ಗೃಹ ವ್ಯವಹಾರಗಳ ಸಚಿವಾಲಯ
ಕರ್ನಾಟಕ ಸೇರಿ ಆರು ರಾಜ್ಯಗಳಿಗೆ 4,381.88 ಕೋಟಿ ರೂ. ಕೇಂದ್ರದ ಹೆಚ್ಚುವರಿ ನೆರವು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಅನುಮೋದನೆ
ಪ್ರವಾಹ ಮತ್ತು ಭೂಕುಸಿತಗಳ ಹಾನಿಯ ಪರಿಹಾರಕ್ಕಾಗಿ ಕರ್ನಾಟಕಕ್ಕೆ 577.84 ಕೋಟಿ ರೂ. ಹೆಚ್ಚುವರಿ ನೆರವು ಮಂಜೂರು
2020 ರಲ್ಲಿ ಸಂಭವಿಸಿದ ಪ್ರವಾಹ, ಚಂಡಮಾರುತ ಮತ್ತು ಭೂಕುಸಿತಗಳಿಂದ ಹಾನಿಗೊಳಗಾದ ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಹೆಚ್ಚುವರಿ ನೆರವು
Posted On:
13 NOV 2020 10:38AM by PIB Bengaluru
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ (ಎಚ್ಎಲ್ಸಿ) ಯ ಸಭೆಯು ಈ ವರ್ಷ ಚಂಡಮಾರುತ / ಪ್ರವಾಹ / ಭೂಕುಸಿತದಿಂದ ಹಾನಿಗೊಳಗಾದ ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಸ್ಪಂದನೆ ನಿಧಿ (ಎನ್ಡಿಆರ್ಎಫ್) ಅಡಿಯಲ್ಲಿ ಹೆಚ್ಚುವರಿ ಕೇಂದ್ರ ನೆರವನ್ನು ಅನುಮೋದಿಸಿದೆ.
ರಾಷ್ಟ್ರೀಯ ವಿಪತ್ತು ಸ್ಪಂದನೆ ನಿಧಿಯಿಂದ (ಎನ್ಡಿಆರ್ಎಫ್) ಆರು ರಾಜ್ಯಗಳಿಗೆ 4,381.88 ಕೋಟಿ ರೂ.ಗಳ ಕೇಂದ್ರದ ಹೆಚ್ಚುವರಿ ನೆರವನ್ನು ಉನ್ನತ ಮಟ್ಟದ ಸಮಿತಿಯು ಅನುಮೋದಿಸಿದೆ.
- ನೈಋತ್ಯ ಮುಂಗಾರು ಸಮಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳ ಹಾನಿಯ ಪರಿಹಾರಕ್ಕಾಗಿ ಕರ್ನಾಟಕಕ್ಕೆ 577.84 ಕೋಟಿ ರೂ. ಮಂಜೂರು ಮಾಡಲಾಗಿದೆ.
- ‘ಅಂಫಾನ್’ ಚಂಡಮಾರುತದ ಹಾನಿಗಾಗಿ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರೂ. ಮತ್ತು ಒಡಿಶಾಗೆ ರೂ .128.23 ಕೋಟಿ ರೂ. ಮಂಜೂರು ಮಾಡಲಾಗಿದೆ
- ‘ನಿಸರ್ಗ’ ಚಂಡಮಾರುತದಿಂದಾದ ಹಾನಿಗಾಗಿ ಮಹಾರಾಷ್ಟ್ರಕ್ಕೆ 268.59 ಕೋಟಿ ರೂ. ಮಂಜೂರು
- ನೈಋತ್ಯ ಮುಂಗಾರು ಸಮಯದಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳ ಹಾನಿಗಾಗಿ ಮಧ್ಯಪ್ರದೇಶಕ್ಕೆ 611.61 ಕೋಟಿ ರೂ. ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ನೆರವು ಮಂಜೂರು ಮಾಡಲಾಗಿದೆ.
‘ಅಂಫಾನ್’ಚಂಡಮಾರುತದ ನಂತರ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2020 ರ ಮೇ 22 ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಪೀಡಿತ ರಾಜ್ಯಗಳಿಗೆ ಭೇಟಿ ನೀಡಿದ್ದರು. ಪ್ರಧಾನಿಯವರು ಘೋಷಿಸಿದಂತೆ, ಈ ರಾಜ್ಯಗಳಲ್ಲಿ ತಕ್ಷಣದ ಪರಿಹಾರ ಕಾರ್ಯಗಳಿಗಾಗಿ 2020 ಮೇ 23 ರಂದು ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ಮತ್ತು ಒಡಿಶಾಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಇದಲ್ಲದೆ, ಪ್ರಧಾನಿಯವರು ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ., ಪರಿಹಾರ ಘೋಷಿಸಿದ್ದರು. ಇದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್ಡಿಆರ್ಎಫ್) ಮತ್ತು ಎನ್ಡಿಆರ್ಎಫ್ ಮೂಲಕ ನೀಡಲಾಗುವ ಪರಿಹಾರಕ್ಕೆ ಹೆಚ್ಚುವರಿಯಾಗಿರುತ್ತದೆ.
ಎಲ್ಲಾ ಆರು ರಾಜ್ಯಗಳಲ್ಲಿ ವಿಪತ್ತುಗಳು ಸಂಭವಿಸಿದ ನಂತರ ಕೇಂದ್ರ ಸರ್ಕಾರವು ಸಂತ್ರಸ್ತ ರಾಜ್ಯ ಸರ್ಕಾರಗಳಿಂದ ಮನವಿಗೂ ಕಾಯದೇ ಕೂಡಲೇ ಅಂತರ-ಸಚಿವಾಲಯ ಕೇಂದ್ರ ತಂಡಗಳನ್ನು (ಐಎಂಸಿಟಿ) ನಿಯೋಜಿಸಿತ್ತು.
ಇದಲ್ಲದೆ, 2020-21ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ಎಸ್ಡಿಆರ್ಎಫ್ನಿಂದ ಇದುವರೆಗೆ 28 ರಾಜ್ಯಗಳಿಗೆ 15,524.43 ಕೋಟಿ ರೂ. ಬಿಡುಗಡೆ ಮಾಡಿದೆ.
***
(Release ID: 1672567)
Visitor Counter : 338
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Odia
,
Tamil
,
Telugu