ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆ (CIPET) ಯ ಚಟುವಟಿಕೆಗಳ ವಿಡಿಯೊಕಾನ್ಫರೆನ್ಸ್

Posted On: 19 JUN 2020 5:31PM by PIB Bengaluru

ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆ (CIPET) ಚಟುವಟಿಕೆಗಳ ವಿಡಿಯೊಕಾನ್ಫರೆನ್ಸ್

ಎಂಎಸ್ಎಂಇ ಬೆಳವಣಿಗೆಗೆ ಸಿಪೆಟ್ ಜಾಲ ಬಳಸಿಕೊಳ್ಳಬೇಕು: ಕೇಂದ್ರ ಸಚಿವ ಶ್ರೀ ಸದಾನಂದ ಗೌಡ

 

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಇಂದು ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆ (ಸಿಪೆಟ್) ಚಟುವಟಿಕೆಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೌಶಲ್ಯ, ತಂತ್ರಜ್ಞಾನ ಬೆಂಬಲಿತ ಸೇವೆಗಳು ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಸಿಪೆಟ್ ಕೈಗೊಂಡ ವಿವಿಧ ಚಟುವಟಿಕೆಗಳನ್ನು ಸಿಪೆಟ್ ಮಹಾನಿರ್ದೇಶಕರು ಸಚಿವರ ಮುಂದೆ ಪ್ರಸ್ತುತಪಡಿಸಿದರು.

ಪೆಟ್ರೋಕೆಮಿಕಲ್ ವಲಯದಲ್ಲಿ ಎಂಎಸ್ಎಂಇಗಳ ಬೆಳವಣಿಗೆಯನ್ನು ಬೆಂಬಲಿಸುವ ವಿಸ್ತೃತ ಯೋಜನೆಯೊಂದಿಗೆ ಸರ್ಕಾರದಆತ್ಮ ನಿರ್ಭರ ಭಾರತಅಭಿಯಾನಕ್ಕೆ ಅನುಗುಣವಾಗಿ ಸಿಪೆಟ್ ತನ್ನ ವ್ಯಾಪಕವಾದ ಗ್ರಾಹಕರ ಜಾಲದ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಸಭೆಯಲ್ಲಿ ಶ್ರೀ ಗೌಡರು ಸಲಹೆ ನೀಡಿದರು. ವೈದ್ಯಕೀಯ ವೃತ್ತಿಪರರಿಗೆ ಅನುಕೂಲವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸುವಂತೆ ಅವರು ಸಿಪೆಟ್ಮಹಾನಿರ್ದೇಶಕರಿಗೆ ಸೂಚಿಸಿದರು. ಕೋವಿಡ್-19 ಪರಿಸ್ಥಿತಿ ಮತ್ತು ದೇಶದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಕ್ರಮಗಳ ಹೊರತಾಗಿಯೂ ವಿವಿಧ ಸಿಐಪಿಇಟಿಗಳು ನಡೆಸುತ್ತಿರುವ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. ಕೋವಿಡ್-19 ವಿರುದ್ಧ ದೇಶದ ಸನ್ನದ್ಧತೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಸಿಪೆಟ್ ಮುಂದುವರಿಸಬೇಕೆಂದು ಅವರು ಆಶಿಸಿದರು.

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕಾರ್ಯದರ್ಶಿ ಶ್ರೀ ಆರ್ ಕೆ ಚತುರ್ವೇದಿ ಅವರು, ಸಿಪೆಟ್ ಕೈಗೊಳ್ಳುತ್ತಿರುವ ಸುಧಾರಿತ ಸಂಶೋಧನಾ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟವಾಗಿ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ನಿರೋಧಕ/ ಆಂಟಿಮೈಕ್ರೊಬಿಯಲ್ ಮರುಬಳಕೆ ಮಾಡಬಹುದಾದ ಮುಖಗವಸುಗಳು, ವೆಂಟಿಲೇಟರ್ ಸ್ಪ್ಲಿಟರ್ಗಳು ಮತ್ತು ಪಿಪಿಇ ಕಿಟ್ಗಳ ಸಂಬಂಧ ಆಗಿರುವ ಪ್ರಗತಿಗಳ ಬಗ್ಗೆ ವಿವರಿಸಿದರು.

ಪೆಟ್ರೋ ಕೆಮಿಕಲ್ಸ್ ಜಂಟಿ ಕಾರ್ಯದರ್ಶಿ ಶ್ರೀ ಕಾಶಿನಾಥ್ ಝಾ ಅವರು, ವೈದ್ಯಕೀಯ ರೋಗನಿರ್ಣಯ ಮತ್ತು ವೈದ್ಯಕೀಯ ಸಂಶೋಧನೆಯಂತಹ ಇತರ ಕ್ಷೇತ್ರಗಳಲ್ಲಿ ಈಗಾಗಲೇ ಸಿಪೆಟ್ ಕೆಲಸ ಮಾಡುತ್ತಿದೆ. ಪಾಲಿಮರ್ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿವೈದ್ಯಕೀಯ ಸಾಧನ ಪಾರ್ಕ್ಗಳ ಅಭಿವೃದ್ಧಿಗೆ ತಾಂತ್ರಿಕ ಪರಿಣತಿಯ ಮೂಲಕ ಸೂಕ್ತ ಬೆಂಬಲ ನೀಡಬಹುದು ಎಂದು ಮಾಹಿತಿ ನೀಡಿದರು. ಜಂಟಿ ಕಾರ್ಯದರ್ಶಿ (ಸಿ) ಸಮೀರ್ ಕುಮಾರ್ ಬಿಶ್ವಾಸ್, ಸಿಪೆಟ್ ಮಹಾನಿರ್ದೇಶಕ ಪ್ರೊ. (ಡಾ) ಎಸ್.ಕೆ.ನಾಯಕ್, ಮತ್ತು ವಿವಿಧ ಸಿಪೆಟ್ ಕೇಂದ್ರಗಳ ಕೇಂದ್ರದ ಮುಖ್ಯಸ್ಥರು/ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದರು.

ಕೋವಿಡ್-19 ಸಾಂಕ್ರಾಮಿಕದ ನಿಗ್ರಹದಲ್ಲಿ ದೇಶಕ್ಕೆ ನೆರವಾಗಲು ರಾಜ್ಯ/ ಕೇಂದ್ರ ಸರ್ಕಾರಗಳ ಬೇಡಿಕೆಗಳ ಆಧಾರದ ಮೇಲೆ ಪಿಪಿಇ ಕಿಟ್ಗಳ ಗುಣಲಕ್ಷಣ ಮತ್ತು ಮಾನ್ಯತೆ, ಸುಧಾರಿತ ವೈದ್ಯಕೀಯ ರೋಗನಿರ್ಣಯ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ), ಅಚ್ಚುಗಳ ಅಭಿವೃದ್ಧಿ, ಸ್ಯಾನಿಟೈಜರ್ಗಳು ಇತ್ಯಾದಿಗಳಿಗೆ ಸಂಬಂಧಿಸಿದ ತಮ್ಮ ಚಟುವಟಿಕೆಗಳನ್ನು ವಿವಿಧ ಸಿಐಪಿಇಟಿ ಕೇಂದ್ರಗಳ ಮುಖ್ಯಸ್ಥರು ಪ್ರಸ್ತುತ ಪಡಿಸಿದರು.

***



(Release ID: 1632661) Visitor Counter : 204