ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಶಾಸನ ಬದ್ಧ ಅಧಿಸೂಚಿತ ಗರಿಷ್ಠ ಚಿಲ್ಲರೆ ಮಾರಾಟ ದರದಲ್ಲಿ ರೈತರಿಗೆ ಯೂರಿಯಾ ಪೂರೈಕೆ


ದೇಶದಲ್ಲಿ ಯೂರಿಯಾ ಕೊರತೆ ಇಲ್ಲ: ಕೇಂದ್ರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ

ಪ್ರಕಟಣಾ ದಿನಾಂಕ: 18 SEP 2020 4:14PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ  ಶ್ರೀ ಡಿ.ವಿ. ಸದಾನಂದ ಗೌಡ ಅವರು, ರಾಜ್ಯಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ಭಾರತ ಸರ್ಕಾರ, ಅತ್ಯವಶ್ಯಕ ವಸ್ತುಗಳ ಕಾಯ್ದೆ 1955(ಇಸಿಎ) ಮತ್ತು ಅಧಿಸೂಚಿತ ರಸಗೊಬ್ಬರ(ನಿಯಂತ್ರಣ) ಆದೇಶ(ಎಫ್ ಸಿಒ) 1985 ಮತ್ತು ಮತ್ತು ಇಸಿ ಕಾಯ್ದೆ ಅಡಿ ರಸಗೊಬ್ಬರ(ಸಾಗಾಣೆ ನಿಯಂತ್ರಣ) ಆದೇಶ 1973ಗಳ ಅನ್ವಯ ರಸಗೊಬ್ಬರವನ್ನು ಅತ್ಯವಶ್ಯಕ ವಸ್ತು ಎಂದು ಅಧಿಸೂಚನೆ ಹೊರಡಿಸಿದೆ.  ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವುದೇ ಅಲ್ಲದೆ ನಿರ್ದಿಷ್ಟ ಎಂಆರ್ ಪಿ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವುದನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರಗಳಿಗೆ ಅಗತ್ಯ ಅಧಿಕಾರ ನೀಡಲಾಗಿದೆ ಎಂದರು. ಎಫ್ ಸಿಒ 1985 ಮತ್ತು ಅತ್ಯವಶ್ಯಕ ವಸ್ತುಗಳ ಕಾಯ್ದೆ 1955 ಅಡಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಶೋಧ ಕಾರ್ಯ, ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಶ್ರೀ ಸದಾನಂದ ಗೌಡ ಹೇಳಿದರು.

ಶಾಸನಬದ್ಧ ಅಧಿಸೂಚಿತ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್ ಪಿ) ದರದಲ್ಲಿ ರೈತರಿಗೆ ಯೂರಿಯಾವನ್ನು ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 45 ಕೆಜಿ ತೂಕದ ಯೂರಿಯಾ ಪ್ರತಿ ಚೀಲಕ್ಕೆ 242 ರೂ. ಎಂ ಆರ್ ಪಿ(ಬೇವು ಲೇಪನ ಮತ್ತು ತೆರಿಗೆ ಶುಲ್ಕಗಳು ಪ್ರತ್ಯೇಕ) ನಿಗದಿಪಡಿಸಲಾಗಿದೆ ಮತ್ತು 50 ಕೆಜಿ ತೂಕದ ಯೂರಿಯಾ ಚೀಲಕ್ಕೆ ತಲಾ 268 ರೂ.(ಬೇವು ಲೇಪನ ಮತ್ತು ತೆರಿಗೆ ಶುಲ್ಕಗಳು ಪ್ರತ್ಯೇಕ) ನಿಗದಿಪಡಿಸಲಾಗಿದೆ. ಅದರಂತೆ ಎಲ್ಲ ರೈತರಿಗೂ ರಿಯಾಯಿತಿ ದರದಲ್ಲಿ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ ಎಂದರು.

ರಾಸಾಯನಿಕ ರಸಗೊಬ್ಬರ ಇಲಾಖೆಯಿಂದ ಅಥವಾ ಯಾವುದೇ ರಾಜ್ಯ ಸರ್ಕಾರಗಳಿಂದ ರೈತರು ಹೆಚ್ಚಿನ ಬೆಲೆ ನೀಡಿ, ಯೂರಿಯಾ ಖರೀದಿಸುತ್ತಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಸಚಿವರು ಸದನಕ್ಕೆ ತಿಳಿಸಿದರು.

ದೇಶದಲ್ಲಿ ಎಲ್ಲೂ ಯೂರಿಯಾ ಕೊರತೆ ಇಲ್ಲ ಎಂದು ಶ್ರೀ ಸದಾನಂದ ಗೌಡ ಸ್ಪಷ್ಟಪಡಿಸಿದರು.  

***


(ಪ್ರಕಟಣೆ ಐ.ಡಿ.: 1656283) ವಿಸಿಟರ್ ಕೌಂಟರ್ : 187
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Punjabi , Tamil , Telugu