ಹಣಕಾಸು ಸಚಿವಾಲಯ

ಮೂಲಸೌಕರ್ಯ ಕಾರ್ಯಸಾಧ್ಯತೆ ಅಂತರ ನಿಧಿ ವಿಜಿಎಫ್ ಯೋಜನೆಯಡಿ ಸಾರ್ವಜನಿಕ ಖಾಸಗಿ ಪಾಲುದಾರಿಕೆಗೆ ಆರ್ಥಿಕ ಬೆಂಬಲ ನೀಡುವ ಯೋಜನೆ ಮುಂದುವರಿಕೆ ಮತ್ತು ಪುನರುಜ್ಜೀವನಗೊಳಿಸಲು ಕೇಂದ್ರ ಸಂಪುಟ ಅನುಮೋದನೆ

Posted On: 11 NOV 2020 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ, 2024-25ವರೆಗೆ ಒಟ್ಟು 8,100 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಾರ್ಯಸಾಧ್ಯತೆ ಅಂತರ ನಿಧಿ ವಿಜಿಎಫ್ ಯೋಜನೆಯಡಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ(ಪಿಪಿಪಿ) ಬೆಂಬಲ ನೀಡುವ ಯೋಜನೆ ಮುಂದುವರಿಕೆ ಮತ್ತು ಪುನರುಜ್ಜೀವನಗೊಳಿಸಲು ಅನುಮೋದನೆ ನೀಡಿದೆ.

ಪರಿಷ್ಕರಿಸಲಾದ ಯೋಜನೆಯಲ್ಲಿ ಮುಖ್ಯವಾಗಿ ಸಾಮಾಜಿಕ ಮೂಲಸೌಕರ್ಯ ವಲಯದಲ್ಲಿ ಖಾಸಗಿ ಪಾಲುದಾರಿಕೆಯನ್ನು ಮುನ್ನೆಲೆಗೆ ತರಲು ಎರಡು ಉಪ ಯೋಜನೆಗಳನ್ನು ಪರಿಚಯಿಸುವುದಕ್ಕೆ ಸಂಬಂಧಿಸಿದ್ದಾಗಿವೆ.

. ಉಪ ಯೋಜನೆ-1

ಇದರಡಿ ಸಾಮಾಜಿಕ ವಲಯದ ತ್ಯಾಜ್ಯ ನೀರು ಸಂಸ್ಕರಣೆ, ನೀರು ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ, ಆರೋಗ್ಯ ಮತ್ತು ಶಿಕ್ಷಣ ವಲಯ ಮತ್ತಿತರ ಯೋಜನೆಗಳಿಗೆ ನೆರವು ನೀಡಲಾಗುವುದು. ಯೋಜನೆಗಳಿಗೆ ಬ್ಯಾಂಕು ಖಾತ್ರಿ ವಿಷಯಗಳು ಮತ್ತು ಕಡಿಮೆ ಆದಾಯ ಸಂಗ್ರಹ ವಿಚಾರ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಬಂಡವಾಳ ವೆಚ್ಚವನ್ನು ಹೂಡಬೇಕಾಗುತ್ತದೆ ಯೋಜನೆಯಡಿ ಅರ್ಹವಾದ ಯೋಜನೆಗಳಲ್ಲಿ ಕನಿಷ್ಠ ಶೇ. 100 ರಷ್ಟು ಕಾರ್ಯಾಚರಣೆ ವೆಚ್ಚವನ್ನು ವಸೂಲು ಮಾಡಬೇಕಾಗುತ್ತದೆಕೇಂದ್ರ ಸರ್ಕಾರ, ಒಟ್ಟು ಯೋಜನಾ ವೆಚ್ಚ (ಟಿಪಿಸಿ) ಗರಿಷ್ಠ ಶೇ.30ರಷ್ಟನ್ನು ವಿಜಿಎಫ್ ರೂಪದಲ್ಲಿ ಒದಗಿಸಲಿದೆ ಮತ್ತು ರಾಜ್ಯ ಸರ್ಕಾರ/ಪ್ರಾಯೋಜಿತ ಕೇಂದ್ರದ ಸಚಿವಾಲಯ/ಸಾಂಸ್ಥಿಕ ಸಂಸ್ಥೆ ಟಿಪಿಸಿಯ ಇತರೆ ಶೇ.30ರಷ್ಟು ನೆರವನ್ನು ನೀಡಬಹುದಾಗಿದೆ.

ಬಿ. ಉಪ ಯೋಜನೆ-2

ಉಪ ಯೋಜನೆಯಲ್ಲಿ ಸಾಮಾಜಿಕ ವಲಯದ ಪ್ರಾತ್ಯಕ್ಷಿಕೆ/ಪ್ರಾಯೋಗಿಕ ಯೋಜನೆಗಳಿಗೆ ನೆರವು ನೀಡಲಾಗುವುದು. ಆರೋಗ್ಯ ಮತ್ತು ಶಿಕ್ಷಣ ವಲಯದ ಯೋಜನೆಗಳಿಗೆ ಕನಿಷ್ಠ ಶೇ.50ರಷ್ಟು ಕಾರ್ಯಾಚರಣೆ ವೆಚ್ಚ ವಸೂಲು ಮಾಡಲು ಅವಕಾಶವಿದೆ. ಅಂತಹ ಯೋಜನೆಗಳಿಗೆ ಕೇಂದ್ರ  ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಸೇರಿ ಶೇ.80ರಷ್ಟು ಬಂಡವಾಳ ವೆಚ್ಚವನ್ನು ಒದಗಿಸಲಿವೆ ಮತ್ತು ಮೊದಲ ಐದು ವರ್ಷಗಳಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಮತ್ತು ಎಂ) ವೆಚ್ಚಕ್ಕಾಗಿ ಶೇ.50ರವರೆಗೆ ನೆರವು ನೀಡಲಾಗುವುದು. ಕೇಂದ್ರ ಸರ್ಕಾರ ಯೋಜನೆಯ ಟಿಪಿಸಿಯ ಗರಿಷ್ಠ ಶೇ.40ರವರೆಗೆ ನೆರವು ನೀಡಲಿದೆ. ಅಲ್ಲದೆ ಹೆಚ್ಚುವರಿಯಾಗಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಮೊದಲ ಐದು ವರ್ಷಗಳವರೆಗೆ ಯೋಜನೆಯ ಕಾರ್ಯಾಚರಣೆ ವೆಚ್ಚದ ಗರಿಷ್ಠ ಶೇ.25ರಷ್ಟು ನೆರವು ನೀಡಲಾಗುವುದು.

ಯೋಜನೆ ಆರಂಭವಾದ ನಂತರ ಇಲ್ಲಿಯವರೆಗೆ ಒಟ್ಟು ಯೋಜನಾ ವೆಚ್ಚದ 34,228 ಕೋಟಿ ರೂ. ಮೌಲ್ಯದ ಮತ್ತು 5,639 ಕೋಟಿ ರೂ.ಗಳ ವಿಜಿಎಫ್ ಒಳಗೊಂಡ ಒಟ್ಟು 64 ಯೋಜನೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ, 2019-20ನೇ ಹಣಕಾಸು ವರ್ಷದ ಅಂತ್ಯದವರೆಗೆ 4,375 ಕೋಟಿ ರೂ. ವಿಜಿಎಫ್ ವಿತರಿಸಲಾಗಿದೆ.

ಪ್ರಯೋಜನಗಳು:

ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ ವಲಯದಲ್ಲಿ ಪಿಪಿಪಿಗಳನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಗುರಿಯಾಗಿದ್ದು, ಅದರ ಮೂಲಕ ಪರಿಣಾಮಕಾರಿಯಾಗಿ ಸ್ವತ್ತುಗಳನ್ನು ಸೃಷ್ಟಿಸುವುದಲ್ಲದೆ, ಸೂಕ್ತ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾತ್ರಿಪಡಿಸುವುದು ಮತ್ತು ಸಾಮಾಜಿಕ/ಆರ್ಥಿಕ ಯೋಜನೆಗಳು ವಾಣಿಜ್ಯ ರೀತಿಯಲ್ಲಿ ಕಾರ್ಯಸಾಧುವಾಗುವಂತೆ ಮಾಡುವುದಾಗಿದೆ. ಈ ಯೋಜನೆ ಸಾರ್ವಜನಿಕವಾಗಿ ಅನುಕೂಲಕಾರಿಯಾಗಿದೆ ಮತ್ತು ದೇಶದಲ್ಲಿ ಮೂಲಸೌಕರ್ಯ ವೃದ್ಧಿಗೆ ಇದು ಸಹಕಾರಿಯಾಗಲಿದೆ.

ಅನುಷ್ಠಾನ ಕಾರ್ಯತಂತ್ರ:

ಹೊಸ ಯೋಜನೆ, ಸಚಿವ ಸಂಪುಟ ಅನುಮೋದನೆ ನೀಡಿದ ಒಂದು ತಿಂಗಳ ಅವಧಿಯೊಳಗೆ ಜಾರಿಗೆ ಬರಲಿದೆ. ವಿಜಿಎಫ್ ಯೋಜನೆಯಡಿ ಉದ್ದೇಶಿತ ತಿದ್ದುಪಡಿಗಳನ್ನು ಯೋಜನೆಯ ಮಾರ್ಗಸೂಚಿಗಳಲ್ಲಿ ಸೂಕ್ತ ರೀತಿಯಲ್ಲಿ ಸೇರ್ಪಡೆ ಮಾಡಲಾಗುವುದು. ಪರಿಷ್ಕೃತ ವಿಜಿಎಫ್ ಉತ್ತೇಜನಕ್ಕೆ ಮತ್ತು ಬೆಂಬಲಿತ ಯೋಜನೆಗಳ ನಿರ್ವಹಣೆಗೆ ನೆರವು ನೀಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪರಿಣಾಮ;

ಉದ್ದೇಶಿತ ವಿಜಿಎಫ್ ಯೋಜನೆಯನ್ನು ಪುನರುಜ್ಜೀವನಗೊಳಿಸುವುದರಿಂದ ಹೆಚ್ಚಿನ ಪಿಪಿಪಿ ಯೋಜನೆಗಳನ್ನು ಆಕರ್ಷಿಸಬಹುದಾಗಿದೆ ಮತ್ತು ಸಾಮಾಜಿಕ ವಲಯಗಳಾದ (ಆರೋಗ್ಯ, ಶಿಕ್ಷಣ, ದ್ರವ ತ್ಯಾಜ್ಯ, ಘನ ತ್ಯಾಜ್ಯ ನಿರ್ವಹಣೆ, ನೀರು ಪೂರೈಕೆ ಇತ್ಯಾದಿ)ಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಸಹಕಾರ ನೀಡುವುದಾಗಿದೆ. ಅಲ್ಲದೆ, ಹೊಸ ಆಸ್ಪತ್ರೆಗಳ ನಿರ್ಮಾಣ, ಶಾಲೆಗಳ ನಿರ್ಮಾಣದಿಂದ ಹೊಸ ಹಲವು ಅವಕಾಶಗಳನ್ನು ಸೃಷ್ಟಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದಾಗಿದೆ.

ಒಳಗೊಂಡಿರುವ ವೆಚ್ಚ:

ಪರಿಷ್ಕೃತ ಯೋಜನೆಗೆ ಹಣಕಾಸು ಸಚಿವಾಲಯ ಬಜೆಟ್ ನೆರವಿಂದ ಹಣಕಾಸು ಒದಗಿಸಲಿದೆ. 2024-25ನೇ ಹಣಕಾಸು ವರ್ಷದವರೆಗೆ ವಿಜಿಎಫ್ ಪರಿಷ್ಕೃತ ಯೋಜನೆಯಡಿ ಒಟ್ಟು ಯೋಜನಾ ವೆಚ್ಚ ಕೆಳಗಿನಂತಿದೆ.

ಹಿನ್ನೆಲೆ:

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ, “ಮೂಲಸೌಕರ್ಯ ವಲಯದಲ್ಲಿ ಪಿಪಿಪಿ ಯೋಜನೆಗಳಿಗೆ ಆರ್ಥಿಕ ಬೆಂಬಲ ನೀಡುವ ಯೋಜನೆ’’ (ಕಾರ್ಯಸಾಧು ಅಂತರ ನಿಧಿ ನೆರವಿನ ಯೋಜನೆ)ಯನ್ನು 2006ರಲ್ಲಿ ಆರಂಭಿಸಿತು, ಇದರ ಉದ್ದೇಶ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಿರುವ ಮೂಲಸೌಕರ್ಯ ಯೋಜನೆಗಳನ್ನು ಬೆಂಬಲಿಸುವುದಾಗಿದೆ. ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಮಾಡಬೇಕಾಗಿರುವುದರಿಂದ ಅವು ಆರ್ಥಿಕವಾಗಿ ಸಮರ್ಥನೀಯವಾಗಿರಬೇಕು ಮತ್ತು ವಾಣಿಜ್ಯವಾಗಿ ಕಾರ್ಯಸಾಧುವಾಗಿರಬೇಕು, ದೀರ್ಘಾವಧಿಯವರೆಗೆ ಕಾರ್ಯಸಾಧುವಾದ, ವಾಣಿಜ್ಯ ಬಳಕೆದಾರರಿಗೆ ಶುಲ್ಕ ವಿಧಿಸಬಹುದಾದ ಯೋಜನೆಗಳು , ಭಾರತ ಸರ್ಕಾರದಿಂದ ಒಟ್ಟು ಯೋಜನಾ ವೆಚ್ಚ (ಟಿಪಿಸಿ)ಯ ಶೇ.40ರಷ್ಟು ವಿಜಿಎಫ್ ನೀಡಲಿದೆ ಮತ್ತು ಪ್ರಾಯೋಜನೆ ಮಾಡುವ ಪ್ರಾಧಿಕಾರ ಆರ್ಥಿಕ ಅನುದಾನದ ರೂಪದಲ್ಲಿ ಯೋಜನೆ ನಿರ್ಮಾಣದ ಸಮಯದಲ್ಲಿ (ಶೇ.20 ಪ್ಲಸ್ ಶೇ.20ರಷ್ಟು) ನೆರವು ನೀಡುತ್ತದೆ.

***



(Release ID: 1671995) Visitor Counter : 252