ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಡಾ. ಜಿತೇಂದ್ರ ಸಿಂಗ್ ಅವರು ಕೋವಿಡ್-19 ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗು ಲಡಾಖ್ ನಲ್ಲಿನ ವ್ಯವಸ್ಥೆಗಳು ಮತ್ತು ಜಮ್ಮುವಿಗೆ ನಿಯಮಿತ ರೈಲು ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಪರಿಶೀಲನೆ

Posted On: 12 MAY 2020 6:55PM by PIB Bengaluru

ಡಾ. ಜಿತೇಂದ್ರ ಸಿಂಗ್ ಅವರು ಕೋವಿಡ್-19 ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗು ಲಡಾಖ್ ನಲ್ಲಿನ ವ್ಯವಸ್ಥೆಗಳು ಮತ್ತು ಜಮ್ಮುವಿಗೆ ನಿಯಮಿತ ರೈಲು ಸೇವೆಗಳನ್ನು ಪುನರಾರಂಭಿಸುವ ಬಗ್ಗೆ ಪರಿಶೀಲನೆ

 

ಇತ್ತೀಚಿನ ಕೋವಿಡ್ 19ರ ಪರಿಸ್ಥಿತಿ, ಎರಡು ಕೇಂದ್ರಾಡಳಿತ ಪ್ರದೇಶಗಳಗೆ ಸಿಲುಕಿಹಾಕಿಕೊಂಡಿದ್ದವರ ಆಗಮನ ಮತ್ತು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಬರುವ ಪ್ರಯಾಣಿಕರಿಗೆ ಆಡಳಿತವು ಮಾಡಿರುವ ವ್ಯವಸ್ಥೆಗಳ ಬಗ್ಗೆ ಮತ್ತು ನಾಳೆಯಿಂದ ಜಮ್ಮುವಿಗೆ ನಿಯಮಿತ ರೈಲು ಸೇವೆಗಳನ್ನು ಪುನರಾರಂಭಿಸುವುದರ ಬಗ್ಗೆ ಚರ್ಚಿಸಲು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ (ಡಿಒಎನ್ ಆರ್), ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿ ಕಚೇರಿ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಲ್ಲಾ ಜಿಲ್ಲೆಗಳ ಉಪ ಆಯುಕ್ತರೊಂದಿಗೆ ಮಾತುಕತೆ ನಡೆಸಿದರು.

ಕೋವಿಡ್ 19 ಬಿಕ್ಕಟ್ಟನ್ನು ನಿಯಂತ್ರಿಸಲು ಎರಡು ಕೇಂದ್ರಾಡಳಿತ ಪ್ರದೇಶಗಳು ನಡೆಸಿದ ನಿರಂತರ ಮತ್ತು ಶ್ಲಾಘನೀಯ ಕಾರ್ಯಗಳಿಗಾಗಿ ಸಚಿವರು ಉಪ ಆಯುಕ್ತರುಗಳನ್ನು ಅಭಿನಂದಿಸಿದರು. ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಗಳಿಗಿಂತ ನಿರ್ವಹಣೆ ಉತ್ತಮವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ವಾಸ್ತವವಾಗಿ ಜೆ & ಕೆ ಪ್ರಕರಣಗಳ ಸಂಖ್ಯೆಯ ದ್ವಿಗುಣಗೊಳಿಸುವ ಸಮಯವು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ ಎಂದು ಶ‍್ಲಾಘಿಸಿದರು. ಕೋವಿಡ್19ಕ್ಕಾಗಿ ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಡಾ. ಸಿಂಗ್ ಅವರು, ವಿದ್ಯಾರ್ಥಿಗಳು ಸೇರಿದಂತೆ 50,000 ಕ್ಕೂ ಹೆಚ್ಚು ಜನರು ಕೇಂದ್ರಾಡಳಿತ ಪ್ರದೇಶಗಗಳಿಗೆ ಹಿಂತಿರುಗಿದ್ದಾರೆ ಮತ್ತು ಆಡಳಿತವು ಅವರನ್ನು ಪರೀಕ್ಷಿಸುವ, ಸಂಪರ್ಕತಡೆಗೆ ವ್ಯವಸ್ಥೆ ಮಾಡಿ ಮತ್ತು ಅವರನ್ನು ಮನೆಗೆ ಕಳುಹಿಸುವ ಉತ್ತಮ ಕೆಲಸವನ್ನು ಮಾಡಿದೆ ಎಂದು ಹೇಳಿದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ವಿವಿಧ ದಿನಗಳಲ್ಲಿ ವಿವಿಧ ಸಮಯಗಳಲ್ಲಿ ವಿವಿಧ ಅಂಗಡಿಗಳನ್ನು ತೆರೆಯುವ ಮೂಲಕ ಮಾರುಕಟ್ಟೆಗಳನ್ನು ಹಂತಹಂತವಾಗಿ ಆರಂಭಿಸುವಂತೆ ಸಚಿವರು ತಿಳಿಸಿದರು. ನಾಗರಿಕರ ಸುರಕ್ಷತೆಗಾಗಿ.ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಅದರ ಬಳಕೆ ಕುರಿತು ಆರೋಗ್ಯ ಸಚಿವಾಲಯದ ಸೂಚನೆಗಳನ್ನು ಸಚಿವರು ಪುನರುಚ್ಚರಿಸಿದರು.

***



(Release ID: 1623456) Visitor Counter : 186