ಕೃಷಿ ಸಚಿವಾಲಯ
ಲಾಕ್ ಡೌನ್ ಸಂದರ್ಭದಲ್ಲಿ ಬೇಳೆಕಾಳು ಮತ್ತು ಎಣ್ಣೆ ಬೀಜಗಳ ಖರೀದಿ ಮುಂದುವರಿಕೆ
प्रविष्टि तिथि:
13 MAY 2020 6:48PM by PIB Bengaluru
ಲಾಕ್ ಡೌನ್ ಸಂದರ್ಭದಲ್ಲಿ ಬೇಳೆಕಾಳು ಮತ್ತು ಎಣ್ಣೆ ಬೀಜಗಳ ಖರೀದಿ ಮುಂದುವರಿಕೆ
2020-21ರ ಹಿಂಗಾರು ಹಂಗಾಮಿನಲ್ಲಿ ಸುಮಾರು 277 ಲಕ್ಷ ಮೆಟ್ರಿಕ್ ಟನ್ ಗೋಧಿ ಬೆಳೆ ಉತ್ಪತ್ತಿ, ಆ ಪೈಕಿ 269 ಲಕ್ಷ ಮೆಟ್ರಿಕ್ ಟನ್ ಖರೀದಿ
ಲಾಕ್ ಡೌನ್ ವೇಳೆ ಪಿಎಂ ಕಿಸಾನ್ ಅಡಿಯಲ್ಲಿ 9.25 ಕೋಟಿ ರೈತ ಕುಟುಂಬಗಳಿಗೆ 18,500 ಕೋಟಿಗೂ ಅಧಿಕ ಹಣ ವಿತರಣೆ
ಭಾರತ ಸರ್ಕಾರದ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಲವು ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ನಿಗಾ ಇರಿಸಿದ್ದಾರೆ. ಅದರ ಇತ್ತೀಚಿನ ಸ್ಥಿತಿಗತಿ ಕುರಿತ ಮಾಹಿತಿ ಈ ಕೆಳಗಿನಂತಿದೆ.
ಲಾಕ್ ಡೌನ್ ವೇಳೆ ನಾಫೆಡ್ ಮೂಲಕ ಖರೀದಿಸಲಾಗಿರುವ ಬೇಳೆಕಾಳುಗಳ ವಿವರ ಹೀಗಿದೆ.
3.17 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳು(ಚನ್ನಾ)ಅನ್ನು 9 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ಖರೀದಿಸಲಾಗಿದೆ.
3.67 ಲಕ್ಷ ಮೆಟ್ರಿಕ್ ಟನ್ ಸಾಸಿವೆಯನ್ನು ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಗುಜರಾತ್ ಮತ್ತು ಹರಿಯಾಣದಿಂದ ಖರೀದಿಸಲಾಗಿದೆ.
1.86 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು 8 ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ಮತ್ತು ಒಡಿಶಾದಿಂದ ಖರೀದಿಸಲಾಗಿದೆ.
2020-21ರ ಹಿಂಗಾರು ಮಾರುಕಟ್ಟೆ ಹಂಗಾಮಿನಲ್ಲಿ(ಆರ್ ಎಂಎಸ್) ಒಟ್ಟು 277.38 ಲಕ್ಷ ಮೆಟ್ರಿಕ್ ಟನ್ ಗೋಧಿ ಎಫ್ ಸಿಐಗೆ ಬಂದಿದ್ದು, ಅದರಲ್ಲಿ 268.90 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ.
2020-21ರ ಹಿಂಗಾರು ಹಂಗಾಮಿನಲ್ಲಿ 11 ರಾಜ್ಯಗಳಲ್ಲಿ ಒಟ್ಟು 3,208 ಬೇಳೆಕಾಳು ಮತ್ತು ಎಣ್ಣೆ ಬೀಜ ಖರೀದಿ ಕೇಂದ್ರಗಳು ಲಭ್ಯವಿವೆ.
ಪಿಎಂ-ಕಿಸಾನ್
2020ರ ಮಾರ್ಚ್ 24ರಿಂದ ಈವರೆಗೆ ಲಾಕ್ ಡೌನ್ ಸಮಯದಲ್ಲಿ ಸುಮಾರು 9.25 ಕೋಟಿ ರೈತ ಕುಟುಂಬಗಳಿಗೆ ಪ್ರಯೋಜನ ನೀಡಲಾಗಿದ್ದು, ಒಟ್ಟು 18,517 ಕೋಟಿ ರೂ. ಹಣ ಬಿಡುಗಡೆಯಾಗಿದೆ.
***
(रिलीज़ आईडी: 1624193)
आगंतुक पटल : 278