ಕಲ್ಲಿದ್ದಲು ಸಚಿವಾಲಯ

2023-24ರ ವೇಳೆಗೆ ಕೋಲ್ ಇಂಡಿಯಾ 500 ಯೋಜನೆಗಳಿಗೆ 1.22 ಲಕ್ಷ ಕೋಟಿ ರೂ. ಹೂಡಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


49 ಮೊದಲ ಮೈಲಿ ಸಂಪರ್ಕ ಯೋಜನೆಗಳಿಗೆ 14,200 ಕೋಟಿ ರೂ. ಹೂಡಿಕೆ

ಹೂಡಿಕೆಯಿಂದಾಗಿ ಕಲ್ಲಿದ್ದಲು ಸಾಗಣೆಯಲ್ಲಿ ದಕ್ಷತೆ

34,600 ಕೋಟಿ ರೂ. ಹೂಡಿಕೆಗಾಗಿ 15 ಗ್ರೀನ್‌ಫೀಲ್ಡ್ ಯೋಜನೆಗಳನ್ನು ಗುರುತಿಸಲಾಗಿದೆ

Posted On: 01 SEP 2020 4:52PM by PIB Bengaluru

2023-24ರ ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ಸಾಧಿಸುವ ಮತ್ತು ರಾಷ್ಟ್ರವನ್ನು ಕಲ್ಲಿದ್ದಲಿನಲ್ಲಿ ಆತ್ಮನಿರ್ಭರವನ್ನಾಗಿ ಮಾಡುವ ಉದ್ದೇಶದಿಂದ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಲ್ಲಿದ್ದಲು ಸ್ಥಳಾಂತರಿಸುವಿಕೆ, ಮೂಲಸೌಕರ್ಯ, ಯೋಜನಾ ಅಭಿವೃದ್ಧಿ, ಶೋಧನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 500 ಯೋಜನೆಗಳಲ್ಲಿ 1.22 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಿಐಎಲ್ ಆಯೋಜಿಸಿದ್ದ ಪಾಲುದಾರರ ಸಭೆಯನ್ನು ವಿಡಿಯೋ ಸಂವಾದ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರ ತೊಡಗಿಸಿಕೊಳ್ಳುವಿಕೆ ಮತ್ತು ಒಳಗೊಳ್ಳುವಿಕೆಯು ಯೋಜನೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಅಂತಹ ದ್ವಿಮುಖ ಸಂವಹನಗಳು ಪರಸ್ಪರ ಪ್ರಯೋಜನಕಾರಿಯಾದ ಹೊಸ ಆಲೋಚನೆಗಳು, ಸುಧಾರಣೆಗಳು ಮತ್ತು ಯೋಜನೆಗೆ ಸಂಬಂಧಿಸಿದ ನಿರೀಕ್ಷೆಗಳಿಗೆ ದಾರಿ ಮಾಡಿಕೊಡುತ್ತದೆ.” ಶ್ರೀ ಪ್ರಹ್ಲಾದ್ ಜೋಶಿ ಹೇಳಿದರು.

ಕೋಲ್ ಇಂಡಿಯಾದೊಂದಿಗೆ ವ್ಯಾಪಾರದ ಅವಕಾಶಗಳು ಅಪಾರವಾಗಿವೆ. ಕಂಪನಿಯು ತನ್ನ 49 ಮೊದಲ ಮೈಲಿ ಸಂಪರ್ಕ ಯೋಜನೆಗಳಿಗಾಗಿ ಎರಡು ಹಂತಗಳಲ್ಲಿ 2023-24ರ ವೇಳೆಗೆ ಸುಮಾರು 14,200 ಕೋಟಿ ರೂ. ಹೂಡಿಕೆ ಮಾಡಲಿದೆ. ಮೊದಲ ಮೊದಲ ಮೈಲಿ ಸಂಪರ್ಕ ಎಂದರೆ ಕಲ್ಲಿದ್ದಲನ್ನು ಅದನ್ನು ತೆಗೆಯುವ ಸ್ಥಳದಿಂದ ರವಾನೆ ಕೇಂದ್ರಗಳಿಗೆ ಸಾಗಿಸುವುದು. ಕಲ್ಲಿದ್ದಲು ಸಾರಿಗೆಯಲ್ಲಿ ಸುಧಾರಿತ ದಕ್ಷತೆಯನ್ನು ತರಲು ಮತ್ತು ಈ ಎರಡು ಸ್ಥಳಗಳ ನಡುವೆ ಈಗಿರುವ ರಸ್ತೆ ಸಾರಿಗೆಯ ಬದಲಲಿಗೆ ಕಂಪ್ಯೂಟರ್-ನೆರವಿನ ಲೋಡಿಂಗ್ ಕೈಗೊಳ್ಳಲು ಇದನ್ನು ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಉದ್ದೇಶಿತ 1.22 ಲಕ್ಷ ಕೋಟಿ ರೂ. ವೆಚ್ಚದಲ್ಲಿ, ಸಿಐಎಲ್ 2023-24ರ ಹೊತ್ತಿಗೆ ಕಲ್ಲಿದ್ದಲು ಸ್ಥಳಾಂತರಿಸುವಿಕೆಗೆ 32,696 ಕೋಟಿ ರೂ. ಗಣಿ ಮೂಲಸೌಕರ್ಯಕ್ಕೆ 25117 ಕೋಟಿ ರೂ. ಯೋಜನಾ ಅಭಿವೃದ್ಧಿಗೆ 29461 ಕೋಟಿ ರೂ. ವೈವಿಧ್ಯೀಕರಣ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲೆ 32,199 ರೂ. ಸಾಮಾಜಿಕ ಮೂಲಸೌಕರ್ಯಕ್ಕೆ 1,495 ಕೋಟಿ ರೂ. ಮತ್ತು ಶೋಧನೆ ಕಾರ್ಯಗಳಿಗೆ 1,893 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.

ಇದಲ್ಲದೆ, ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಕಲ್ಲಿದ್ದಲು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಯೋಜನೆಯಲ್ಲಿ, ಗಣಿ ಅಭಿವೃದ್ಧಿ ಮತ್ತು ನಿರ್ವಾಶಹಕರು (ಎಂಡಿಒ) ಮಾದರಿಯಲ್ಲಿ ಕಾರ್ಯನಿರ್ವಹಿಸಲು ಕೋಲ್ ಇಂಡಿಯಾವು ಒಟ್ಟು 15 ಗ್ರೀನ್‌ಫೀಲ್ಡ್ ಯೋಜನೆಗಳನ್ನು ಗುರುತಿಸಿದೆ, ಅದು ಒಟ್ಟು ಸುಮಾರು 34,600 ಕೋಟಿ ರೂ. ಹೂಡಿಕೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ 2024 ರ ಹಣಕಾಸು ವರ್ಷದ ಅಂತ್ಯದ ವೇಳಿಗೆ ಸುಮಾರು 17000 ಕೋಟಿ ರೂ. ಹೂಡಿಕೆಯ ಸಂಭಾವ್ಯತೆ ಇದೆ. ಸ್ಥಳಾಂತರ ಮೂಲಸೌಕರ್ಯವು ಕೋಲ್ ಇಂಡಿಯಾವು ಆರ್ಥಿಕತೆಗೆ ಹೆಚ್ಚಿನ ಮೊತ್ತವನ್ನು ತುಂಬುವ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ಪ್ರಮುಖ ರೈಲ್ವೆಗಳನ್ನು ಅಭಿವೃದ್ಧಿಪಡಿಸುವುದು (ಸುಮಾರು 13000 ಕೋಟಿ ರೂ.) ರೈಲ್ವೆ ಸೈಡಿಂಗ್‌ಗಳು (ಸುಮಾರು 3100 ಕೋಟಿ ರೂ.) ಮತ್ತು ಸ್ವಂತ ವ್ಯಾಗನ್‌ಗಳ ಖರೀದಿ (675 ಕೋಟಿ ರೂ.) ರೈಲ್ವೆ ಲಾಜಿಸ್ಟಿಕ್ಸ್‌ನಲ್ಲಿನ ಹೂಡಿಕೆಗಳು ಸೇರಿ 2023-24 ನೇ ಹಣಕಾಸು ವರ್ಷದ ಹೊತ್ತಿಗೆ ಒಟ್ಟು 16500 ಕೋಟಿ ರೂ. ಹೂಡಿಕೆಯಾಗಲಿದೆ.

ಕೋಲ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳು ವಾರ್ಷಿಕವಾಗಿ 30,000 ಕೋಟಿ ರೂ. ಗಳ ವಿವಿಧ ರೀತಿಯ ಸರಕು, ಕಾಮಗಾರಿ ಮತ್ತು ಸೇವೆಗಳನ್ನು ಖರೀದಿಸುತ್ತವೆ ಎಂದು ಸಚಿವರು ಹೇಳಿದರು. ಸರಕು, ಕಾಮಗಾರಿ ಮತ್ತು ಸೇವೆಗಳನ್ನು ನ್ಯಾಯಯುತ, ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಖರೀದಿಸುವ ಪ್ರಯತ್ನದಲ್ಲಿ ಕೋಲ್ ಇಂಡಿಯಾ ಹಲವಾರು ಸುಧಾರಣೆಗಳನ್ನು ಮಾಡಿದೆ, ಮಾರಾಟಗಾರರು ಮತ್ತು ಪಾಲುದಾರರ 'ವ್ಯವಹಾರವನ್ನು ಸುಲಭಗೊಳಿಸಲು' ಮತ್ತು ಪಾರದರ್ಶಕತೆಯ ತತ್ವಗಳಿಗೆ ಬದ್ಧತೆಯನ್ನು ಹೆಚ್ಚಿಸಲು ಕೈಪಿಡಿಗಳು ಮತ್ತು ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಲ್ಲಿದ್ದಲು ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್ ಜೈನ್, ಕೋಲ್ ಇಂಡಿಯಾದ ಸಿಎಂಡಿ ಶ್ರೀ ಪ್ರಮೋದ್ ಅಗರ್ವಾಲ್, ಕಲ್ಲಿದ್ದಲು ಸಚಿವಾಲಯ ಮತ್ತು ಕೋಲ್ ಇಂಡಿಯಾದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಪಾಲುದಾರರೊಂದಿಗೆ ಸಂವಾದ ನಡೆಸಿದರು. ಪಾಲುದಾರ ಸ್ನೇಹಿ ಉಪಕ್ರಮಗಳಲ್ಲಿ, ಕೋಲ್ ಇಂಡಿಯಾ ಹಲವಾರು ಕ್ರಮಗಳನ್ನು ಸಡಿಲಗೊಳಿಸಿದೆ ಮತ್ತು ತನ್ನ ಟೆಂಡರ್‌ಗಳಲ್ಲಿ ಪಾಲುದಾರರ ಹೆಚ್ಚಿನ ಭಾಗವಹಿಸುವಿಕೆಗಾಗಿ ವಿನಾಯಿತಿಗಳನ್ನು ನೀಡಿದೆ. ಅನುಭವದ ಮಾನದಂಡಗಳನ್ನು ಗಣಿಗಾರಿಕೆ ಟೆಂಡರ್‌ಗಳಲ್ಲಿ ಶೇ. 65 ರಿಂದ ಶೇ.50 ಕ್ಕೆ ಇಳಿಸಲಾಗಿದೆ, ಕೆಲಸದ ಅನುಭವದ ಮಾನದಂಡಗಳನ್ನು ಟರ್ನ್‌ಕೀ ಒಪ್ಪಂದಗಳಲ್ಲಿ ಶೇ.50 ರಷ್ಟು ಸಡಿಲಿಸಲಾಗಿದೆ. ಕಡಿಮೆ ಮೌಲ್ಯದ ಕಾಮಗಾರಿ ಮತ್ತು ಸೇವಾ ಟೆಂಡರ್‌ಗಳಲ್ಲಿ ಭಾಗವಹಿಸಲು ಪೂರ್ವ-ಅರ್ಹತೆಯ ಅಗತ್ಯವನ್ನು ಈಗ ತೆಗೆದುಹಾಕಲಾಗಿದೆ. ಎಂಎಸ್‌ಇಗಳು ಮತ್ತು ಸ್ಟಾರ್ಟ್ ಅಪ್‌ಗಳಿಗೆ ಅನುಭವ ಮತ್ತು ವಹಿವಾಟುಗಳ ವಿನಾಯಿತಿ ನೀಡಲಾಗಿದೆ. ಎಂಎಸ್‌ಇಗಳು ಮತ್ತು ಸ್ಟಾರ್ಟ್ ಅಪ್‌ಗಳಿಗೆ ಇಎಮ್‌ಡಿಗಳ ಅಗತ್ಯವಿರುವುದಿಲ್ಲ. ಮೇಕ್-ಇನ್-ಇಂಡಿಯಾ ನಿಬಂಧನೆಗಳನ್ನು ಎಲ್ಲಾ ಟೆಂಡರ್‌ಗಳಲ್ಲಿ ಸಂಪೂರ್ಣವಾಗಿ ಸೇರಿಸಲಾಗಿದೆ.

***



(Release ID: 1650441) Visitor Counter : 243