ಪ್ರಧಾನ ಮಂತ್ರಿಯವರ ಕಛೇರಿ

ರೇವಾ ಅಲ್ಟ್ರಾ ಬೃಹತ್ ಸೌರ ವಿದ್ಯುತ್ ಯೋಜನೆ ರಾಷ್ಟ್ರಕ್ಕೆ ಸಮರ್ಪಣೆ

Posted On: 10 JUL 2020 1:15PM by PIB Bengaluru

ರೇವಾ ಅಲ್ಟ್ರಾ ಬೃಹತ್ ಸೌರ ವಿದ್ಯುತ್ ಯೋಜನೆ ರಾಷ್ಟ್ರಕ್ಕೆ ಸಮರ್ಪಣೆ

ಸೌರಶಕ್ತಿಯು ಖಚಿತ, ಶುದ್ಧ ಮತ್ತು ಸುರಕ್ಷಿತ21 ನೇ ಶತಮಾನದ ಇಂಧನ ಅಗತ್ಯಗಳ ಮಾಧ್ಯಮವಾಗಲಿದೆ: ಪ್ರಧಾನಿ ನರೇಂದ್ರ ಮೋದಿ

 

ಏಷ್ಯಾದ ಅತಿದೊಡ್ಡ ವಿದ್ಯುತ್ ಯೋಜನೆಯಾದ ರೇವಾ ಅಲ್ಟ್ರಾ ಬೃಹತ್ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ರೇವಾ ಯೋಜನೆಯು ದಶಕದಲ್ಲಿ ಇಡೀ ಪ್ರದೇಶವನ್ನು ಶುದ್ಧ ಮತ್ತು ಸ್ವಚ್ಛ ಇಂಧನದ ಪ್ರಮುಖ ಕೇಂದ್ರವನ್ನಾಗಿ ಮಾಡುತ್ತದೆ. ಸುತ್ತಮುತ್ತಲಿನ ಪ್ರದೇಶದೊಂದಿಗೆ ದೆಹಲಿ ಮೆಟ್ರೊಗೂ ವಿದ್ಯುತ್ ಸರಬರಾಜು ಮಾಡಲಿರುವ ರೇವಾ ಯೋಜನೆಯ ಬಗ್ಗೆ ಪ್ರಧಾನ ಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನೀಮುಚ್, ಶಾಜಾಪುರ, ಛತ್ತರ್ಪುರ ಮತ್ತು ಓಂಕಾರೇಶ್ವರದಲ್ಲಿ ಇಂತಹ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿರುವ ಕಾರಣ ಮಧ್ಯಪ್ರದೇಶವು ಭಾರತದ ಸೌರಶಕ್ತಿಯ ಮುಖ್ಯ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಬಡವರು, ಮಧ್ಯಮ ವರ್ಗದವರು, ಬುಡಕಟ್ಟು ಜನಾಂಗದವರು ಹಾಗೂ ರೈತರು ಇದರ ದೊಡ್ಡ ಫಲಾನುಭವಿಗಳು ಎಂದು ಅವರು ಹೇಳಿದರು.

ಸೌರಶಕ್ತಿಯನ್ನುಖಚಿತ, ಶುದ್ಧ ಮತ್ತು ಸುರಕ್ಷಿತಎಂದು ಬಣ್ಣಿಸಿದ ಪ್ರಧಾನಿಯವರು. ಸೂರ್ಯನಿಂದ ನಿರಂತರವಾಗಿ ಶಕ್ತಿಯ ಪೂರೈಕೆಯಿಂದಾಗಿ ಖಚಿತವಾಗಿ, ಇದು ಪರಿಸರ ಸ್ನೇಹಿಯಾಗಿರುವುದರಿಂದ ಶುದ್ದ ಮತ್ತು ಇದು ನಮ್ಮ ಶಕ್ತಿಯ ಅಗತ್ಯಗಳಿಗೆ ಸುರಕ್ಷಿತ ಮೂಲವಾಗಿರುವುದರಿಂದ ಸುರಕ್ಷಿತವಾದ್ದು ಎಂದರು.

ಇಂತಹ ಸೌರಶಕ್ತಿ ಯೋಜನೆಗಳು ಸ್ವಾವಲಂಬಿ ಭಾರತದ ನಿಜವಾದ ಪ್ರತಿನಿಧಿಗಳು. 21 ನೇ ಶತಮಾನದಲ್ಲಿ ಮಹತ್ವಾಕಾಂಕ್ಷೆಯ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಸೌರಶಕ್ತಿ ಪ್ರಮುಖ ಮಾಧ್ಯಮವಾಗಲಿದೆ ಎಂದು ಪ್ರಧಾನಿ ಹೇಳಿದರು.

ಆರ್ಥಿಕತೆಯು ಸ್ವಾವಲಂಬನೆ ಮತ್ತು ಪ್ರಗತಿಯ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಆರ್ಥಿಕತೆ ಅಥವಾ ಪರಿಸರದಲ್ಲಿ ಯಾವುದರ ಬಗ್ಗೆ ಗಮನ ಹರಿಸಬೇಕೆಂಬ ಸಂದಿಗ್ಧತೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಸೌರಶಕ್ತಿ ಯೋಜನೆಗಳು ಮತ್ತಿತರ ಪರಿಸರ ಸ್ನೇಹಿ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಭಾರತವು ಇಂತಹ ಸಂದಿಗ್ಧತೆಗಳನ್ನು ಬಗೆಹರಿಸಿದೆ ಎಂದು ಹೇಳಿದರು. ಆರ್ಥಿಕತೆ ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ. ಬದಲಿಗೆ ಪರಸ್ಪರ ಪೂರಕವಾದವು ಎಂದು ಶ್ರೀ ಮೋದಿ ಹೇಳಿದರು.

ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಗಮ ಜೀವನಕ್ಕೆ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛ ಭಾರತ, ಬಡವರ ಮನೆಗಳಿಗೆ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ, ಸಿಎನ್ಜಿ ಜಾಲದ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳು ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಸುಧಾರಿಸಿವೆ ಎಮದು ಅವರು ಹೇಳಿದರು.

ಪರಿಸರದ ಸಂರಕ್ಷಣೆ ಕೇವಲ ಕೆಲವು ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಅದು ಜೀವನದ ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದರು.

ನವೀಕರಿಸಬಹುದಾದ ಇಂಧನದ ಬೃಹತ್ ಯೋಜನೆಗಳು ಪ್ರಾರಂಭವಾಗುವಾಗ ಶುದ್ಧ ಇಂಧನದ ಬಗೆಗಿನ ದೃಢನಿಶ್ಚಯವು ಜೀವನದ ಪ್ರತಿಯೊಂದು ಕೋನಗಳಲ್ಲೂ ಕಂಡುಬರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅದರ ಪ್ರಯೋಜನಗಳು ದೇಶದ ಮೂಲೆ ಮೂಲೆಯಲ್ಲಿ, ಸಮಾಜದ ಪ್ರತಿಯೊಂದು ವರ್ಗಕ್ಕೆ, ಪ್ರತಿಯೊಬ್ಬ ನಾಗರಿಕನಿಗೆ ತಲುಪುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಎಲ್ಇಡಿ ಬಲ್ಬ್ಗಳ ಪರಿಚಯವು ವಿದ್ಯುತ್ ಬಿಲ್ ಅನ್ನು ಹೇಗೆ ಕಡಿಮೆ ಮಾಡಿದೆ ಎಂಬುದು ಇದಕ್ಕೊಂದು ನಿದರ್ಶನ ಎಂದು ಅವರು ಹೇಳಿದರು. ಎಲ್ಇಡಿ ಬಲ್ಬ್ನಿಂದಾಗಿ ಸುಮಾರು 40 ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಪರಿಸರಕ್ಕೆ ಸೇರುವುದು ನಿಂತಿದೆ. ಇದು ಸುಮಾರು 6 ಬಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದೆ ಮತ್ತು ಬೊಕ್ಕಸಕ್ಕೆ 24,000 ಕೋಟಿ ರೂ.ಉಳಿತಾಯ ತಂದಿದೆ ಎಂದು ಅವರು ವಿವರಿಸಿದರು.

ನಮ್ಮ ಪರಿಸರ, ನಮ್ಮ ಗಾಳಿ, ನಮ್ಮ ನೀರು ಶುದ್ಧವಾಗಿರಲು ಸರ್ಕಾರ ಕೆಲಸ ಮಾಡುತ್ತಿದೆ ಮತ್ತು ಚಿಂತನೆಯು ಸೌರಶಕ್ತಿ ಕುರಿತ ನೀತಿ ಮತ್ತು ಕಾರ್ಯತಂತ್ರದಲ್ಲೂ ಪ್ರತಿಫಲಿಸುತ್ತಿದೆ ಎಂದು ಅವರು ಹೇಳಿದರು.

ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಮಾದರಿ ಪ್ರಗತಿಯು ವಿಶ್ವಕ್ಕೆ ಆಸಕ್ತಿಯ ಪ್ರಮುಖ ಮೂಲವಾಗಲಿದೆ ಎಂದ ಪ್ರಧಾನಿಯವರು, ಅಂತಹ ಪ್ರಮುಖ ಕ್ರಮಗಳಿಂದಾಗಿ, ಭಾರತವನ್ನು ಶುದ್ಧ ಇಂಧನದ ಅತ್ಯಂತ ಆಕರ್ಷಕ ಮಾರುಕಟ್ಟೆಯೆಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.

ಸೌರಶಕ್ತಿಯ ವಿಷಯದಲ್ಲಿ ಇಡೀ ಜಗತ್ತನ್ನು ಒಂದುಗೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು (ಐಎಸ್) ಪ್ರಾರಂಭಿಸಲಾಗಿದೆ. ಒನ್ ವರ್ಲ್ಡ್, ಒನ್ ಸನ್, ಒನ್ ಗ್ರಿಡ್ ಇದರ ಹಿಂದಿರುವ ಸ್ಫೂರ್ತಿ ಎಂದು ಪ್ರಧಾನಿ ಹೇಳಿದರು.

ಮಧ್ಯಪ್ರದೇಶದ ರೈತರು ಸರ್ಕಾರದ ಕುಸುಮ್ ಕಾರ್ಯಕ್ರಮವನ್ನು ಸಹ ಬಳಸಿಕೊಳ್ಳುತ್ತಾರೆ ಮತ್ತು ಹೆಚ್ಚುವರಿ ಆದಾಯದ ಮೂಲವಾಗಿ ತಮ್ಮ ಭೂಮಿಯಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಭಾರತವು ವಿದ್ಯುತ್ ರಫ್ತು ಮಾಡುವ ಪ್ರಮುಖ ದೇಶವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ದ್ಯುತಿವಿದ್ಯುಜ್ಜನಕ ಕೋಶಗಳು, ಬ್ಯಾಟರಿ ಮತ್ತು ಸಂಗ್ರಹಣೆಯಂತಹ ಸೌರ ಸ್ಥಾವರಗಳಿಗೆ ಅಗತ್ಯವಾದ ವಿವಿಧ ಯಂತ್ರಾಂಶಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ನಿಟ್ಟಿನಲ್ಲಿ ಕೆಲಸವು ಪ್ರಗತಿಯಲ್ಲಿದೆ ಮತ್ತು ಉದ್ಯಮ, ಯುವಕರು, ಎಂಎಸ್ಎಂಇಗಳು ಮತ್ತು ಸ್ಟಾರ್ಟ್ಅಪ್ಗಳು ಅವಕಾಶವನ್ನು ಬಳಸಿಕೊಳ್ಳುವಂತೆ ಸರ್ಕಾರ ಪ್ರೋತ್ಸಾಹಿಸುತ್ತಿದೆ ಮತ್ತು ಸೌರಶಕ್ತಿಗೆ ಅಗತ್ಯವಿರುವ ಸುಧಾರಣೆಯ ಬಗ್ಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಉಲ್ಲೇಖಿಸಿದ ಪ್ರಧಾನಿಯವರು, ಕಠಿಣ ಸವಾಲನ್ನು ಎದುರಿಸಲು ಸಹಾನುಭೂತಿ ಮತ್ತು ಜಾಗರೂಕತೆಯು ಸರ್ಕಾರ ಅಥವಾ ಸಮಾಜಕ್ಕೆ ಉತ್ತಮ ಪ್ರೇರಕವಾಗಿವೆ ಎಂದು ಹೇಳಿದರು. ಲಾಕ್ಡೌನ್ ಆರಂಭದಿಂದಲೇ ಬಡವರು ಮತ್ತು ನಿರ್ಗತಿಕರು ಆಹಾರ ಮತ್ತು ಇಂಧನ ಪೂರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲಾಯಿತು ಎಂದರು. ಅದೇ ಮನೋಭಾವದಿಂದಲೇ, ಅನ್ಲಾಕ್ ಹಂತದಲ್ಲಿಯೂ ಸಹ ವರ್ಷದ ನವೆಂಬರ್ ವರೆಗೆ ಉಚಿತ ಆಹಾರ ಮತ್ತು ಎಲ್ಪಿಜಿಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.

ಅಷ್ಟೇ ಅಲ್ಲ, ಲಕ್ಷಾಂತರ ಖಾಸಗಿ ವಲಯದ ಉದ್ಯೋಗಿಗಳ ಇಪಿಎಫ್ ಖಾತೆಗೆ ಸರ್ಕಾರ ಸಂಪೂರ್ಣ ಕೊಡುಗೆ ನೀಡುತ್ತಿದೆ. ಹಾಗೆಯೇ, ಪಿಎಂ-ಸ್ವನಿಧಿ ಯೋಜನೆಯ ಮೂಲಕ, ವ್ಯವಸ್ಥೆಯ ಕನಿಷ್ಠ ಲಭ್ಯತೆ ಹೊಂದಿರುವವರು ಪ್ರಯೋಜನ ಪಡೆಯುತ್ತಿದ್ದಾರೆ.

ಜನರು ತಮ್ಮ ಮನೆಯಿಂದ ಹೊರಬಂದಾಗ ಎರಡು ಗಜಗಳಷ್ಟು ಅಂತರವನ್ನು ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಮತ್ತು ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯುವ  ನಿಯಮಗಳನ್ನು ಪಾಲಿಸುವ ಮೂಲಕ ಮಧ್ಯಪ್ರದೇಶವನ್ನು ಮಾದರಿಯನ್ನಾಗಿ ಮಾಡಬೇಕು ಎಂದು ಪ್ರಧಾನಿಯವರು ಕರೆಕೊಟ್ಟರು.

***


(Release ID: 1637783) Visitor Counter : 357