ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಎಲ್ಲ ವೈಯಕ್ತಿಕ ಮತ್ತು ಪ.ಜಾ. ಮತ್ತು ಓಬಿಸಿ ಪ್ರವರ್ಗದವರನ್ನು ಒಳಗೊಂಡ ಎಸ್.ಎಚ್.ಜಿ. ಫಲಾನುಭವಿಗಳಿಗಾಗಿ ಬಡ್ಡಿ ರಿಯಾಯಿತಿಗಾಗಿ ನೂತನ ಹಣಕಾಸು ಮಾದರಿ ಅನುಷ್ಠಾನಗೊಳಿಸಲಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

Posted On: 20 SEP 2020 4:25PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಎಲ್ಲ ವೈಯಕ್ತಿಕ ಮತ್ತು .ಜಾ. ಮತ್ತು ಓಬಿಸಿ ಪ್ರವರ್ಗದವರನ್ನು ಒಳಗೊಂಡ ಎಸ್.ಎಚ್.ಜಿ. ಫಲಾನುಭವಿಗಳಿಗಾಗಿ ಬಡ್ಡಿ ರಿಯಾಯಿತಿಗಾಗಿ ನೂತನ ಹಣಕಾಸು ಮಾದರಿ ಅನುಷ್ಠಾನಗೊಳಿಸಲು ಮುಂದಾಗಿದೆ. .ಜಾ ಎಸ್.ಎಚ್.ಜಿ ಗಳ/ಫಲಾನುಭವಿಗಳಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಎಸ್.ಸಿ.ಎಫ್.ಡಿ.ಸಿ.) ಜಾರಿ ಸಂಸ್ಥೆಯಾಗಿದ್ದರೆ, ಓಬಿಸಿ ಎಸ್.ಎಚ್.ಜಿ ಗಳ/ಫಲಾನುಭವಿಗಳಿಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್.ಬಿ.ಸಿ.ಎಫ್.ಡಿ.ಸಿ.) ಅನುಷ್ಠಾನ ಸಂಸ್ಥೆಯಾಗಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌.ಆರ್‌.ಎಲ್‌.ಎಂ) ಅಥವಾ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್‌.ಯುಎಲ್.ಎಂ) ಅಥವಾ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌.ಬಿಗಳು), ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್‌.ಆರ್‌.ಬಿ.ಗಳು) ಮತ್ತು ಅಂತಹುದೇ ಹಣಕಾಸು ಸಂಸ್ಥೆಗಳು ಅಥವಾ ಸಾಲ ನೀಡುವ ಸಂಸ್ಥೆಗಳ ಮೂಲಕ ಸಾಲ ಪಡೆದ ನಬಾರ್ಡ್ / ವೈಯಕ್ತಿಕ ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದ ನೇರ ಸವಲತ್ತನ್ನು ಒದಗಿಸುವುದು ಮಾದರಿಯ ಉದ್ದೇಶವಾಗಿದೆ.

ಇದರ ಜೊತೆಗೆ, ಸಚಿವಾಲಯವು ಈಗಾಗಲೇ ಕೆಳಕಂಡ ಎರಡು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇದು ಸಮಾಜದ ದುರ್ಬಲ ವರ್ಗಗಳಿಗೆ ನೆರವು ನೀಡುತ್ತದೆ:

  1. ಇತರ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಗರೋತ್ತರ ಅಧ್ಯಯನಕ್ಕಾಗಿ ಶಿಕ್ಷಣ ಸಾಲದ ಮೇಲಿನ ಅಂಬೇಡ್ಕರ್ ಬಡ್ಡಿ ಸಹಾಯಧನ: ಯೋಜನೆಯಡಿ, ರೂ.20.00 ಲಕ್ಷದವರೆಗಿನ ಸಾಲದ ಮೇಲೆ ಬಡ್ಡಿ ಸಹಾಯಧನವನ್ನು ಫಲಾನುಭವಿಗಳಿಗೆ ನೋಡಲ್ ಬ್ಯಾಂಕ್ ನಿಂದ ವಿತರಿಸಲಾಗುತ್ತದೆ. ಎಲ್ಲಾ ಮೂಲಗಳಿಂದ ಪೋಷಕರ ವಾರ್ಷಿಕ ಆದಾಯ 8.00 ಲಕ್ಷ ರೂ. ಇವರುವವರು ಯೋಜನೆಯಡಿ ಸಾಲ ಪಡೆಯಲು ಅರ್ಹರಾಗಿರುತ್ತಾರೆ.
  2. ಎನ್.ಬಿ.ಸಿಎಫ್.ಡಿ.ಸಿ. ರಿಯಾಯಿತಿ ಬಡ್ಡಿ ದರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ವಾರ್ಷಿಕ ಕೌಟುಂಬಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ದುರ್ಬಲವರ್ಗದವರಿಗೆ ರಾಜ್ಯ ಚಾನೆಲೈಸಿಂಗ್ ಏಜೆನ್ಸಿಗಳ (ಎಸ್‌.ಸಿಎ) ಮೂಲಕ ಸ್ವ-ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಸಾಲ ಒದಗಿಸುತ್ತದೆ, ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ಸಾಲದ ಮಿತಿ 15.00 ಲಕ್ಷ ರೂ.ವರೆಗೆ ಇರುತ್ತದೆ.

ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್ ಲೋಕಸಭೆಗಿಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

***



(Release ID: 1661699) Visitor Counter : 140