ಚುನಾವಣಾ ಆಯೋಗ

ಉಪಚುನಾವಣೆ ಕುರಿತಂತೆ ಚುನಾವಣಾ ಆಯೋಗದ ಸ್ಪಷ್ಟೀಕರಣ

Posted On: 23 JUL 2020 2:23PM by PIB Bengaluru

ಪತ್ರದ ಸಂಖ್ಯೆ 99/ಉಪಚುನಾವಣೆ/2020/ಎಪಿಎಸ್ ದಿನಾಂಕ 22.7.2020 ಕುರಿತಂತೆ ಚುನಾವಣಾ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಮಿತ್ ಮುಖರ್ಜಿ ಪತ್ರ ಹೊರಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದ ಕೆಲವು ವರ್ಗದಲ್ಲಿ ಗೊಂದಲಗಳು ಉಂಟಾಗಿವೆ.

ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ ಮೇಲಿನ ಸಂವಹನ ಕಾನೂನು ಮತ್ತು ನ್ಯಾಯ ಸಚಿವಾಲಯದ ಉಲ್ಲೇಖಿತ ಪತ್ರದ ಸಂಖ್ಯೆ 99/ಉಪಚುನಾವಣೆ/2020/ಎಪಿಎಸ್ ದಿನಾಂಕ 03.7.2020 ಕುರಿತಂತೆ ಕೇವಲ 8 ಕ್ಷೇತ್ರಗಳಿಗೆ ಮಾತ್ರ ಸಂಬಂಧಿಸಿದ್ದು, ಅವುಗಳಿಗೆ ಸಂಬಂಧಿಸಿದ ಕೆಲವೊಂದು ಅನಿರೀಕ್ಷಿತ ಸನ್ನಿವೇಶಗಳ ಹಿನ್ನೆಲೆ ಕಾರಣವಾಗಿದೆ. ಆದರೆ ಒಟ್ಟಾರೆ ಉಪಚುನಾವಣೆ ಬಾಕಿ ಇರುವುದು 56 ವಿಧಾನಸಭಾ ಕ್ಷೇತ್ರಗಳು (ಈ ಮೊದಲು ತಿಳಿಸಿದ 8 ಕ್ಷೇತ್ರಗಳು ಸೇರಿ) ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ. ಒಟ್ಟು 57 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಆಯೋಗ ಈಗಾಗಲೇ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 151ಎ ಅನ್ವಯ ಉಪಚುನಾವಣೆಯನ್ನು ನಡೆಸಲು ತೀರ್ಮಾನ ಕೈಗೊಂಡಿದೆ.

ಒಂದು ವೇಳೆ ಮೇಲೆ ತಿಳಿಸಿದ 8 ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲ್ಪಟ್ಟರೂ ಸಹ ಅದು 2020ರ ಸೆಪ್ಟೆಂಬರ್ 7ರ ವರೆಗೆ ಮಾತ್ರ. ಉಪಚುನಾವಣೆಯ ವೇಳಾಪಟ್ಟಿ ಮತ್ತಿತರ ವಿಚಾರಗಳು ನಾಳೆ ಅಂದರೆ 24.7.2020ರಂದು ನಡೆಯಲಿರುವ ಚುನಾವಣಾ ಆಯೋಗದ ಸಭೆಯಲ್ಲಿ ಚರ್ಚೆಗೆ ನಿಗದಿಯಾಗಿವೆ.

***



(Release ID: 1641084) Visitor Counter : 142