ಹಣಕಾಸು ಸಚಿವಾಲಯ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 12 ತಿಂಗಳವರೆಗೆ ಶಿಶು ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ 2% ರಷ್ಟು ಬಡ್ಡಿಯ ಆರ್ಥಿಕ ಸಹಾಯ ಕ್ರಮಬದ್ಧ ಸಾಲ ಮರುಪಾವತಿಗೆ ಪ್ರೋತ್ಸಾಹ ಕೊವಿಡ್-19 ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ನಿವಾರಿಸಲು ಸಣ್ಣ ವ್ಯಾಪಾರಸ್ಥರಿಗೆ ಈ ಯೋಜನೆ ಸಹಾಯಕರವಾಗಿದೆ
Posted On:
24 JUN 2020 4:18PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (ಪಿಎಂಎಂವಾಯ್) 12 ತಿಂಗಳವರೆಗೆ ಸಾಲ ಪಡೆದ ಎಲ್ಲ ಸಾಲಗಾರರು ಶಿಶು ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ 2% ರಷ್ಟು ಬಡ್ಡಿಯ ಆರ್ಥಿಕ ಸಹಾಯ ಮಾಡುವ ಕುರಿತು ಅನುಮೋದನೆ ನೀಡಿದೆ.
ಈ ಯೋಜನೆಯನ್ನು ಕೆಳಗಿನ ಮಾನದಂಡಗಳನ್ನು ಪೂರೈಸುವ ಸಾಲಗಳಿಗೆ ವಿಸ್ತರಿಸಲಾಗುವುದು -31 ಮಾರ್ಚ್, 2020 ರವರೆಗೆ ಬಾಕಿ ಉಳಿದಿರಬೇಕು; ಮತ್ತು ಈ ಯೋಜನೆಯ ಕಾರ್ಯಾಚರಣೆ ಅವಧಿಯಲ್ಲಿ 31 ಮಾರ್ಚ್, 2020 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಮಾರ್ಗಸೂಚಿಗಳ ಪ್ರಕಾರ ಕಾರ್ಯ ನಿರ್ವಹಿಸದ ಆಸ್ತಿ (ಎನ್ ಪಿ ಐ) ವಿಭಾಗದ್ದು ಆಗಿರಬಾರದು.
ಎನ್ ಪಿ ಎ ಆಗಿ ಪರಿವರ್ತನೆಗೊಂಡ ನಂತರ ಖಾತೆಯು ಮತ್ತೆ ಕಾರ್ಯನಿರ್ವಹಿಸುವ ಸ್ವತ್ತಾಗುವ ತಿಂಗಳುಗಳನ್ನೂ ಒಳಗೊಂಡಂತೆ ಖಾತೆಗಳು ಎನ್ ಪಿ ಐ ವಿಭಾಗದಲ್ಲಿರದ ತಿಂಗಳುಗಳಿಗೆ ಬಡ್ಡಿಯ ಆರ್ಥಿಕ ಸಹಾಯ ನೀಡಲಾಗುವುದು. ಸಾಲಗಳ ನಿಯಮಿತ ಮರುಪಾವತಿಯನ್ನು ಮಾಡುವವರಿಗೆ ಈ ಯೋಜನೆ ಉತ್ತೇಜನ ನೀಡುತ್ತದೆ.
ಈ ಯೋಜನೆಯ ಅಂದಾಜು ವೆಚ್ಚ ರೂ 1,542 ಕೋಟಿ ಆಗಿದ್ದಿ ಇದನ್ನು ಭಾರತ ಸರ್ಕಾರ ನೀಡಲಿದೆ.
ಹಿನ್ನೆಲೆ
ಆತ್ಮ ನಿರ್ಭರ್ ಭಾರತ ಅಭಿಯಾನದಡಿ ಘೋಷಿಸಲಾದ ಎಂ ಎಸ್ ಎಂ ಇ ಗಳಿಗೆ ಸಂಬಂಧಿಸಿದ ಒಂದು ಕ್ರಮವನ್ನು ಅನುಷ್ಠಾನಗೊಳಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪಿಎಂಎಂವಾಯ್ ಯೋಜನೆಯಡಿಯಲ್ಲಿ ರೂ 50,000 ವರೆಗೆ ವಹಿವಾಟು ಮಾಡುವಂತಹ ಸಾಲಗಳನ್ನು ಶಿಶು ಸಾಲಗಳೆಂದು ಕರೆಯಲಾಗುತ್ತದೆ. ಪಿಎಂಎಂವಾಯ್ ಸಾಲಗಳನ್ನು ಸಾಲ ನೀಡುವ ಸದಸ್ಯ ಸಂಸ್ಥೆಗಳಿಗೂ ವಿಸ್ತರಿಸಲಾಗಿದೆ ಅಂದರೆ ಮುದ್ರಾ ನಿಯಮಿತದೊಂದಿಗೆ ನೊಂದಾವಣೆ ಮಾಡಿಕೊಂಡಿರುವ ಪರಿಶಿಷ್ಠ ವಾಣಿಜ್ಯ ಬ್ಯಾಂಕ್ ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮತ್ತು ಕಿರು ಹಣಕಾಸು ಸಂಸ್ಥೆಗಳು
ಶಿಶು ಮುದ್ರಾ ಸಾಲಗಳ ಮೂಲಕ ಹಣ ಪಡೆಯುತ್ತಿದ್ದ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ವ್ಯವಹಾರಕ್ಕೆ ಕೋವಿಡ್ – 19 ರ ಬಿಕ್ಕಟ್ಟು ಮತ್ತು ಲಾಕ್ ಡೌನ್ ಪರಿಣಾಮವಾಗಿ ತೀವ್ರ ತೊಂದರೆ ಉಂಟಾಗಿದೆ. ಸಣ್ಣ ವ್ಯಾಪಾರಗಳು ಸಾಮಾನ್ಯವಾಗಿ ಅತಿ ಕಡಿಮೆ ಲಾಭದೊಂದಿಗೆ ಕೆಲಸ ಮಾಡುತ್ತವೆ ಮತ್ತು ಪ್ರಸ್ತುತವಿರುವ ಲಾಕ್ ಡೌನ್ ಪರಿಣಾಮ ಅವರ ಹಣಕಾಸು ವಹಿವಾಟಿನ ಮೇಲೆ ತೀವ್ರ ಪರಿಣಾಮವಾಗಿದೆ ಹಾಗೂ ಅವರು ಸಾಲಗಳನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ಕುಗ್ಗಿಸಿದೆ. ಇದು ಮರುಪಾವತಿ ಮಾಡದೇ ಡಿಫಾಲ್ಟ್ ಆಗುವುದಕ್ಕೆ ಎಡೆ ಮಾಡಿಕೊಡುತ್ತದೆ ಮತ್ತು ಭವಿಷ್ಯದಲ್ಲಿ ಅವರು ಯಾವುದೇ ಸಂಸ್ಥೆಗಳಿಂದ ಸಾಲವನ್ನು ಪಡೆಯಲಾಗದಂತಹ ಸ್ಥಿತಿ ನಿರ್ಮಿಸುತ್ತದೆ. 2020ರ ಮಾರ್ಚ್ 31 ರಂತೆ ಪಿಎಂಎಂವಾಯ್ ಶಿಶು ಸಾಲಗಳ ವರ್ಗದಡಿಯಲ್ಲಿ ಸುಮಾರು 9.37 ಕೋಟಿ ಖಾತೆಗಳ ಒಟ್ಟು ಸಾಲದ ಮೊತ್ತ ರೂ 1.62 ಲಕ್ಷ ಕೋಟಿ ಬಾಕಿ ಉಳಿದಿದೆ.
ಅನುಷ್ಠಾನ ತಂತ್ರ
ಈ ಯೋಜನೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಎಸ್ ಐ ಡಿ ಬಿ ಐ) ಮೂಲಕ ಜಾರಿಗೆ ತರಲಾಗುವುದು ಮತ್ತು 12 ತಿಂಗಳವರೆಗೆ ಕಾರ್ಯನಿರತವಾಗಿರುತ್ತದೆ.
‘ಕೋವಿಡ್ – 19 ನಿಯಮಾವಳಿಗಳ ಪ್ಯಾಕೇಜ್’ ಅಡಿ ಆರ್ ಬಿ ಐ ಅನುಮತಿಸಿದಂತೆ ಆಯಾ ಸಾಲದಾತರಿಂದ ನಿಷೇಧಕ್ಕೆ ಅನುಮತಿ ಪಡೆದಿರುವಂತಹ ಸಾಲಗಾರರಿಗೆ ಈ ಯೋಜನೆ 12 ತಿಂಗಳ ಅವಧಿವರೆಗೆ ಅಂದರೆ 1 ಸೆಪ್ಟೆಂಬರ್ 2020 ರಿಂದ 31 ಆಗಸ್ಟ್ 2021ರವರೆಗಿನ ನಿಷೇಧ ಅವಧಿ ಪೂರ್ಣಗೊಂಡ ನಂತರ ಆರಂಭವಾಗುತ್ತದೆ. ಇತರ ಸಾಲಗಾರರಿಗೆ ಈ ಯೋಜನೆ 1 ಜೂನ್ 2020 ರಿಂದ 31 ಮೇ 2021 ರವರೆಗಿನ ಅವಧಿಯಲ್ಲಿ ಜಾರಿಯಲ್ಲಿರುತ್ತದೆ.
ಪ್ರಮುಖ ಪರಿಣಾಮ
ಅನಿರೀಕ್ಷಿತ ಪರಿಸ್ಥಿತಿಗೆ ಸೂಕ್ತ ಪ್ರತಿಕ್ರಿಯೆ ರೂಪದಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ ಮತ್ತು ಸಾಲಗಾರರ ಸಾಲದ ವೆಚ್ಚವನ್ನು ಕಡಿಮೆಗೊಳಿಸುವ ಮೂಲಕ ಮೂಲ ಹಂತದಲ್ಲೇ ಸಾಲಗಾರರ ಆರ್ಥಿಕ ಒತ್ತಡ ತಗ್ಗಿಸುವ ಗುರಿ ಹೊಂದಿದೆ. ಈ ಯೋಜನೆಯು ಕ್ಷೇತ್ರಕ್ಕೆ ಅಗತ್ಯ ಪರಿಹಾರವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆ ಮೂಲಕ ನಿಧಿ ಕೊರತೆಯಿಂದಾಗಿ ನೌಕರರನ್ನು ವಜಾಗೊಳಿಸದೇ ಸಣ್ಣ ಉದ್ಯಮಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದಕ್ಕೆ ಇದು ಅನುವು ಮಾಡಿಕೊಡುತ್ತದೆ.
ಬಿಕ್ಕಟ್ಟಿನ ಈ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಸಣ್ಣ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಈ ಯೋಜನೆ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅದಕ್ಕೆ ಪುನರಜ್ಜೀವನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಭವಿಷ್ಯದಲ್ಲಿನ ಉದ್ಯೋಗ ಸೃಷ್ಟಿಗೆ ಬಹಳ ಅಗತ್ಯವಾಗಿದೆ
***
(Release ID: 1634234)
Visitor Counter : 224
Read this release in:
Gujarati
,
English
,
Urdu
,
Hindi
,
Assamese
,
Manipuri
,
Bengali
,
Punjabi
,
Tamil
,
Telugu
,
Malayalam