ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ರಾಜ್ ಘಾಟಿನ ಗಾಂಧಿ ದರ್ಶನದಲ್ಲಿ 360 ಡಿಗ್ರಿ ವೀಡಿಯೋ ಸಮ್ಮಿಳಿತ ಅನುಭವ ನೀಡುವ ವೃತ್ತಾಕಾರದ ಗುಮ್ಮಟ ಉದ್ಘಾಟಿಸಿದ ಡಾ. ಹರ್ಷ ವರ್ಧನ್ ಮತ್ತು ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್


ಗಾಂಧಿ ದರ್ಶನದಲ್ಲಿ ಮಹಾತ್ಮಾ ಗಾಂಧಿ ಅವರ ಡಿಜಿಟಲ್ ವಸ್ತು ಪ್ರದರ್ಶನ ಉದ್ಘಾಟನೆ.

ಉತ್ತಮ ಸಮಾಜ ನಿರ್ಮಾಣಕ್ಕೆ ಗಾಂಧೀಜಿ ಅವರ ಬೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಯುವ ಜನತೆಗೆ ಡಾ. ಹರ್ಷ ವರ್ಧನ್ ಕರೆ.

ವಿಶೇಷವಾಗಿ ಗ್ರಾಮಾಭಿವೃದ್ಧಿಗೆ ಸಂಬಂಧಿಸಿ ಮಹಾತ್ಮಾ ಅವರ ಬೋಧನೆಗಳು ಇಂದು ಅತ್ಯಂತ ಹೆಚ್ಚು ಪ್ರಸ್ತುತ: ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್

Posted On: 06 NOV 2020 4:52PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಹರ್ಷ ವರ್ಧನ್ ಮತ್ತು ಸಂಸ್ಕೃತಿ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ರಾದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಹೊಸದಿಲ್ಲಿಯ ರಾಜ್ ಘಾಟ್ ನ ಗಾಂಧಿ ದರ್ಶನದಲ್ಲಿ ಅಳವಡಿಸಲಾದ ವೃತ್ತಾಕಾರದ ಗುಮ್ಮಟದಲ್ಲಿ  360 ಡಿಗ್ರಿ ಚಲನಶೀಲತೆಯ ವೀಡಿಯೋ ಸಮ್ಮಿಳಿತ ಅನುಭವ ನೀಡುವ ವ್ಯವಸ್ಥೆ ಮತ್ತು ಮಹಾತ್ಮಾ ಗಾಂಧಿ ಅವರ ಡಿಜಿಟಲ್ ವಸ್ತು ಪ್ರದರ್ಶನವನ್ನು ಇಂದು ಉದ್ಘಾಟಿಸಿದರು. ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡ ಎರಡು ವರ್ಷಗಳ ಅವಧಿಯ ಸಂಸ್ಮರಣೆಯ ಭಾಗ ಇದಾಗಿದೆ. ಡಿ.ಎಸ್.ಟಿ. ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ; ಸಂಸ್ಕೃತಿ ಕಾರ್ಯದರ್ಶಿ ಶ್ರೀ ರಾಘವೇಂದ್ರ ಸಿಂಗ್; ಗಾಂಧಿ ಸ್ಮೃತಿ ನಿರ್ದೇಶಕ ಮತ್ತು ದರ್ಶನ ಸಮಿತಿಯ ಶ್ರೀ ದೀಪಂಕರ್ ಗ್ಯಾನ್ ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಾತನಾಡಿದ ಡಾ. ಹರ್ಷ ವರ್ಧನ್ ಅವರು ಗಾಂಧೀಜಿ ಅವರ ವ್ಯಕ್ತಿತ್ವ ಎಂತಹುದೆಂದರೆ ಅದು ಇಂದಿಗೂ ಕೂಡಾ ಇಡೀ ಮಾನವತೆಯನ್ನು ಪ್ರಭಾವಿಸುತ್ತಿದೆ ಎಂದರು. ಗಾಂಧೀಜಿ ಅವರ ತತ್ವಜ್ಞಾನ ಜೀವನದ ಎಲ್ಲಾ ಮಗ್ಗಲುಗಳನ್ನೂ ತಟ್ಟುತ್ತದೆ ಎಂದ ಅವರು “ಮಹಾತ್ಮಾ ಗಾಂಧಿ ಸದಾ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದರು. ಗಾಂಧೀಜಿ ಅವರ ಮೌಲ್ಯಗಳ ಪ್ರಸಾರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಡಿಜಿಟಲ್ ಸಲಕರಣೆಗಳನ್ನು ಅಭಿವೃದ್ಧಿಪಡಿಸಿರುನ ನಿಟ್ಟಿನಲ್ಲಿ ಮಾಡಿರುವ ಯತ್ನಗಳನ್ನು  ಪ್ರಮುಖವಾಗಿ ಪ್ರಸ್ತಾಪಿಸಿದ ಅವರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವ ಜನರು ಗಾಂಧೀಜಿ ಅವರ ಬೋಧನೆಗಳನ್ನು ಅನುಸರಿಸಬೇಕು ಎಂದೂ ಕರೆ ನೀಡಿದರು.

ತಮ್ಮ ಭಾಷಣದಲ್ಲಿ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಗಾಂಧೀಜಿ ಅವರ ಚಿಂತನೆಗಳು ಸಾಂಸ್ಕೃತಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವದ ಸಮುಚಿತ ಸಮ್ಮಿಶ್ರಣ ಎಂದು ಬಣ್ಣಿಸಿದರು. ಮಹಾತ್ಮಾ ಅವರ ಬೋಧನೆಗಳು ನಿರ್ದಿಷ್ಟವಾಗಿ ಗ್ರಾಮಾಭಿವೃದ್ಧಿಗೆ ಸಂಬಂಧಿಸಿ ಇಂದು ಹೆಚ್ಚು ಪ್ರಸ್ತುತ ಎಂದವರು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಶುತೋಷ್ ಶರ್ಮಾ ಮಾತನಾಡಿ ಗಾಂಧೀಜಿ ಅವರ ಸಂದೇಶಗಳನ್ನು ಭಾರತದ  ಯುವ ಜನತೆಗೆ ಪ್ರಚುರಪಡಿಸಲು ವರ್ಚುವಲ್ ರಿಯಾಲಿಟಿ (ವಿ.ಆರ್. ) ಮತ್ತು ಸಂಗ್ರಹಿತ ರಿಯಾಲಿಟಿ (ಎ.ಆರ್.) ಗಳು ಅತ್ಯಂತ ಶಕ್ತಿಶಾಲೀ ಸಲಕರಣೆಗಳಾಗಿವೆ ಎಂಬುದಾಗಿ ಡಿ.ಎಸ್.ಟಿ. ಭಾವಿಸಿತು ಮತ್ತು ಆ ಕಾರಣದಿಂದಾಗಿ ಮಹಾತ್ಮಾ ಗಾಂಧಿ ಅವರ ಬದುಕನ್ನಾಧರಿಸಿದ 360 ಡಿಗ್ರಿ ವೀಡಿಯೋ ಸಮ್ಮಿಳಿತ ಅನುಭವವನ್ನು ನೀಡುವ ವೃತ್ತಾಕಾರದ ಗುಮ್ಮಟವನ್ನು ಗಾಂಧಿ ದರ್ಶನದಲ್ಲಿ ಸಂಸ್ಮರಣೆ ಸಮಾರೋಪದಂಗವಾಗಿ ಸ್ಥಾಪಿಸಲು ಉದ್ದೇಶಿಸಿತು ಎಂದರು.

ಮಹಾತ್ಮಾ ಗಾಂಧಿ ಅವರ ಜೀವನವನ್ನು ಕುರಿತ ಈ ಕೆಳಗಿನ ನಾಲ್ಕು (ಹಿಂದಿ ಮತ್ತು ಇಂಗ್ಲೀಷ್ ಆವೃತ್ತಿಯಲ್ಲಿ ) ಚಲನಚಿತ್ರಗಳನ್ನು ಸಂಯೋಜಿಸಿ ಸಂಪೂರ್ಣ ಚಲನಚಿತ್ರವನ್ನು ತಯಾರಿಸಲಾಗಿದೆ.

  1. ಮೋಹನ್ ಟು ಮಹಾತ್ಮ
  2. ದ ಲಾಸ್ಟ್ ಫೇಸ್
  3. ಫ್ರೀಡಂ ಫ್ರಂ ಫಿಯರ್ ಮತ್ತು
  4. ಗಾಂಧಿ ಫೊರೆವರ್

ಗಾಂಧೀ ಅವರ ಹಳೆಯ ದಾಖಲೆಗಳ  ಸಂಗ್ರಹಾಲಯದಿಂದ (ಆರ್ಕೀವ್ಸ್ ) ಛಾಯಾ ಚಿತ್ರಗಳು, ವೀಡಿಯೋಗಳು, ಸಂದರ್ಶನದ ಧ್ವನಿ ಸುರುಳಿಗಳನ್ನು ಡಿಜಿಟಲ್ ಮಾದರಿಗಳಿಗೆ ಪರಿವರ್ತಿಸಲಾಗಿದೆ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಬಳಸಲಾಗಿದೆ. 360  ಕೋನದ ಗುಮ್ಮಟ ಯೋಜನೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ.) ದಿಲ್ಲಿ ಅನುಷ್ಟಾನಿಸಿದೆ.

ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ. ಸೂಕ್ತ ಬದಲಾವಣೆ, ಹೊಂದಾಣಿಕೆ ಮತು ಸಾರ್ವಜನಿಕ ವೀಕ್ಷಣೆಗೆ ಅವಶ್ಯ ತಾಂತ್ರಿಕ ಪರಿಕರಗಳನ್ನು ಸಜ್ಜುಗೊಳಿಸಿ,  ಚಲನಚಿತ್ರಗಳನ್ನು ರಾಜ್ ಘಾಟ್ ನಲ್ಲಿಯ ಗಾಂಧಿ ದರ್ಶನದಲ್ಲಿರುವ ಗುಮ್ಮಟದಲ್ಲಿ ಅಳವಡಿಸಲಾಗಿದೆ.

ಗುಮ್ಮಟ ಅನುಭವದ ಜೊತೆಗೆ ಡಿ.ಎಸ್.ಟಿ.ಯು ಇಲಾಖೆಯಡಿ ಬರುವ ಸ್ವಾಯತ್ತ ಸಂಸ್ಥೆಯಾದ ವಿಜ್ಞಾನ ಪ್ರಸಾರ ಮೂಲಕ ಮಹಾತ್ಮಾ ಗಾಂಧಿ ಅವರ ವಸ್ತುಗಳ ಡಿಜಿಟಲ್ ಪ್ರದರ್ಶನದ ಕೆಲಸವನ್ನು ಕೈಗೆತ್ತಿಕೊಂಡು ಪೂರೈಸಿದೆ.  ಇವುಗಳನ್ನು ದೇಶಾದ್ಯಂತ 17 ಕಡೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇವುಗಳಲ್ಲಿ 15 ವಸ್ತು ಸಂಗ್ರಹಾಲಯಗಳು ರಾಷ್ಟ್ರೀಯ ವಿಜ್ಞಾನ ಮ್ಯೂಸಿಯಂ (ಎನ್.ಸಿ.ಎಸ್.ಎಂ.) ಗಳಡಿಯಲ್ಲಿ ಕಾರ್ಯಾಚರಿಸುತ್ತಿದ್ದರೆ ಇನ್ನೆರಡು ಗಾಂಧಿ ದರ್ಶನ್ ಮತ್ತು ಗಾಂಧಿ ಸ್ಮೃತಿಯಲ್ಲಿವೆ. ಈ ಪ್ರದರ್ಶನಗಳು ವಿವಿಧ ಡಿಜಿಟಲ್ ಸಲಕರಣೆಗಳ ಮೂಲಕ ಗಾಂಧೀಜಿ ಅವರ ಜೀವನ ಮತ್ತು ಚಿಂತನೆಯನ್ನು ತೋರಿಸುತ್ತವೆ. ಸಂಸ್ಕ್ರತಿ ಸಚಿವಾಲಯ ಇದಕ್ಕೆ ಹಣಕಾಸು ನೆರವು ಒದಗಿಸಿದೆ.

ಡಿಜಿಟಲ್ ಮತ್ತು ವರ್ಚುವಲ್ ಪ್ರದರ್ಶನಕ್ಕೆ ಬಳಸಲಾದ ವಸ್ತು-ವಿಷಯಗಳನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ಜಿ.ಎಸ್.ಡಿ.ಎಸ್. ಮೇಲುಸ್ತುವಾರಿಯಲ್ಲಿ ರೂಪಿಸಲಾಗಿದೆ. ಡಿಜಿಟಲ್ ಮತ್ತು ವರ್ಚುವಲ್ ವಸ್ತು ಪ್ರದರ್ಶನಕ್ಕೆ ಈ ಕೆಳಗಿನ ಪ್ರದರ್ಶನ ಮಾದರಿಗಳನ್ನು ಬಳಸಲಾಗಿದೆ.

1.ಬಹುಬಳಕೆ ಸ್ಮಾರ್ಟ್ ಇಂಟರ್ ಫೇಸ್ (ಎರಡು ಘಟಕಗಳು)

2. ಸ್ಮಾರ್ಟ್ ಸರ್ಫೇಸ್ (ನಾಲ್ಕು ಘಟಕಗಳು)

3. ವರ್ಚುವಲ್ ಹೋಲೋಗ್ರಾಫಿಕ್ ಪ್ರದರ್ಶಕ (ಎರಡು ಘಟಕಗಳು)

4. ಪಾರದರ್ಶಕ ಪ್ರದರ್ಶಕ  (ಎರಡು ಘಟಕಗಳು )

ಪ್ರದರ್ಶನದಲ್ಲಿರುವ ಶೀರ್ಷಿಕೆಗಳು:

(i). ಮಹಾತ್ಮಾ ಗಾಂಧಿ ಅವರ ದೃಷ್ಟಿ, ಅವರ ಜೀವನ ಮತ್ತು “ಮಹಾತ್ಮಾ” ಆಗುವ ಪರಿವರ್ತನೆ;

(ii).  ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಅವರ ಪ್ರಯಾಣದ ವೃತಾಂತಗಳು ಮತ್ತು ಸತ್ಯಾಗ್ರಹಗಳು ಹಾಗು ಅವರ ಚಿಂತನೆಗಳು;

(iii).  ಗಾಂಧೀಜಿ ಅವರ ಸಹಚರರು, ಗಾಂಧಿ ಅವರಿಗೆ ಪ್ರೇರಣೆ ನೀಡಿದ ವ್ಯಕ್ತಿಗಳು ಮತ್ತು ಗಾಂಧೀಜಿ ಅವರ ಹೆಜ್ಜೆಗಳನ್ನು ಅನುಸರಿಸಿದವರು.

(iv). ಗಾಂಧೀ ಅವರ ಸಮಕಾಲೀನ ಪ್ರಸ್ತುತತೆ , ಆಧುನಿಕ ವಿಶ್ವದ ಮೇಲೆ ಅವರ ಪ್ರಭಾವ.

(v). ಕೊನೆಯ ಪ್ರಯಾಣ, ಗಾಂಧೀಜಿ ಅವರಿಗೆ ಗೌರವಾಂಜಲಿ ಮತ್ತು

(vi). ವಿದೇಶಾಂಗ ವ್ಯವಹಾರ ಸಚಿವಾಲಯದ , ಮಹಾತ್ಮಾ ಅವರ 150 ನೇ ವರ್ಷಾಚರಣೆಯ  “ವೈಷ್ಣವ್ ಜನ್” ವೀಡಿಯೋ ಸರಣಿಗಳು

ಗಾಂಧಿ ದರ್ಶನದಲ್ಲಿ ಡಿಜಿಟಲ್ ಮತ್ತು ವರ್ಚುವಲ್ ಪ್ರದರ್ಶನಗಳು ಸಾರ್ವಜನಿಕ ವೀಕ್ಷಣೆಗೆ ಸಿದ್ದವಾಗಿವೆ.

*******



(Release ID: 1670781) Visitor Counter : 133