ಹಣಕಾಸು ಸಚಿವಾಲಯ

ನಗದು ಹಿಂಪಡೆಯುವಿಕೆಯ ಟಿಡಿಎಸ್ ಅನ್ವಯಿಸುವಿಕೆಯ ದರಗಳ ನಿಗದಿಗೆ ಸಿಬಿಡಿಟಿ ನೆರವು

Posted On: 12 JUL 2020 8:21PM by PIB Bengaluru

ನಗದು ಹಿಂಪಡೆಯುವಿಕೆಯ ಟಿಡಿಎಸ್ ಅನ್ವಯಿಸುವಿಕೆಯ ದರಗಳ ನಿಗದಿಗೆ ಸಿಬಿಡಿಟಿ ನೆರವು

 

ಆದಾಯ ತೆರಿಗೆ ಇಲಾಖೆಯು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಿಗೆ ಹೊಸ ಕಾರ್ಯವಿಧಾನಕ್ಕೆ ಅವಕಾಶ ಕಲ್ಪಿಸಿದ್ದು ಆ ಮೂಲಕ ಆದಾಯ-ತೆರಿಗೆ ರಿಟರ್ನ್ ಅನ್ನು ಸಲ್ಲಿಸದವರು ರೂ.20 ಲಕ್ಷ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು 1 ಕೋಟಿ ರೂ.ಗಿಂತ ಹೆಚ್ಚಿನ ಹಣ ಹಿಂಪಡೆದಲ್ಲಿ ಅನ್ವಯವಾಗುವ ಟಿಡಿಎಸ್ ದರವನ್ನು ನಿರ್ಧರಿಸಬಹುದಾಗಿದೆ. ಈವರೆಗೆ 53,000ಕ್ಕೂ ಹೆಚ್ಚು ಪರಿಶೀಲನೆ ಮನವಿಗಳನ್ನು ಈ ಸೌಲಭ್ಯದ ಮೂಲಕ ಯಶಸ್ವಿಯಾಗಿ ಅನುಷ್ಠಾನಮಾಡಲಾಗಿದೆ.

ಈ ಕಾರ್ಯವಿಧಾನವು 2020ರ ಜುಲೈ 1ರಿಂದ www.incometaxindiaefiling.gov.in ನಲ್ಲಿ 194ಎನ್ ಸೆಕ್ಷನ್ ಅಡಿಯಲ್ಲಿ ಪರಿಶೀಲನೆಗೆ ಅನ್ವಯವಾಗುತ್ತದೆ, ಇದನ್ನು ಬ್ಯಾಂಕ್ ಗಳಿಗೆ ವೆಬ್ ಸರ್ವರ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದ್ದು, ಇದರಿಂದಾಗಿ ಇಡೀ ಪ್ರಕ್ರಿಯೆ ಸ್ವಯಂಚಾಲಿತವಾಗಿ ನಡೆಯಲಿದೆ ಜೊತೆಗೆ ಬ್ಯಾಂಕ್ ನ ಆಂತರಿಕ ಕೋರ್ ಬ್ಯಾಂಕಿಂಗ್ ಸಲ್ಯೂಷನ್ಸ್ ಗೆ ಸಂಪರ್ಕಿತವಾಗಿರುತ್ತದೆ ಎಂದು ಸಿಬಿಡಿಟಿ ಇಂದು ಹೇಳಿದೆ.

ಈ ಸೌಲಭ್ಯದ ವಿವರ ನೀಡಿರುವ ಸಿಬಿಡಿಟಿ ಈಗ ಬ್ಯಾಂಕ್ / ಪೋಸ್ಟ್ ಆಫೀಸ್ ಗಳು ಹಣ ಹಿಂದಕ್ಕೆ ಪಡೆಯುವ ವ್ಯಕ್ತಿಗಳ ಕೇವಲ ಪ್ಯಾನ್ ಸಂಖ್ಯೆ ನಮೂದಿಸಿದರೆ ಅನ್ವಯವಾಗುವ ಟಿಡಿಎಸ್ ದರ ನಿರ್ಧರಣೆ ಮಾಡಬಹುದಾಗಿದೆ ಎಂದು ತಿಳಿಸಿದೆ. ಪ್ಯಾನ್ ನಮೂದಿಸಿದಾಗ, ಇಲಾಖೆಯ ವ್ಯವಸ್ಥೆಯಲ್ಲಿ : ನಗದು ಹಿಂಪಡೆಯುವಿಕೆ 1 ಕೋಟಿ ರೂ. ಮೀರಿದರೆ ಶೇ. 2 ದರದಲ್ಲಿ ಟಿಡಿಎಸ್ ಕಡಿತಗೊಳಿಸಲಾಗುತ್ತದೆ. [ಹಣ ಹಿಂದಕ್ಕೆ ಪಡೆಯುವ ವ್ಯಕ್ತಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವವರಾಗಿದ್ದರೆ] ಮತ್ತು ನಗದು ಹಿಂಪಡೆಯುವಿಕೆ ರೂ. 20 ಲಕ್ಷ ಮೀರಿದರೆ, ಟಿಡಿಎಸ್ ಅನ್ನು ಶೇ.2 ದರದಲ್ಲಿ ಮತ್ತು 1 ಕೋಟಿ ರೂ. ಮೀರಿದರೆ ಶೇ.5 ದರದಲ್ಲಿ ಕಡಿತಗೊಳಿಸಲಾಗುತ್ತದೆ. [ಹಣವನ್ನು ಹಿಂತೆಗೆದುಕೊಳ್ಳುವ ವ್ಯಕ್ತಿಯು ಆದಾಯ-ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡದವರಾಗಿದ್ದರೆ] ಎಂಬ ಒಂದು ಸಂದೇಶ ತತ್ ಕ್ಷಣವೇ ಪ್ರದರ್ಶಿತವಾಗುತ್ತದೆ.

ಯಾವತ್ತೂ ಆದಾಯ-ತೆರಿಗೆ ರಿಟರ್ನ್ಸ್ ಸಲ್ಲಿಸದ ವ್ಯಕ್ತಿಗಳಿಂದ ದೊಡ್ಡ ಮೊತ್ತದ ಹಣ ಹಿಂಪಡೆಯುವಿಕೆ ನಡೆಯುತ್ತಿದೆ ಎಂಬುದನ್ನು ನಗದು ಹಿಂಪಡೆಯುವಿಕೆಯ ದತ್ತಾಂಶವು ಸೂಚಿಸಿದೆ ಎಂದು ಸಿಬಿಡಿಟಿ ತಿಳಿಸಿದೆ. ಈ ವ್ಯಕ್ತಿಗಳು ರಿಟರ್ನ್ಸ್ ಸಲ್ಲಿಸುವುದನ್ನು ಖಾತ್ರಿ ಪಡಿಸಲು ಮತ್ತು ರಿಟರ್ನ್ಸ್ ಸಲ್ಲಿದವರ ನಗದು ಹಿಂಪಡೆಯುವಿಕೆಯ ಪತ್ತೆಗಾಗಿ ಮತ್ತು ಕಪ್ಪು ಹಣ ನಿಗ್ರಹಿಸಲು, ಹಣಕಾಸು ಕಾಯಿದೆ 2020ನ್ನು 2020ರ ಜುಲೈ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯಿದೆಯನ್ನು ಮತ್ತೆ ತಿದ್ದುಪಡಿ ಮಾಡಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರ ನಗದು ಹಿಂಪಡೆಯುವಿಕೆ ಮಿತಿಯನ್ನು 20 ಲಕ್ಷಕ್ಕೆ ಇಳಿಸಿ, ರಿಟರ್ನ್ಸ್ ಸಲ್ಲಿಸದವರು 1 ಕೋಟಿಗಿಂತ ಹೆಚ್ಚಿನ ಹಣ ಹಿಂಪಡೆದಲ್ಲಿ ಈ ಟಿಡಿಎಸ್ ಕಡಿತವನ್ನು ಶೇ.5ರ ಹೆಚ್ಚಿನ ದರದಲ್ಲಿ ಕಡ್ಡಾಯ ಮಾಡಲಾಗಿದೆ.

ನಗದು ವಹಿವಾಟು ಅನುತ್ತೇಜನಗೊಳಿಸಲು ಮತ್ತು ಕಡಿಮೆ ನಗದು ಆರ್ಥಿಕತೆಯತ್ತ ಸಾಗಲು, ಕೆಲವು ವಿನಾಯಿತಿಗಳಿಗೆ ಒಳಪಟ್ಟು ಬ್ಯಾಂಕ್/ ಅಂಚೆ ಕಚೇರಿ ಖಾತೆ/ ಗಳಿಂದ 1 ಕೋಟಿ ರೂ. ನಗದು ಹಿಂಪಡೆಯುವಿಕೆಯ ಮೇಲೆ ಶೇ.2ರಷ್ಟು ಟಿಡಿಎಸ್ ವಿಧಿಸಲು ಅನುಕೂಲವಾಗುವಂತೆ ಆದಾಯ ತೆರಿಗೆ ಕಾಯಿದೆ ಗೆ 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಹಣಕಾಸು (ನಂ.2) ಕಾಯಿದೆ 2019ಕ್ಕೆ ಸೆಕ್ಷನ್ 194ಎನ್ ಸೇರಿಸಲಾಗಿದೆ ಎಂಬುದನ್ನು ಗಮನಿಸಬಹುದಾಗಿದೆ.

***



(Release ID: 1638267) Visitor Counter : 227