ಉಪರಾಷ್ಟ್ರಪತಿಗಳ ಕಾರ್ಯಾಲಯ

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ದು ಸಂತಾಪ


ಶ್ರೀ ಪ್ರಣಬ್ ಮುಖರ್ಜಿ ಅವರು ಅಲಂಕರಿಸಿದ್ದ ಪ್ರತಿಯೊಂದು ಹುದ್ದೆಗೂ ಗೌರವ ಮತ್ತು ಘನತೆ ತಂದುಕೊಟ್ಟಿದ್ದರು

ಶ್ರೀ ಪ್ರಣಬ್ ಅವರ ನಿಧನ, ಭಾರತ ಅಸಮಾನ್ಯ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ - ಉಪರಾಷ್ಟ್ರಪತಿ

Posted On: 31 AUG 2020 6:32PM by PIB Bengaluru

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ದು ಅವರು ಇಂದು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶದಲ್ಲಿ, ಶ್ರೀ ಮುಖರ್ಜಿ ಅವರು ಅತ್ಯುತ್ತಮ ರಾಜಕೀಯ ಮುತ್ಸದ್ಧಿ ಮತ್ತು ಭಾರತದ ಹೆಮ್ಮೆಯ ಪುತ್ರ, ಅವರು ತಾವು ಅಲಂಕರಿಸಿದ್ದ ಪ್ರತಿಯೊಂದು ಹುದ್ದೆಗೂ ಗೌರವ ಮತ್ತು ಘನತೆಯನ್ನು ತಂದುಕೊಟ್ಟಿದ್ದರು. ಅವರ ನಿಧನದಿಂದ ಭಾರತ ಅಪ್ರತಿಮ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಉಪರಾಷ್ಟ್ರಪತಿ ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಉಪರಾಷ್ಟ್ರಪತಿಗಳ ಸಂದೇಶದ ಪೂರ್ಣ ಪಠ್ಯ ಈ ಕೆಳಗಿನಂತಿದೆ.

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ನಿಧನ ಹೊಂದಿದರೆಂಬ ಸುದ್ದಿ ಕೇಳಿ ನನಗೆ ತೀವ್ರ ದುಃಖವಾಗುತ್ತಿದೆ. ಅವರು ಭಾರತದ ಅತ್ಯುತ್ತಮ ರಾಜಕೀಯ ಮುತ್ಸದ್ಧಿ ಮತ್ತು ಭಾರತದ ಹೆಮ್ಮೆಯ ಪುತ್ರ, ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ತಮ್ಮ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯ ಮೂಲಕ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದರು.”

ಶ್ರೀ ಪ್ರಣಬ್ ಮುಖರ್ಜಿ ಅವರು, ತಮ್ಮ ಸುದೀರ್ಘ ಮತ್ತು ಪ್ರಸಿದ್ಧ ಸಾರ್ವಜನಿಕ ಸೇವೆಯಲ್ಲಿ ತಾವು ಅಲಂಕರಿಸಿದ್ದ ಪ್ರತಿಯೊಂದು ಹುದ್ದೆಗೂ ಗೌರವ ಮತ್ತು ಘನತೆಯನ್ನು ತಂದಿದ್ದರು. ಆಡಳಿತಾತ್ಮಕ  ನೈಪುಣ್ಯಕ್ಕೆ ಹೆಸರಾಗಿದ್ದ ಅವರು, ಭಾರತದ ಸಂಸದೀಯ ವ್ಯವಸ್ಥೆಯನ್ನು ಬಹು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವರು ಹಣಕಾಸು ಸಚಿವರು, ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹೀಗೆ ಹಲವು ಪ್ರಮುಖ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು. ರಾಷ್ಟ್ರಪತಿಯಾಗಿ ಅವರು, ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿನೂತನ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುವುದನ್ನು ಉತ್ತೇಜಿಸಿದ್ದರು.

ಸಂಸದೀಯ ನೀತಿ ನಿಯಮಗಳು, ಸಮಕಾಲೀನ ರಾಜಕೀಯ ಮತ್ತು ಇತರೆ ವಿಚಾರಗಳಲ್ಲಿ  ನಿಂಘಟುವಾಗಿದ್ದ ಅವರು ಹಾಗೂ ಪಾಂಡಿತ್ಯಕ್ಕೆ ಹೆಸರಾಗಿದ್ದರು. ಅವರು ಅತ್ಯುತ್ತಮ ಸಂಸದೀಯ ಪಟು ಮತ್ತು ಉತ್ತಮ ವಾಕ್ ಚಾತುರ್ಯ ಹೊಂದಿದ್ದರು. ಅವರ ಅಸಾಧಾರಣ ಸ್ಮರಣಾ ಶಕ್ತಿ ಮತ್ತು ತಕ್ಷಣ ಅರ್ಥಮಾಡಿಕೊಳ್ಳುವ ಅವರು ಅಪ್ರತಿಮ ನಾಯಕರಾಗಿದ್ದರು. ಪ್ರಜಾಪ್ರಭುತ್ವ ಹಾಗೂ ಇತರೆ ಸಂಸ್ಥೆಗಳ ಬಲವರ್ಧನಗೆ ಅವರು ಅತೀವ ಆಸಕ್ತಿ ಹೊಂದಿದ್ದರು. ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಪ್ರಣಬ್ ಮುಖರ್ಜಿ, ರಾಜಕೀಯ ವಲಯದಲ್ಲಿ ಪ್ರತಿಯೊಬ್ಬರನ್ನೂ ತಲುಪಿದ್ದರು.

ಪ್ರಣಬ್ ಅವರ ನಿಧನದಿಂದ ಭಾರತ ಅಪ್ರತಿಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗದವರಿಗೆ ನನ್ನ ತೀವ್ರ ಸಂತಾಪಗಳು ಮತ್ತು ಈ ಭಾರಿ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಹಾಗೂ ಗಟ್ಟಿಮನಸ್ಸನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’’

***



(Release ID: 1650201) Visitor Counter : 240