ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೋವಿಡ್-19 ಹಿನ್ನೆಲೆ ಚಲನಚಿತ್ರ ನಿರ್ಮಾಪಕರು, ಚಿತ್ರ ಪ್ರದರ್ಶಕರ ಒಕ್ಕೂಟಗಳು ಮತ್ತು ಸಿನಿಮಾ ಉದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವರು

Posted On: 02 JUN 2020 8:11PM by PIB Bengaluru

ಕೋವಿಡ್-19 ಹಿನ್ನೆಲೆ

ಚಲನಚಿತ್ರ ನಿರ್ಮಾಪಕರು, ಚಿತ್ರ ಪ್ರದರ್ಶಕರ ಒಕ್ಕೂಟಗಳು ಮತ್ತು ಸಿನಿಮಾ ಉದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಕೇಂದ್ರ ಸಚಿವರು

 

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಇಂದು ಚಲನಚಿತ್ರ ನಿರ್ಮಾಪಕರು, ಚಿತ್ರ ಪ್ರದರ್ಶಕರ ಒಕ್ಕೂಟಗಳು ಹಾಗೂ ಸಿನಿಮಾ ಉದ್ಯಮದ ಪ್ರತಿನಿಧಿಗಳೊಂದಿಗೆ ವಿಡಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಕೋವಿಡ್ -19 ಹಿನ್ನೆಲೆಯಲ್ಲಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವರುಗಳು ಸಚಿವರಿಗೆ ಕಳುಹಿಸಿಕೊಟ್ಟಿದ್ದ ಮನವಿ ಮೇರೆಗೆ ಸಚಿವರು ಸಭೆಯನ್ನು ಕರೆದಿದ್ದರು.

ಸಭೆಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತದಲ್ಲಿ ಸುಮಾರು 9500 ಪರದೆಗಳಲ್ಲಿ ಚಿತ್ರ ಪ್ರದರ್ಶನದ ಮೂಲಕ ಒಂದೇ ದಿನದಲ್ಲಿ ಟಿಕೇಟ್ ಮಾರಾಟದಿಂದ ಸುಮಾರು 30 ಕೋಟಿ ರೂ. ಸಂಗ್ರಹವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮದ ನಿರ್ದಿಷ್ಠ ಬೇಡಿಕೆಗಳ ಕುರಿತಂತೆ ಚರ್ಚಿಸಿದ ಶ್ರೀ ಪ್ರಕಾಶ್ ಜಾವಡೇಕರ್, ಉದ್ಯಮ ಮುಂದಿಟ್ಟಿರುವ ಬಹುತೇಕ ಬೇಡಿಕೆಗಳು ಅಂದರೆ ವೇತನ ನೀಡಲು ಸಬ್ಸಿಡಿ, ಮೂರು ವರ್ಷಗಳ ಕಾಲ ಬಡ್ಡಿ ರಹಿತ ಸಾಲ ವ್ಯವಸ್ಥೆ, ತೆರಿಗೆ ಮತ್ತು ಸುಂಕಗಳ ಪಾವತಿಯಿಂದ ವಿನಾಯ್ತಿ, ವಿದ್ಯುತ್ ಮೇಲಿನ ಕನಿಷ್ಠ ಬೇಡಿಕೆ ಶುಲ್ಕ ವಿನಾಯ್ತಿ ಮತ್ತು ಕೈಗಾರಿಕಾ ದರದಲ್ಲಿ ವಿದ್ಯುತ್ ಬಿಲ್ ಪಾವತಿಗೆ ವಿನಾಯ್ತಿ ಮತ್ತಿತರ ಬೇಡಿಕೆಗಳು ಆರ್ಥಿಕ ಪರಿಹಾರದ ಸ್ವರೂಪದ್ದಾಗಿವೆ ಎಂದರು. ಹಾಗಾಗಿ, ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಸಚಿವಾಲಯಗಳ ಮುಂದೆ ವಿಷಯ ಮಂಡಿಸುವುದಾಗಿ ಸಚಿವರು, ಪ್ರತಿನಿಧಿಗಳಿಗೆ ಭರವಸೆ ನೀಡಿದರು.

ಚಿತ್ರೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಪುನಾರಂಭ ಕುರಿತ ವಿಷಯಗಳಿಗೆ ಸಚಿವರು, ಸರ್ಕಾರದಿಂದ ನಿರ್ದಿಷ್ಠ ಕಾರ್ಯಾಚರಣೆ ಮಾನದಂಡ (ಎಸ್ ಒಪಿ)ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು. ಸಿನಿಮಾ ಮಂದಿರಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಸಚಿವರು, ಜೂನ್ ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕದ ಸ್ಥಿತಿಗತಿಯನ್ನು ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿನಿಧಿಗಳಿಗೆ ತಿಳಿಸಿದರು.

***



(Release ID: 1628932) Visitor Counter : 201