ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗೆ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ’ಇನ್ನೂ 6 ತಿಂಗಳು ವಿಸ್ತರಣೆ
Posted On:
15 SEP 2020 6:33PM by PIB Bengaluru
ಕೋವಿಡ್-19 ವಿರುದ್ಧ ಹೋರಾಡುವ ಆರೋಗ್ಯ ಕಾರ್ಯಕರ್ತರಿಗಾಗಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ವಿಮಾ ಯೋಜನೆ’ ಯನ್ನು ಮಾರ್ಚ್ 30, 2020 ರಂದು 90 ದಿನಗಳ ಅವಧಿಗೆ ಘೋಷಿಸಲಾಗಿತ್ತು. ಇದನ್ನು ಮತ್ತೆ 90 ದಿನಗಳವರೆಗೆ ಅಂದರೆ 2020 ಸೆಪ್ಟೆಂಬರ್ 25 ರವರೆಗೆ ವಿಸ್ತರಿಸಲಾಗಿತ್ತು.
ಈಗ ಯೋಜನೆಯನ್ನು ಇನ್ನೂ 180 ದಿನಗಳವರೆಗೆ ಅಂದರೆ 6 ತಿಂಗಳು ವಿಸ್ತರಿಸಲಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆ ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಆರೋಗ್ಯ ಸೇವೆ ಒದಗಿಸುವವರಿಗೆ 50 ಲಕ್ಷ ರೂ. ಗಳ ವಿಮೆ ಒದಗಿಸುತ್ತದೆ. ಇವರು ಕೋವಿಡ್-19 ರೋಗಿಗಳ ನೇರ ಸಂಪರ್ಕ ಮತ್ತು ಆರೈಕೆಯಲ್ಲಿ ಇರಬೇಕಾಗಬಹುದು ಮತ್ತು ಆದ್ದರಿಂದ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ. ಕೋವಿಡ್-19 ಕಾರಣದಿಂದಾಗಿ ಆಗುವ ಆಕಸ್ಮಿಕ ಪ್ರಾಣಹಾನಿ ಸಹ ಇದರಲ್ಲಿ ಸೇರಿದೆ.
ಈ ಯೋಜನೆಯು ಖಾಸಗಿ ಆಸ್ಪತ್ರೆ ಸಿಬ್ಬಂದಿ / ನಿವೃತ್ತ / ಸ್ವಯಂಸೇವಕ / ಸ್ಥಳೀಯ ನಗರ ಸಂಸ್ಥೆಗಳು / ಗುತ್ತಿಗೆ / ದೈನಂದಿನ ವೇತನ / ತಾತ್ಕಾಲಿಕ / ಹೊರಗುತ್ತಿಗೆ ಸಿಬ್ಬಂದಿ, ರಾಜ್ಯ / ಕೇಂದ್ರ ಸರ್ಕಾರದ ಆಸ್ಪತ್ರೆಗಳು / ಕೇಂದ್ರ / ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸ್ವಾಯತ್ತ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಏಮ್ಸ್ ಮತ್ತು ಐಎನ್ಐಗಳು ಆಸ್ಪತ್ರೆಗಳ ಸಿಬ್ಬಂದಿಗೆ ಅನ್ವಯವಾಗುತ್ತದೆ.
ಈ ಯೋಜನೆಯಡಿ ಒದಗಿಸಲಾಗುವ ವಿಮೆಯು ಫಲಾನುಭವಿಯು ಇತರ ಯಾವುದೇ ವಿಮೆಯಿಂದ ಪಡೆಯುವ ರಕ್ಷಣೆಯ ಮೇಲೆ ಹೆಚ್ಚುವರಿಯಾಗಿ ಇರುತ್ತದೆ.
ಈ ಯೋಜನೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಮತ್ತು ವೈಯಕ್ತಿಕ ದಾಖಲಾತಿಯ ಅಗತ್ಯವಿಲ್ಲ. ಯೋಜನೆಯ ಸಂಪೂರ್ಣ ಪ್ರೀಮಿಯಂ ಅನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭರಿಸುತ್ತದೆ. ಈ ಪಾಲಿಸಿ ಅಡಿಯಲ್ಲಿ ಪ್ರಯೋಜನ/ ಕ್ಲೈಮುಗಳು ಯಾವುದೇ ಇತರ ಪಾಲಿಸಿಗಳ ಅಡಿಯಲ್ಲಿ ಪಡೆಯುವ ಮೊತ್ತಕ್ಕೆ ಹೆಚ್ಚುವರಿಯಾಗಿರುತ್ತದೆ. ಈ ಯೋಜನೆಯ ಮಾರ್ಗಸೂಚಿಗಳ ಆಧಾರದ ಮೇಲೆ ವಿಮಾ ಮೊತ್ತವನ್ನು ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನ್ಯೂ ಇಂಡಿಯಾ ಅಶ್ಯೂರೆನ್ಸ್ (ಎನ್ಐಎ) ಕಂಪನಿ ಲಿಮಿಟೆಡ್ನೊಂದಿಗೆ ಸಹಯೋಗ ಮಾಡಿಕೊಂಡಿದೆ.
ಇದುವರೆಗೆ, ಯೋಜನೆಯಡಿಯಲ್ಲಿ ಒಟ್ಟು 61 ಕ್ಲೈಮ್ಗಳನ್ನು ಪ್ರಕ್ರಿಯೆಗೊಳಿಸಿ, ಪಾವತಿಸಲಾಗಿದೆ. ನ್ಯೂ ಇಂಡಿಯಾ ಅಶ್ಯೂರೆನ್ಸ್ (ಎನ್ಐಎ) ಕಂಪನಿ ಲಿಮಿಟೆಡ್ನಿಂದ 156 ಕ್ಲೈಮ್ಗಳು ಪರಿಶೀಲನೆಯಲ್ಲಿವೆ. 67 ಪ್ರಕರಣಗಳಲ್ಲಿ ಕ್ಲೈಮ್ಗಳ ಅರ್ಜಿಗಳನ್ನು ರಾಜ್ಯಗಳು ಇನ್ನೂ ಸಲ್ಲಿಸಬೇಕಾಗಿದೆ.
ಪಿಎಂಜಿಕೆಪಿ ವಿಮಾ ಯೋಜನೆ
ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕ್ಲೈಮುಗಳ ವಿವರ
(15/09/2020 ರವರೆಗೆ)
ಕ್ರ.ಸಂ.
|
ರಾಜ್ಯ/ಕೇಂದ್ರಾಡಳಿತ ಪ್ರದೇಶ
|
ಎನ್ಐಎ ಸ್ವೀಕರಿಸಿರುವ ಕ್ಲೈಮ್
|
ಎನ್ಐಎ ಪ್ರಕ್ರಿಯೆಗೊಳಿಸಿರುವ ಕ್ಲೈಮ್
|
ಎನ್ಐಎ ಪಪರಿಶೀಲನೆಯಲ್ಲಿರುವ ಅರ್ಜಿಗಳು
|
ಅನರ್ಹ ಕ್ಲೈಮುಗಳು
|
ರಾಜ್ಯಗಳಿಂದ ಬರಬೇಕಿರುವ ಕ್ಲೈಮ್ ಅರ್ಜಿಗಳು
|
1
|
ಅಂಡಮಾನ್ ಮತ್ತು ನಿಕೋಬಾರ್
|
0
|
0
|
0
|
0
|
1
|
2
|
ಆಂಧ್ರಪ್ರದೇಶ
|
20
|
4
|
12
|
4
|
4
|
3
|
ಅರುಣಾಚಲ ಪ್ರದೇಶ
|
1
|
1
|
0
|
0
|
2
|
4
|
ಅಸ್ಸಾಂ
|
5
|
1+1
|
3
|
0
|
0
|
5
|
ಬಿಹಾರ
|
16
|
2
|
12
|
2
|
1
|
6
|
ಚಂಡೀಗಢ
|
1
|
0
|
1
|
0
|
0
|
7
|
ಚತ್ತೀಸ್ಗಢ
|
3
|
0
|
1
|
2
|
3
|
8
|
ದೆಹಲಿ
|
9
|
1
|
8
|
0
|
10
|
9
|
ಗುಜರಾತ್
|
28
|
8+1
|
13
|
6
|
0
|
10
|
ಹರಿಯಾಣ
|
0
|
0
|
0
|
0
|
3
|
11
|
ಹಿಮಾಚಲ ಪ್ರದೇಶ
|
1
|
0
|
1
|
0
|
0
|
12
|
ಜಮ್ಮು ಮತ್ತು ಕಾಶ್ಮೀರ
|
5
|
0
|
5
|
0
|
0
|
13
|
ಜಾರ್ಖಂಡ್
|
7
|
0
|
4
|
3
|
2
|
14
|
ಕರ್ನಾಟಕ
|
8
|
3
|
2
|
3
|
2
|
15
|
ಕೇರಳ
|
3
|
3
|
0
|
0
|
0
|
16
|
ಮಧ್ಯಪ್ರದೇಶ
|
9
|
1
|
4
|
4
|
0
|
17
|
ಮಹಾರಾಷ್ಟ್ರ
|
49
|
13+1
|
19
|
16
|
8
|
18
|
ಮಿಜೋರಾಂ
|
2
|
0
|
1
|
1
|
0
|
19
|
ಒಡಿಶಾ
|
42
|
0
|
42
|
0
|
5
|
20
|
ಪುದುಚೇರಿ
|
0
|
0
|
0
|
0
|
4
|
21
|
ಪಂಜಾಬ್
|
1
|
1
|
0
|
0
|
4
|
22
|
ರಾಜಸ್ಥಾನ
|
17
|
4
|
5
|
8
|
1
|
23
|
ತಮಿಳುನಾಡು
|
20
|
4+1
|
8
|
7
|
2
|
24
|
ತೆಲಂಗಾಣ
|
11
|
2
|
6
|
3
|
9
|
25
|
ಉತ್ತರ ಪ್ರದೇಶ
|
11
|
5+1
|
2
|
3
|
9
|
26
|
ಪಶ್ಚಿಮ ಬಂಗಾಳ
|
13
|
3
|
7
|
3
|
2
|
|
ಒಟ್ಟು
|
282
|
61
|
156
|
65
|
67
|
ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಬದ್ಧತೆಯನ್ನು ಈ ಯೋಜನೆ ತೋರಿಸುತ್ತದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರ ನಿಸ್ವಾರ್ಥ ಸೇವೆ ಮತ್ತು ಸಮರ್ಪಣೆಯಿಂದಾಗಿ ಭಾರತವು ಕೋವಿಡ್ ವಿರುದ್ಧದ ಹೋರಾಟವನ್ನು ಸಮರ್ಥವಾಗಿ ನಡೆಸಲು ಮತ್ತು ಮರಣ ಪ್ರಮಾಣವನ್ನು (ಶೇ.1.64) ಕಡಿಮೆಮಾಡಲು ಸಾಧ್ಯವಾಗಿದೆ, ಇದು ಜಾಗತಿಕ ಮರಣ ಪ್ರಮಾಣವಾದ ಶೇ.3.19 ಕ್ಕಿಂತ ಅತ್ಯಂತ ಕಡಿಮೆಯಾಗಿದೆ.
***
(Release ID: 1654775)
Visitor Counter : 235