ಹಣಕಾಸು ಸಚಿವಾಲಯ
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಪರಿಶೀಲನೆಗೆ ವಾಣಿಜ್ಯ ಬ್ಯಾಂಕುಗಳಿಗೆ ಕಾರ್ಯ ವಿಧಾನ ಒದಗಿಸಿದ ಕೇಂದ್ರೀಯ ನೇರ ತೆರಿಗೆ ಮಂಡಳಿ
Posted On:
02 SEP 2020 7:06PM by PIB Bengaluru
ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 138 (1) (ಎ) ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿಯು ದಿನಾಂಕ 31.08.2020 ರಂದು ಆದೇಶ (ಎಫ್.ಸಂ. 225/136/2020 / ITA.II) ಹೊರಡಿಸಿ 31.08.2020 ರ ದಿನಾಂಕ 71/2020 ರ ಅಧಿಸೂಚನೆಯ ಉಪ ಅಧಿನಿಯಮ (ii) ಷರತ್ತು (ಎ) ) ಕಾಯಿದೆಯ ಸೆಕ್ಷನ್ 138 ರ ಉಪವಿಭಾಗ (1)ದ ಅನ್ವಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಸ್ಥಿತಿಯ ಬಗ್ಗೆ ಮಾಹಿತಿ ಒದಗಿಸುವಂತೆ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ತಿಳಿಸಿದೆ.
ಎಂದಿಗೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ವ್ಯಕ್ತಿಗಳಿಂದ ದೊಡ್ಡ ಪ್ರಮಾಣದ ಹಣವನ್ನು ಹಿಂಪಡೆಯಲಾಗುತ್ತಿರುವ ಬಗ್ಗೆ ನಗದು ಹಿಂಪಡೆಯುವಿಕೆಯ ದತ್ತಾಂಶವು ಹೇಳುತ್ತಿದೆ. ಈ ವ್ಯಕ್ತಿಗಳಿಂದ ರಿಟರ್ನ್ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಫೈಲ್ ಮಾಡದವರು ನಗದು ಹಿಂಪಡೆಯುವಿಕೆಯನ್ನು ಗಮನಿಸಲು ಮತ್ತು ಕಪ್ಪು ಹಣವನ್ನು ನಿಗ್ರಹಿಸಲು, ಜುಲೈ 1, 2020 ರಿಂದ ಜಾರಿಯಾಗಿರುವ ಹಣಕಾಸು ಕಾಯ್ದೆ, 2020 ಮತ್ತು ಆದಾಯ ತೆರಿಗೆ ಕಾಯ್ದೆ 1961 ರ ತಿದ್ದುಪಡಿ ಅನ್ವಯ ನಗದು ಹಿಂಪಡೆಯುವಿಕೆಯ ಮಿತಿಯನ್ನು ರಿಟರ್ನ್ ಫೈಲ್ ಮಾಡದವರಿಗೆ ಟಿಡಿಎಸ್ ಅನ್ವಯವಾಗಲು 20 ಲಕ್ಷ ರೂ. ಮತ್ತು ಶೇ.5 ಟಿಡಿಎಸ್ ದರದಲ್ಲಿ 1 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು ಈಗಾಗಲೇ ಜುಲೈ 1, 2020 ರಿಂದ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೆ www.incometaxindiaefiling.gov.in ನಲ್ಲಿ “194 ಎನ್ ಸೆಕ್ಷನ್ ಅಡಿ ಅನ್ವಯಿಸುವಿಕೆಯ ಪರಿಶೀಲನೆ”ಕಾರ್ಯವನ್ನು ಒದಗಿಸಿದೆ. ಈ ವಿಧಾನದ ಮೂಲಕ, ಬ್ಯಾಂಕ್ / ಅಂಚೆ ಕಚೇರಿಗಳು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 194 ಎನ್ ಅಡಿಯಲ್ಲಿ ಹಣವನ್ನು ಹಿಂತೆಗೆದುಕೊಳ್ಳುತ್ತಿರುವ ವ್ಯಕ್ತಿಯ ಪ್ಯಾನ್ ಅನ್ನು ನಮೂದಿಸುವ ಮೂಲಕ ಅನ್ವಯವಾಗುವ ದರದ ಟಿಡಿಎಸ್ ಪಡೆಯಬಹುದು.
ಇಲಾಖೆಯು ಈಗ “ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅನುಸರಣೆ ಪರಿಶೀಲನೆ”ಎಂಬ ಹೊಸ ಕಾರ್ಯ ವಿಧಾನವನ್ನು ಬಿಡುಗಡೆ ಮಾಡಿದೆ. ಬೃಹತ್ ಪ್ರಮಾಣದಲ್ಲಿ ಪ್ಯಾನ್ಗಳ ಐಟಿ ರಿಟರ್ನ್ ಫೈಲಿಂಗ್ ಸ್ಥಿತಿಯನ್ನು ಪರಿಶೀಲಿಸಲು ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ (ಎಸ್ಸಿಬಿ) ಇದು ಲಭ್ಯವಿರುತ್ತದೆ. ಆದಾಯ ತೆರಿಗೆ ಇಲಾಖೆಯ ಪ್ರಧಾನ ಮಹಾ ನಿರ್ದೇಶಕರು (ಸಿಸ್ಟಮ್ಸ್) ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಗೆ ಅಧಿಸೂಚಿತ ಮಾಹಿತಿಯನ್ನು ಒದಗಿಸುವ ವಿಧಾನ ಮತ್ತು ಸ್ವರೂಪವನ್ನು ತಿಳಿಸಿದ್ದಾರೆ. ಈ ಕಾರ್ಯವಿಧಾನದ ಬಳಕೆಯ ಪ್ರಮುಖ ಲಕ್ಷಣಗಳು ಹೀಗಿವೆ:
ಎ. “ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅನುಸರಣೆ ಪರಿಶೀಲನೆ”ಗೆ ಪ್ರವೇಶ: ಆದಾಯ-ತೆರಿಗೆ ಇಲಾಖೆಯ ವರದಿ ಪೋರ್ಟಲ್ನಲ್ಲಿ (https://report.insight.gov.in) ನೋಂದಾಯಿಸಲಾಗಿರುವ ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಪ್ರಧಾನ ಅಧಿಕಾರಿ ಮತ್ತು ನಿಯೋಜಿತ ನಿರ್ದೇಶಕರು ತಮ್ಮ ರುಜುವಾತುಗಳನ್ನು ಬಳಸಿಕೊಂಡು ಪೋರ್ಟಲ್ಗೆ ಲಾಗ್ ಇನ್ ಆಗಿ ಇದನ್ನು ಬಳಸಬಹುದು. ಯಶಸ್ವಿಯಾಗಿ ಲಾಗಿನ್ ಆದ ನಂತರ, “ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅನುಸರಣೆ ಪರಿಶೀಲನೆ”ಕಾರ್ಯವಿಧಾನದ ಲಿಂಕ್ ಪೋರ್ಟಲ್ನ ಮುಖಪುಟದಲ್ಲಿ ಕಾಣಿಸುತ್ತದೆ.
ಬಿ. ಪ್ಯಾನ್ಗಳನ್ನು ಒಳಗೊಂಡಿರುವ ವಿನಂತಿ (ಇನ್ಪುಟ್) ಫೈಲ್ ಅನ್ನು ಸಿದ್ಧಪಡಿಸುವುದು: ಪ್ಯಾನ್ ವಿವರಗಳನ್ನು ನಮೂದಿಸುವ ಸಿಎಸ್ವಿ ಟೆಂಪ್ಲೇಟ್ ಅನ್ನು “ಐಟಿಆರ್ ಫೈಲಿಂಗ್ ಅನುಸರಣೆ ಪರಿಶೀಲನೆ” ಪುಟದಲ್ಲಿರುವ “ಸಿಎಸ್ವಿ ಟೆಂಪ್ಲೇಟ್ ಡೌನ್ಲೋಡ್” ಬಟನ್ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಬಹುದು. ಡೌನ್ಲೋಡ್ ಮಾಡಿದ ಸಿಎಸ್ವಿ ಟೆಂಪ್ಲೇಟ್ನಲ್ಲಿ ಐಟಿ ರಿಟರ್ನ್ ಫೈಲಿಂಗ್ ಸ್ಥಿತಿಗೆ ಅಗತ್ಯವಿರುವ ಪ್ಯಾನ್ಗಳು ನಮೂದಿಸಬೇಕಾಗುತ್ತದೆ. ಒಂದು ಫೈಲ್ನಲ್ಲಿನ ಪ್ಯಾನ್ಗಳ ಪ್ರಸ್ತುತ ಮಿತಿ 10,000 ಆಗಿದೆ.
ಸಿ. ಇನ್ಪುಟ್ CSV ಫೈಲ್ ಅನ್ನು ಅಪ್ಲೋಡ್ ಮಾಡುವುದು: ಅಪ್ಲೋಡ್ CSV ಬಟನ್ ಕ್ಲಿಕ್ ಮಾಡುವ ಮೂಲಕ ಇನ್ಪುಟ್ CSV ಫೈಲ್ ಅನ್ನು ಅಪ್ಲೋಡ್ ಮಾಡಬಹುದು. ಅಪ್ಲೋಡ್ ಮಾಡುವಾಗ, “ಉಲ್ಲೇಖಿತ ಹಣಕಾಸು ವರ್ಷ”ಆಯ್ಕೆ ಮಾಡಬೇಕಾಗುತ್ತದೆ. ಉಲ್ಲೇಖಿತ ಹಣಕಾಸು ವರ್ಷವು ಫಲಿತಾಂಶಗಳು ಅಗತ್ಯವಿರುವ ವರ್ಷವಾಗಿರುತ್ತದೆ. ಆಯ್ದ ಉಲ್ಲೇಖಿತ ಹಣಕಾಸು ವರ್ಷ 2020-21 ಆಗಿದ್ದರೆ 2017-18, 2018-19 ಮತ್ತು 2019-20ರ ಮೌಲ್ಯಮಾಪನ ವರ್ಷಗಳಿಗೆ ಫಲಿತಾಂಶಗಳು ಲಭ್ಯವಿರುತ್ತವೆ. ಫೈಲ್ ಅಪ್ಲೋಡ್ ಮಾಡಿದ ನಂತರ ಅಪ್ಲೋಡ್ ಮಾಡಿರುವುದು ಕಾಣಿಸುತ್ತದೆ.
ಡಿ. ಔಟ್ಪುಟ್ ಸಿಎಸ್ವಿ ಫೈಲ್ ಡೌನ್ಲೋಡ್ ಮಾಡುವುದು: ಪ್ರಕ್ರಿಯೆಯ ನಂತರ, ನಮೂದಿಸಿದ ಪ್ಯಾನ್ಗಳ ಐಟಿ ರಿಟರ್ನ್ ಫೈಲಿಂಗ್ ಸ್ಥಿತಿಯನ್ನು ಹೊಂದಿರುವ ಸಿಎಸ್ವಿ ಫೈಲ್ ಡೌನ್ಲೋಡ್ಗೆ ಲಭ್ಯವಾಗುತ್ತದೆ ಮತ್ತು “ಸ್ಥಿತಿ”ಯು “ಲಭ್ಯ” ಎಂದು ಬದಲಾಗುತ್ತದೆ. ಔಟ್ಪುಟ್ ಸಿಎಸ್ವಿ ಫೈಲ್ನಲ್ಲಿ ಪ್ಯಾನ್, ಪ್ಯಾನ್ ಹೊಂದಿರುವವರ ಹೆಸರು (ಮಸುಕುಗೊಳಿಸಿದ), ಕಳೆದ ಮೂರು ಮೌಲ್ಯಮಾಪನ ವರ್ಷಗಳಲ್ಲಿ ಐಟಿ ರಿಟರ್ನ್ ಫೈಲಿಂಗ್ ಸ್ಥಿತಿ ಇರುತ್ತದೆ. ಫೈಲ್ ಡೌನ್ಲೋಡ್ ಮಾಡಿದ ನಂತರ, ಸ್ಥಿತಿಯು ಡೌನ್ಲೋಡ್ ಆಗಿ ಬದಲಾಗುತ್ತದೆ ಮತ್ತು 24 ಗಂಟೆಗಳ ನಂತರ, ಡೌನ್ಲೋಡ್ ಲಿಂಕ್ ಅವಧಿ ಮುಗಿಯುತ್ತದೆ ಮತ್ತು ಸ್ಥಿತಿಯು ಅವಧಿ ಮೀರಿದೆ ಎಂದು ತೋರಿಸುತ್ತದೆ.
ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಎಪಿಐ ಆಧಾರಿತ ವಿನಿಮಯವನ್ನು ಬ್ಯಾಂಕಿನ ಕೋರ್ ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಮತ್ತು ಸಂಯೋಜಿಸಲು ಬಳಸಬಹುದು. ಮಾಹಿತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಾಣಿಜ್ಯ ಬ್ಯಾಂಕುಗಳು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪಾತ್ರಗಳು ಮತ್ತು ಜವಾಬ್ದಾರಿಗಳೊಂದಿಗೆ ಸೂಕ್ತ ಮಾಹಿತಿ ಸುರಕ್ಷತಾ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ದಾಖಲಿಸುವುದು ಮತ್ತು ಕಾರ್ಯಗತಗೊಳಿಸುವುದು ಅಗತ್ಯವಿದೆ.
***
(Release ID: 1650927)
Visitor Counter : 279