ಹಣಕಾಸು ಸಚಿವಾಲಯ

ಕೋವಿಡ್-19 ರಿಂದ ಭಾರತದ ಬಡವರನ್ನು ರಕ್ಷಿಸಲು ವಿಶ್ವ ಬ್ಯಾಂಕಿನಿಂದ ಡಾಲರ್ 1 ಬಿಲಿಯನ್

Posted On: 15 MAY 2020 7:52PM by PIB Bengaluru

ಕೋವಿಡ್-19 ರಿಂದ ಭಾರತದ ಬಡವರನ್ನು ರಕ್ಷಿಸಲು ವಿಶ್ವ ಬ್ಯಾಂಕಿನಿಂದ ಡಾಲರ್ 1 ಬಿಲಿಯನ್

 

ಭಾರತ ಸರಕಾರ ಮತ್ತು ವಿಶ್ವ ಬ್ಯಾಂಕ್ ಇಂದು ಭಾರತದ ಕೋವಿಡ್ -19 ಸಾಮಾಜಿಕ ರಕ್ಷಣಾ ಪ್ರತಿಕ್ರಿಯೆ ಕಾರ್ಯಕ್ರಮವನ್ನು ತ್ವರಿತಗೊಳಿಸುವುದಕ್ಕಾಗಿ ಪ್ರಸ್ತಾವಿತ 1 ಬಿಲಿಯನ್ ಡಾಲರ್ 750 ಮಿಲಿಯನ್ ಡಾಲರ್ ಗೆ ಅಂಕಿತ ಹಾಕಿದವು. ಬಡವರಿಗೆ ಮತ್ತು ಸುಲಭದಲ್ಲಿ ಅಪಾಯಕ್ಕೀಡಾಗುವವರಿಗೆ , ಕೋವಿಡ್ -19 ರಿಂದ ಗಂಭೀರವಾಗಿ ತೊಂದರೆಗೆ ಒಳಗಾಗಿರುವವರಿಗೆ ಸಾಮಾಜಿಕ ಸಹಾಯ ಒದಗಿಸುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ನೆರವು ದೊರೆತಿದೆ.

ಇದರಿಂದ ಭಾರತದಲ್ಲಿ ಕೋವಿಡ್ -19 ತುರ್ತು ಪ್ರತಿಕ್ರಿಯೆಗಾಗಿ ಬ್ಯಾಂಕಿನ ಒಟ್ಟು ಬದ್ದತೆ 2 ಬಿಲಿಯನ್ ಡಾಲರಿಗೇರಿದೆ. ಕಳೆದ ತಿಂಗಳು ಭಾರತದ ಆರೋಗ್ಯ ವಲಯವನ್ನು ಬೆಂಬಲಿಸಲು ತಕ್ಷಣಕ್ಕೆ 1 ಬಿಲಿಯನ್ ಡಾಲರ್ ಬೆಂಬಲವನ್ನು ಪ್ರಕಟಿಸಲಾಗಿತ್ತು.

ಹೊಸ ಬೆಂಬಲವನ್ನು ಎರಡು ಹಂತಗಳಲ್ಲಿ ಒದಗಿಸಲಾಗುವುದು. -2020 ಹಣಕಾಸು ವರ್ಷದಲ್ಲಿ ತಕ್ಷಣಕ್ಕೆ 750 ಮಿಲಿಯನ್ ಡಾಲರ್ ಮಂಜೂರು ಮತ್ತು ಹಣಕಾಸು ವರ್ಷ 2021 ಕ್ಕೆ 250 ಮಿಲಿಯನ್ ಡಾಲರ್ ಒದಗಿಸಲಾಗುವುದು.

ಒಪ್ಪಂದಕ್ಕೆ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಮೀರ್ ಕುಮಾರ್ ಖರೆ ಅವರು ಭಾರತ ಸರಕಾರದ ಪರವಾಗಿ ಮತ್ತು ವಿಶ್ವ ಬ್ಯಾಂಕ್ ಪರವಾಗಿ ಕಂಟ್ರಿ ಡೈರೆಕ್ಟರ್ ಶ್ರೀ ಜುನೈದ್ ಅಹಮದ್ ಅಂಕಿತ ಹಾಕಿದರು.

ಹಾಲಿ ಮತ್ತು ಭವಿಷ್ಯದ ಬಿಕ್ಕಟ್ಟಿನಲ್ಲಿ ಅಪಾಯದ ಸಂಭಾವ್ಯತೆ ಇರುವ ಮನೆ ಮಂದಿಯನ್ನು ಸಾಮಾಜಿಕ ರಕ್ಷಣಾ ವ್ಯವಸ್ಥೆಯಡಿ ತಂದು ಅವರಿಗೆ ಸಕಲ ವ್ಯವಸ್ಥೆ ಒದಗಿಸುವುದು ಅವಶ್ಯ. ಕಾರ್ಯಕ್ರಮವು ದೇಶಾದ್ಯಂತ ಅಪಾಯಕ್ಕೀಡಾಗುವ ಸಂಭಾವ್ಯತೆಯ ಗುಂಪುಗಳು ಇನ್ನಷ್ಟು ಸಾಮಾಜಿಕ ಪ್ರಯೋಜನಗಳನ್ನು ನೇರವಾಗಿ ಪಡೆಯಲು ಭಾರತದ ಸಾಮಾಜಿಕ ರಕ್ಷಣಾ ವ್ಯವಸ್ಥೆಯಡಿ ಅವಕಾಶ ಒದಗಿಸುತ್ತದೆ ಎಂದು ಶ್ರೀ ಖರೆ ಹೇಳಿದರು.

ಮೊದಲ ಹಂತದ ಕಾರ್ಯಾಚರಣೆ ದೇಶಾದ್ಯಂತ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ (ಪಿ.ಎಂ.ಜಿ.ಕೆ.ವೈ.) ಅಡಿಯಲ್ಲಿ ಅನುಷ್ಟಾನಿಸಲಾಗುವುದು. ಇದರಿಂದ ತಕ್ಷಣವೇ ನಗದು ವರ್ಗಾವಣೆ ಮತ್ತು ಆಹಾರ ಪ್ರಯೋಜನಗಳನ್ನು ಈಗಾಗಲೇ ಇರುವ ರಾಷ್ಟ್ರೀಯ ವೇದಿಕೆಗಳು ಮತ್ತು ಕಾರ್ಯಕ್ರಮಗಳಾದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿ.ಡಿ.ಎಸ್.) ಮತ್ತು ನೇರ ನಗದು ವರ್ಗಾವಣೆ (ಡಿ.ಬಿ.ಟಿ.) ಗಳನ್ನು ಬಳಸಿ ವಿಸ್ತರಿಸಲು ನೆರವಾಗಲಿದೆ. ಕೋವಿಡ್ -19 ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಅವಶ್ಯ ಕಾರ್ಯಕರ್ತರ ಸಾಮಾಜಿಕ ಸುರಕ್ಷೆ , ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವ ಗುಂಪುಗಳಿಗೆ ಪ್ರಯೋಜನ , ಅದರಲ್ಲೂ ನಿರ್ದಿಷ್ಟವಾಗಿ ವಲಸೆಗಾರರು ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು, ಪಿ.ಎಂ.ಜಿ.ಕೆ.ವೈ. ವ್ಯಾಪ್ತಿಯಿಂದ ಹೊರಗಿದ್ದುಕೊಂಡು ಅತ್ಯಂತ ಅಪಾಯ ಎದುರಿಸುತ್ತಿರುವವರಿಗೆ ಇದು ಅತ್ಯಂತ ಬಲಿಷ್ಟವಾದ ಸಾಮಾಜಿಕ ಸುರಕ್ಷೆಯನ್ನು ಒದಗಿಸುತ್ತದೆ. ಎರಡನೆ ಹಂತದಲ್ಲಿ ಕಾರ್ಯಕ್ರಮ ಸಾಮಾಜಿಕ ಸುರಕ್ಷಾ ಪ್ಯಾಕೇಜನ್ನು ಇನ್ನಷ್ಟು ಆಳಕ್ಕೆ ಒಯ್ಯುತ್ತದೆ. ಹೆಚ್ಚುವರಿ ನಗದು ಮತ್ತು ಸ್ಥಳೀಯ ಆವಶ್ಯಕತೆಗಳಿಗೆ ಅನುಗುಣವಾಗಿ ಇತರ ರೂಪಗಳಲ್ಲಿ ಪ್ರಯೋಜನಗಳನ್ನು ರಾಜ್ಯ ಸರಕಾರಗಳ ಮೂಲಕ ವಿಸ್ತರಿಸಲಾಗುತ್ತದೆ ಹಾಗು ಸಾಮಾಜಿಕ ಸುರಕ್ಷಾ ವಿತರಣಾ ವ್ಯವಸ್ಥೆ ವ್ಯಾಪಕಗೊಳ್ಲುತ್ತದೆ.

ಸಾಮಾಜಿಕ ಸುರಕ್ಷೆ ಒಂದು ಸಂಕೀರ್ಣ ಹೂಡಿಕೆ , ಯಾಕೆಂದರೆ ಭಾರತದ ಜನಸಂಖ್ಯೆಯ ಅರ್ಧದಷ್ಟು ಜನ ದಿನಕ್ಕೆ ಡಾಲರ್ 3 ಕ್ಕಿಂತ ಕಡಿಮೆ ಆದಾಯ ಹೊಂದಿದವರಾಗಿದ್ದಾರೆ. ಮತ್ತು ಅವರು ಬಡತನ ರೇಖೆಗೆ ನಿಕಟವಾಗಿದ್ದಾರೆ. ಭಾರತದ 90 ಶೇಖಡಾ ಕಾರ್ಮಿಕ ಪಡೆ ಅನೌಪಚಾರಿಕ ವಲಯದಲ್ಲಿ ಉದ್ಯೋಗಿಯಾಗಿದೆ, ಅವರಿಗೆ ಗಮನಿಸಬಹುದಾದ ಉಳಿತಾಯ ಇಲ್ಲ ಮತ್ತು ಕೆಲಸದ ಸ್ಥಳದಲ್ಲಿ ಸಾಮಾಜಿಕ ಸುರಕ್ಷಾ ಪ್ರಯೋಜನಗಳಾದ ವೇತನ ಸಹಿತ ಅನಾರೋಗ್ಯ ರಜೆ ಅಥವಾ ಸಾಮಾಜಿಕ ವಿಮಾ ಸವಲತ್ತುಗಳ ಲಭ್ಯತೆ ಇಲ್ಲ. ಪ್ರತೀ ವರ್ಷ ಕೆಲಸಕ್ಕಾಗಿ ರಾಜ್ಯಗಳ ಗಡಿಗಳನ್ನು ದಾಟಿ ಹೋಗುವ ಸುಮಾರು 9 ಮಿಲಿಯನ್ನಿನಷ್ಟು ವಲಸೆಗಾರರೂ ಬಹಳ ದೊಡ್ಡ ಅಪಾಯದಲ್ಲಿರುತ್ತಾರೆ, ಯಾಕೆಂದರೆ ಭಾರತದಲ್ಲಿರುವ ಸಾಮಾಜಿಕ ನೆರವಿನ ಕಾರ್ಯಕ್ರಮಗಳು ರಾಜ್ಯದೊಳಗಿನ ನಿವಾಸಿಗಳಿಗೆ ಮಾತ್ರವೇ ಸೌಲಭ್ಯಗಳನ್ನು ಒದಗಿಸುತ್ತವೆ. ರಾಜ್ಯಗಳ ಗಡಿಗಳನ್ನು ದಾಟಿ ಲಭ್ಯವಾಗುವಂತಹ ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯಬಹುದಾದಂತಹ ಪ್ರಯೋಜನಗಳು ಇದರಲ್ಲಿ ಅಡಕವಾಗಿಲ್ಲ. ಬಹಳ ಮುಖ್ಯವಾಗಿ ನಗರೀಕರಣಗೊಳ್ಳುತ್ತಿರುವ ಭಾರತದ ನಗರಗಳಲ್ಲ್ಲಿ ಮತ್ತು ಪಟ್ಟಣಗಳಲ್ಲಿ ಗುರಿ ಕೇಂದ್ರಿತ ಬೆಂಬಲ ಅವಶ್ಯವಾಗಿದೆ. ಯಾಕೆಂದರೆ ಭಾರತದ ದೊಡ್ಡ ಸಾಮಾಜಿಕ ಸುರಕ್ಷಾ ಕಾರ್ಯಕ್ರಮಗಳು ಗ್ರಾಮೀಣ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡಿವೆ.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕಕ್ಕೆ ಜಗತ್ತಿನಾದ್ಯಂತ ಪ್ರತಿಕ್ರಿಯೆ ಸರಕಾರಗಳು ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ಗಳನ್ನು ಅಭೂತಪೂರ್ವ ರೀತಿಯಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದೆ. ಕ್ರಮಗಳು ವೈರಸ್ ಹರಡುವಿಕೆಯನ್ನು ನಿಧಾನಗೊಳಿಸುವ ಉದ್ದೇಶಗಳನ್ನು ಒಳಗೊಂಡಿವೆಯಾದರೂ ಆರ್ಥಿಕತೆ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರಿವೆ. ವಿಶೇಷವಾಗಿ ಅನೌಪಚಾರಿಕ ವಲಯ ಇದರಿಂದ ಬಹಳ ತೊಂದರೆಗೆ ಒಳಗಾಗಿದೆ. ವಿಶ್ವದ ಅತ್ಯಂತ ಧೀರ್ಘ ಲಾಕ್ ಡೌನ್ ಜಾರಿಯಲ್ಲಿರುವ ಭಾರತ ಸಮಸ್ಯೆಗಳಿಗೆ ಹೊರತಾಗಿಲ್ಲ. ಹಿನ್ನೆಲೆಯಲ್ಲಿ ನಗದು ವರ್ಗಾವಣೆಗಳು ಮತ್ತು ಆಹಾರ ಪ್ರಯೋಜನಗಳು ಬಡವರಿಗೆ ಮತ್ತು ಅಪಾಯಕ್ಕೀಡಾಗುವ ಸಂಭವ ಇರುವ ಗುಂಪುಗಳಿಗೆ ಆರ್ಥಿಕತೆ ಪುನಃಶ್ಚೇತನಗೊಳ್ಳುವವರೆಗೆ ಸುರಕ್ಷಾ ಸೇತುವೆಯಾಗಿರುತ್ತವೆ.

ಕಾರ್ಯಕ್ರಮವು ಭಾರತದ ಸುರಕ್ಷಾ ಜಾಲಗಳ ಕಾರ್ಯಕ್ರಮಗಳ ವಿತರಣೆಯನ್ನು ಬಲಿಷ್ಟಗೊಳಿಸುವಂತಹ ವ್ಯವಸ್ಥೆಯೊಂದನ್ನು ರೂಪಿಸಲಿದೆ.

  • 460 ಕ್ಕೂ ಅಧಿಕ ಭಾಗಗಳಾಗಿ ಹಂಚಿ ಹೋಗಿರುವ ಸಾಮಾಜಿಕ ರಕ್ಷಣಾ ಯೋಜನೆಗಳನ್ನು ಒಂದು ಸಮಗ್ರ ವ್ಯವಸ್ಥೆಯಡಿ ತರಲು ಭಾರತಕ್ಕೆ ಸಹಾಯ ಮಾಡುತ್ತದೆ. ಮತ್ತು ರಾಜ್ಯಗಳಲ್ಲಿಯ ವೈವಿಧ್ಯಮಯ ಆವಶ್ಯಕತೆಗಳಿಗೆ ಅನುಗುಣವಾಗಿ ಇದು ಹೊಂದಾಣಿಕೆಯಾಗುವಂತೆ ರೂಪಿತವಾಗುತ್ತದೆ ಹಾಗು ತ್ವರಿತವಾಗಿ ಲಭ್ಯವಾಗುತ್ತದೆ.
  • ಇದು ದೇಶದ ಯಾವ ಭಾಗದಲ್ಲಿ ಬೇಕಾದರೂ ದೊರೆಯುವಂತಹ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ. ಎಲ್ಲರಿಗೂ ಆಹಾರ, ಸಾಮಾಜಿಕ ವಿಮಾ ಸವಲತ್ತು ಮತ್ತು ಎಲ್ಲರಿಗೂ ನಗದು ಬೆಂಬಲವನ್ನು ವಲಸೆಗಾರರೂ ಒಳಗೊಂಡಂತೆ ನಗರ ಬಡವರಿಗೆ ಒದಗಿಸುತ್ತದೆ. ಮತ್ತು
  • ಭಾರತದ ಸಾಮಾಜಿಕ ಸುರಕ್ಷಾ ವ್ಯವಸ್ಥೆಯನ್ನು ಗ್ರಾಮೀಣ ಆದ್ಯತೆಯಿಂದ ಇಡೀ ರಾಷ್ಟ್ರವೇ ಒಂದು ಎಂಬ ಪರಿಗಣನೆಯೊಂದಿಗೆ ನಗರದ ಬಡವರ ಆವಶ್ಯಕತೆಗಳನ್ನು ಗಮನಿಸುತ್ತದೆ.

ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಈಗಿರುವ ಸಾಮಾಜಿಕ ಸುರಕ್ಷಾ ವ್ಯವಸ್ಥೆಗಳಲ್ಲಿಯ ಅಂತರವನ್ನು ಮುನ್ನೆಲೆಗೆ ತಂದಿದೆ ಎಂದ ಶ್ರೀ ಅಹ್ಮದ್ ಕಾರ್ಯಕ್ರಮವು ರಾಜ್ಯಗಳ ಗಡಿಯನ್ನು ದಾಟಿ ಗ್ರಾಮೀಣ ಮತ್ತು ನಗರ ಜನತೆಗೆ ಲಭ್ಯವಾಗುವ ಬಲಿಷ್ಟ ವಿತರಣಾ ವೇದಿಕೆ ರೂಪಿಸುವ ನಿಟ್ಟಿನಲ್ಲಿ ಭಾರತ ಸರಕಾರದ ಪ್ರಯತ್ನಗಳನ್ನು ಬೆಂಬಲಿಸಲಿದೆ. ದೇಶದ ಈಗಿರುವ ಸುರಕ್ಷಾ ಜಾಲಗಳಾದ ಪಿ.ಡಿ.ಎಸ್. , ಡಿಜಿಟಲ್ ಮತ್ತು ಬ್ಯಾಂಕಿಂಗ್ ಮೂಲಸೌಕರ್ಯ, ಮತ್ತು ಆಧಾರ್ ಗಳ ವಾಸ್ತುವಿನ ಆಧಾರದ ಮೇಲೆ 21 ನೇ ಶತಮಾನದ ಭಾರತದ ಆವಶ್ಯಕತೆಗಳಿಗಾಗಿ ಸಮಗ್ರ ಸಾಮಾಜಿಕ ಸುರಕ್ಷಾ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಬಹಳ ಮುಖ್ಯವಾಗಿ ವ್ಯವಸ್ಥೆಯು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ ಮತ್ತು ರಾಜ್ಯಗಳು ಅವುಗಳ ಸಂದರ್ಭಗಳಲ್ಲಿ ತ್ವರಿತವಾಗಿ ಮತ್ತು ದಕ್ಷತೆಯಿಂದ ಪ್ರತಿಕ್ರಿಯಿಸಬೇಕಾಗುತ್ತದೆ.

ಡಾಲರ್ 1 ಬಿಲಿಯನ್ ಬದ್ದತೆಯಲ್ಲಿ ತಕ್ಷಣ ಡಾಲರ್ 750 ಮಿಲಿಯನ್ ಹಣವು 2020 ಹಣಕಾಸು ವರ್ಷದಲ್ಲಿ ಲಭಿಸಲಿದೆ. ಇದರಲ್ಲಿ 550 ಮಿಲಿಯನ್ ಡಾಲರ್ ವಿಶ್ವ ಬ್ಯಾಂಕಿನ ಸಾಲ ನೀಡಿಕೆ ವಿಭಾಗವಾದ ಅಂತಾರಾಷ್ಟ್ರೀಯ ಅಭಿವೃದ್ದಿ ಸಂಘಟನೆ (.ಡಿ..) ಯಿಂದ ಸಾಲವಾಗಿ ದೊರೆಯಲಿದೆ ಮತ್ತು ಡಾಲರ್ 200 ಮಿಲಿಯನ್ ಮರು ನಿರ್ಮಾಣ ಮತ್ತು ಅಭಿವೃದ್ದಿಗಾಗಿರುವ ಅಂತಾರಾಷ್ಟ್ರೀಯ ಬ್ಯಾಂಕಿನಿಂದ (.ಬಿ.ಆರ್.ಡಿ.) ಲಭಿಸಲಿದೆ. ಐದು ವರ್ಷದ ಗ್ರೇಸ್ ಅವಧಿ ಸಹಿತ ಇದರ ಪಕ್ವತೆಯ ಅಂತಿಮ ಅವಧಿ 18.5 ವರ್ಷಗಳು. ಉಳಿದ 250 ಮಿಲಿಯನ್ ಡಾಲರ್ 2020 ಜೂನ್ 30 ಬಳಿಕ ಲಭಿಸಲಿದೆ. ಮತ್ತು ಇದಕ್ಕೆ .ಬಿ.ಆರ್.ಡಿ. ನಿಬಂಧನೆಗಳು ಅನ್ವಯವಾಗುತ್ತವೆ. ಕಾರ್ಯಕ್ರಮವನ್ನು ಭಾರತ ಸರಕಾರದ ಹಣಕಾಸು ಸಚಿವಾಲಯ ಅನುಷ್ಟಾನಿಸುತ್ತದೆ.

***



(Release ID: 1625001) Visitor Counter : 232