ಪ್ರಧಾನ ಮಂತ್ರಿಯವರ ಕಛೇರಿ

ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

Posted On: 20 OCT 2020 7:08PM by PIB Bengaluru

ನನ್ನ ಪ್ರೀತಿಯ ದೇಶವಾಸಿಗಳೇ,

ನಮಸ್ಕಾರ!

ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಹಿಡಿದು ಇಂದಿನವರೆಗೆ ಭಾರತೀಯರಾದ ನಾವೆಲ್ಲರೂ ಬಹಳ ದೀರ್ಘ ಪಯಣ ಮಾಡಿದ್ದೇವೆ. ಸಮಯದೊಂದಿಗೆ ಕ್ರಮೇಣವಾಗಿ ಆರ್ಥಿಕತೆಯಲ್ಲಿಯೂ ವೇಗ ಕಂಡು ಬರುತ್ತಿದೆ. ನಮ್ಮಲ್ಲಿ ಹೆಚ್ಚಿನ ಜನರು, ತಮ್ಮ ಜವಾಬ್ಹಾರಿಯನ್ನು ನಿಭಾಯಿಸಲು ಮತ್ತೊಮ್ಮೆ ಜೀವನಕ್ಕೆ ಗತಿ ನೀಡಲು, ನಿತ್ಯ ಮನೆಯಿಂದ ಹೊರ ಬರುತ್ತಿದ್ದಾರೆ. ಹಬ್ಬ, ಉತ್ಸವಗಳ   ಕಾಲದಲ್ಲಿ ಮಾರುಕಟ್ಟೆಯಲ್ಲಿ ಕೂಡ ಚೇತರಿಕೆ ನಿಧಾನವಾಗಿ ಬರುತ್ತಿದೆ. ಲಾಕ್ ಡೌನ್ ತೆರವಾಗಿರಬಹುದು ಆದರೆ, ವೈರಸ್ ಮರೆಯಾಗಿಲ್ಲ ಎಂಬುದನ್ನು ನಾವು ಮಾರೆಯಬಾರದು, ಕಳೆದ 7-8 ತಿಂಗಳುಗಳಿಂದ ಪ್ರತಿಯೊಬ್ಬ ಭಾರತೀಯರ ಪ್ರಯತ್ನದಿಂದಾಗಿ  ಭಾರತ ಇಂದು ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಅದನ್ನು ನಾವು ಹಾಳಾಗಲು ಬಿಡಬಾರದು. ಅದನ್ನು ನಾವು ಇನ್ನೂ ಹೆಚ್ಚು ಉತ್ತಮಪಡಿಸಬೇಕು.

ಇಂದು ದೇಶದಲ್ಲಿ ಗುಣಮುಖ ದರ ಉತ್ತಮವಾಗಿದೆ. ಮರಣ ಪ್ರಮಾಣ ದರ ಕಡಿಮೆ ಇದೆ. ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಸುಮಾರು 5500 ಜನ ಕೊರೊನಾ ಸೋಂಕಿತರಿದ್ದಾರೆಆದರೆ ಅಮೆರಿಕ ಮತ್ತು ಬ್ರೆಜಿಲ್ ನಂಥ ರಾಷ್ಟ್ರಗಳಲ್ಲಿ ಪ್ರತಿ 10 ಲಕ್ಷ ಜನರಲ್ಲಿ 25 ಸಾವಿರದ ಸಮೀಪದಲ್ಲಿದೆಭಾರತದಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಮೃತ್ಯು ಪ್ರಮಾಣ ದರ 83 ಆಗಿದೆ. ಆದರೆ ಅಮೆರಿಕ, ಬ್ರೆಜಿಲ್, ಸ್ಪೇನ್ ಮತ್ತು ಬ್ರಿಟನ್ ನಂಥ ಅನೇಕ ದೇಶಗಳಲ್ಲಿ ದರ 600ಕ್ಕಿಂತ ಅಧಿಕವಾಗಿದೆ. ಉತ್ತಮ ಸಂಪನ್ಮೂಲ ಶ್ರೀಮಂತವಾಗಿರುವ ದೇಶಗಳಿಗೆ ಹೋಲಿಸಿದರೆ, ಭಾರತ ತನ್ನ ಹೆಚ್ಚಿನ ನಾಗರಿಕರ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.

ಇಂದು ನಮ್ಮ ದೇಶದಲ್ಲಿ ಕೊರೊನಾ ರೋಗಿಗಳಿಗೆ 90 ಲಕ್ಷಕ್ಕೂ ಅಧಿಕ ಹಾಸಿಗೆಗಳು ಲಭ್ಯವಿದೆ. 12 ಸಾವಿರ ಕ್ವಾರಂಟೈನ್ ಕೇಂದ್ರಗಳಿವೆ. ಕೊರೊನಾ ಸೋಂಕು ಪರೀಕ್ಷೆಗೆ ಸುಮಾರು 2 ಸಾವಿರ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ದೇಶದಲ್ಲಿ ಪರೀಕ್ಷೆಯ ಸಂಖ್ಯೆ  ಶೀಘ್ರವೇ 10 ಕೋಟಿಯನ್ನು ಮೀರಲಿದೆ. ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಪರೀಕ್ಷೆಯ ಹೆಚ್ಚಳ ನಮ್ಮ ದೊಡ್ಡ ಶಕ್ತಿಯಾಗಿದೆ.

ಸೇವಾ ಪರಮೋ ಧರ್ಮಃ ಎಂಬ ಮಂತ್ರದಂತೆ ನಮ್ಮ ವೈದ್ಯರು, ಶುಶ್ರೂಷಕರುಗಳು, ನಮ್ಮ ಆರೋಗ್ಯ ಕಾರ್ಯಕರ್ತರು, ನಮ್ಮ ಭದ್ರತಾ ಸಿಬ್ಬಂದಿ ಹಾಗೂ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಎಲ್ಲರೂ ಇಷ್ಟು ದೊಡ್ಡ ಜನಸಂಖ್ಯೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ಪ್ರಯತ್ನಗಳ ನಡುವೆಯೂ ಕಾಲ ನಿರ್ಲಕ್ಷ್ಯದಿಂದ ಇರುವುದಾಗಿಲ್ಲ ಸಮಯ ಕೊರೊನಾ ಹೊರಟು ಹೋಗಿದೆ ಎಂದು ತಿಳಿಯುವ ಕಾಲವಾಗಿಲ್ಲ. ಅಥವಾ ಕೊರೊನಾ ದಿಂದ ಯಾವುದೇ ಅಪಾಯವಿಲ್ಲ ಎನ್ನುವುದೂ ಸರಿಯಲ್ಲ. ಸಂಕಷ್ಟದ ದಿನಗಳಲ್ಲಿ ನಾವೆಲ್ಲರೂ ಸಾಕಷ್ಟು ಚಿತ್ರಗಳು ಮತ್ತು ವಿಡಿಯೋ ನೋಡಿದ್ದೇವೆ. ಅವುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಹಲವು ಜನರು ಎಚ್ಚರಿಕೆಯನ್ನು ಮರೆತಿದ್ದಾರೆ ಇಲ್ಲವೇ ಅದನ್ನು ತುಂಬಾ ಲಘುವಾಗಿ ಪರಿಗಣಿಸಿದ್ದಾರೆ. ಇದು ಖಂಡಿತಾ ಸರಿಯಲ್ಲ. ನೀವು ಅಜಾಗರೂಕತೆಯಿಂದ ನಡೆದುಕೊಳ್ಳುತ್ತಿದ್ದರೆ, ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಆಗ ನೀವು ನಿಮನ್ನಷ್ಟೇ ಅಲ್ಲ, ನಿಮ್ಮ ಕುಟುಂಬದವರನ್ನು, ನಿಮ್ಮ ಪರಿವಾರದ ಮಕ್ಕಳನ್ನು, ವೃದ್ಧರನ್ನು ಅಷ್ಟೇ ಸಂಕಷ್ಟಕ್ಕೆ ತಳ್ಳುತ್ತಿದ್ದೀರಿ. ನೀವು ಗಮನದಲ್ಲಿಡಿ, ಅಮೆರಿಕವೆ ಆಗಲಿ, ಯೂರೋಪ್ ಇತರ ದೇಶಗಳಲ್ಲಿ ಕೊರೊನಾ ಕಡಿಮೆಯಾಗುತ್ತಿತ್ತು. ಆದರೆ ಈಗ ಮತ್ತೆ ದಿಢೀರನೆ ಹೆಚ್ಚಾಗುತ್ತಿದೆ. ಚಿಂತಾಜನಕವಾಗಿ ವೃದ್ಧಿ ಆಗುತ್ತಿದೆ.

ಸ್ನೇಹಿತರೆ, ಸಂತ ಕಬೀರದಾಸರು ಹೇಳುತ್ತಾರೆ. पकी खेती देखिके, गरब किया किसान। अजहूं झोला बहुत है, घर आवै तब जान।  (ಪಕೀ ಖೇತಿ ದೇಖ್ ಕೆ, ಗರ್ವ್ ಕಿಯಾ ಕಿಸಾನ್. ಅಜ್ ಹು ಜೋಲಾ ಬಹೂತ್ ಹೈ, ಗರ್ ಆವೇ ತಬ್ ಜಾನ್) ಅಂದರೆ ಹಲವು ಬಾರಿ ನಾವು ಪಕ್ವವಾದ ಬೆಳೆ ನೋಡಿ ಅತಿ ಆತ್ಮವಿಶ್ವಾಸದಿಂದ ಬೀಗುತ್ತೇವೆ. ಕೆಲಸ ಆಗಿ ಹೋಯಿತು ಎಂದು ಭಾವಿಸುತ್ತೇವೆ. ಆದರೆ, ಬೆಳೆ ಎಲ್ಲಿಯವರೆಗೆ ಮನೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಕೆಲಸ ಪೂರ್ತಿ ಆಯಿತು ಎಂದು ಭಾವಿಸುವುದು ಸರಿಯಲ್ಲ ಎಂದು ಕಬೀರ್ ದಾಸರು ಹೇಳಿದ್ದಾರೆ. ಅಂದರೆ ಎಲ್ಲಿಯವರೆಗೆ ಯಶಸ್ಸು ಪೂರ್ತಿಯಾಗಿ ಸಿಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿರ್ಲಕ್ಷ್ಯ ಮಾಡಬಾರದು.

ಸ್ನೇಹಿತರೆ,

 ಎಲ್ಲಿಯವರೆಗೆ ಮಹಾಮಾರಿಗೆ ಲಸಿಕೆ ಬರುವುದಿಲ್ಲವೋ ಅಲ್ಲಿಯವರೆಗೆ ನಾವು ಕೊರೊನಾ ವಿರುದ್ಧದ ನಮ್ಮ ಹೋರಾಟವನ್ನು ಸಡಿಲವಾಗಲು ಬಿಡಬಾರದು. ಹಲವು ವರ್ಷಗಳ ಬಳಿಕ, ನಾವು ಹೀಗೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದರೆ, ಮಾನವ ಕುಲವನ್ನು ಉಳಿಸಲು ಯುದ್ಧೋಪಾದಿಯಲ್ಲಿ ಇಡೀ ವಿಶ್ವದಲ್ಲಿ ಕೆಲಸ ನಡೆಯುತ್ತಿದೆ. ಅನೇಕ ದೇಶಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ. ನಮ್ಮ ದೇಶದ ವಿಜ್ಞಾನಿಗಳು ಕೂಡ ಹೃದಯಾಂತರಾಳದಿಂದ ತಮ್ಮನ್ನು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಈಗ ಹಲವು ಲಸಿಕೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.   ಇವುಗಳಲ್ಲಿ ಕೆಲವು ಮುಂದುವರಿದ ಹಂತದಲ್ಲಿವೆ. ಆಶಾಜನಕವಾದ ಸ್ಥಿತಿ ಕಾಣುತ್ತಿದೆ.

ಸ್ನೇಹಿತರೆ,

ಕೊರೊನಾದ ಲಸಿಕೆ ಯಾವಾಗ ಬರುತ್ತದೆಯೋ, ಆಗ ಎಲ್ಲ ಭಾರತೀಯರಿಗೂ ಎಷ್ಟು ಸಾಧ್ಯವೋ ಅಷ್ಟು ಬೇಗ ಅದನ್ನು ತಲುಪಿಸಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ತಲುಪಬೇಕು ಎಂದು ಭರದಿಂದ ಕೆಲಸ ನಡೆಯುತ್ತಿದೆ.

ಸ್ನೇಹಿತರೆ, ರಾಮಚರಿತಮಾನಸದಲ್ಲಿ ಬಹಳಷ್ಟು ಕಲಿಯುವ ವಿಚಾರಗಳಿವೆ. ಅದರ ಜೊತೆಗೆ ಹಲವು ಸವಾಲುಗಳೂ ಇವೆ. ಅಂದರೆ, ರಾಮಚರಿತ ಮಾನಸದಲ್ಲಿ ಒಂದು ಉತ್ತಮ ಮಾತಿದೆ ಅದೇನೆಂದರೆ रिपु रुज पावक पाप, प्रभु अहि गनिअ छोट करि। (ರಿಪು ರುಜ್ ಪಾವಕ್ ಪಾಪ್ ಪ್ರಭು ಅಹಿ ಗನಿಯ ಚೋಟ್ ಕರಿ) ಅಂದರೆ, ಬೆಂಕಿ, ಶತ್ರು, ಪಾಪ ಅಂದರೆ ಅಪರಾಧ ಮತ್ತು ರೋಗವನ್ನು ಯಾವತ್ತೂ ಚಿಕ್ಕದು ಎಂದು ಪರಿಗಣಿಸಬಾರದು. ಎಲ್ಲಿಯವರೆಗೆ ಇದಕ್ಕೆ ಪೂರ್ಣ ಚಿಕಿತ್ಸೆ ದೊರಕುವುದಿಲ್ಲವೋ ಅದನ್ನು ಹಗುರವಾಗಿ ಪರಿಗಣಿಸಬಾರದು. ಹೀಗಾಗಿ ನೆನಪಿನಲ್ಲಿಡಿ, ಎಲ್ಲಿಯವರೆಗೆ ಔಷಧ ಇರುವುದಿಲ್ಲವೋ ಅಲ್ಲಿಯವರೆಗೆ ಬೇರೆ ಮಾರ್ಗ ಇರುವುದಿಲ್ಲ. ಹಬ್ಬಗಳ ಕಾಲ ನಮ್ಮ ಜೀವನದಲ್ಲಿ ಖುಷಿಯ ಸಮಯ, ಉಲ್ಲಾಸದ ಸಮಯ.

 ನಾವು ಕಷ್ಟದ ಸಮಯದಿಂದ ಸಾಗಿ ಮುಂದೆ ಬಂದಿರುತ್ತೇವೆ. ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯವೂ ನಮ್ಮ ಪ್ರಗತಿಗೆ ಅಡ್ಡಿಯಾಗುತ್ತದೆ. ನಮ್ಮ ಖುಷಿಯನ್ನು ಹಾಳು ಮಾಡಿಬಿಡುತ್ತದೆ. ಜೀವನದ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ಜಾಗರೂಕತೆ ಎರಡೂ ಸಮಾನವಾಗಿ ಸಾಗಬೇಕು. ಆಗ ಮಾತ್ರ ಜೀವನದಲ್ಲಿ ಖುಷಿ ಇರುತ್ತದೆ. ಎರಡು ಗಜದ ಅಂತರ, ಕಾಲ ಕಾಲಕ್ಕೆ ಸಾಬೂನಿನಿಂದ ಕೈ ತೊಳೆಯುವುದು, ಮಾಸ್ಕ್ ಧರಿಸುವುದಕ್ಕೆ ಗಮನ ಹರಿಸಿ. ನಾನು ನಿಮ್ಮೆಲ್ಲರಲ್ಲೂ ಕೈಮುಗಿದು ಪ್ರಾರ್ಥಿಸುತ್ತೇನೆ. ನೀವು ಸುರಕ್ಷಿತವಾಗಿರುವುದನ್ನು ನಾನು ನೋಡಲು ಬಯಸುತ್ತೇನೆ. ನಿಮ್ಮ ಪರಿವಾರ ಸುಖವಾಗಿರುವುದನ್ನು ನಾನು ಬಯಸುತ್ತೇನೆ. ಹಬ್ಬಗಳು ನಿಮ್ಮ ಜೀವನದಲ್ಲಿ ಉತ್ಸಾಹ ಮತ್ತು ಭರವಸೆಯನ್ನು ಹೆಚ್ಚಿಸಬೇಕು, ಅಂಥ ವಾತಾವರಣ ನಿರ್ಮಾಣವಾಗಬೇಕು ಎಂದು ಬಯಸುತ್ತೇನೆ. ಹೀಗಾಗಿ ನಾನು ಪದೇ ಪದೇ ಪ್ರತಿಯೊಬ್ಬ ದೇಶವಾಸಿಗಳಿಗೆ ಆಗ್ರಹಿಸುತ್ತೇನೆ.

ಇಂದು ಮಾಧ್ಯಮದವರಿಗೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರಿಗೆ ಆಗ್ರಹಿಸುವುದೇನೆಂದರೆ ನೀವು ಜಾಗರೂಕತೆ ತರಲು ನಿಯಮಗಳನ್ನು ಪಾಲಿಸುವಂತೆ ಮಾಡಲು ಎಷ್ಟು ಸಾಧ್ಯವೋ ಅಷ್ಟು ಜನ ಜಾಗೃತಿ ಅಭಿಯಾನ ನಡೆಸಿದರೆ ಅದು ನಿಮ್ಮ ಕಡೆಯಿಂದ ದೇಶಕ್ಕೆ ಅತಿ ದೊಡ್ಡ ಸೇವೆಯಾಗುತ್ತದೆ. ನೀವು ನಿಶ್ಚಿತವಾಗಿ ನಮ್ಮೊಂದಿಗೆ ಕೈಜೋಡಿಸಿ, ದೇಶದ ಕೋಟಿ ಕೋಟಿ ಜನರನ್ನು ಬೆಂಬಲಿಸಿ

ನನ್ನ ಪ್ರೀತಿಯ ದೇಶವಾಸಿಗಳೇ,

ಆರೋಗ್ಯವಾಗಿರಿ, ತ್ವರಿತಗತಿಯಿಂದ ಮುಂದೆ ಸಾಗಿರಿ ನಾವೆಲ್ಲರೂ ಒಗ್ಗೂಡಿ ದೇಶವನ್ನೂ ಮುನ್ನಡೆಸೋಣ. ಶುಭ ಕಾಮನೆಗಳೊಂದಿಗೆ ನವರಾತ್ರ, ದಸರಾ, ಈದ್, ದೀಪಾವಳಿ, ಛತ್ ಪೂಜಾ, ಗುರುನಾನಕ್ ಜಯಂತಿ ಸಹಿತ ಎಲ್ಲ ಹಬ್ಬಗಳಿಗೆ ಎಲ್ಲ ದೇಶವಾಸಿಗಳೂ ಮತ್ತೊಮ್ಮೆ ಶುಭ ಕೋರುತ್ತೇನೆ.

ಧನ್ಯವಾದಗಳು!

***



(Release ID: 1666345) Visitor Counter : 180