ಯುಪಿಎಸ್‍ಸಿ ( ಕೇಂದ್ರ ಸಾರ್ವಜನಿಕ ಸೇವೆಗಳ ಆಯೋಗ)

ಕಂಬೈನ್ಡ್ ಡಿಫೆನ್ಸ್ ಸೇವೆಗಳ ಪರೀಕ್ಷೆ (II), 2019ರ ಅಂತಿಮ ಫಲಿತಾಂಶ

Posted On: 02 NOV 2020 4:50PM by PIB Bengaluru

(i) * ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ, 112 ನೇ ಕಿರು ಸೇವಾ ಆಯೋಗದ ಕೋರ್ಸ್ (ಎನ್‌.ಟಿ) (ಪುರುಷರಿಗಾಗಿ) ಮತ್ತು (ii) ^ ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ, 26 ನೇ ಕಿರು ಸೇವಾ ಆಯೋಗದ ಮಹಿಳಾ (ತಾಂತ್ರಿಕೇತರ) ಕೋರ್ಸ್, ಅಕ್ಟೋಬರ್, 2020 ರಿಂದ ಪ್ರಾರಂಭವಾಗಲಿದ್ದು, ಇದರ ಪ್ರವೇಶಕ್ಕಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2019 ರ ಕಂಬೈನ್ಡ್ ರಕ್ಷಣಾ ಸೇವೆಗಳ ಪರೀಕ್ಷೆಯ (II) 2019ರ ಫಲಿತಾಂಶಗಳ ಆಧಾರದ ಮೇಲೆ ಮತ್ತು ರಕ್ಷಣಾ ಸಚಿವಾಲಯದ ಸೇವಾ ಆಯ್ಕೆ ಮಂಡಳಿ ನಡೆಸಿದ ಸಂದರ್ಶನದ ಆಧಾರದ ಮೇಲೆ ಅಂತಿಮವಾಗಿ ಅರ್ಹತೆ ಪಡೆದ 241 (* 174 + ^ 67) ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅರ್ಹತೆಯ ಪ್ರಕಾರ ಈ ಕೆಳಗಿನ ಪಟ್ಟಿಯಲ್ಲಿವೆ. 112 ನೇ ಕಿರು ಸೇವಾ ಆಯೋಗದ ಕೋರ್ಸ್ (ಎನ್‌.ಟಿ) (ಪುರುಷರಿಗಾಗಿ) ಪಟ್ಟಿಯಲ್ಲಿ ಈ ಹಿಂದೆ ಇದೇ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಭಾರತೀಯ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್, ನೌಕಾ ಅಕಾಡೆಮಿ, ಎಜಿಮಾಲಾ, ಕೇರಳ ಮತ್ತು ವಾಯುಪಡೆಯ ಅಕಾಡೆಮಿ, ಹೈದರಾಬಾದ್ (ಪೂರ್ವ-ಹಾರಾಟ) ತರಬೇತಿ ಕೋರ್ಸ್ (ಗಳು) ಪ್ರವೇಶಕ್ಕೆ ಶಿಫಾರಸು ಮಾಡಲಾದ ಅಭ್ಯರ್ಥಿಗಳ ಹೆಸರೂ ಸೇರಿವೆ.

ಸರ್ಕಾರವು ತಿಳಿಸಿರುವಂತೆ  (I) 112 ನೇ ಕಿರು ಸೇವಾ ಆಯೋಗ ಕೋರ್ಸ್ (ಪುರುಷರಿಗಾಗಿ) ಖಾಲಿ ಹುದ್ದೆಗಳ ಸಂಖ್ಯೆ 225 [(i) ಎಸ್‌.ಎಸ್‌.ಸಿ (ಪುರುಷರು) (ಎನ್‌.ಟಿ) ಯುಪಿಎಸ್‌.ಸಿ ಖಾಲಿ ಹುದ್ದೆಗಳು 171, (ii) ಜಾಗ್ (ಪುರುಷರಿಗೆ) (ಎನ್‌ಟಿ) 04 ಖಾಲಿ ಹುದ್ದೆಗಳು ಅಕ್ಟೋಬರ್, 2020 ಯುಪಿಎಸ್‌.ಸಿಯೇತರ ಮತ್ತು (iii) ಎನ್‌.ಸಿಸಿ ವಿಶೇಷ ಪ್ರವೇಶ ಯುಪಿಎಸ್‌.ಸಿಯೇತರ] ಮತ್ತು (II) 26 ನೇ ಕಿರು ಸೇವಾ ಆಯೋಗದ ಮಹಿಳಾ (ತಾಂತ್ರಿಕೇತರ) ಕೋರ್ಸ್‌ ಗೆ 15.

ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿಲ್ಲ. ಎಲ್ಲಾ ಅಭ್ಯರ್ಥಿಗಳ ಅಭ್ಯರ್ಥಿಕೆ ಸಂಭಾವ್ಯವಾಗಿದೆ. ಜನ್ಮ ದಿನಾಂಕದ ಪರಿಶೀಲನೆ ಮತ್ತು ಈ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಸೇನಾ ಮುಖ್ಯಾಲಯದಲ್ಲಿ ಮಾಡಲಾಗುತ್ತದೆ.

ಅಭ್ಯರ್ಥಿಗಳು ಯುಪಿಎಸ್ಸಿ ವೆಬ್‌ ಸೈಟ್ http://www.upsc.gov.in ಗೆ ಪ್ರವೇಶಿಸುವ ಮೂಲಕ ಫಲಿತಾಂಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಪಡೆಯಬಹುದು. ಆದಾಗ್ಯೂ, ಆಯೋಗದ ವೆಬ್‌ ಸೈಟ್‌ ನಲ್ಲಿ ಅಂತಿಮ ಫಲಿತಾಂಶ ಘೋಷಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಅಭ್ಯರ್ಥಿಗಳ ಅಂಕಗಳು ಲಭ್ಯವಿರುತ್ತವೆ ಮತ್ತು 30 ದಿನಗಳವರೆಗೆ ಇರುತ್ತದೆ.

ಆಯೋಗದ ವೆಬ್‌ ಸೈಟ್‌ ನಲ್ಲಿ ಲಭ್ಯವಿರುವಂತೆ ಸಾರ್ವಜನಿಕವಾದ ಬಹಿರಂಗಪಡಿಸುವಿಕೆಯ ಅಂಕಗಳು ಮತ್ತು ಶಿಫಾರಸಾಗದ ಅಭ್ಯರ್ಥಿಗಳ ಇತರ ವಿವರಗಳತ್ತ ಯೋಜನೆಯ ಅಭ್ಯರ್ಥಿಗಳ ಗಮನವನ್ನು ಕೋರಲಾಗಿದೆ. ಅಂತಹ ಶಿಫಾರಸು ಆಗದ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಡೌನ್‌ ಲೋಡ್ ಮಾಡುವಾಗ ತಮ್ಮ ಆಯ್ಕೆಗಳನ್ನು ಚಲಾಯಿಸಬಹುದು.

ಕೇಂದ್ರ ಲೋಕ ಸೇವಾ ಆಯೋಗ ತನ್ನ ಕ್ಯಾಂಪಸ್‌ ನಲ್ಲಿರುವ ಪರೀಕ್ಷಾ ಹಾಲ್ ಕಟ್ಟಡದ ಬಳಿ ಸೌಲಭ್ಯ ಕೇಂದ್ರ ಹೊಂದಿದೆ. ಅಭ್ಯರ್ಥಿಗಳು ಕೆಲಸದ ದಿನಗಳಲ್ಲಿ ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ, ವೈಯಕ್ತಿಕವಾಗಿ ಅಥವಾ ದೂರವಾಣಿ ಸಂಖ್ಯೆ  011-23385271, 011-23381125 ಮತ್ತು 011-23098543ಮೂಲಕ ತಮ್ಮ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ / ಸ್ಪಷ್ಟೀಕರಣವನ್ನು ಪಡೆಯಬಹುದು.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

***


(Release ID: 1669661) Visitor Counter : 122