ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಶೇ. 24 ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್)  ವಂತಿಗೆ  ಮತ್ತೆ 3 ತಿಂಗಳುಗಳ ಕಾಲ ಜೂನ್ ನಿಂದ ಆಗಸ್ಟ್ 2020ರವರೆಗೆ ಪಿಎಂಜಿಕೆವೈ/ಆತ್ಮ ನಿರ್ಭರ ಭಾರತ್ ಅಡಿ ವಿಸ್ತರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ

Posted On: 08 JUL 2020 4:31PM by PIB Bengaluru

ಶೇ. 24 ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್)  ವಂತಿಗೆ  ಮತ್ತೆ 3 ತಿಂಗಳುಗಳ ಕಾಲ ಜೂನ್ ನಿಂದ ಆಗಸ್ಟ್ 2020ರವರೆಗೆ

ಪಿಎಂಜಿಕೆವೈ/ಆತ್ಮ ನಿರ್ಭರ ಭಾರತ್ ಅಡಿ ವಿಸ್ತರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೋವಿಡ್ 19 ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ/ ಆತ್ಮ ನಿರ್ಭರ ಭಾರತ ಯೋಜನೆಯ ಭಾಗವಾಗಿ ನೌಕರರ ಭವಿಷ್ಯ ನಿಧಿಯ ನೌಕರರ ಶೇ.12 ಮತ್ತು ಮಾಲೀಕರ ಶೇ.12 ವಂತಿಗೆ ಸೇರಿ ಒಟ್ಟು ನೌಕರರ ಭವಿಷ್ಯ ನಿಧಿಯ ಶೇ.24 ವಂತಿಗೆಯನ್ನು ಮುಂದಿನ ಮೂರು ತಿಂಗಳಿಗೆ ಅಂದರೆ ಜೂನ್ ನಿಂದ ಆಗಸ್ಟ್ 2020ರವರೆಗೆ ಸರ್ಕಾರವೇ ಪಾವತಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಅನುಮೋದನೆ 15.04.2020ರಂದು ಪ್ರಕಟಿಸಿದ ಹಾಲಿ ಮಾರ್ಚ್ ನಿಂದ ಮೇ 2020 ವೇತನ ತಿಂಗಳುಗಳಿಗೆ ಇರುವ ಯೋಜನೆಗೆ ಹೆಚ್ಚುವರಿಯಾಗಿ ಅನುಮೋದಿಸಲಾಗಿದೆ. ಇದರ ಒಟ್ಟಾರೆ ಅಂದಾಜು ರೂ. 4,860 ಕೋಟಿ ಆಗಿದೆ. 3.67 ಲಕ್ಷ ಸ್ಥಾಪನೆಗಳ 72 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಮುಖ್ಯಾಂಶಗಳು :

ಪ್ರಸ್ತಾಪದ ಪ್ರಮುಖ ಅಂಶಗಳು ಕೆಳಗಿನಂತಿವೆ:

  • i. , ಜುಲೈ ಮತ್ತು ಆಗಸ್ಟ್ 2020 ವೇತನ ಮಾಸದಲ್ಲಿ ಯೋಜನೆಯು 100 ಉದ್ಯೋಗಿಗಳಿಗಿಂತ ಕಡಿಮೆ ಇರುವ ಸ್ಥಾಪನೆಗಳ ಮತ್ತು ಅಲ್ಲಿ ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಶೇ.90ರಷ್ಟು ಅಂಥ ಉದ್ಯೋಗಳಿಗೆ ಅನುಕೂಲವಾಗಲಿದೆ.
  1. 3.67 ಲಕ್ಷ ಸ್ಥಾಪನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 72.22 ಲಕ್ಷ ಕಾರ್ಮಿಕರಿಗೆ ಇದರಿಂದ ಪ್ರಯೋಜನವಾಗಲಿದ್ದು, ಅವರು ಅಡ್ಡಿಗಳ ನಡುವೆಯೂ ವೇತನಪಟ್ಟಿಯಲ್ಲಿ ಮುಂದುವರಿಯಲಿದ್ದಾರೆ.
  2. ಸರ್ಕಾರ 4800 ಕೋಟಿ ರೂಪಾಯಿಗಳ ಬಜೆಟ್ ಬೆಂಬಲವನ್ನು 2020-21ನೇ ಸಾಲಿನಲ್ಲಿ ಉದ್ದೇಶಕ್ಕಾಗಿ ಒದಗಿಸಲಿದೆ.
  3. ಪ್ರಯೋಜನ ಒಂದರ ಮೇಲೊಂದು ಆಗುವುದನ್ನು ತಪ್ಪಿಸಲು ಜೂನ್ ನಿಂದ ಆಗಸ್ಟ್ 2020ರವರೆಗೆ ಶೇ.12ರಷ್ಟು ಮಾಲಿಕರ ವಂತಿಗೆಯನ್ನು ಪ್ರಧಾನಮಂತ್ರಿ ರೋಜ್ಗಾರ್ ಪ್ರೋತ್ಸಾಹನ ಯೋಜನೆ (ಪಿಎಂಆರ್.ಪಿ.ವೈ) ಅಡಿ ಪಡೆಯಲು ಅರ್ಹರಾಗಿರುವ ಫಲಾನುಭವಿಗಳನ್ನು ಹೊರಗಿಡಲಾಗಿದೆ.
  4. ದೀರ್ಘಕಾಲೀನ ಲಾಕ್ ಡೌನ್ ನಿಂದಾಗಿ, ವಾಣಿಜ್ಯೋದ್ಯಮಗಳು ಮರಳಿ ತಮ್ಮ ಕಾರ್ಯದತ್ತ ಮರಳಲು ಹಣಕಾಸು ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಮಾನ್ಯ ಹಣಕಾಸು ಸಚಿವರು, 13.05.2020ರಂದು ಪ್ರಕಟಿಸಿದ ಆತ್ಮ ನಿರ್ಭರ ಭಾರತದಡಿಯ ಇಪಿಎಫ್ ಬೆಂಬಲವನ್ನು ಮತ್ತೆ ಮೂರು ತಿಂಗಳುಗಳಿಗೆ ಅಂದರೆ ವೇತನ ಮಾಸ ಜೂನ್, ಜುಲೈ ಮತ್ತು ಆಗಸ್ಟ್ 2020ಕ್ಕೆ ವಿಸ್ತರಿಸಲಾಗಿದೆ.

ಕಾಲ ಕಾಲಕ್ಕೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಕಡಿಮೆ ವೇತನ ಪಡೆಯುವ ಕಾರ್ಮಿಕರ ಕಷ್ಟವನ್ನು ತಗ್ಗಿಸಲಿದೆ ಇದನ್ನು ಬಾಧ್ಯಸ್ಥರು ಉತ್ತಮವಾಗಿ ಸ್ವೀಕರಿಸಿದ್ದಾರೆ.

***(Release ID: 1637266) Visitor Counter : 115