ ಆನ್ಲೈನ್ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಹಿನ್ನೆಲೆ:

ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ತಮಿಳುನಾಡಿನ ದೇವಾಲಯದಿಂದ ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯನ 4 ಪ್ರಾಚೀನ ವಿಗ್ರಹಗಳನ್ನು ಕಳವು ಮಾಡಲಾಗಿದ್ದು, ಅವುಗಳನ್ನು ವಿದೇಶಕ್ಕೆ ಬಹುತೇಕ ಯುನೈಟೆಡ್ ಕಿಂಗ್ಡಂಗೆ ಸಾಗಿಸಲಾಗಿದೆ ಎಂದುಇಂಡಿಯಾ ಪ್ರೈಡ್ ಪ್ರಾಜೆಕ್ಟ್ಸಂಸ್ಥೆ 2019 ಆಗಸ್ಟ್ನಲ್ಲಿ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿತ್ತು.

ತಮಿಳುನಾಡಿನ ನಾಗಪಟ್ಟಿನಂ ಜಲ್ಲೆಯ ಆನಂದಮಂಗಳಂನಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀ ರಾಜಗೋಪಾಲ ವಿಷ್ಣು ದೇವಾಲಯದಲ್ಲಿರುವ ಕಂಚಿನ ಲೋಹದ ಪ್ರಾಚೀನ ಶಿಲ್ಪ ಕಲಾಕೃತಿಗಳ ಸಾಕ್ಷ್ಯಛಾಯಾಚಿತ್ರ ಸಂಕಲನವನ್ನು 1958 ಜೂನ್ನಲ್ಲಿ ನಡೆಸಲಾಗಿದೆ. ಹಾಗಾಗಿ, ವಿಗ್ರಹಗಳು 1958 ವರೆಗೂ ದೇವಾಲಯದಲ್ಲೇ ಇದ್ದವು. ಆನಂತರ ಇವುಗಳನ್ನು ಕಳವು ಮಾಡಲಾಗಿದೆ ಎಂದುಇಂಡಿಯಾ ಪ್ರೈಡ್ ಪ್ರಾಜೆಕ್ಟ್ಸಂಸ್ಥೆ ಮಾಹಿತಿ ನೀಡಿತ್ತು.

ವಿಗ್ರಹಕ್ಕೆ ಸಂಬಂಧಿಸಿದ ಪೂರಕ ದಾಖಲಾತಿಗಳನ್ನು ಪರಿಶೀಲಿಸಿ, ವಿಷಯವನ್ನು ಲಂಡನ್ ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆಯ ಆರ್ಟ್ ಅಂಡ್  ಆಂಟಿಖ್ ಯುನಿಟ್’ (ಕಲೆ ಮತ್ತು ಪ್ರಾಚೀನ ಕಲಾಕೃತಿಗಳ ಸಂರಕ್ಷಣಾ ಘಟಕ) ಮತ್ತು ತಮಿಳುನಾಡು ಪೊಲೀಸ್ ಇಲಾಖೆಯ ಪುರಾತನ ವಿಗ್ರಹಗಳ ಸಂರಕ್ಷಣಾ ವಿಭಾಗ ಗಮನಕ್ಕೆ ತರಲಾಗಿತ್ತು. ನಂತರ ತಮಿಳುನಾಡು ಪೊಲೀಸರು 1978 ನವೆಂಬರ್ 23, 24ರಂದು ವಿಗ್ರಹಗಳು ಕಳವಾಗಿರುವ ಮತ್ತು ನಂತರದ ದಿನಗಳಲ್ಲಿ ವಿಗ್ರಹ ಕಳ್ಳರನ್ನು ಬಂಧಿಸಿದ್ದ ಸಮಗ್ರ ವರದಿಯನ್ನು ಕಳಿಸಿದ್ದರು. ವಿಗ್ರಹಗಳ ಛಾಯಾಚಿತ್ರಗಳನ್ನು ಆಧರಿಸಿ, ಕಲಾಕೃತಿಗಳನ್ನು ಪರಿಶೀಲಿಸಲಾಯಿತು. ಇವು ಶ್ರೀ ರಾಜಗೋಪಾಲ್ ವಿಷ್ಣು ದೇವಾಲಯಕ್ಕೆ ಸೇರಿದ ವಿಗ್ರಹಗಳು ಎಂಬುದು ದೃಢಪಟ್ಟಿತು. ಜತೆಗೆ, ತಮಿಳುನಾಡು ಪೊಲೀಸರು ಇತಿಹಾಸಕಾರರು ಮತ್ತು ತಜ್ಞರ ಅಭಿಪ್ರಾಯ ಕಲೆ ಹಾಕಿ, ವಿಗ್ರಹಗಳ ಖಚಿತತೆ ದೃಢಪಡಿಸಿದ್ದರು. ಇದೆಲ್ಲದರ ಸಮಗ್ರ ವರದಿಯನ್ನು ಅದು ಲಂಡನ್ ಭಾರತೀಯ ರಾಯಭಾರಿ ಕಚೇರಿಗೆ ಕಳಿಸಿತ್ತು.

ನಂತರ ಲಂಡನ್ ಪೊಲೀಸ್ ಇಲಾಖೆಯಆರ್ಟ್ ಅಂಡ್  ಆಂಟಿಖ್ ಯುನಿಟ್ಪ್ರಕರಣದ ಸಮಗ್ರ ತನಿಖೆ ನಡೆಸಿ, ವಿಗ್ರಹಗಳನ್ನು ಹೊಂದಿದ್ದ ಮಾಲಿಕನನ್ನು ಸಂಪರ್ಕಿಸಿತ್ತು. ಕಳವು ಮಾಡಿರುವ ಭಾರತ ಮೂಲದ ವಿಗ್ರಹಗಳನ್ನು ವಾಪಸ್ ಮಾಡುವಂತೆ ಅದು ಮನವಿ ಮಾಡಿತ್ತು. ಸಂಪೂರ್ಣ ತನಿಖೆ ಪೂರ್ಣಗೊಳಿಸಿದ ಲಂಡನ್ ಪೊಲೀಸರು 2020 ಸೆಪ್ಟೆಂಬರ್ 20ರಂದು ವಿಗ್ರಹಗಳನ್ನು ಕೊನೆಗೆ ಭಾರತೀಯ ಕಚೇರಿ ಸುಪರ್ದಿಗೆ ಒಪ್ಪಿಸಿದರು.

ಭಾರತೀಯ ಪುರಾತತ್ವ ಸಂರಕ್ಷಣಾ ಇಲಾಖೆ, ತಮಿಳುನಾಡು ಪೊಲೀಸ್ ಮತ್ತು ಲಂಡನ್ ಭಾರತೀಯ ರಾಯಭಾರ ಕಚೇರಿಯ ನಿರಂತರ ಪ್ರಯತ್ನಗಳ ಫಲವಾಗಿ, 13ನೇ ಶತಮಾನದಲ್ಲಿ ಕೆತ್ತನೆಯಾದ ಅಪರೂಪದ ಪ್ರಾಚೀನ ವಿಗ್ರಹಗಳು ಇದೀಗ ಶ್ರೀ ರಾಜಗೋಪಾಲ್ ವಿಷ್ಣು ದೇವಾಲಯದ ಗೂಡು ಸೇರಿಕೊಂಡು ಅಪಾರ ಭಕ್ತ ಸಮೂಹವನ್ನು ತನ್ನೆಡೆಗೆ ಸೆಳೆಯುತ್ತಿವೆ. ಭಾರತದ ಪ್ರಾಚೀನ ವಾಸ್ತುಶಿಲ್ಪದ ಗತ ವೈಭವವನ್ನು ಜನಸಾಗರಕ್ಕೆ ಸಾರುತ್ತಿವೆ.

***


(Release ID: 1673967) Visitor Counter : 232