ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ “ಮಾನಸಿಕ – ಸಾಮಾಜಿಕ ಪರಿಣಾಮಗಳು ಹಾಗೂ ಅದನ್ನು ನಿಭಾಯಿಸುವುದು ಹೇಗೆ” ಎಂಬುದರ ಕುರಿತು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ  ಏಳು ಶಿರ್ಷಿಕೆಗಳನ್ನು ಇ-ಲಾಂಚ್ ಮಾಡಿದೆ

Posted On: 15 MAY 2020 7:26PM by PIB Bengaluru

ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ ಮಾನಸಿಕ ಸಾಮಾಜಿಕ ಪರಿಣಾಮಗಳು ಹಾಗೂ ಅದನ್ನು ನಿಭಾಯಿಸುವುದು ಹೇಗೆಎಂಬುದರ ಕುರಿತು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ  ಏಳು ಶಿರ್ಷಿಕೆಗಳನ್ನು ಇ-ಲಾಂಚ್ ಮಾಡಿದೆ

ಕೊರೊನಾ ಅಧ್ಯಯನ ಸರಣಿಯಡಿ ಎನ್ ಬಿ ಟಿ ಯಿಂದ ಪ್ರಕಟ

 

ಕೊರೊನಾ ಅಧ್ಯಯನ ಸರಣಿಯಡಿ ಎನ್ ಬಿ ಟಿ ಭಾರತದಿಂದ ಪ್ರಕಟಿಸಲಾದ ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ಲಾಕ್ ಡೌನ್ ನಿಂದ ಮಾನಸಿಕ ಸಾಮಾಜಿಕ ಪರಿಣಾಮಗಳು ಹಾಗೂ ಅದನ್ನು ನಿಭಾಯಿಸುವುದು ಹೇಗೆಎಂಬುದರ ಕುರಿತು ಏಳು ಶಿರ್ಷಿಕೆಗಳ ಮುದ್ರಿತ ಮತ್ತು ಇ ಆವೃತ್ತಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು -ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು ಈ ದಿನಗಳಲ್ಲಿ ವಿಶ್ವ ಎದುರಿಸುತ್ತಿರುವ ಭಯದ ವಾತಾವರಣದಿಂದ ಹೊರಬರಲು ಎನ್ ಬಿ ಟಿ ಗಮನಾರ್ಹ ಮತ್ತು ಸಾಟಿಯಿಲ್ಲದ ಈ ಪುಸ್ತಕಗಳನ್ನು ಹೊರತಂದಿದೆ, ಮತ್ತು ಈ ಪುಸ್ತಕಗಳು ಹೆಚ್ಚಿನ ಜನತೆಗೆ ಮಾನಸಿಕವಾಗಿ ಸದೃಡರಾಗುವುದು ಹೇಗೆ ಎಂಬ ಕುರಿತು ಮಾರ್ಗದರ್ಶಕದಂತೆ ಕೆಲಸ ಮಾಡಲಿವೆ ಎಂದು ಆಶಿಸುತ್ತೇನೆ”, ಎಂದು ಹೇಳಿದರು. ಬಿಡುಗಡೆ ಸಮಾರಂಭದ ನಂತರ ಎನ್ ಬಿ ಟಿ ಅಧ್ಯಯನ ತಂಡದ ಸಂಶೋಧಕರು/ಲೇಖಕರೊಂದಿಗೆ ಇ-ಸಂವಾದವನ್ನು ಏರ್ಪಡಿಸಲಾಗಿತ್ತು.        

https://ci5.googleusercontent.com/proxy/0sFc90oV-uGxgJ7VKETrims3gjTp9I-bIXua25xnkemE3f26K1W1edmnIUb6tjZ-zUx1bTJldt2C8LAPEgNY9zMNEtcivhBZdGJCyRhbXghlcxsjpINb=s0-d-e1-ft#https://static.pib.gov.in/WriteReadData/userfiles/image/image001EZUE.jpg

ಭಾರತೀಯ ರಾಷ್ಟ್ರೀಯ ಪುಸ್ತಕ ಮಂಡಳಿಯನ್ನು ಅದರ ವಿಶೇಷ ಪ್ರಯತ್ನಗಳಿಗೆ ಅಭಿನಂದಿಸಿದ ಶ್ರೀ ನಿಶಾಂಕ್ ಅವರು ಸಂಶೋಧಕರು ಮತ್ತು ಜನರು ಸುಲಭವಾಗಿ ಓದಲು ಅನುಕೂಲವಾಗುವಂತೆ ಈ ಮಹತ್ವಪೂರ್ಣ ವಿಷಯಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದಿಗ್ಧ ಸ್ಥಿತಿಯಲ್ಲಿ ಮುಂದುವರಿದು ಸಾಂಕ್ರಾಮಿಕ ರೋಗದ ವಿರುದ್ಧ ಯೋಧರಂತೆ ಹೋರಾಡಲು ನಮಗೆಲ್ಲರಿಗೂ ಅವಶ್ಯಕವಿರುವ ಮುಂಜಾಗೃತಾ ಮಾನಸಿಕ ಆರೋಗ್ಯ ಎಂಬುದು ಒಂದು ಅವಶ್ಯಕ ವಿಷಯ ವಸ್ತುವಾಗಿದೆ ಎಂದು ಅವರು ಹೇಳಿದರು. “ ಮನ್ ಕಿ ಹಾರೆ ಹಾರ್ ಹೈ, ಮನ್ ಕೆ ಜೀತೆ ಜೀತ್ ಅಂದರೆ ನಮ್ಮ ಮನಸ್ಸು ಮತ್ತು ಮಾನಸಿಕ ಆರೋಗ್ಯ ನಮ್ಮ ಕೃತಿಗಳನ್ನು ನಿರ್ಧರಿಸುತ್ತವೆ ಎಂಬ ಪ್ರಸಿದ್ಧ ಉಕ್ತಿಯನ್ನು ಅವರು ಉಲ್ಲೇಖಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಎನ್ ಬಿ ಟಿ ಅಧ್ಯಕ್ಷರಾದ ಪ್ರೋಫೆಸರ್ ಗೋವಿಂದ್ ಪ್ರಸಾದ್ ಶರ್ಮಾ ನನ್ನ ಆಯಸ್ಸಿನಲ್ಲಿ ನಾನು ವಿಶ್ವವನ್ನು ಬಾಧಿಸಿದ ಅದೆಷ್ಟೋ ಸಾಂಕ್ರಾಮಿಕಗಳನ್ನು ಮತ್ತು ರೋಗಗಳನ್ನು ಕಂಡಿದ್ದೇನೆ, ಆದರೆ ಇಂದು ನಾವು ಎದುರಿಸುತ್ತಿರುವುದು ಸವಾಲಿನ ಸಂಗತಿಯಾಗಿದೆ ಏಕೆಂದರೆ ಇದು ಕೊರೊನಾ ಬಾಧಿತರಲ್ಲದವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಈ ಪುಸ್ತಕಗಳ ಅವಶ್ಯಕತೆ ಬಹಳ ಇದೆ ಮತ್ತು ಇವು ಭಾರತದ ಓದುಗರ ಅವಶ್ಯಕತೆ ಮಾತ್ರವಲ್ಲ ವಿದೇಶೀ ಓದುಗರ ಅವಶ್ಯಕತೆಗಳನ್ನೂ ಪೂರೈಸಲಿವೆ.” ಎಂದು ಹೇಳಿದರು. ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ ಮತ್ತು ಈ ಸಾಂಕ್ರಾಮಿಕ ರೋಗ ಮಕ್ಕಳನ್ನು ಬಾಧಿಸದಂತೆ ಎಲ್ಲರಿಗೂ ಇ ಕಲಿಕೆಯನ್ನು ಖಚಿತಪಡಿಸಿದ ಮಾನ್ಯ ಸಚಿವರಿಗೆ ಪ್ರೊ ಶರ್ಮಾ ಧನ್ಯವಾದ ತಿಳಿಸಿದರು.            

https://ci3.googleusercontent.com/proxy/MkYYjgMR3nlv_4Ug9otPoEhbVa9h970Zf5wtkcTeEdZKF3eS7NBMORc22xM-P7CkQ_7-vZ9XcrjG2hb9XK2s1G5Wmnt2XJ2DBcyEJk3qQDT_YsIlVNWc=s0-d-e1-ft#https://static.pib.gov.in/WriteReadData/userfiles/image/image002GZ4V.jpg

ಎನ್ ಬಿ ಟಿ ನಿರ್ದೇಶಕರಾದ ಶ್ರೀ ಯುವರಕ್ ಮಲಿಕ್ ಅವರ ನೇತೃತ್ವದಲ್ಲಿ ಈ ಸಂಪೂರ್ಣ ಯೋಜನೆಯನ್ನು ಪರಿಕಲ್ಪಿಸಿ ಕಾರ್ಯರೂಪಕ್ಕೆ ತರಲಾಯಿತು. ಅವರು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವರನ್ನು ಅವರ ನಿರಂತರ ಮಾರ್ಗದರ್ಶನಕ್ಕೆ ಧನ್ಯವಾದ ಸಲ್ಲಿಸಿದರು ಹಾಗೂ ಸಂಪೂರ್ಣ ಎನ್ ಬಿ ಟಿ ತಂಡ ಮತ್ತು ದಾಖಲೆಯ ನಾಲ್ಕು ವಾರಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಸಹಕರಿಸಿದ ಸಂಶೋಧಕರು ಮತ್ತು ಚಿತ್ರಲೇಖಕರನ್ನು ಅಭಿನಂದಿಸಿದರು. ಕರೊನಾ ನಂತರದ ಅವಧಿಯಲ್ಲಿ ಓದುಗರ ಅವಶ್ಯಕತೆಗಳನ್ನು ಪೂರೈಸಲು ಎನ್ ಬಿ ಟಿ ಸೂಕ್ತ ಕಾಲಾವಧಿಯಲ್ಲಿ ಮತ್ತಷ್ಟು ಹೊಸ ವಿಷಯಗಳನ್ನು ಹೊರತರಲಾಗುವುದ ಎಂದೂ ಅವರು ಹೇಳಿದರು.

 

ತಂತ್ರಜ್ಞಾನ ಸಹಾಯದಿಂದ ತಂತಮ್ಮ ಮನೆಗಳಿಂದಲೇ ಈ ಪುಸ್ತಕದ ಕೆಲಸ ಕಾರ್ಯಗಳನ್ನು ಪೂರೈಸಿದಂತಹ ಅನುಭವವನ್ನು ಅಧ್ಯಯನ ತಂಡದ ಸದಸ್ಯರು ಮಾನವ ಸಂಪನ್ಮೂಲ ಸಚಿವರೊಂದಿಗೆ ಹಂಚಿಕೊಂಡರು. ಇಂದಿನ ಪರಿಸ್ಥಿತಿಯಲ್ಲಿ ಈ ಪುಸ್ತಕಗಳು ಅತ್ಯವಶ್ಯಕವಾಗಿರುವದನ್ನು ಒತ್ತಿ ಹೇಳಿದ ತಂಡ, ತಮಗೂ ಸಹ ಇದೊಂದು ಪ್ರಯೋಗಾತ್ಮಕ ಅನುಭವವಾಗಿತ್ತು ಎಂದು ತಿಳಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಯನ ತಂಡದ ಸದಸ್ಯರಾದ ಮತ್ತು ನುರಿತ ಮನಃಶಾಸ್ತ್ರಜ್ಞರಾದ ಡಾ. ಜಿತೇಂದ್ರ ನಾಗ್ಪಾಲ್ ಮುಂಬರುವ ದಿನಗಳಲ್ಲಿ ಈ ಪುಸ್ತಕಗಳು ಮಾನಸಿಕ ಆರೋಗ್ಯ ಕುರಿತ ಸಂಶೋಧನೆ ಮತ್ತು ಸಮಾಲೋಚನೆಗೆ ಮಹತ್ವದ ಸೇರ್ಪಡೆಯಾಗಿಲಿವೆ, ಏಕೆಂದರೆ, ಭಾರತದಲ್ಲಿ ಮುಂಜಾಗೃತಾ ಮಾನಸಿಕ ಆರೋಗ್ಯದ ಮೇಲೆ ಆಧರಿಸಿದ ಸರಣಿ ಪುಸ್ತಕಳು ಬಿಡುಗಡೆಗೊಂಡಿರುವುದು ಬಹಳ ಅಪರೂಪವಾಗಿದೆ’. ಶ್ರೀಮತಿ ಮೀನಾ ಅರೋರಾ, ಲೆಫ್ಟೆನೆಂಟ್ ಕೊಲೊನೆಲ್. ತರುಣ್ ಉಪ್ಪಲ್, ಡಾ. ಹರ್ಷೀತಾ, ಮಿಸ್. ರೆಖಾ ಚೌಹಾನ್, ಮಿಸ್. ಸೋನಿ ಸಿಧು ಮತ್ತು ಮಿಸ್ ಅಪರಾಜಿತಾ ದೀಕ್ಷಿತ್ ಸಭೆಯಲ್ಲಿ ಹಾಜರಿದ್ದ ಇತರ ಸದಸ್ಯರಾಗಿದ್ದಾರೆ

ಎನ್ ಬಿ ಟಿ ಸಂಪಾದಕರು ಮತ್ತು ಈ ಸರಣಿಯ ಯೋಜನಾ ಮುಖ್ಯಸ್ಥರೂ ಆಗಿರುವ ಶ್ರೀ ಕುಮಾರ್ ವಿಕ್ರಮ್ ಕೂಡಾ ಲೇಖಕರಿಗೆ ಮತ್ತು ಚಿತ್ರಕಾರರಿಗೆ ಧನ್ಯವಾದ ತಿಳಿಸಿದರು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಸಾಮಾನ್ಯ ಓದುಗರಿಗಾಗಿ ಸಕಾಲದಲ್ಲಿ ಈ ಪ್ರತಿಗಳನ್ನು ಹೊರತರುವಲ್ಲಿ, ಸಂಪಾದಕೀಯ, ಕಲೆ ವಿನ್ಯಾಸ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಸಂಪರ್ಕ, ಮಾರಾಟ ವಿಭಾಗದ 30 ಕ್ಕೂ ಹೆಚ್ಚು ಸದಸ್ಯರ ತಂಡದೊಂದಿಗೆ, ಈ ಯೋಜನೆಗಾಗಿ ಕೆಲಸ ನಿರ್ವಹಿಸಿದ ತಮ್ಮ ಅನುಭವವನ್ನು ಹಂಚಿಕೊಂಡರು. ರಾಷ್ಟ್ರೀಯ ಸಂಸ್ಥೆಯಾಗಿ ಇಂತಹ ಪುಸ್ತಕಗಳನ್ನು ಹೊರತರುವುದು ಮತ್ತು ಪ್ರಚಾರ ಅತ್ಯಂತ ಹೆಚ್ಚಿನ ಮಹತ್ವ ಪಡೆದಿದೆ. ಏಕೆಂದರೆ, ಸುವ್ಯವಸ್ಥಿತ ಮಾಹಿತಿಯನ್ನು ಪುಸ್ತಕಗಳ ರೂಪದಲ್ಲಿ ನೀಡುವುದು ಓದುಗರ ಮೇಲೆ ಚಿರಕಾಲ ಪ್ರಭಾವವನ್ನು ಉಳಿಸುತ್ತದೆ ಮತ್ತು ಈ ಉಪಕ್ರಮಗಳ ಮೂಲಕ ಮಂಡಳಿ ಇದನ್ನು ಒದಗಿಸುತ್ತಿದೆ’. ಎಂದು ಅವರು ಒತ್ತಿ ಹೇಳಿದರು.

ಕೊರೊನಾ ನಂತರದ ಓದುಗರ ಅವಶ್ಯಕತೆಗಾಗಿ ಎಲ್ಲ ವಯೋಮಾನದವರು ಓದಲು ಸೂಕ್ತವಾದ ಓದುವ ವಿಷಯವಸ್ತುಗಳನ್ನು ದಾಖಲಿಸುವುದು ಮತ್ತು ಒದಗಿಸುವುದಕ್ಕಾಗಿ ಎನ್ ಬಿ ಟಿ ಯಿಂದ ವಿಶೇಷವಾಗಿ ಪರಿಕಲ್ಪಿಸಲಾದ ಕೊರೊನಾ ಅಧ್ಯಯನ ಸರಣಿ ಇದಾಗಿದೆ. ಪ್ರಥಮ ಉಪ-ಸರಿಣಿಯ ಪುಸ್ತಕಗಳಲ್ಲಿ ಮಾನಸಿಕ ಸಾಮಾಜಿಕ ಪರಿಣಾಮಗಳು ಹಾಗೂ ಅದನ್ನು ನಿಭಾಯಿಸುವುದು ಹೇಗೆಎಂಬುದರ ಕುರಿತಾದ ಅಧ್ಯಯನವನ್ನು ಎನ್ ಬಿ ಟಿ ರಚಿಸಿದ ಏಳು ಮನಃಶಾಸ್ತ್ರಜ್ಞರು ಮತ್ತು ಆಪ್ತ ಸಮಾಲೋಚಕರ ತಂಡದಿಂದ ಸಿದ್ಧಪಡಿಸಲಾಗಿದೆ

ಆನ್ ಲೈನ್ ನಲ್ಲಿ, ಭಾರತೀಯ ರಾಷ್ಟ್ರೀಯ ಪುಸ್ತಕ ಮಂಡಳಿ ನಿರ್ವಹಿಸುವ ಜಾಲತಾಣಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಮೂಲಕ ಹರಿಬಿಡಲಾದ ಪ್ರಶ್ನಾವಳಿಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ, ಸಮಾಜದ ಏಳು ವಿಭಿನ್ನ ವಿಭಾಗಗಳ ಜನರ ವ್ಯಕ್ತಿಗತ ಸಂದರ್ಶನ, ಪ್ರಕರಣಗಳ ಅಧ್ಯಯನ ಮತ್ತು ಸಾಮಾಜಿಕ ದೃಷ್ಟಿಕೋನದ ಮೇಲೆ ಮಾಣಸಿಕ-ಸಾಮಾಜಿಕ ಪರಿಣಾಮಗಳ ವಿವಿಧ ಆಯಾಮಗಳನ್ನು ಮತ್ತು ಅಧ್ಯಯನವನ್ನು ಆಧರಿಸಿ ಈ ಶೀರ್ಷಿಕೆಗಳನ್ನು ಬಿಡುಗಡೆಮಾಡಲಾಗಿದೆ.

27 ಮಾರ್ಚ್ ನಿಂದ 1 ಮೇ 2020 ರ ಮಧ್ಯೆ ನಡೆಸಿದ ಮತ್ತು ವಿಶ್ಲೇಷಿಸಿದ  ಈ ಅಧ್ಯಯನದಿಂದ ಸೋಂಕಿನ ಭಯ ಆತಂಕದ ದೊಡ್ಡ ಮೂಲವೆಂದು  ಮತ್ತು ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದೂ ತಿಳಿದುಬಂದಿದೆ. ದೈಹಿಕ ಆರೋಗ್ಯ ಮತ್ತು ಸಾಮಾಜಿಕ-ಆರ್ಥಿಕತೆಯ ಹೊಂದಾಣಿಕೆಯೊಂದಿಗೆ  ಕೊರೊನಾ ನಂತರದ ಸಮಾಜ, ಮೊದಲಿನಂತಾಗಲು ಮತ್ತು ಉತ್ತಮವಾಗಿ ಹೊಂದಿಕೊಳ್ಳುವಂತೆ ಸಿದ್ಧಗೊಳಿಸಲು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ, ಮಾನಸಿಕ ಆರೋಗ್ಯ ನಿರೋಧಕ ಅಂಶಕ್ಕೆ ಪುಷ್ಠಿ ನೀಡಲು ದೀರ್ಘಾವಧಿಯ ಕಾರ್ಯತಂತ್ರವಾಗಿ ಅಧ್ಯಯನ ತಂಡ ಶಿಫಾರಸ್ಸು ಮಾಡಿದೆ. ಕೆಲವು ಸುಂದರ ಚಿತ್ರಗಳೊಂದಿಗೆ ಜೀವ ಪಡೆದ ಈ ಪುಸ್ತಕಗಳು ಸಾಂಕ್ರಾಮಿಕ ರೋಗ ಮತ್ತು ಲಾಕ್ ಡೌನ್ ನಿಂದ ಉದ್ಭವಿಸಬಹುದಾದ ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಬಹಳ ಮಹತ್ವದ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತವೆ.

ಒಳಗೊಂಡ ಶಿರ್ಷಿಕೆಗಳು, ವಲ್ನರೆಬಲ್ ಇನ್ ಆಟಮ್ : ಅಂಡರ್ ಸ್ಟ್ಯಾಂಡಿಂಗ್ ದ ಎಲ್ಡರ್ಲಿ (ಮುಖ್ಯ ಸಂಶೋಧಕರು: ಜಿತೇಂದ್ರ ನಾಗ್ಪಾಲ್ ಮತ್ತು ಅಪರಾಜಿತಾ ದೀಕ್ಷಿತ್: ಚಿತ್ರಕಾರರು : ಅಲಾಯ್ ಘೋಶಾಲ್), ದಿ ಫ್ಯೂಚರ್ ಆಫ್ ಸೋಷಿಯಲ್ ಡಿಸ್ಟೆನ್ಸಿಂಗ್ : ನ್ಯೂ ಕಾರ್ಡಿನಲ್ಸ್ ಫಾರ್ ಚಿಲ್ಡ್ರೆನ್, ಅಡೋಲಸೆಂಟ್ಸ್ ಆಂಡ್ ಯೂತ್ (ಮುಖ್ಯ ಸಂಶೋಧಕರು: ಅಪರಾಜಿತಾ ದೀಕ್ಷಿತ್ ಮತ್ತು ರೇಖಾ ಚೌಹಾನ್ : ಚಿತ್ರಕಾರರು : ಪಾರ್ಥಾ ಸೇನ್ ಗುಪ್ತಾ ), ದಿ ಆರ್ಡಿಯಲ್ ಆಫ್ ಬಿಯಿಂಗ್ ಕೊರೊನಾ ವಾರಿಯರ್ಸ್ : ಆನ್ ಅಪ್ರೋಚ್ ಟು ಮೆಡಿಕಲ್ ಆಂಡ್ ಎಸೆನ್ಶಿಯಲ್ ಸರ್ವಿಸ್ ಪ್ರೊವೈಡರ್ಸ್ (ಮುಖ್ಯ ಸಂಶೋಧಕರು: ಮೀನಾ ಅರೋರಾ ಮತ್ತು ಸೋನಿ ಸಿಧು, ಚಿತ್ರಕಾರರು: ಸೌಮ್ಯಾ ಶುಕ್ಲಾ), ನ್ಯೂ ಫ್ರಾಂಟಿಯರ್ಸ್ ಅಟ್ ಹೋಂ : ಆನ್ ಅಪ್ರೋಚ್ ಟು ವುಮೆನ್, ಮದರ್ಸ್ ಅಂಡ್ ಪೇರೆಂಟ್ಸ್ (ಮುಖ್ಯ ಸಂಶೋಧಕರು: ತರುಣ್ ಉಪ್ಪಳ್ ಮತ್ತು ಸೋನಿ ಸಿಧು, ಚಿತ್ರಕಾರರು: ಆರ್ಯಾ ಪ್ರಹರಜ್), ಕಾಟ್ ಇನ್ ಕೊರೊನಾ ಕಾನ್ಫ್ಲಿಕ್ಟ್: ಆನ್ ಅಪ್ರೋಚ್ ಟು ದಿ ವರ್ಕಿಂಗ್ ಪಾಪುಲೇಷನ್ (ಮುಖ್ಯ ಸಂಶೋಧಕರು: ಜಿತೇಂದ್ರ ನಾಗ್ಪಾಲ್ ಮತ್ತು ತರುಣ್ ಉಪ್ಪಳ್, ಚಿತ್ರಕಾರರು: ಫಜ್ರುದ್ದೀನ್), ಮೇಕಿಂಗ್ ಸೆನ್ಸ್ ಆಫ್ ಇಟ್ ಆಲ್: ಅಂಡರ್ಸ್ಟ್ಯಾಂಡಿಂಗ್ ದಿ ಕಾರ್ನರ್ಸ್ ಆಫ್ ಪರ್ಸ್ ನ್ಸ್ ವಿತ್ ಡಿಸ್ ಎಬಿಲಿಟೀಸ್ (ಮುಖ್ಯ ಸಂಶೋಧಕರು: ರೇಖಾ ಚೌಹಾನ್ ಮತ್ತು ಹರ್ಷೀತ, ಚಿತ್ರಕಾರರು: ವಿಕ್ಕಿ ಆರ್ಯ) ಮತ್ತು ಏಲಿಯಿನೇಷನ್ ಅಂಡ್ ರಿಸೈಲಿಸೆನ್ಸ್: ಅಂಡರ್ ಸ್ಟಾಂಡಿಂಗ್ ಕೊರೊನಾ ಅಫೆಕ್ಟೆಡ್ ಫ್ಯಾಮಿಲೀಸ್ (ಮುಖ್ಯ ಸಂಶೋಧಕರು: ಹರ್ಷೀತ ಮತ್ತು ಮೀನಾ ಅರೋರಾ, ಚಿತ್ರಕಾರರು: ನೀತು ಶರ್ಮಾ),

ವಿಷಯದ ಕುರಿತು ಸಾರಾಂಶ ನೀಡುವ ಮತ್ತು ಪುಸ್ತಕಗಳಿಗೆ ಪೂರಕವಾದ ಏಳು ವಿಡಿಯೋಗಳನ್ನು ಸಹ ಬಿಡುಗಡೆ ಮಾಡಲಾಗಿದೆ

 

The titles are available at: NBT Bookshop at Vasant Kunj, New Delhi

ಪುಸ್ತಕಗಳು ಇಲ್ಲಿ ಲಭ್ಯ: ಎನ್ ಬಿ ಟಿ ಪುಸ್ತಕ ಮಳಿಗೆ, ವಸಂತ್ ಕುಂಜ್, ನವದೆಹಲಿ

ಎನ್ ಬಿ ಟಿ ವೆಬ್ ಸ್ಟೋರ್ / ಜಾಲ ತಾಣದ ಮಳಿಗೆ - www.nbtindia.gov.in/cssbooks

ಸಂಪರ್ಕಿಸಿ: +91-8826610174

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ / ಮಾನವ ಸಂಪನ್ಮೂಲಕ್ಕಾಗಿ ಬರೆಯಿರಿ: scoord@nbtindia.gov.in

ಅಂತಾರಾಷ್ಟ್ರೀಯ ವಿತರಣೆಗಾಗಿ ಬರೆಯಿರಿ : scoord@nbtindia.gov.in

ಅಂತಾರಾಷ್ಟ್ರೀಯ ಭಾಷಾ ಹಕ್ಕುಗಳಿಗಾಗಿ ಬರೆಯಿರಿ: nbtrightscell[at]gmail[dot]com

 

***



(Release ID: 1624410) Visitor Counter : 8206