ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಸಚಿವಾಲಯದ ಒಂದು ವರ್ಷದ ಸಾಧನೆಗಳ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ಹೇಳಿಕೆ

Posted On: 29 MAY 2020 5:46PM by PIB Bengaluru

3530 ರೈಲು ಬೋಗಿಗಳ ಮೂಲಕ 98 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಆಹಾರ ಧಾನ್ಯ ಪೂರೈಕೆ,

ಲಾಕ್ ಡೌನ್ ಸಂದರ್ಭದಲ್ಲಿ ರಾಷ್ಟ್ರದ ಆಹಾರ ಧಾನ್ಯದ ಅವಶ್ಯಕತೆಗಳ ಪೂರೈಕೆಗೆ

751.69 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಂಗ್ರಹದಲ್ಲಿದೆ: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳ ಸಚಿವರು

ಸಚಿವಾಲಯದ ಒಂದು ವರ್ಷದ ಸಾಧನೆಗಳ ಕುರಿತು

ಮಾಧ್ಯಮಗಳನ್ನು ಉದ್ದೇಶಿಸಿ ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ಹೇಳಿಕೆ

 

ಕಳೆದ ಒಂದು ವರ್ಷದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳ ಸಚಿವಾಲಯ ಕೈಗೊಂಡಿರುವ ಉಪಕ್ರಮಗಳು ಮತ್ತು ಸುಧಾರಣೆಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಲು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು ಇಂದು ವಿಡಿಯೋ ಸಮಾವೇಶವನ್ನು ನಡೆಸಿದರು. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲಾ ಪಡಿತರ ಕಾರ್ಡ್ ಮತ್ತು ಪಡಿತರವಲ್ಲದ ಕಾರ್ಡ್ ಹೊಂದಿರುವವರು, ವಲಸೆ ಕಾರ್ಮಿಕರು ಮತ್ತು ಯಾವುದೇ ಆಹಾರ ಧಾನ್ಯ ವಿತರಣಾ ಯೋಜನೆಯ ವ್ಯಾಪ್ತಿಗೆ ಬರದವರಿಗೆಲ್ಲರಿಗೂ ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಒದಗಿಸುವುದು ಸಚಿವಾಲಯದ ಮುಖ್ಯ ಗಮನವಾಗಿದೆ ಎಂದು ಸಚಿವ ಶ್ರೀ ಪಾಸ್ವಾನ್ ಅವರು ಮಾಧ್ಯಮಗಳಿಗೆ ಹೇಳಿದರು.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳ ಸಚಿವಾಲಯವು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ರಾಜ್ಯ ಆಹಾರ ಸಚಿವರುಗಳು ಮತ್ತು ಕಾರ್ಯದರ್ಶಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದೆ. ಆದ್ದರಿಂದ ಯಾವುದೇ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಆಹಾರ ಧಾನ್ಯಗಳನ್ನು ವಿತರಿಸಲು ಯಾವುದೇ ಅಡಚಣೆಯನ್ನುಂಟಾಗಿಲ್ಲ. ಬಫರ್ ಸ್ಟಾಕ್ನಲ್ಲಿ ಸಾಕಷ್ಟು ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು. ಪಿ.ಎಂ.ಜಿ.ಕೆ., ಆತ್ಮನಿರ್ಭಾರ ಭಾರತ್ ಪ್ಯಾಕೇಜ್, ಎನ್.ಎಫ್.ಎಸ್. ಮತ್ತು ಇತರ ಯೋಜನೆಗಳ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಹಾರ ಧಾನ್ಯಗಳ ವಿತರಣಾ ಕಾರ್ಯಗಳು ಕೆಲವು ರಾಜ್ಯಗಳನ್ನು ಹೊರತುಪಡಿಸಿ ಇತರಡೆ ಬಹಳ ತೃಪ್ತಿಕರವಾಗಿದೆ ಎಂದು ಅವರು ಹೇಳಿದರು. ಜನವರಿ 2021 ರೊಳಗೆ "ಒಂದು ದೇಶ ಒಂದು ಪಡಿತರ" ಯೋಜನೆಯಡಿ ಆಧಾರ್ ಸಂಖ್ಯೆ ಜೊಡಿಸಿ ದೇಶದಾದ್ಯಂತ 100% ಪಡಿತರ ಚೀಟಿಗಳನ್ನು ಸಾಧಿಸುವ ಉದ್ದೇಶವನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳ ಸಚಿವಾಲಯ ಹೊಂದಿದೆ ಎಂದು ಸಚಿವರು ಹೇಳಿದರು.

28.5.2020 ರಂತೆ ಎಫ್.ಸಿ. ಪ್ರಸ್ತುತ 272.29 ಎಲ್.ಎಂ.ಟಿ ಅಕ್ಕಿ ಮತ್ತು 479.40 ಲಕ್ಷ ಮೆಟ್ರಿಕ್ ಟನ್  ಗೋಧಿಯನ್ನು ಹೊಂದಿದೆ. ಆದ್ದರಿಂದ, ಒಟ್ಟು 751.69 ಲಕ್ಷ ಮೆಟ್ರಿಕ್ ಟನ್  ಆಹಾರ ಧಾನ್ಯದ ಸಂಗ್ರಹ ಲಭ್ಯವಿದೆ (ಗೋಧಿ ಮತ್ತು ಭತ್ತದ ಖರೀದಿಯನ್ನು ಹೊರತುಪಡಿಸಿ, ಇದು ಇನ್ನೂ ಗೊಡೌನ್ಗೆ ತಲುಪಿಲ್ಲ) ಎಂದು ಮಾಧ್ಯಮಗಳನ್ನುದ್ದೇಶಿಸಿ ಸಚಿವರು ಹೇಳಿದರು.

ಮಾರ್ಚ್ 24. 2020 ರಂದು ಲಾಕ್ಡೌನ್ ಘೋಷಿಸಿದಾಗಿನಿಂದ ಸುಮಾರು 98.84 ಲಕ್ಷ ಮೆಟ್ರಿಕ್ ಟನ್  ಆಹಾರ ಧಾನ್ಯಗಳನ್ನು 3530 ರೈಲು ಬೋಗಿಗಳ ಮೂಲಕ ಸಾಗಿಸಿ ವಿತರಿಸಲಾಗಿದೆ ಎಂದು ಸಚಿವರು ಹೇಳಿದರು. ರೈಲು ಮಾರ್ಗದ ಹೊರತಾಗಿ ರಸ್ತೆಗಳು ಮತ್ತು ಜಲಮಾರ್ಗಗಳ ಮೂಲಕವೂ ಸಾರಿಗೆ ವ್ಯವಸ್ಥೆ ಮಾಡಲಾಯಿತು. ಒಟ್ಟು 201.44 ಲಕ್ಷ ಮೆಟ್ರಿಕ್ ಟನ್  ಆಹಾರ ಧಾನ್ಯವನ್ನು ಸಾಗಿಸಲಾಗಿದೆ. 11 ಹಡಗುಗಳ ಮೂಲಕ 12,000 ಮೆ.ಟನ್ ಆಹಾರ ಧಾನ್ಯಗಳನ್ನು ಸಾಗಿಸಲಾಯಿತು. ಒಟ್ಟು 9.61 ಲಕ್ಷ ಮೆಟ್ರಿಕ್ ಟನ್  ಆಹಾರ ಧಾನ್ಯಗಳನ್ನು ಈಶಾನ್ಯ ರಾಜ್ಯಗಳಿಗೆ ಸಾಗಿಸಲಾಗಿದೆ.

ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ

ಆಹಾರ ಧಾನ್ಯ (ಅಕ್ಕಿ / ಗೋಧಿ )

ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ, ಮುಂದಿನ 3 ತಿಂಗಳುಗಳವರೆಗೆ ಒಟ್ಟು 104.4 ಲಕ್ಷ ಮೆಟ್ರಿಕ್ ಟನ್ ಯಷ್ಟು ಅಕ್ಕಿ ಮತ್ತು 15.6 ಲಕ್ಷ ಮೆಟ್ರಿಕ್ ಟನ್ ಯಷ್ಟು ಗೋಧಿ ಅಗತ್ಯವಿರುತ್ತದೆ, ಅದರಲ್ಲಿ 83.38 ಲಕ್ಷ ಮೆಟ್ರಿಕ್ ಟನ್ ಯಷ್ಟು ಅಕ್ಕಿ ಮತ್ತು 12.42 ಲಕ್ಷ ಮೆಟ್ರಿಕ್ ಟನ್ ಯಷ್ಟು ಗೋಧಿಯನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಸಂಗ್ರಹಿಸಿವೆ. ಒಟ್ಟು 95.80 ಲಕ್ಷ ಮೆಟ್ರಿಕ್ ಟನ್  ಯನ್ನು ಸಾಗಾಟ ಮಾಡಲಾಗಿದೆ.

ಬೇಳೆಕಾಳುಗಳು

ದ್ವಿದಳ ಧಾನ್ಯಗಳಿಗೆ ಸಂಬಂಧಿಸಿದಂತೆ, ಮುಂದಿನ ಮೂರು ತಿಂಗಳ ಒಟ್ಟು ಅವಶ್ಯಕತೆಯ 5.87 ಲಕ್ಷ ಮೆಟ್ರಿಕ್ ಟನ್ ಯಷ್ಟು ದಾಸ್ತಾನಿದೆ. ಇಲ್ಲಿಯವರೆಗೆ, 4.62 ಲಕ್ಷ ಮೆಟ್ರಿಕ್ ಟನ್  ದ್ವಿದಳ ಧಾನ್ಯಗಳನ್ನು ರವಾನಿಸಲಾಗಿದ್ದು, 3.64 ಲಕ್ಷ ಮೆಟ್ರಿಕ್ ಟನ್  ದ್ವಿದಳ ಧಾನ್ಯಗಳು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ತಲುಪಿವೆ ಮತ್ತು ಈಗಾಗಲೇ 71,738 ಮೆ.ಟನ್ ಬೇಳೆಕಾಳುಗಳನ್ನು ವಿತರಿಸಲಾಗಿದೆ. 20.5.2020 ರಂತೆ, 1.64 ಲಕ್ಷ ಮೆಟ್ರಿಕ್ ಟನ್  ದ್ವಿದಳ ಧಾನ್ಯಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವಿತರಿಸಿವೆ. ಮೇ 20, 2020 ವೇಳೆಗೆ ಒಟ್ಟು 12.81 ಲಕ್ಷ ಮೆಟ್ರಿಕ್ ಟನ್  ದ್ವಿದಳ ಧಾನ್ಯಗಳು (ತೊಗರಿಬೇಳೆ -5.88 ಲಕ್ಷ ಮೆಟ್ರಿಕ್ ಟನ್ , ಹೆಸರುಕಾಳು -1.62 ಲಕ್ಷ ಮೆಟ್ರಿಕ್ ಟನ್ , ಉದ್ದಿನಬೇಳೆ -2.42 ಲಕ್ಷ ಮೆಟ್ರಿಕ್ ಟನ್ , ಕಡಲೆ -2.42 ಲಕ್ಷ ಮೆಟ್ರಿಕ್ ಟನ್  ಮತ್ತು ಕೆಂಪು ಹೆಸರುಬೇಳೆ -0.47 ಲಕ್ಷ ಮೆಟ್ರಿಕ್ ಟನ್  ) ಬಫರ್ ಸ್ಟಾಕ್ನಲ್ಲಿ ಲಭ್ಯವಿದೆ.

ಆತ್ಮ ನಿರ್ಭಾರ್ ಭಾರತ್

ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 2.06 ಲಕ್ಷ ಮೆಟ್ರಿಕ್ ಟನ್  ಆಹಾರ ಧಾನ್ಯಗಳನ್ನು ಸ್ವೀಕರಿಸಿವೆ. ವಿತರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಶ್ರೀ ಪಾಸ್ವಾನ್ ಹೇಳಿದರು.

ಆತ್ಮ ನಿರ್ಭಾರ ಭಾರತ್ ಯೋಜನೆಯಡಿ ವಲಸಿಗರು / ಸಿಕ್ಕಿಬಿದ್ದ ವಲಸಿಗರನ್ನು ಗುರುತಿಸುವುದನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಸ್ವಂತ ಕಾರ್ಯವಿಧಾನಗಳ ಮೂಲಕ ಮಾಡಬಹುದಾಗಿದೆ ಮತ್ತು ವ್ಯಕ್ತಿಗಳ ಆಧಾರ್ ಲಭ್ಯವಿದ್ದರೆ ಹಾಗೂ ವ್ಯಕ್ತಿಯು ಎನ್.ಎಫ್.ಎಸ್.. ಅಥವಾ ರಾಜ್ಯ ಪಡಿತರ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಖಚಿತಪಡಿಸಿಕೊಂಡು ವಿತರಣೆ ಮಾಡಬಹುದಾಗಿದೆ ಎಂದು ಸಚಿವರು ಹೇಳಿದರು. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಪಡಿತರ ಯೋಜನೆಯ ಆಹಾರ ವಿತರಣಾ ವ್ಯವಸ್ಥೆಯಲ್ಲಿರದ ಮತ್ತು ಎನ್‌.ಎಫ್‌.ಎಸ್‌.. / ರಾಜ್ಯ ಪಡಿತರ ಯೋಜನೆಗಳ ವ್ಯಾಪ್ತಿಗೆ ಒಳಪಡದ ಯಾವುದೇ ಬಡ / ನಿರ್ಗತಿಕ ವಲಸಿಗ / ಸಿಕ್ಕಿಬಿದ್ದ ವಲಸಿಗರಿಗೆ ಯೋಜನೆಯ ಪ್ರಯೋಜನವನ್ನು ರಾಜ್ಯಗಳು ಒದಗಿಸಬಹುದು

ಒಂದು ದೇಶ ಒಂದು ಪಡಿತರ

17 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ "ಒಂದು ದೇಶ ಒಂದು ಪಡಿತರ" ಯೋಜನೆಯಡಿ ಎನ್‌.ಎಫ್‌.ಎಸ್‌.. ಪಡಿತರ ಚೀಟಿ ಹೊಂದಿರುವವರ ರಾಷ್ಟ್ರೀಯ ಪೋರ್ಟಬಿಲಿಟಿ ಪರಿಚಯಿಸಲಾಗಿದೆ ಎಂದು ಶ್ರೀ ಪಾಸ್ವಾನ್ ಹೇಳಿದ್ದಾರೆ. ಪ್ರಸ್ತುತ, 17 ರಾಜ್ಯಗಳು ಒಂದೇ ರಾಷ್ಟ್ರೀಯ ಗುಂಪಿನಲ್ಲಿ ಸೇರಿದ್ದು, ಎಲ್ಲಡೆ ತಡೆರಹಿತ ಸೌಲಭ್ಯ ಲಭ್ಯವಿದೆ. ಜನವರಿ 2021 ವೇಳೆಗೆ ನಾವು 100% ಆಧಾರ್ ಸಂಖ್ಯೆ ಜೋಡಣೆಯನ್ನು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಸಚಿವರು ಹೇಳಿದರು.

ಕೋವಿಡ್-19 ಹರಡುವಿಕೆ ತಡೆಯನ್ನು ನಿಭಾಯಿಸಲು ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವುದು

ಪ್ರಸಕ್ತ ಎಥೆನಾಲ್ ಪೂರೈಕೆ ವರ್ಷ 2019-20 (ಡಿಸೆಂಬರ್, 2019 - ನವೆಂಬರ್, 2020) ಗೆ ಸಕ್ಕರೆ ಮತ್ತು ಸಕ್ಕರೆ ರವೆ ಪಾಕದಿಂದ ಎಥೆನಾಲ್ ಉತ್ಪಾದನೆಗೆ ಸರ್ಕಾರ ಅನುಮತಿ ನೀಡಿದೆ ಮತ್ತು ಸಿ-ಹೆವಿ ಮೊಲಾಸ್ಪಡೆದ ಎಥೆನಾಲ್ಗೆ @ ರೂ. 43.75 / ಲೀಟರ್ , ಬಿ-ಹೆವಿ ಮೊಲಾಸ್ಗಳಿಂದ ಪಡೆದ ಎಥೆನಾಲ್ಗೆ @ ರೂ. 54.27 / ಲೀಟರ್ ಮತ್ತು ಕಬ್ಬಿನ ರಸ / ಸಕ್ಕರೆ / ಸಕ್ಕರೆ ಪಾಕದಿಂದ ಪಡೆದ ಎಥೆನಾಲ್ಗೆ @ ರೂ. 59.48 / ಲೀಟರ್ ಸಂಭಾವನೆ ನೀಡಲು ಗಿರಣಿ ಬೆಲೆಯನ್ನು ನಿಗದಿಪಡಿಸಿದೆ. ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶ ಆಡಳಿತಗಳ ಸಮನ್ವಯದೊಂದಿಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಂಘಟಿತ ಪ್ರಯತ್ನಗಳಿಗೆ, ಪರವಾನಗಿ ಮತ್ತು ಈಥೈಲ್ ಆಲ್ಕೋಹಾಲ್ / ಎಥೆನಾಲ್ ಸಂಗ್ರಹಣೆಯ ಅಗತ್ಯ ಅನುಮತಿಗಳು, ಹ್ಯಾಂಡ್ ಸ್ಯಾನಿಟೈಜರ್ಗಳನ್ನು ತಯಾರಿಸಲು ಸಕ್ಕರೆ ಕಾರ್ಖಾನೆಗಳು / ಡಿಸ್ಟಿಲರಿಗಳು / ಸ್ಯಾನಿಟೈಜರ್ ಉದ್ಯಮಕ್ಕೆ ನೀಡಲಾಯಿತು. ಇದರ ಪರಿಣಾಮವಾಗಿ, (11.5.2020 ರಂತೆ). 165 ಡಿಸ್ಟಿಲರಿಗಳು ಮತ್ತು 962 ಸ್ವತಂತ್ರ ತಯಾರಕರಿಗೆ ದೇಶಾದ್ಯಂತ ಹ್ಯಾಂಡ್-ಸ್ಯಾನಿಟೈಜರ್ಗಳನ್ನು ಉತ್ಪಾದಿಸಲು ಪರವಾನಗಿ ನೀಡಲಾಯಿತು, 87,20,262 ಲೀಟರ್ ಹ್ಯಾಂಡ್-ಸ್ಯಾನಿಟೈಜರ್ಗಳನ್ನು ಉತ್ಪಾದಿಸಲಾಗಿದೆ ಎಂದು ಸಚಿವರು ಹೇಳಿದರು.

ಗಂಧಕ ರಹಿತ ಸಕ್ಕರೆ ಪಡೆಯಲು ಕಬ್ಬಿನ ರಸ ಸ್ಪಷ್ಟೀಕರಣದ ಹೊಸ ಪ್ರಕ್ರಿಯೆಗಾಗಿ ರಾಷ್ಟ್ರೀಯ ಸಕ್ಕರೆ ಸಂಸ್ಥೆ (ಎನ್.ಎಸ್.) ಕಾನ್ಪುರಕ್ಕೆ ಪೇಟೆಂಟ್ ನೀಡಲಾಗಿದೆ. ಇದಲ್ಲದೆ, ಸಹ-ಸ್ಫಟಿಕೀಕರಣದೊಂದಿಗೆ ಬಲವರ್ಧಿತ ಅರೂಪದ ಸಕ್ಕರೆಗೆ ಪೇಟೆಂಟ್ ನೀಡಲು ಕೂಡಾ ಅರ್ಜಿ ಸಲ್ಲಿಸಿದ್ದಾರೆ

ಅಕ್ಕಿಯ ಬಲವರ್ಧನೆ

ಅಕ್ಕಿ ಬಲವರ್ಧನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅದರ ವಿತರಣೆಕುರಿತು ಕೇಂದ್ರ ಪ್ರಾಯೋಜಿತ ನೂತನ ಪ್ರಯೋಗಿಕ(ಪೈಲಟ್) ಯೋಜನೆಯ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಶ್ರೀ ಪಾಸ್ವಾನ್ ಅವರು ಕಳೆದ ಫೆಬ್ರವರಿ,2020ರಿಂದ ನೂತನ ಪ್ರಯೋಗಿಕ(ಪೈಲಟ್) ಯೋಜನೆಯಡಿ ಬಲವರ್ಧಿತ ಅಕ್ಕಿಯನ್ನು ಮಹಾರಾಷ್ಟ್ರ ಮತ್ತು ಗುಜರಾತ್ ಗಳಲ್ಲಿ ವಿತರಿಸಲು ಪ್ರಾರಂಭಿಸಿವೆ ಎಂದು ಹೇಳಿದರು. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಹಾಯ ಮಾಡುವ / ಪ್ರಾಯೋಜಿಸಿದ ಕಲ್ಯಾಣ ಸಂಸ್ಥೆಗಳ ಮತ್ತು ಅದರ ವ್ಯಾಪ್ತಿಯಲ್ಲಿ ಸೇರಿಸಲು ಹಾಸ್ಟೆಲ್ ಯೋಜನೆಯ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಮತ್ತು ಅನುದಾನಿತ / ಪ್ರಾಯೋಜಿತ ಕಲ್ಯಾಣ ಸಂಸ್ಥೆಗಳಾದ ಭಿಕ್ಷುಕರ ಮನೆಗಳು, ನಾರಿನಿಕೇತನಗಳು ಮತ್ತು ಇತರ ರೀತಿಯ ಕಲ್ಯಾಣ ಸಂಸ್ಥೆಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ಎಸ್‌.ಸಿ / ಎಸ್.‌ಟಿ / .ಬಿ.ಸಿ ವರ್ಗಕ್ಕೆ ಸೇರಿದ 3 ನೇ 2 (ಮೂರರಲ್ಲಿ 2) ನಿವಾಸಿಗಳನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ನೆರವಿನ / ಪ್ರಾಯೋಜಿತ ಎಲ್ಲಾ ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗೆ ಪೂರೈಸಲು, ಈಗ ಬಡತನರೇಖೆಗಿಂತ ಕೆಳಗಿರುವ ಪಡಿತರ ದರದಲ್ಲಿ ಸಾಕಷ್ಟು ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗುತ್ತಿದೆ.

ಕೇಂದ್ರ ಉಗ್ರಾಣ ನಿಗಮ (ಸಿ.ಡಬ್ಲ್ಯೂ.ಸಿ) ಅತ್ಯಧಿಕ ವಹಿವಾಟು ನಡೆಸಿದೆ

ಕೇಂದ್ರ ಉಗ್ರಾಣ ನಿಗಮ (ಸಿ.ಡಬ್ಲ್ಯು.ಸಿ) 2019-20 ಅವಧಿಯಲ್ಲಿ ,ಸುಮಾರು ರೂ. 1710 ಕೋಟಿಗಳ ವಹಿವಾಟು ಸಾಧಿಸಿದೆ ಎಂದು ಕೇಂದ್ರ ಸಚಿವ ಶ್ರೀ ಪಾಸ್ವಾನ್ ಹೇಳಿದ್ದಾರೆ. ಕೇಂದ್ರ ಉಗ್ರಾಣ ನಿಗಮ (ಸಿ.ಡಬ್ಲ್ಯು.ಸಿ) ಪಾವತಿ ಬಂಡವಾಳದ ಕಳೆದ ವರ್ಷದ ಮಧ್ಯಂತರ ಲಾಭಾಂಶ 72.20% ಕ್ಕೆ ಹೋಲಿಸಿದರೆ ತನ್ನ 2019-20ನೇ ಸಾಲಿನ 95.53% ಮಧ್ಯಂತರ ಲಾಭಾಂಶವನ್ನು ಈಗಾಗಲೇ ಘೋಷಿಸಿದೆ. ಒಟ್ಟು ಲಾಭಾಂಶದಲ್ಲಿ ರೂ.64.98 ಕೋಟಿಗಳಲ್ಲಿ ಈಗಾಗಲೇ ರೂ.35.77 ಕೋಟಿಗಳನ್ನು ಭಾರತದ ಸರ್ಕಾರ ಪಡೆದಿದೆ.

***


(Release ID: 1628042) Visitor Counter : 248