ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಕೇಂದ್ರೀಯ ಮೋಟಾರು ವಾಹನ ನಿಯಮ ತಿದ್ದುಪಡಿ ಅಧಿಸೂಚನೆ ಪ್ರಕಟ

2020ರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಮಾಹಿತಿ ತಂತ್ರಜ್ಞಾನ ಪೋರ್ಟಲ್ ಮೂಲಕ ವಾಹನಗಳ ದಾಖಲೆ ನಿರ್ವಹಣೆ ಮತ್ತು ವಿದ್ಯುನ್ಮಾನ ವ್ಯವಸ್ಥೆ ಜಾರಿ

ಐಟಿ ಸೇವೆಗಳು ಮತ್ತು ವಿದ್ಯುನ್ಮಾನ ನಿಗಾವ್ಯವಸ್ಥೆಯಿಂದ ಸಂಚಾರಿ ನಿಯಮಗಳ ಪರಿಣಾಮಕಾರಿ ಜಾರಿ ಮತ್ತು ಚಾಲಕರು ಹಾಗೂ ನಾಗರಿಕರಿಗೆ ಆಗುತ್ತಿದ್ದ ಕಿರುಕುಳ ದೂರ

ಸಕ್ಷಮ ಪ್ರಾಧಿಕಾರ ನೀಡುವ ಅರ್ಹ ವಾಹನ ಪರವಾನಗಿ ವಿವರಗಳು ಅಥವಾ ಅನರ್ಹ ಪರವಾನಗಿ, ಅಮಾನತು ಹಿಂತೆಗೆದುಕೊಂಡಿರುವ ಕುರಿತ ತಾಜಾ ಮಾಹಿತಿ ಪೋರ್ಟಲ್ ನಲ್ಲಿ ಲಭ್ಯ

ವಿದ್ಯುನ್ಮಾನ ರೂಪದಲ್ಲಿ ವಾಹನಗಳ ದಾಖಲೆ ಪ್ರಮಾಣೀಕರಣದಿಂದ ತಪಾಸಣೆ ವೇಳೆ ಭೌತಿಕ ರೂಪದಲ್ಲಿ ದಾಖಲೆ ಸಲ್ಲಿಸಬೇಕಾಗಿಲ್ಲ

ಮಾರ್ಗ ತೋರಿಸಲು ಏಕರೂಪವಾಗಿ ಸಂವಹನ ಸಾಧನ ಬಳಕೆಗೆ ಅವಕಾಶ

Posted On: 26 SEP 2020 7:41PM by PIB Bengaluru

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) ಇತ್ತೀಚೆಗೆ ಕೇಂದ್ರೀಯ ಮೋಟಾರು ವಾಹನ ನಿಯಮ 1989ಕ್ಕೆ ಮಾಡಿರುವ ತಿದ್ದುಪಡಿಗಳ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ ಮೋಟಾರು ವಾಹನ ನಿಯಮಗಳ ಪರಿಣಾಮಕಾರಿ ಜಾರಿ ಮತ್ತು ನಿರ್ವಹಣೆಗೆ 2020 ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ವಾಹನಗಳ ದಾಖಲೆಗಳು ಮತ್ತು -ಚಲನ್ ಗಳನ್ನು ಪೋರ್ಟಲ್ ಮೂಲಕ ನಿರ್ವಹಿಸಲಾಗುವುದು ಮತ್ತು ವಿದ್ಯುನ್ಮಾನ ರೀತಿಯಲ್ಲಿ ಜಾರಿಗೊಳಿಸಲಾಗುವುದು.

.ಟಿ. ಸೇವೆಗಳ ಬಳಕೆ ಮತ್ತು ವಿದ್ಯುನ್ಮಾನ ನಿಗಾ ವ್ಯವಸ್ಥೆಯ ಪರಿಣಾಮ ದೇಶದಲ್ಲಿ ಸಂಚಾರಿ ನಿಯಮಗಳು ಉತ್ತಮ ರೀತಿಯಲ್ಲಿ ಜಾರಿಗೊಳ್ಳಲಿವೆ ಮತ್ತು ಚಾಲಕರಿಗೆ ಆಗುತ್ತಿದ್ದ ಕಿರುಕುಳ ತಪ್ಪಲಿದೆ ಹಾಗೂ ನಾಗರೀಕರಿಗೂ ನೆರವಾಗಲಿದೆ.

ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ 2019 ಅನುಮೋದನೆ ನಂತರ ಮತ್ತು 2019 ಆಗಸ್ಟ್ 9ರಂದು ಅದನ್ನು ಪ್ರಕಟಿಸಿದ ನಂತರ ಅಧಿಸೂಚನೆ ಹೊರಡಿಸುವ ಅಗತ್ಯವಿತ್ತು.

ಅದರಂತೆ, 1989 ಕೇಂದ್ರೀಯ ಮೋಟಾರು ವಾಹನಗಳ ನಿಯಮದಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದ್ದು, ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ 2019 ಅನ್ನು 2020 ಸೆಪ್ಟಂಬರ್ 25ನೇ ದಿನಾಂಕದಂದು ಜಿಎಸ್ ಆರ್ 584()ನಲ್ಲಿ ಪ್ರಕಟಿಸಲಾಗಿದೆ. ತಿದ್ದುಪಡಿಯಲ್ಲಿ ಚಲನ್ ವ್ಯಾಖ್ಯಾನ, .ಟಿ. ಮೂಲಕ ಸೇವೆಗಳನ್ನು ನೀಡಲು ಪೋರ್ಟಲ್ ಹಾಗೂ ವಿದ್ಯುನ್ಮಾನ ರೀತಿಯಲ್ಲಿ ನಿಗಾ ಮತ್ತು ಜಾರಿ ವ್ಯವಸ್ಥೆಯ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ.

ಚಾಲನಾ ಪರವಾನಿಗೆಗಳ ವಿವರಗಳು, ಅನರ್ಹವಾಗಿರುವ ಪರವಾನಿಗೆಗಳು ಅಥವಾ ಪರವಾನಿಗೆ ಪ್ರಾಧಿಕಾರದಿಂದ ಅಮಾನತು ವಾಪಸ್ ಪಡೆದಿರುವ ವಿವರಗಳನ್ನು ಪೋರ್ಟಲ್ ನಲ್ಲಿ ಕ್ರಮವಾಗಿ ಹಾಕಲಾಗುವುದು ಮತ್ತು ಅಂತಹ ದಾಖಲೆಗಳು ನಿಯಮಿತವಾಗಿ ಪೋರ್ಟಲ್ ನಲ್ಲಿ ಲಭ್ಯವಿರಲಿದೆ. ಮೂಲಕ ದಾಖಲೆಗಳನ್ನು ವಿದ್ಯುನ್ಮಾನ ರೀತಿಯಲ್ಲಿ ನಿರ್ವಹಿಸಬಹುದಾಗಿದೆ ಮತ್ತು ಚಾಲಕನ ನಡವಳಿಕೆಯ ಮೇಲೂ ಸಹ ನಿಗಾ ವಹಿಸಲಾಗುವುದು.

ಪ್ರಮಾಣಪತ್ರಗಳನ್ನು ಭೌತಿಕವಾಗಿ ಹಾಗೂ ವಿದ್ಯುನ್ಮಾನ ರೀತಿಯಲ್ಲಿ ಪಡೆದುಕೊಳ್ಳಲು ಹಾಗೂ ಪ್ರದರ್ಶಿಸಲು ನಿಯಮಾವಳಿಗಳನ್ನು ಅಂಶಗಳಲ್ಲಿ ಸೇರಿಸಲಾಗಿದೆ. ಪ್ರಮಾಣಪತ್ರಗಳ ಸಿಂಧುತ್ವ ಅವಧಿ, ದಾಖಲೆಗಳ ವಿತರಣಾ ದಿನಾಂಕ ಮತ್ತು ಸಮಯ, ತಪಾಸಣಾ ಮುದ್ರೆ ಹಾಗೂ ಅಧಿಕಾರಿಯ ಗುರುತನ್ನು ದಾಖಲಿಸಲಾಗುವುದು. ವಿದ್ಯುನ್ಮಾನ ರೀತಿಯಲ್ಲಿ ದಾಖಲೆಗಳ ವಿವರಗಳನ್ನು ಜಾರಿ ಅಧಿಕಾರಿ ಅನುಮೋದಿಸಿದರೆ ಆನಂತರ ದಾಖಲೆಗಳನ್ನು ಭೌತಿಕವಾಗಿ ಪ್ರದರ್ಶಿಸಬೇಕು ಎಂದು ಪರಿಶೀಲನೆ ವೇಳೆ ಬೇಡಿಕೆ ಸಲ್ಲಿಸುವಂತಿಲ್ಲ. ಒಂದು ವೇಳೆ ಯಾವುದೇ ದಾಖಲೆಗಳನ್ನು ವಶಪಡಿಸಿಕೊಳ್ಳುವಂತಹ ಸಂದರ್ಭಗಳು ಎದುರಾದ ಪ್ರಕರಣಗಳಿಗೂ ಕೂಡ ಇದು ಅನ್ವಯವಾಗುತ್ತದೆ.

ಅಲ್ಲದೆ ಅಂತಹ ದಾಖಲೆಗಳಿಗೆ ಬೇಡಿಕೆ ಸಲ್ಲಿಸುವುದು ಅಥವಾ ಯಾವುದೇ ದಾಖಲೆಗಳನ್ನು ಪರಿಶೀಲಿಸುವುದು ದಾಖಲೆಯ ದಿನಾಂಕ ಮತ್ತು ಸಮಯ, ಪರಿಶೀಲನಾ ಮುದ್ರೆ ಮತ್ತು ಗುರುತಿಸಿರುವ ಅಧಿಕಾರಿ ಸಮವಸ್ತ್ರದಲ್ಲಿರುವುದು ಅಥವಾ ಸರ್ಕಾರ ಅನುಮೋದಿಸಿರುವ ಯಾವುದೇ ಅಧಿಕಾರಿ ವಿವರಗಳು, ಪೋರ್ಟಲ್ ನಲ್ಲಿ ದಾಖಲಾಗಿರಬೇಕು. ಇದರಿಂದಾಗಿ ಅನಗತ್ಯ ಮರುಪರಿಶೀಲನೆ ಅಥವಾ ವಾಹನಗಳ ತಾಪಸಣೆ ತಪ್ಪಿಸಲು ನೆರವಾಗುವುದಲ್ಲದೆ, ಚಾಲಕರಿಗೆ ಆಗುತ್ತಿದ್ದ ಕಿರುಕುಳ ದೂರವಾಗಲಿದೆ. .

ಚಾಲಕರಿಗೆ ನೆರವಾಗುವಂತೆ ಹ್ಯಾಂಡ್ ಹೆಲ್ಡ್ ಸಂವಹನ ಸಾಧನ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಇದು ಮಾರ್ಗದ ನಕ್ಷೆ ತೋರಿಸುವುದಲ್ಲದೆ, ವಾಹನ ಚಾಲನೆಯ ವೇಳೆ ಚಾಲಕ ಲಕ್ಷ್ಯ(ಗಮನ) ವಹಿಸುವುದಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿ ಉಂಟುಮಾಡುವುದಿಲ್ಲ.

2020 ಸೆಪ್ಟೆಂಬರ್ 25ನೇ ದಿನಾಂಕದ ಜಿಎಸ್ಆರ್ 586() ಅಧಿಸೂಚನೆ ಮೂಲಕ ಮೋಟಾರು ವಾಹನಗಳ (ಚಾಲನಾ) ನಿಯಮಾವಳಿಗಳು 2017ಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಅವು ಕಾಯ್ದೆಗೆ ತಿದ್ದುಪಡಿಯಾಗಲಿದೆ ಮತ್ತು ಸಿಎಂವಿಆರ್ ಗೂ ತಿದ್ದುಪಡಿ ಆಗಲಿದ್ದು, ಮೂಲಕ ಹ್ಯಾಂಡ್ ಹೆಲ್ಡ್ ಸಾಧನಾ, ವಿದ್ಯುನ್ಮಾನ ರೂಪದಲ್ಲಿ ದಾಖಲೆಗಳ ತಪಾಸಣೆ ಮತ್ತಿತರ ಅಂಶಗಳು ಸೇರ್ಪಡೆಯಾಗಲಿವೆ.

2020 ಸೆಪ್ಟೆಂಬರ್ 25ನೇ ದಿನಾಂಕದ ಎಸ್ಒ() 3311 ಅಧಿಸೂಚನೆಯಂತೆ 2020 ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಮೋಟಾರು ವಾಹನಗಳ(ತಿದ್ದುಪಡಿ) ಕಾಯ್ದೆ 2019 ಅನ್ವಯ ಕೆಲವು ನಿಯಮಾವಳಿಗಳು ಜಾರಿಗೆ ಬರಲಿದ್ದು, ಅದಕ್ಕೆ ನಿಯಮಗಳನ್ನು ಪ್ರಕಟಿಸಲಾಗಿದೆ.

2020 ಸೆಪ್ಟೆಂಬರ್ 25ನೇ ದಿನಾಂಕದ ಎಸ್ಒ() 3310 ಅಧಿಸೂಚನೆಯಂತೆ, ದಂಡದ ಮೊತ್ತವನ್ನು ನಿರ್ದಿಷ್ಟವಾಗಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರಗಳಿಗೆ ಸೂಕ್ತ ಅವಕಾಶ ಒದಗಿಸುತ್ತದೆ.

2020 ಸೆಪ್ಟೆಂಬರ್ 25ನೇ ದಿನಾಂಕದ ಎಸ್ಒ() ಅಧಿಸೂಚನೆಯಂತೆ, ಮೋಟಾರು ವಾಹನಗಳ (ಚಾಲನಾ) ನಿಯಮಗಳು 2017 ಉಲ್ಲಂಘನೆಗೆ ದಂಡದ ಮೊತ್ತವನ್ನು ನಿಗದಿಪಡಿಸಲಾಗಿದೆ ಮತ್ತು ಅವು ಸೆಕ್ಷನ್ 177 ಗೆ ಅನುಗುಣವಾಗಿ ಇರಲಿವೆ, ಆಂತಹ ಉಲ್ಲಂಘನೆಗಳಿಗೆ ದಂಡಗಳನ್ನು ನಿಗದಿಪಡಿಸಲಾಗಿದೆ ಮತ್ತು ಕಾಯ್ದೆಯಡಿ ವಿಶೇಷವಾಗಿ ಅವುಗಳನ್ನು ವಿಶೇಷವಾಗಿ ಉಲ್ಲೇಖಿಸಿಲ್ಲ.

***(Release ID: 1659446) Visitor Counter : 175