ರಕ್ಷಣಾ ಸಚಿವಾಲಯ

ಪಶ್ಚಿಮ ನೌಕಾ ಪಡೆಯ ಕೇಂದ್ರದಲ್ಲಿ ಸೋಂಕು ನಿವಾರಕ ಅಲ್ಟ್ರಾವೈಲೆಟ್ ಉಪಕರಣ ಅಭಿವೃದ್ಧಿ

Posted On: 28 MAY 2020 8:16PM by PIB Bengaluru

ಪಶ್ಚಿಮ ನೌಕಾ ಪಡೆಯ ಕೇಂದ್ರಲ್ಲಿ ಸೋಂಕು ನಿವಾರಕ ಅಲ್ಟ್ರಾವೈಲೆಟ್ ಉಪಕರಣ ಅಭಿವೃದ್ಧಿ

 

ಲಾಕ್ ಡೌನ್ ಅನ್ನು ಸರಳಗೊಳಿಸಿ ಭಾಗಶಃ ಮತ್ತು ಅಂತಿಮವಾಗಿ ಸಂಪೂರ್ಣ ಹಿಂಪಡೆಯುವಿಕೆ ಪ್ರಕ್ರಿಯೆ ನಡೆಯುತ್ತಿರುವಾಗ, ಲಾಕ್ಡೌನ್ ನಂತರ ಗಣನೀಯ ಸಂಖ್ಯೆಯ ಕಾರ್ಮಿಕರು ಕೆಲಸದ ಹುದ್ದೆಯನ್ನು ಪುನರಾರಂಭಿಸುವ ವಿಶೇಷವಾಗಿ ಹಡಗು ತಾಣ(ಡಾಕ್ ಯಾರ್ಡ್) ಮತ್ತು ಇತರ ನೌಕಾ ಸಂಸ್ಥೆಗಳಂತಹ ದೊಡ್ಡ ಉತ್ಪಾದನಾ ಸಂಸ್ಥೆಗಳಿಗೆ ಅನುಸರಿಸಬೇಕಾದ "ಹೊಸ ಸಾಮಾನ್ಯ ನಿಯಮ ಪದ್ಧತಿ(ವ್ಯವಸ್ಥೆ)" ಯಾವುದು ಎಂಬ ಪ್ರಶ್ನೆಗಳು ಈಗಾಗಲೇ ಮೂಡಲಾರಂಭಿಸಿದೆ. ಇಲ್ಲಿ ನೌಕರರ ಸಂಖ್ಯೆಗಳು ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದೆ. ಈಗಾಗಲೇ ಕಾರ್ಮಿಕರ ಪೂರ್ತಿರಕ್ಷಾಕವಚ(ಕವರಾಲ್‌)ಗಳು, ಪರಿಕರಗಳು, ವೈಯಕ್ತಿಕ ಗ್ಯಾಜೆಟ್ಗಳು ಮತ್ತು ಮುಖಕವಚಗಳಿಗೆ, ಹಾಗೂ ನೈರ್ಮಲ್ಯಕ್ಕಾಗಿ ಸ್ಯಾನಿಟೈಸೇಶನ್ ಸೌಲಭ್ಯಗಳ ಅತಿ ಹೆಚ್ಚು ಬೇಡಿಕೆ ಪ್ರಾರಂಭವಾಗಿದೆ.

ಸಮಕಾಲೀನ ಅಗತ್ಯವನ್ನು ಪೂರೈಸಲುಮುಂಬಯಿಯ ನೌಸೇನಾ(ನೌಕಾಪಡೆ) ಬಂದರು (ನೇವಲ್ ಡಾಕ್ ಯಾರ್ಡ್, ಮುಂಬೈ) ನೂತನ ಯುವಿ ಸ್ಯಾನಿಟೈಸೇಶನ್ ವ್ಯವಸ್ಥೆಯನ್ನು ತಯಾರಿಸಿದೆ. ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಉಪಕರಣಗಳು, ಬಟ್ಟೆ ಮತ್ತು ಇತರ ವಿವಿಧ ವಸ್ತುಗಳ ಶುಚಿತ್ವ-ನೈರ್ಮಲ್ಯಕ್ಕಾಗಿ ಯುವಿ ಕೊಲ್ಲಿಯನ್ನು ಬಳಸಲಾಗುತ್ತದೆ. ದೊಡ್ಡ ಸಾಮಾನ್ಯ ಕೋಣೆಯನ್ನು ಬಳಸಿಕೊಂಡು ಅಲ್ಯೂಮಿನಿಯಂ ಹಾಳೆಗಳ ವಿದ್ಯುತ್ ವ್ಯವಸ್ಥೆಗಳನ್ನು ಯುವಿ-ಸಿ ಬೆಳಕಿಗಾಗಿ ತಯಾರಿಸುವ ಮೂಲಕ ಯುವಿ ಕೊಲ್ಲಿಯಾಗಿ ಪರಿವರ್ತಿಸುವ ಸವಾಲಿನ ಕಾರ್ಯದಲ್ಲಿ ಯಶಸ್ಸು ಕಂಡಿದೆ.

ಸೂಕ್ಷ್ಮ ಕ್ರಿಮಿನಾಶಕ ವಸ್ತುಗಳ ಕಡೆಗೆ ಜರ್ಮಿಸೈಡಲ್ ವಿಕಿರಣಕ್ಕಾಗಿ ಸೌಲಭ್ಯವನ್ನು ಯುವಿ-ಸಿ ಬೆಳಕಿನ ಮೂಲಕ ಬಳಸಲಾಗುತ್ತದೆ. ಸಾರ್ಸ್, ಇನ್ಫ್ಲೂಂಝಾ ಮುಂತಾದ ಉಸಿರಾಟದ ರೋಗಕಾರಕಗಳ ಮೇಲೆ ಯುವಿ-ಸಿ ಪರಿಣಾಮವನ್ನು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳು ಈಗಾಗಲೇ ಸಾಬೀತುಪಡಿಸಿವೆ. ಹಾಗೂ, 1 ಜೆ / ಸೆಂ 2 ತೀವ್ರತೆಯ ಯುವಿ-ಸಿ ಕಿರಣಕ್ಕೆ 1 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಒಡ್ಡಿಕೊಂಡಾಗ ಪರಿಣಾಮಕಾರಿ ಕ್ರಿಮಿನಾಶಕವಾಗಿ ಪ್ರವರ್ತಿಸಿ ಸೂಕ್ಷ್ಮಜೀವಿಯ ರೋಗಕಾರಕಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ.

ಕಾರಂಜದ ನೌಸೇನಾ ತಾಣ/ಕೇಂದ್ರ (ನೇವಲ್ ಸ್ಟೇಷನ್, ಕಾರಂಜ) ದಲ್ಲಿಯೂ ಇದೇ ರೀತಿಯ ಸೌಲಭ್ಯವನ್ನು ಸ್ಥಾಪಿಸಲಾಗಿದೆ, ಅಲ್ಲಿ ಯುವಿ-ಸಿ ಕ್ರಿಮಿನಾಶಕಕ್ಕೆ ಹೆಚ್ಚುವರಿಯಾಗಿ, ಕೈಗಾರಿಕಾ ಓವನ್ ಅನ್ನು ಸಹ ಇರಿಸಲಾಗಿದೆ, ಇದು ಸಣ್ಣ ಗಾತ್ರದ ವಸ್ತುಗಳನ್ನು 60°ಸಿ ಗೆ ಬಿಸಿಮಾಡುತ್ತದೆ, ಇದು ಹೆಚ್ಚಿನ ಸೂಕ್ಷ್ಮಾಣುಜೀವಿಗಳನ್ನುಕೂಡಾ ಕೊಲ್ಲುತ್ತದೆ.

ಕೋವಿಡ್ -19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುವ ಉದ್ದೇಶದಿಂದ ವಠಾರದ ಪ್ರವೇಶ / ನಿರ್ಗಮನ ಸ್ಥಳಗಳಲ್ಲಿ ಸೌಲಭ್ಯವನ್ನು ಇರಿಸಲಾಗಿದೆ.

***



(Release ID: 1628010) Visitor Counter : 205