ಹಣಕಾಸು ಸಚಿವಾಲಯ

ಪ್ರಧಾನಮಂತ್ರಿ ವಯ ವಂದನ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ

Posted On: 20 MAY 2020 2:29PM by PIB Bengaluru

ಪ್ರಧಾನಮಂತ್ರಿ ವಯ ವಂದನ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಹಿರಿಯ ನಾಗರಿಕರಿಗಾಗಿ ವೃದ್ಧಾಪ್ಯ ಆದಾಯ ಭದ್ರತೆ ಹೆಚ್ಚಳ ಮತ್ತು ಅವರ ಕಲ್ಯಾಣಕ್ಕಾಗಿ ಕೆಳಗಿನ ಕ್ರಮಗಳಿಗೆ ಅನುಮೋದನೆ ನೀಡಿತು:

  • ) ಪ್ರಧಾನಮಂತ್ರಿ ವಯ ವಂದನ ಯೋಜನೆ(ಪಿಎಂವಿವಿವೈ)ಯನ್ನು 2020 ಮಾರ್ಚ್ ನಂತರ ಮುಂದಿನ ಮೂರು ವರ್ಷಗಳಿಗೆ ಅಂದರೆ 2023 ಮಾರ್ಚ್ 31 ವರೆಗೆ ವಿಸ್ತರಿಸಲಾಯಿತು.

(ಬಿ) 2020-21ನೇ ಸಾಲಿಗೆ ವಾರ್ಷಿಕ ನಿಗದಿಪಡಿಸಿರುವ ಶೇ.7.40ರಷ್ಟು ಬಡ್ಡಿ ಪಾವತಿಗೆ ಅವಕಾಶ ಮತ್ತು ಆನಂತರ ಪ್ರತಿ ವರ್ಷ ಪ್ರಮಾಣ ಮರು ನಿಗದಿಯಾಗುತ್ತದೆ.

(ಸಿ) ಮರುನಿಗದಿಗೊಳಿಸಿ ಖಾತ್ರಿಪಡಿಸಲಾದ ಬಡ್ಡಿದರ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಅದಕ್ಕೆ ಅನುಗುಣವಾಗಿ ಹಿರಿಯ ನಾಗರಿಕ ಉಳಿತಾಯ ಯೋಜನೆ(ಎಸ್ ಸಿಎಸ್ಎಸ್)ಗೆ ಶೇ.7.75ರಷ್ಟು ಬಡ್ಡಿ ಪಾವತಿ ಮರು ನಿಗದಿಪಡಿಸಲಾಗಿದೆ. ಹೊಸ ದರ ಯೋಜನೆಯ ಯಾವುದೇ ಸಂದರ್ಭದಲ್ಲಿ ಲಭ್ಯವಾಗಲಿದೆ.

(ಡಿ) ಎಲ್ಐಸಿಯಿಂದ ಮರು ಉತ್ಪಾದಿಸಲಾದ ಆದಾಯದ ಮಾರುಕಟ್ಟೆ ದರ ಮತ್ತು ವಾಸ್ತವಿಕ ವೆಚ್ಚದ ವ್ಯತ್ಯಾಸವನ್ನು ಪರಿಗಣಿಸಿ ದರ ನಿಗದಿ ಮಾಡಲಾಗಿದೆ ಮತ್ತು ಯೋಜನೆ ಅಡಿ ಬಡ್ಡಿ ದರವನ್ನು ಖಾತ್ರಿಪಡಿಸಲಾಗಿದೆ.

() ಹೊಸ ಪಾಲಿಸಿ ವಿತರಣೆ ಮಾಡಿದ ಮೊದಲ ವರ್ಷಕ್ಕೆ ನಿಧಿಗೆ ವಾರ್ಷಿಕ ಶೇ. 0.5ರಷ್ಟು ನಿರ್ವಹಣಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಆನಂತರ ಎರಡನೇ ವರ್ಷದಿಂದ ಮುಂದಿನ 9 ವರ್ಷಗಳವರೆಗೆ ದರ ವಾರ್ಷಿಕ ಶೇ.0.3ರಷ್ಟಿರುತ್ತದೆ.

(ಎಫ್) ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಾರ್ಷಿಕ ಬಡ್ಡಿ ದರ ಮರು ನಿಗದಿಗೊಳಿಸುವ ಅಧಿಕಾರವನ್ನು ಹಣಕಾಸು ಸಚಿವರಿಗೆ ನಿಯೋಜಿಸಲು ತೀರ್ಮಾನಿಸಲಾಯಿತು.

(ಜಿ) ಯೋಜನೆಯ ಇತರೆ ಎಲ್ಲಾ ಷರತ್ತು ಮತ್ತು ನಿಬಂಧನೆಗಳು ಯಥಾಸ್ಥಿತಿಯಲ್ಲೇ ಮುಂದುವರಿಯಲಿವೆ.

ಕನಿಷ್ಠ ಹೂಡಿಕೆ ಪ್ರಮಾಣವನ್ನು ವಾರ್ಷಿಕ 12,000 ರೂ. ಪಿಂಚಣಿ ಪಡೆಯಲು ಮಿತಿಯನ್ನು 1,56,658 ರೂ. ಪರಿಷ್ಕರಿಸಲಾಗಿದೆ ಮತ್ತು ಯೋಜನೆ ಅಡಿ ತಿಂಗಳಿಗೆ 1000 ರೂ. ಪಿಂಚಣಿ ಪಡೆಯಲು 1,62,162 ರೂ. ನಿಗದಿಪಡಿಸಲಾಗಿದೆ.

ಆರ್ಥಿಕ ಪರಿಣಾಮಗಳು:

ಎಲ್ಐಸಿ ಮಾರುಕಟ್ಟೆಯಿಂದ ಗಳಿಸಿದ ಮೊತ್ತ ಮತ್ತು 2020-21ನೇ ಸಾಲಿಗೆ ಆರಂಭಿಕವಾಗಿ ಖಾತ್ರಿಪಡಿಸಿರುವ ವಾರ್ಷಿಕ ಶೇ.7.40ರಷ್ಟು ಮೊತ್ತದ ವ್ಯತ್ಯಾಸದ ಮೊತ್ತ ಸರ್ಕಾರದ ಆರ್ಥಿಕ ಬಾಧ್ಯತೆಯಾಗಿರುತ್ತದೆ (ಹೊಣೆಗಾರಿಕೆಯಾಗುತ್ತದೆ) ಮತ್ತು ಆನಂತರ ಪ್ರತಿ ವರ್ಷ ಎಸ್ ಸಿ ಎಸ್ಎಸ್ ಗೆ ಅನುಗುಣವಾಗಿ ದರ ಮರು ನಿಗದಿಯಾಗುತ್ತದೆ. ಹೊಸ ಪಾಲಿಸಿ ವಿತರಣೆ ಮಾಡಿದ ಮೊದಲ ವರ್ಷಕ್ಕೆ ನಿಧಿಗೆ ವಾರ್ಷಿಕ ಶೇ. 0.5ರಷ್ಟು ನಿರ್ವಹಣಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಮತ್ತು ಆನಂತರ ಎರಡನೇ ವರ್ಷದಿಂದ ಮುಂದಿನ 9 ವರ್ಷಗಳವರೆಗೆ ದರ ವಾರ್ಷಿಕ ಶೇ.0.3ರಷ್ಟಿರುತ್ತದೆ. ಅದರಂತೆ 2023-24ನೇ ಹಣಕಾಸಿನ ವರ್ಷದವರೆಗೆ ಒಟ್ಟು ವಿತ್ತೀಯ ಹೊಣೆಗಾರಿಕೆ ಅಂದಾಜು 829 ಕೋಟಿ ರೂ.ಗಳಾಗಿವೆ. ಅಂತೆಯೇ 2032-33ನೇ ಹಣಕಾಸು ವರ್ಷಕ್ಕೆ 264 ಕೋಟಿ ರೂ.ಗಳಾಗಲಿವೆ. ಸಬ್ಸಿಡಿ ಮರುಪಾವತಿಗೆ ಸರಾಸರಿ ಸಂಭಾವ್ಯ ವಿತ್ತೀಯ ಹೊಣೆಗಾರಿಕೆಯನ್ನು ವಾರ್ಷಿಕ ಪಾವತಿ ಆಧಾರದಲ್ಲಿ ಲೆಕ್ಕ ಹಾಕಿದರೆ ಯೋಜನೆಗೆ ಪ್ರತಿ ವರ್ಷ ಸುಮಾರು 614 ಕೋಟಿ ರೂ. ವೆಚ್ಚಾಗುವ ನಿರೀಕ್ಷೆ ಇದೆ. ವಾಸ್ತವ ಬಡ್ಡಿ ಅಂತರ(ಸಬ್ಸಿಡಿ) ಹಣ ಎಷ್ಟು ಹೊಸ ಪಾಲಿಸಿಗಳನ್ನು ವಿತರಣೆ ಮಾಡಲಾಗುತ್ತದೆ, ವಂತಿಗೆದಾರರಿಂದ ಎಷ್ಟು ಮೊತ್ತ ಹೂಡಿಕೆಯಾಗುತ್ತದೆ, ವಾಸ್ತವವಾಗಿ ಎಷ್ಟು ಬಡ್ಡಿ ನೀಡಬೇಕಾಗುತ್ತದೆ ಮತ್ತು ವಾರ್ಷಿಕ ಪಾವತಿ ಎಷ್ಟಾಗುತ್ತದೆ ಎಂಬುದನ್ನು ಆಧರಿಸಿರುತ್ತದೆ.

ಪಿಎಂವಿವಿವೈ ಹಿರಿಯ ನಾಗರಿಕರಿಗಾಗಿ ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಇದರಡಿ ಅವರು ಖರೀದಿಸುವ ಬೆಲೆ/ವಂತಿಗೆ ಮೊತ್ತ ಆಧರಿಸಿ, ನಿಗದಿತ ಮರು ಪಾವತಿ ಅಡಿ ಕನಿಷ್ಠ ಪಿಂಚಣಿಯನ್ನು ಖಾತ್ರಿಪಡಿಸಲಾಗುತ್ತಿದೆ.

***



(Release ID: 1625504) Visitor Counter : 173