ಕಲ್ಲಿದ್ದಲು ಸಚಿವಾಲಯ

ಭಾರತದಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವಿದೇಶಿ ನೇರ ಹೂಡಿಕೆ

Posted On: 03 AUG 2020 4:44PM by PIB Bengaluru

ಭಾರತದಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಗಾಗಿ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು 2020 ಜೂನ್ನಲ್ಲಿ ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರವು ಪ್ರಾರಂಭಿಸಿದೆ. ಕಲ್ಲಿದ್ದಲು ಮಾರಾಟಕ್ಕೆ ಸಂಬಂಧಿಸಿದ ಸಂಸ್ಕರಣಾ ಮೂಲಸೌಕರ್ಯ ಸೇರಿದಂತೆ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100 ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ವಿದೇಶಿ ನೇರ ಹೂಡಿಕೆ (ಎಫ್ಡಿಐ) ನೀತಿ, 2017ನ್ನು ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2019 ಮಾದ್ಯಮ ಪ್ರಕಟಣೆ 4 ಹೊರಡಿಸಿತ್ತು. ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 2015, ಮತ್ತು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಮತ್ತಿತರ ಸಂಬಂಧಿತ ಕಾಯಿದೆಗಳಿಗೆ ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ.

ಅದರಂತೆ, ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.100 ಎಫ್ಡಿಐಗೆ ಅನುಮತಿ ನೀಡುವ ಮತ್ತು ಕಲ್ಲಿದ್ದಲು ಮಾರಾಟಕ್ಕೆ ಅನ್ವಯವಾಗುವ ಇತರ ಕಾನೂನುಗಳ ಪ್ರಕಾರ ಕೇಂದ್ರ ಸರ್ಕಾರವು ಹೊರಡಿಸಿದ 2019 ಮಾಧ್ಯಮ ಪ್ರಕಟಣೆ 4ರಂತೆ, ಎಫ್ಡಿಐ ನೀತಿ 2017 ಅನ್ನು ತಿದ್ದುಪಡಿ ಮಾಡಲಾಗಿದೆ ಎಂದು ಟೆಂಡರ್ ದಾಖಲೆಯಲ್ಲಿ ತಿಳಿಸಲಾಗಿದೆ.” ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿನ ಯಾವುದೇ ಎಫ್ಡಿಐ, ಕೇಂದ್ರ ಸರ್ಕಾರವು ಹೊರಡಿಸಿದ 2020 ಮಾಧ್ಯಮ ಪ್ರಕಟಣೆ 3 ಸೇರಿದಂತೆ ಅನ್ವಯವಾಗುವ ಕಾನೂನುಗಳಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಅದರ ಪ್ರಕಾರಭಾರತದ ಭೂ ಗಡಿಯನ್ನು ಹಂಚಿಕೊಳ್ಳುವ ಅಥವಾ ಪ್ರಯೋಜನ ಪಡೆಯುವ ಮಾಲೀಕರು ಇರುವ ದೇಶದ  ಒಂದು ಸಂಸ್ಥೆ ಅಥವಾ ಅಂತಹ ಯಾವುದೇ ದೇಶದ ಪ್ರಜೆಯಾಗಿದ್ದರೆ, ಸರ್ಕಾರದ ಮಾರ್ಗದಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಇದಲ್ಲದೆ, ಪಾಕಿಸ್ತಾನದ ನಾಗರಿಕ ಅಥವಾ ಪಾಕಿಸ್ತಾನದ ಒಂದು ಸಂಸ್ಥೆ ಸರ್ಕಾರದ ಮಾರ್ಗದಲ್ಲಿ ಮಾತ್ರ ರಕ್ಷಣೆ, ಬಾಹ್ಯಾಕಾಶ, ಪರಮಾಣು ಶಕ್ತಿ ಮತ್ತು ವಿದೇಶಿ ಹೂಡಿಕೆಗೆ ನಿಷೇಧಿಸಲಾದ ಕ್ಷೇತ್ರಗಳು / ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು.” ನಿಟ್ಟಿನಲ್ಲಿ ಟೆಂಡರ್ ದಾಖಲೆಗೆ ತಿದ್ದುಪಡಿಯನ್ನೂ ಸಹ ನೀಡಲಾಗಿದೆ.

***



(Release ID: 1643188) Visitor Counter : 332