ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಡೆನ್ಮಾರ್ಕ್ ಹಸಿರು ವ್ಯೂಹಾತ್ಮಕ ಸಹಯೋಗ ಕುರಿತ ಜಂಟಿ ಹೇಳಿಕೆ

Posted On: 28 SEP 2020 7:28PM by PIB Bengaluru

1.     ಡೆನ್ಮಾರ್ಕ್ ಸಂಸ್ಥಾನದ ಪ್ರಧಾನಮಂತ್ರಿ ಘನತೆವೆತ್ತ ಶ್ರೀಮತಿ ಮೆಟ್ಟೆ ಫ್ರೆಡರಿಕ್ಸನ್ ಮತ್ತು ಭಾರತ ಗಣರಾಜ್ಯದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ಸೆಪ್ಟೆಂಬರ್ 28ರಂದು ನಡೆದ ಭಾರತ- ಡೆನ್ಮಾರ್ಕ್ ವರ್ಚುವಲ್ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು.

2.     ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ಫ್ರೆಡೆರಿಕ್ಸನ್ ಅವರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಆಪ್ತ ಮತ್ತು ಸ್ನೇಹಪರ ವಾತಾವರಣದಲ್ಲಿ ಆಳವಾದ ವಿಚಾರ ವಿನಿಮಯ ನಡೆಸಿದರು, ಇಬ್ಬರೂ ನಾಯಕರು ಹವಾಮಾನ ಬದಲಾವಣೆ ಮತ್ತು ಹಸಿರು ಪರಿವರ್ತನೆ ಸೇರಿದಂತೆ ಕೋವಿಡ್ -19 ಸಾಂಕ್ರಾಮಿಕ ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು ಮತ್ತು ಸುಸ್ಥಿರ ಆರ್ಥಿಕತೆ ಮತ್ತು ಸಮಾಜಗಳನ್ನು ವೇಗಗೊಳಿಸುವ ದೃಷ್ಟಿಯಿಂದ ಸಾಮಾನ್ಯ ತಿಳಿವಳಿಕೆಯನ್ನು ತಲುಪಿದರು.

3.   ಐತಿಹಾಸಿಕ ನಂಟು, ಸಮಾನ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಯ ಹಂಚಿಕೆಯ ಆಶಯಗಳ ಆಧಾರದಲ್ಲಿ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯ ಮುಂದುವರಿಕೆಗೆ ಸಂತೃಪ್ತಿ ವ್ಯಕ್ತಪಡಿಸಿದರು.

4.     ವಿಶ್ವಾಸಾರ್ಹ ಪಾಲುದಾರರಾಗಿ ಉಳಿಯಬೇಕೆಂಬ ಹಂಚಿಕೆಯ ಆಶಯದಿಂದಾಗಿ, ಇಬ್ಬರೂ ಪ್ರಧಾನಮಂತ್ರಿಗಳು ಭಾರತ-ಡೆನ್ಮಾರ್ಕ್ ಬಾಂಧವ್ಯವನ್ನು ಹಸಿರು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಎತ್ತರಿಸಲು ಸಮ್ಮತಿಸಿದರು. ಸಹಭಾಗಿತ್ವವು ಜಂಟಿ ಆಯೋಗ ಸ್ಥಾಪನೆ ಮೂಲಕ ಭಾರತ ಮತ್ತು ಡೆನ್ಮಾರ್ಕ್ ನಡುವೆ  ರಾಜಕೀಯ ಕ್ಷೇತ್ರ; ಆರ್ಥಿಕ ಮತ್ತು ವಾಣಿಜ್ಯ ಕ್ಷೇತ್ರ; ವಿಜ್ಞಾನ ಮತ್ತು ತಂತ್ರಜ್ಞಾನ; ಪರಿಸರ; ಇಂಧನ; ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದೊಳಗೆ ಹಾಲಿ ಇರುವ ಸಹಕಾರ ಒಪ್ಪಂದವನ್ನು  (ಫೆಬ್ರವರಿ 6, 2009 ರಂದು ಸಹಿಹಾಕಲಾದ) ರೂಪಿಸಲು ಮತ್ತು ಕ್ರೋಡೀಕರಿಸುತ್ತದೆ. ಜೊತೆಗೆ ಇದು ನವೀಕರಿಸಬಹುದಾದ ಇಂಧನ, ನಗರಾಭಿವೃದ್ಧಿ, ಪರಿಸರ, ಕೃಷಿ ಮತ್ತು ಪಶುಸಂಗೋಪನೆ, ಆಹಾರ ಸಂಸ್ಕರಣೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ, ಶಿಪ್ಪಿಂಗ್, ಕಾರ್ಮಿಕ ಚಲನಶೀಲತೆ ಮತ್ತು ಡಿಜಿಟಲೀಕರಣದ ಕುರಿತು ಅಸ್ತಿತ್ವದಲ್ಲಿರುವ ಜಂಟಿ ಕಾರ್ಯ ಗುಂಪುಗಳನ್ನು ರೂಪಿಸುತ್ತದೆ ಮತ್ತು ಪೂರಕವಾಗಿರುತ್ತದೆ.

5. ಹಸಿರು ವ್ಯೂಹಾತ್ಮಕ ಪಾಲುದಾರಿಕೆಯು ರಾಜಕೀಯ ಸಹಕಾರ ಮುಂದುವರಿಸಲು, ಆರ್ಥಿಕ ಬಾಂಧವ್ಯ ವಿಸ್ತರಿಸಲು, ಹಸಿರು ವೃದ್ಧಿಸಲು, ಉದ್ಯೋಗ ಸೃಷ್ಟಿಸಲು ಮತ್ತು ಜಾಗತಿಕ ಸವಾಲುಗಳು ಹಾಗೂ ಅವಕಾಶಗಳನ್ನು ನಿರ್ವಹಿಸಲು ಪರಸ್ಪರರಿಗೆ ಉಪಯುಕ್ತವಾಗಿ ಒಪ್ಪಂದವಾಗಿದೆ; ಪ್ಯಾರಿಸ್ ಒಪ್ಪಂದ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಮಹತ್ವಾಕಾಂಕ್ಷೆಯ ಅನುಷ್ಠಾನದ ಮೇಲೆ ಕೇಂದ್ರೀಕರಿಸಿದೆ.

6. ಇಬ್ಬರೂ ಪ್ರಧಾನಮಂತ್ರಿಯವರು ಹಸಿರು ವ್ಯೂಹಾತ್ಮಕ ಪಾಲುದಾರಿಕೆ ಸ್ಥಾಪಿಸುವ ಮಹತ್ವವನ್ನು ದೃಢಪಡಿಸಿದ್ದು, ಇದರಡಿ ಭಾರತ ಮತ್ತು ಡೆನ್ಮಾರ್ಕ್ ಸಂಬಂಧಿತ ಸಚಿವಾಲಯಗಳು, ಸಂಸ್ಥೆಗಳು ಮತ್ತು ಬಾಧ್ಯಸ್ಥರೊಂದಿಗೆ ಸಹಕರಿಸಲಿವೆ.

ಇಂಧನ ಮತ್ತು ಹವಾಮಾನ ಬದಲಾವಣೆ

7.     ಇಬ್ಬರೂ ಪ್ರಧಾನಮಂತ್ರಿಯವರು ಹಸಿರು ಇಂಧನ ಪರಿವರ್ತನೆ ಮತ್ತು ಹವಾಮಾನ ಬದಲಾವಣೆಯ ಜಾಗತಿಕ ಸವಾಲುಗಳು ಮತ್ತು ಪರಿಹಾರಕ್ಕೆ ಆಪ್ತ ಸಹಯೋಗವನ್ನು ದೃಢಪಡಿಸಿದರು. ಕಡಲ ಪವನ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನದ ಮೇಲಿನ ವ್ಯೂಹಾತ್ಮಕ ವಲಯ ಸಹಕಾರ, ಹಾಗೆಯೇ ಭಾರತ- ಡೆನ್ಮಾರ್ಕ್ ಇಂಧನ ಸಹಯೋಗ (ಐಎನ್‌ಡಿಇಪಿಸಾಮರ್ಥ್ಯ ವರ್ಧನೆ, ಪವನ ಶಕ್ತಿ ಕುರಿತ ಜ್ಞಾನ ವಿನಿಮಯ ಮತ್ತು ತಂತ್ರಜ್ಞಾನ ವರ್ಗಾವಣೆ; ಇಂಧನ ಮಾಡೆಲಿಂಗ್ ಮತ್ತು ನವೀಕರಿಸಬಹುದಾದ ಶಕ್ತಿಯ ಏಕೀಕರಣ, ಜಾಗತಿಕ ಇಂಧನ ಪರಿವರ್ತನೆ, ಹಸಿರು ವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿರುವ ಕೆಲವು ಸಾಮಾನ್ಯ ಜಾಗತಿಕ ಸವಾಲುಗಳನ್ನು ಎದುರಿಸುವ ಹಂಚಿಕೆಯ ಬದ್ಧತೆಯನ್ನು ವಿವರಿಸುತ್ತದೆ.ಎರಡೂ ಕಡೆಯವರು ಇಂಧನ ಪಾಲುದಾರಿಕೆಯನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಬಲಪಡಿಸುವ ಕುರಿತಂತೆ ಚರ್ಚಿಸಿದವು.

8. ಹವಾಮಾನ ಬದಲಾವಣೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತ ಮತ್ತು ಡೆನ್ಮಾರ್ಕ್ ಮುಂಚೂಣಿಯಲ್ಲಿರಲು ಸಮ್ಮತಿಸಿದವು. ಮಹತ್ವಾಕಾಂಕ್ಷೆಯ ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕೆ ಕಾರಣವಾಗುವ ಹವಾಮಾನ ಮತ್ತು ಇಂಧನದ ಬಗ್ಗೆ ಎರಡೂ ದೇಶಗಳು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಗುರಿಗಳನ್ನು ನಿಗದಿಪಡಿಸಿವೆ. ಒಟ್ಟಿನಲ್ಲಿ, ಮಹತ್ವಾಕಾಂಕ್ಷೆಯ ಹವಾಮಾನ ಮತ್ತು ಸುಸ್ಥಿರ ಇಂಧನ ಗುರಿಗಳನ್ನು ತಲುಪಿಸುವುದು ಸಾಧ್ಯ ಎಂದು ಉಭಯ ದೇಶಗಳು ಜಗತ್ತಿಗೆ ತೋರಿಸಲಿವೆ.

9.  ಎರಡೂ ದೇಶಗಳು ಹವಾಮಾನ ಬದಲಾವಣೆ ಮತ್ತು ನವೀಕರಿಸಬಹುದಾದ ಇಂಧನದ ವಿವಿಧ ಹಂತಗಳ ಕುರಿತಂತೆ ನಿಯಮಿತವಾಗಿ ಸಮಾಲೋಚನೆ ಮತ್ತು ಮಾತುಕತೆ ನಡೆಸಲು ಸಮ್ಮತಿಸಿದವು.

ಪರಿಸರ/ ಜಲ ಮತ್ತು ಸರ್ಕ್ಯುಲರ್ ಆರ್ಥಿಕತೆ

10. ಇಬ್ಬರೂ ಪ್ರಧಾನಮಂತ್ರಿಗಳು ಪರಿಸರ/ಜಲ ಮತ್ತು ಸರ್ಕ್ಯುಲರ್ ಆರ್ಥಿಕತೆ ಕುರಿತಂತೆ ಸರ್ಕಾರದಿಂದ ಸರ್ಕಾರದ ನಡುವೆ ಹಾಲಿ ಇರುವ ಸಹಕಾರವನ್ನು ವಿಸ್ತರಿಸಲು ಮತ್ತು ಬಲಪಡಿಸುವ ನಿಟ್ಟಿನಲ್ಲಿ ಒಗ್ಗೂಡಿ ಶ್ರಮಿಸಲು ಸಮ್ಮತಿಸಿದರು. ಜಲ ಕ್ಷಮತೆ ಮತ್ತು ಆದಾಯ ರಹಿತ ನೀರು (ಜಲ ನಷ್ಟ) ದಲ್ಲಿ ಸಹಕರಿಸಲೂ ಅವರು ಸಮ್ಮತಿಸಿದರು ಮತ್ತು ಸಂದರ್ಭದಲ್ಲಿ ಭಾರತದ ಜಲ ಶಕ್ತಿ ಸಚಿವಾಲಯ ಮತ್ತು ಡ್ಯಾನಿಶ್ ಪರಿಸರ ಸಂರಕ್ಷಣಾ ಸಂಸ್ಥೆ ಮತ್ತು ಡ್ಯಾನಿಶ್ ಪರಿಸರ ಮತ್ತು ಆಹಾರ ಸಚಿವಾಲಯಕ್ಕೆ ಆರಂಭಿಕ ಮೂರು ವರ್ಷಗಳ ಅವಧಿ (2021-23)ಗೆ ಕಾರ್ಯಯೋಜನೆಯನ್ನು ಅಭಿವೃದ್ಧಿಪಡಿಸುವ ಸವಾಲು ನೀಡಲಾಯಿತು.

11. ನೀರು ಸರಬರಾಜು, ನೀರು ಪೂರೈಕೆ, ತ್ಯಾಜ್ಯ ನೀರಿನ ಸಂಸ್ಕರಣೆ, ಒಳಚರಂಡಿ ವ್ಯವಸ್ಥೆ, ಸಂಸ್ಕರಿಸಿದ ತ್ಯಾಜ್ಯ ನೀರಿನ ಮರು ಬಳಕೆ, ನೀರು ನಿರ್ವಹಣೆ ಮತ್ತು ಇಂಧನ ಕ್ಷೇತ್ರದಲ್ಲಿ ಇಂಧನ ಆಪ್ಟಿಮೈಸೇಶನ್ ಮುಂತಾದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಹಕಾರವನ್ನು ಇಂಡೋ-ಡ್ಯಾನಿಶ್ ಜಲ ತಂತ್ರಜ್ಞಾನ ಸಹಯೋಗದ ಮೂಲಕ ಹೆಚ್ಚಿಸುವ ತಮ್ಮ ಜಂಟಿ ಆಶಯವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಸೇರಿದಂತೆ ಸುಸ್ಥಿರ ನಗರಾಭಿವೃದ್ಧಿ

12. ಸುಸ್ಥಿರ ನಗರಾಭಿವೃದ್ಧಿ ಕುರಿತಂತೆ2020 ಜೂನ್ 26ರಂದು ಆಯೋಜಿಸಲಾಗಿದ್ದ  ಎರಡನೇ ಭಾರತ- ಡೆನ್ಮಾರ್ಕ್ ವರ್ಚ್ಯುವಲ್ ಜೆಡ್ಬ್ಲುಜಿಯನ್ನು ಉಲ್ಲೇಖಿಸಿದ ಎರಡೂ ಕಡೆಯವರು, ಗೋವಾದ ನಗರ ಜೀವನ ಪ್ರಯೋಗಾಲಯದ ಮೂಲಕ  ಸ್ಮಾರ್ಟ್ ನಗರಗಳು ಸುಸ್ಥಿರ ನಗರಾಭಿವೃದ್ಧಿ ಕುರಿತ ದ್ವಿಪಕ್ಷೀಯ ಸಹಕಾರ ವರ್ಧನೆಗೆ ಸಮ್ಮತಿಸಿದರು.

13. ಎರಡೂ ಕಡೆಯವರು ಹಾಲಿ ಇರುವ ಅದಯಪುರ್ ಮತ್ತು ಅರ್ ಹಸ್ ಹಾಗೂ ತುಮಕೂರು ಮತ್ತು ಅಲಬೋರ್ಗ್ ನಗರಗಳ ಸಭೆಗಳ ನಡುವಿನ ಸಹಕಾರ ವರ್ಧನೆಗೂ ಸಮ್ಮತಿಸಿದರು.

14. ಡ್ಯಾನಿಷ್ ಕಂಪನಿಗಳು ಭಾರತದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಕೊಡುಗೆ ನೀಡುತ್ತಿವೆ ಎಂಬುದನ್ನು ಉಲ್ಲೇಖಿಸಿದ ಅವರು, ಸುಸ್ಥಿರ ನಗರಾಭಿವೃದ್ಧಿಯ ಕ್ಷೇತ್ರದಲ್ಲಿ ಡ್ಯಾನಿಷ್ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಸ್ವಾಗತಿಸಿದರು.

ವ್ಯಾಪಾರ, ವಾಣಿಜ್ಯ ಮತ್ತು ಶಿಪ್ಪಿಂಗ್

15. ಇಬ್ಬರೂ ಪ್ರಧಾನಮಂತ್ರಿಗಳು ಎರಡೂ ದೇಶಗಳ ಸರ್ಕಾರ, ಸಂಸ್ಥೆಗಳು ಮತ್ತು ಉದ್ದಿಮೆಗಳೊಂದಿಗೆ ಹಸಿರು ಮತ್ತು ಹವಾಮಾನ ಸ್ನೇಹಿ ತಂತ್ರಜ್ಞಾನದ ಮೇಲೆ ವಿಶೇಷ ಗಮನದೊಂದಿಗೆ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸುವ ಕಲ್ಪನೆಯನ್ನು ಸ್ವಾಗತಿಸಿದರು. ಹಸಿರು ಇಂಧನದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಬೆಂಬಲಿಸಲು ನಿಯಂತ್ರಣ ಚೌಕಟ್ಟಿನ ಮಹತ್ವವನ್ನು ಅವರು ಗುರುತಿಸಿದರು.

16.  ಸಾಗರ ವ್ಯವಹಾರಗಳಲ್ಲಿನ ಆಳವಾದ ಸಹಕಾರವನ್ನು ಶ್ಲಾಘಿಸಿದ ಇಬ್ಬರೂ ನಾಯಕರು ಹಡಗು ನಿರ್ಮಾಣ ಮತ್ತು ವಿನ್ಯಾಸ, ಸಾಗರ ಸೇವೆ ಹಾಗೂ ಹಸಿರು ಹಡಗುಗಳ ನಿರ್ಮಾಣ ಮತ್ತು ಬಂದರು ಅಭಿವೃದ್ಧಿಯಲ್ಲಿ ಸಹಕಾರ ಹೆಚ್ಚಳದಲ್ಲಿನ ಸಾಮರ್ಥ್ಯವನ್ನು ಗುರುತಿಸಿದರು.

17. ಇಬ್ಬರೂ ಪ್ರಧಾನಮಂತ್ರಿಗಳು ತಮ್ಮ ವಾಣಿಜ್ಯ ನಿಯೋಗಗಳಿಗೆ, ಎಸ್.ಎಂ..ಗಳಿಗೆ ಮಾರುಕಟ್ಟೆ ಪ್ರವೇಶ ಚಟುವಟಿಕೆ ಹಾಗೂ ಸುಗಮ ವಾಣಿಜ್ಯ ಉತ್ತೇಜನ ನೀಡುವುದನ್ನು ಒತ್ತಿ ಹೇಳಿದರು.

18. ಭಾರತ ಮತ್ತು ಡೆನ್ಮಾರ್ಕ್ ಬೌದ್ಧಿಕ ಆಸ್ತಿಗಳ ಹಕ್ಕಿನಲ್ಲಿ ಹೊರಹೊಮ್ಮುತ್ತಿರುವ ಸಹಕಾರವನ್ನು ಖಚಿತಪಡಿಸಿದರು, ಇದು ಅವರ ರಾಷ್ಟ್ರೀಯ ಬೌದ್ಧಿಕ ಆಸ್ತಿಗಳ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆಧುನೀಕರಿಸಲು, ನಾವಿನ್ಯ, ರಚನಾತ್ಮಕತೆ ಮತ್ತು ತಂತ್ರಜ್ಞಾನ ಮುಂದುವರಿಕೆ ಉತ್ತೇಜಿಸಲಿದೆ.

ವಿಜ್ಞಾನ, ತಂತ್ರಜ್ಞಾನ, ನಾವಿನ್ಯತೆ ಮತ್ತು ಡಿಜಿಟಲೀಕರಣ

19. ಭಾರತ ಮತ್ತು ಡೆನ್ಮಾರ್ಕ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸ್‌.ಟಿಐ) ಯಲ್ಲಿ ಬಲವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಹೂಡಿಕೆಗಳನ್ನು ಉತ್ತೇಜಿಸುವ ಮತ್ತು ಸುಗಮಗೊಳಿಸುವ ಮಹತ್ವವನ್ನು ತಂತ್ರಜ್ಞಾನ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ಹೊಸ ಪರಿಹಾರಗಳ ಅನುಷ್ಠಾನಕ್ಕೆ ಒಂದು ಪ್ರಮುಖ ಮಾರ್ಗವೆಂದು ಗುರುತಿಸಿದವು. ಎಸ್‌.ಟಿಐನಲ್ಲಿನ ಸಹಯೋಗವು ಅಧಿಕಾರಿಗಳು ಮತ್ತು ಸಣ್ಣ ಮತ್ತು ದೊಡ್ಡ ಕಂಪನಿಗಳು ಮತ್ತು ಭಾರತ ಮತ್ತು ಡೆನ್ಮಾರ್ಕ್‌ ಸಂಶೋಧನೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಂಬಂಧವನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಮೂಲಕ ಹಸಿರು ಕಾರ್ಯತಂತ್ರದ ಸಹಭಾಗಿತ್ವವನ್ನು ಬೆಂಬಲಿಸುತ್ತದೆ. ಇಂಧನ, ನೀರು, ಜೈವಿಕ ಸಂಪನ್ಮೂಲಗಳು ಮತ್ತು ಐಸಿಟಿಯಂತಹ ಕ್ಷೇತ್ರಗಳಲ್ಲಿನ ಯೋಜನೆಗಳಿಗೆ ಜಂಟಿ ಕರೆಗಳೊಂದಿಗೆ ಅಸ್ತಿತ್ವದಲ್ಲಿರುವ ಬಲವಾದ ದ್ವಿಪಕ್ಷೀಯ ಎಸ್‌.ಟಿಐ ಸಹಭಾಗಿತ್ವವನ್ನು ನಿರ್ಮಿಸಲು ಎರಡೂ ಕಡೆಯವರು ಸಮ್ಮತಿಸಿದರು.

20.  ಇಬ್ಬರೂ ನಾಯಕರು, ಡಿಜಿಟಲೀಕರಣ ಮತ್ತು ಡಿಜಿಟಲ್ ಪರಿಹಾರ ಮತ್ತು ಹಸಿರು ಪ್ರಕ್ರಿಯೆಯಲ್ಲಿ ವ್ಯಾಪಾರ ಮಾದರಿಗಳ ತಮ್ಮ ಹಂಚಿಕೆಯ ಹಿತಾಸಕ್ತಿಯನ್ನು ಗುರುತಿಸಿದರು ಮತ್ತು ಸುಸ್ಥಿರ ಹಸಿರುವ ವೃದ್ಧಿಗೆ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವಿನ್ಯತೆ ಮತ್ತು ಅಭಿವೃದ್ಧಿಗೆ ಸಹಯೋಗ ಹೆಚ್ಚಳಕ್ಕೆ ಸಮ್ಮತಿಸಿದರು.

ಆಹಾರ ಮತ್ತು ಕೃಷಿ

21. ಕೃಷಿ ವಲಯದ ಸಹಯೋಗದಲ್ಲಿನ ಅಪಾರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ಪ್ರಧಾನಮಂತ್ರಿಗಳು ಆಹಾರ ಸಂಸ್ಕರಣೆ ಮತ್ತು ಆಹಾರ ಭದ್ರತೆ, ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ಅಧಿಕಾರಿಗಳು, ವ್ಯವಹಾರಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಆಳವಾದ ಮತ್ತು ನಿಕಟ ಸಹಕಾರವನ್ನು ಬೆಳೆಸಲು ಪ್ರೋತ್ಸಾಹಿಸಿಸಲು ನಿರ್ಧರಿಸಿದರು..

ಆರೋಗ್ಯ ಮತ್ತು ಜೀವ ವಿಜ್ಞಾನ

22.  ಎರಡೂ ಕಡೆಯವರು ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಮತ್ತು ಮಾತುಕತೆಯನ್ನು ಬಲಪಡಿಸುವ ತಮ್ಮ ಸಮಾನ ಆಶಯವನ್ನು ವ್ಯಕ್ತಪಡಿಸಿದರು. ಸಾಂಕ್ರಾಮಿಕ ಮತ್ತು ಲಸಿಕೆಗಳನ್ನು ಒಳಗೊಂಡಂತೆ ಆರೋಗ್ಯ ನೀತಿ ವಿಷಯಗಳ ಬಗ್ಗೆ ಸಂವಾದವನ್ನು ವಿಸ್ತರಿಸಲು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅವರು ತಮ್ಮ ಆಸಕ್ತಿಯನ್ನು ದೃಡಪಡಿಸಿದರು, ಅದರಲ್ಲೂ ವಿಶೇಷವಾಗಿ ಕೋವಿಡ್ -19 ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು. ಸಂಶೋಧನಾ ಸಹಯೋಗಗಳು ಸೇರಿದಂತೆ ಜೀವ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ವ್ಯವಹಾರಗಳಿಗೆ ವಾಣಿಜ್ಯ ಅವಕಾಶಗಳನ್ನು ವಿಸ್ತರಿಸುವ ಕೆಲಸ ಮಾಡಲು ಅವರು ಸಮ್ಮತಿಸಿದರು.

ಸಾಂಸ್ಕೃತಿಕ ಸಹಕಾರ, ಜನರೊಂದಿಗಿನ ಸಂಪರ್ಕ ಮತ್ತು ಕಾರ್ಮಿಕರ ಓಡಾಟ

23. ಇಬ್ಬರೂ ಪ್ರಧಾನಮಂತ್ರಿಗಳು ಭಾರತ ಮತ್ತು ಡೆನ್ಮಾರ್ಕ್ ನಡುವಿನ ಬಾಂಧವ್ಯದ ಶ್ರೀಮಂತಿಕೆಯ ಫಲವಾಗಿ ದೀರ್ಘಕಾಲದಿಂದ ಜನರೊಂದಿಗೆ ಸಂಪರ್ಕವನ್ನು ಗುರುತಿಸಿದರು ಮತ್ತು ಸಾಂಸ್ಕೃತಿಕ ಸಹಕಾರದ ಮೂಲಕ ಎರಡೂ ದೇಶಗಳ ಜನರ ನಡುವೆ ಪರಸ್ಪರ ಅರಿವು ಮತ್ತು ಜಾಗೃತಿಯನ್ನು ಉತ್ತೇಜಿಸಲು ಸಮ್ಮತಿಸಿದರು

24. ಹೆಚ್ಚಿನ ಜನರೊಂದಿಗಿನ ಸಂಪರ್ಕ ಮತ್ತು ಪ್ರವಾಸೋದ್ಯಮ ವಲಯದಲ್ಲಿನ ಸಹಕಾರ ವರ್ಧನೆಗಾಗಿ ಎರಡೂ ಕಡೆಯವರು ಎರಡೂ ದೇಶಗಳ ನಡುವೆ ಸುಗಮ ಸಂಚಾರ ಮತ್ತು  ಕಾರ್ಮಿಕರ ಓಡಾಟದ ಸಾಧ್ಯತೆಗಳನ್ನು ಪರಿಶೀಲಿಸಲು ಸಮ್ಮತಿಸಿದರು.

ಬಹುಪಕ್ಷೀಯ ಸಹಕಾರ

25. ಇಬ್ಬರೂ ಪ್ರಧಾನಮಂತ್ರಿಗಳು, ನಿಯಮ ಆಧಾರಿತ ಬಹುಪಕ್ಷೀಯ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಉಪಕ್ರಮದಲ್ಲಿ ಸೇರಲು ಸಮ್ಮತಿಸಿದರು. ಇದರಲ್ಲಿ ಜಾಗತಿಕ ಸವಾಲುಗಳಾದ ಇಂಧನ ಮತ್ತು ಹವಾಮಾನ ಬದಲಾವಣೆಯಂಥ ಜಾಗತಿಕ ಸವಾಲುಗಳನ್ನು ಎದುರಿಸುವ ಪ್ರಯತ್ನವನ್ನು ಹೆಚ್ಚಿಸುವ ತುರ್ತು ಅಗತ್ಯ ಎದುರಿಸಲು  ಮತ್ತು ಅಂತಾರಾಷ್ಟ್ರೀಯ ಇಂದನ ಸಂಸ್ಥೆ, ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸೌರ ಸಹಯೋಗದ ಸಮಾನ ಬದ್ಧತೆಗಾಗಿ ಬಲವಾದ ಬಹುಪಕ್ಷೀಯ ಸಹಕಾರವೂ ಸೇರಿದೆ.

26.  ಎರಡೂ ಕಡೆಯವರು ಡಬ್ಲ್ಯು.ಟಿ.. ಅಡಿಯಲ್ಲಿ ಅದರ ಪ್ರಮುಖ ಜಾಗತಿಕ ಪ್ರಗತಿ ಉತ್ತೇಜನ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಮುಕ್ತ, ಸಮಗ್ರ ಮತ್ತು ನಿಯಮ ಆಧಾರಿತ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯ ಸಹಕಾರ ಉತ್ತೇಜನದ ಅಗತ್ಯಕ್ಕೆ ಬೆಂಬಲಿಸಿದರು.

27. ಡಬ್ಲ್ಯುಟಿಒ ಸುಧಾರಣೆಗೆ ನಡೆಯುತ್ತಿರುವ ಚರ್ಚೆಗಳಿಗೆ ಎರಡೂ ಕಡೆಯವರು ಬೆಂಬಲ ವ್ಯಕ್ತಪಡಿಸಿದರು. ಸಹಕಾರವನ್ನು ಬಲಪಡಿಸುವ ಮತ್ತು ಡಬ್ಲ್ಯುಟಿಒದ ಸಮಗ್ರ ಸುಧಾರಣೆಗಳಿಗೆ ಕೊಡುಗೆ ನೀಡುವ ದೃಢ ನಿರ್ಧಾರವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಸುಧಾರಣೆಗಳನ್ನು ಒಳಗೊಳ್ಳಬೇಕು ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಬೇಕು ಎಂದು ಎರಡೂ ಕಡೆಯವರು ಒಪ್ಪಿಕೊಂಡರು, ಪೂರ್ಣ ಸಾಮರ್ಥ್ಯದ ಮೇಲ್ಮನವಿ ಕಾಯವನ್ನು ಪುನರ್ಸ್ಥಾಪಿಸುವುದು ಡಬ್ಲ್ಯುಟಿಒನ ಎರಡು ಹಂತದ ವಿವಾದ ಇತ್ಯರ್ಥ ವ್ಯವಸ್ಥೆಯ ಭಾಗವಾಗಿದೆ.

28. ಎರಡೂ ಕಡೆಯವರು ಭಾರತಐರೋಪ್ಯ ಒಕ್ಕೂಟದ ನಡುವಿನ ಬಾಂಧವ್ಯವನ್ನು ಮತ್ತಷ್ಟು ವರ್ಧಿಸುವ ಸಲುವಾಗಿ ಭಾರತ ಮತ್ತು ಇಯು ನಡುವೆ ಮಹತ್ವಾಕಾಂಕ್ಷೆಯ, ನ್ಯಾಯಸಮ್ಮತ ಮತ್ತು ಪರಸ್ಪರರಿಗೆ ಪ್ರಯೋಜನವಾಗುವಂಥ ವಾಣಿಜ್ಯ ಮತ್ತು ಹೂಡಿಕೆ ಒಪ್ಪಂದಕ್ಕೆ ಶ್ರಮಿಸುವ ಬದ್ಧತೆ ವ್ಯಕ್ತಪಡಿಸಿದರು.

29. ಆರ್ಕ್ಟಿಕ್ ಮಂಡಳಿಯ ಚೌಕಟ್ಟಿನೊಳಗಿನ ಆರ್ಕ್ಟಿಕ್ ಸಹಕಾರವು ಜಾಗತಿಕ ಆಯಾಮವನ್ನು ಹೊಂದಿದೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯವನ್ನು ಪರಿಹರಿಸಲು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಇದು ಅವಶ್ಯಕವಾಗಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಸ್ಫೂರ್ತಿಯಲ್ಲಿ, ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಆರ್ಕ್ಟಿಕ್ ಮಂಡಳಿ ಚೌಕಟ್ಟಿನೊಳಗೆ ಸಹಭಾಗಿತ್ವಕ್ಕೆ ಎರಡೂ ಕಡೆಯವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.

30. ಇಬ್ಬರೂ ನಾಯಕರು, ಮಾನವ ಹಕ್ಕುಗಳ, ಪ್ರಜಾಪ್ರಭುತ್ವದ ಮತ್ತು ನೆಲದ ಕಾನೂನಿನ ಹಂಚಿಕೆಯ ಮೌಲ್ಯಗಳನ್ನು ಪ್ರತಿಪಾದಿಸಿದರು ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದುವರಿಕೆಗೆ ಸಹಕಾರ ನೀಡಲು ಸಮ್ಮತಿಸಿದರು.

ತೀರ್ಮಾನ

31. ಡೆನ್ಮಾರ್ಕ್ ಸಂಸ್ಥಾನ ಮತ್ತು ಭಾರತ ಗಣರಾಜ್ಯದ ನಡುವೆ ಹಸಿರು ಕಾರ್ಯತಂತ್ರದ ಸಹಭಾಗಿತ್ವವನ್ನು ಸ್ಥಾಪಿಸುವ ಉಭಯ ದೇಶಗಳ ನಿರ್ಧಾರವು ಅವರ ನಡುವಿನ ಸ್ನೇಹಪರ ಮತ್ತು ಸಹಕಾರಿ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ ಎಂದು ಉಭಯ ನಾಯಕರು ತಮ್ಮ ಸಂಕಲ್ಪವನ್ನು ವ್ಯಕ್ತಪಡಿಸಿದರು.

32. ಮಹತ್ವಾಕಾಂಕ್ಷೆಯ ಗುರಿಗಳು ಮತ್ತು ಕ್ರಮಗಳನ್ನು ಗುರುತಿಸಲಾಗುತ್ತದೆ ಮತ್ತು ಕ್ಷೇತ್ರಗಳ ಕ್ರಿಯಾ ಯೋಜನೆಯಲ್ಲಿ ವಿವರಿಸಲಾಗುವುದು ಮತ್ತು ಅದನ್ನು ಆದಷ್ಟು ಬೇಗ ಕಾರ್ಯಗತ ಗೊಳಿಸಲಾಗುತ್ತದೆ ಮತ್ತು ಅನುಮೋದಿಸಲಾಗುವುದು.

***(Release ID: 1659981) Visitor Counter : 142