ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ಪ್ರಯಾಣಿಕರ ರೈಲು ಸೇವೆ 2020ರ ಮೇ 12ರಿಂದ ಜಾರಿಗೆ ಬರುವಂತೆ ಭಾಗಶಃ ಹಂತ ಹಂತವಾಗಿ ಆರಂಭ

Posted On: 11 MAY 2020 4:25PM by PIB Bengaluru

ಭಾರತೀಯ ರೈಲ್ವೆಯಿಂದ ಪ್ರಯಾಣಿಕರ ರೈಲು ಸೇವೆ 2020 ಮೇ 12ರಿಂದ ಜಾರಿಗೆ ಬರುವಂತೆ ಭಾಗಶಃ ಹಂತ ಹಂತವಾಗಿ ಆರಂಭ

ವಿಶೇಷ ರೈಲುಗಳ 15 ಜೋಡಿ (30 ರೈಲು)ಗಳು ಕಾರ್ಯನಿರ್ವಹಣೆ

ರೈಲುಗಳಿಂದ ಶ್ರಮಿಕ್ ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿ ಸೇವೆ

ಪ್ರಸ್ತುತ ಆರಂಭವಾಗುತ್ತಿರುವ ವಿಶೇಷ ರೈಲುಗಳಲ್ಲಿ ಕೇವಲ ಹವಾನಿಯಂತ್ರಿತ ದರ್ಜೆ ಅಂದರೆ ಮೊದಲು, ಎರಡನೇ ಹಾಗೂ ತೃತೀಯ .ಸಿ. ಸೌಲಭ್ಯಗಳಿರುತ್ತವೆ

ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಕೇವಲ ಆನ್ ಲೈನ್ -ಟಿಕೆಟ್ ಬುಕಿಂಗ್ ಗೆ ಅವಕಾಶ

ಗರಿಷ್ಠ ಮುಂಗಡ ಕಾಯ್ದಿರಿಸುವಿಕೆ ಅವಧಿ (ಎಆರ್ ಪಿ) ಗರಿಷ್ಠ ಏಳು ದಿನವಾಗಿದೆ

ಪ್ರಯಾಣಿಕರಿಗೆ ತಮ್ಮ ಆಹಾರ ಮತ್ತು ಕುಡಿಯುವ ನೀರು ತರಲು ಪ್ರೋತ್ಸಾಹ

ರೈಲು ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕಾಗಿರುವುದರಿಂದ ಪ್ರಯಾಣಿಕರು ಕನಿಷ್ಠ 90 ನಿಮಿಷ ಮುಂಚೆಯೇ ರೈಲು ನಿಲ್ದಾಣಕ್ಕೆ ಆಗಮಿಸಬೇಕು

ರೈಲುಗಳ ಒಳಗೆ ಯಾವುದೇ ಲೆನಿನ್, ಹೊದಿಕೆ ಮತ್ತು ಕರ್ಟನ್ ಒದಗಿಸುವುದಿಲ್ಲ: ಎಲ್ಲ ಪ್ರಯಾಣಿಕರು ತಮ್ಮದೇ ಆದ ಲೆನಿನ್ ಬಟ್ಟೆಗಳನ್ನು ತರಬೇಕೆಂದು ಸಲಹೆ

ಖಚಿತವಾದ -ಟಿಕೆಟ್ ಆಧರಿಸಿ ರೈಲು ನಿಲ್ದಾಣಗಳಿಗೆ ಪ್ರಯಾಣಿಕರು ಬರಲು ಮತ್ತು ಹೋಗಲು ಅನುವಾಗುವಂತೆ ಚಾಲಕರಿಗೆ ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ

 

ರೈಲ್ವೆ ಸಚಿವಾಲಯ(ಎಂಒಆರ್), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ಎಫ್ ಡಬ್ಲೂ) ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಜೊತೆ ಸಮಾಲೋಚನೆ ನಡೆಸಿ 2020 ಮೇ 12ರಿಂದ ಜಾರಿಗೆ ಬರುವಂತೆ ಹಂತ ಹಂತವಾಗಿ ಭಾಗಶಃ ರೈಲು ಸೇವೆಗಳನ್ನು ಆರಂಭಿಸಲು ನಿರ್ಧರಿಸಿದೆ. ವಿಶೇಷ ರೈಲುಗಳ 50 ಜೋಡಿ ರೈಲು(30 ರೈಲು)ಗಳು ಕಾರ್ಯನಿರ್ವಹಣೆ ಮಾಡಲಿವೆ, ಅವುಗಳ ವಿವರಗಳನ್ನು ಅಡಕದಲ್ಲಿ ಉಲ್ಲೇಖಿಸಲಾಗಿದೆ (ಅದರ ಲಿಂಕ್ ಕೆಳಗಿದೆ)

ರೈಲುಗಳು ಹಾಲಿ 2020 ಮೇ.1ರಿಂದ ಸಂಕಷ್ಟದಲ್ಲಿರುವ ಜನರಿಗಾಗಿ ಓಡಿಸುತ್ತಿರುವ ಶ್ರಮಿಕ್ ರೈಲುಗಳಿಗೆ ಹೆಚ್ಚುವರಿಯಾಗಿ ಸಂಚಾರ ನಡೆಸಲಿವೆ.

ಆದರೆ ಸೇವೆಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಮೇಲ್/ಎಕ್ಸ್ ಪ್ರೆಸ್, ಪ್ರಯಾಣಿಕರ ಮತ್ತು ಉಪ ನಗರ ರೈಲು ಸೇವೆಗಳು ಮುಂದಿನ ಆದೇಶದವರೆಗೆ ರದ್ದಾಗಿರಲಿದೆ.

ವಿಶೇಷ ರೈಲುಗಳು ಪ್ರಸ್ತುತ ಕೇವಲ ಹವಾನಿಯಂತ್ರಿತ ದರ್ಜೆಗಳನ್ನು ಅಂದರೆ ಮೊದಲು, ದ್ವಿತೀಯ ಮತ್ತು ತೃತೀಯ ಎಸಿ ದರ್ಜೆಗಳನ್ನು ಹೊಂದಿರುತ್ತದೆ. ವಿಶೇಷ ರೈಲುಗಳ ಪ್ರಯಾಣ ದರ ಮಾಮೂಲಿಯಾಗಿ ರಾಜಧಾನಿ ರೈಲುಗಳಲ್ಲಿರುವಂತೆ(ಕ್ಯಾಟರಿಂಗ್ ಶುಲ್ಕ ಹೊರುತಪಡಿಸಿ) ನಿಗದಿತವಾಗಿ ಅನ್ವಯವಾಗುತ್ತದೆ.

ಐಆರ್ ಸಿಟಿಸಿ ವೆಬ್ ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಕೇವಲ ಆನ್ ಲೈನ್ ಟಿಕೆಟ್ ಬುಕಿಂಗ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರೈಲು ನಿಲ್ದಾಣಗಳಲ್ಲಿನ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಯಾವುದೇ ಟಿಕೆಟ್ ಬುಕಿಂಗ್ ವ್ಯವಸ್ಥೆ ಇರುವುದಿಲ್ಲ. ಏಜೆಂಟ್ಮೂಲಕ (ಐಆರ್ ಸಿಟಿಸಿ ಮತ್ತು ರೈಲ್ವೆ ಏಜೆಂಟ್ ಇಬ್ಬರೂ) ಟಿಕೆಟ್ ಬುಕಿಂಗ್ ಗೆ ಅವಕಾಶವಿಲ್ಲ. ಗರಿಷ್ಠ ಮುಂಗಡ ಕಾಯ್ದಿರಿಸುವಿಕೆ ಅವಧಿ(ಎಆರ್ ಪಿ) ಕನಿಷ್ಠ ಏಳು ದಿನವಾಗಿದೆ.

ಕೇವಲ ಖಚಿತವಾದ -ಟಿಕೆಟ್ ಬುಕ್ ಮಾಡಬಹುದು. ಆರ್ ಎಸಿ/ವೇಟಿಂಗ್ ಲಿಸ್ಟ್ ಟಿಕೆಟ್ ಮತ್ತು ರೈಲುಗಳಲ್ಲಿ ಟಿಕೆಟ್ ತಪಾಸಣೆ ಮಾಡುವವರಿಂದ ಟಿಕೆಟ್ ಖರೀದಿಗೆ ಅವಕಾಶವಿಲ್ಲ. ಪ್ರಸ್ತುತ ಬುಕಿಂಗ್ ನಲ್ಲಿ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಬುಕಿಂಗ್ ಕೂಡ ಅವಕಾಶವಿಲ್ಲ. ಮೀಸಲಿಡದ ಟಿಕೆಟ್(ಯುಟಿಎಸ್ )ಗಳನ್ನು ಮಾನ್ಯ ಮಾಡುವುದಿಲ್ಲ.

ಪ್ರಯಾಣದ ರದಲ್ಲಿ ಕ್ಯಾಟರಿಂಗ್(ಊಟ, ತಿಂಡಿ) ವೆಚ್ಚ ಸೇರಿರುವುದಿಲ್ಲ. ಮೊದಲೇ ಪಾವತಿಸಿ ಊಟವನ್ನು ಕಾಯ್ದಿರಿಸಬಹುದು, ಆದರೆ -ಕೆಟರಿಂಗ್ ಸೌಲಭ್ಯ ಇರುವುದಿಲ್ಲ. ಆದರೆ ಐಆರ್ ಸಿಟಿಸಿ ಪಾವತಿ ಆಧಾರದಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರು ಹಾಗೂ ಇತರೆ ತಿನಿಸುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಿದೆ. ಕುರಿತ ಮಾಹಿತಿಯನ್ನು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಸಮಯದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

ಪ್ರಯಾಣಿಕರಿಗೆ ತಮ್ಮ ಆಹಾರ ಮತ್ತು ಕುಡಿಯುವ ನೀರನ್ನು ತಾವೇ ಕೊಂಡೊಯ್ಯಲು ಪ್ರೋತ್ಸಾಹಿಸಲಾಗುವುದು. ರೈಲುಗಳ ಒಳಗೆ ಪಾವತಿ ಆಧಾರದ ಮೇಲೆ ಬೇಡಿಕೆ ಆಧರಿಸಿ ಒಣ, ತಿನ್ನಲು ಸಿದ್ಧವಾದ ಆಹಾರ ಮತ್ತು ಬಾಟಲ್ ನೀರನ್ನು ಒದಗಿಸಲಾಗುವುದು.

ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ತಪಾಸಣೆಗೊಳಗಾಗಬೇಕು ಮತ್ತು ಸೋಂಕು ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಪ್ರವೇಶಿಸಲು/ಹತ್ತಲು ಅವಕಾಶ ನೀಡಲಾಗುವುದು.

ವಿಶೇಷ ರೈಲುಗಳಲ್ಲಿ ಸಂಚಾರ ಕೈಗೊಳ್ಳುವ ಪ್ರಯಾಣಿಕರು ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

) ಖಚಿತಪಟ್ಟ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣಗಳ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.

ಬಿ) ಎಲ್ಲ ಪ್ರಯಾಣಿಕರು ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಮತ್ತು ಪ್ರಯಾಣದುದ್ದಕ್ಕೂ ಮುಖಗವಸನ್ನು ಧರಿಸಿರಲೇಬೇಕು.

ಸಿ) ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕಾಗಿರುವುದರಿಂದ ಪ್ರಯಾಣಿಕರು ಕನಿಷ್ಠ 90 ನಿಮಿಷ ಮುಂಚೆ ರೈಲು ನಿಲ್ದಾಣವನ್ನು ತಲುಪಬೇಕು. ಸೋಂಕು ಲಕ್ಷಣಗಳಿಲ್ಲದ ಪ್ರಯಾಣಿಕರನ್ನು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುವುದು.

ಡಿ) ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

) ಪ್ರಯಾಣಿಸಬೇಕಾದ ನಿಗದಿತ ಸ್ಥಳ ಬರುತ್ತಿದ್ದಂತೆಯೇ ಪ್ರಯಾಣಿಕರು ಅಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸಿರುವ ಆರೋಗ್ಯ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು.

ಆನ್ ಲೈನ್ ಟಿಕೆಟ್ ರದ್ದತಿಗೆ ರೈಲು ಪ್ರಯಾಣಿಸಲು ನಿಗದಿಯಾಗಿರುವ 24 ಗಂಟೆಗಳ ಮುನ್ನ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈಲು ನಿಗದಿಯಾಗಿರುವ ಸಮಯಕ್ಕಿಂತ 24 ಗಂಟೆಯೊಳಗೆ ಟಿಕೆಟ್ ರದ್ದತಿಗೆ ಅವಕಾಶವಿಲ್ಲ. ಟಿಕೆಟ್ ರದ್ದತಿ ಶುಲ್ಕ ದರದ ಶೇ.50ರಷ್ಟಾಗಿರುತ್ತದೆ.

ವಲಯ ರೈಲ್ವೆಗಳಿಗೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಮುಖಾಮುಖಿಯಾಗುವುದನ್ನು ತಪ್ಪಿಸಲು ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರಗಳನ್ನು ನಿಗದಿಪಡಿಸಬೇಕೆಂದು ನಿರ್ದೇಶಿಸಲಾಗಿದೆ. ರೈಲುಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ವಲಯ ರೈಲ್ವೆಗಳು ನಿರ್ದಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಪಾಲನೆ ಮಾಡಬೇಕು ಮತ್ತು ಎಲ್ಲಾ ಸುರಕ್ಷತಾ ಭದ್ರತಾ ಮತ್ತು ಶುಚಿತ್ವ ಶಿಷ್ಟಾಚಾರಗಳನ್ನು ಪಾಲಿಸಬೇಕು.

ಎಲ್ಲ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಂಡು ಬಳಸಬೇಕೆಂದು ಸೂಚಿಸಲಾಗಿದೆ.

ರೈಲುಗಳ ಒಳಗೆ ಯಾವುದೇ ಲೆನಿನ್, ಹೊದಿಕೆ ಮತ್ತು ಕರ್ಟನ್ ಗಳನ್ನು ಒದಗಿಸುವುದಿಲ್ಲ, ಪ್ರಯಾಣಿಕರು ತಾವೇ ಲೆನಿನ್ ಹೊದಿಕೆಗಳನ್ನು ತರಬೇಕೆಂದು ಸಲಹೆ ನೀಡಲಾಗಿದೆ. ಉದ್ದೇಶಕ್ಕಾಗಿ ಹವಾನಿಯಂತ್ರಿತ ಬೋಗಿಗಳ ಒಳಗೆ ಉಷ್ಣಾಂಶವನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಲಾಗುವುದು.

ಫ್ಲಾಟ್ ಫಾರಂಗಳಲ್ಲಿ ಯಾವುದೇ ಮಳಿಗೆ/ ಬೂತ್ ಗಳು ತೆರೆದಿರುವುದಿಲ್ಲ. ರೈಲುಗಳ ಬದಿಯಲ್ಲಿ ಯಾವುದೇ ರೀತಿಯ ಮಾರಾಟಕ್ಕೆ ಅವಕಾಶವಿಲ್ಲ, ಪ್ರಯಾಣಿಕರು ಸುಗಮ ರೀತಿಯಲ್ಲಿ ಪ್ರಯಾಣಿಸಬೇಕೆಂದು ಸಲಹೆ ನೀಡಲಾಗಿದೆ.

ಎಂಎಚ್ಎ ಮಾರ್ಗಸೂಚಿಯಂತೆ ಖಚಿತವಾದ -ಟಿಕೆಟ್ ಆಧರಿಸಿ ರೈಲು ನಿಲ್ದಾಣಗಳಿಗೆ ಪ್ರಯಾಣಿಕರು ಬರಲು ಮತ್ತು ಹೋಗಲು ಅನುವಾಗುವಂತೆ ಚಾಲಕರಿಗೆ ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಆದೇಶಿಸಲಾಗಿದೆ.

ಲಿಂಕ್ ನ ಅಡಕ

 

***


(Release ID: 1623080) Visitor Counter : 365