ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೋವಿಡ್ -19 ಸಾಂಕ್ರಾಮಿಕವು ಒಡ್ಡಿದ ಹಲವಾರು ಸವಾಲುಗಳ ನಡುವೆಯೂ, ಆರ್ಸಿಎಫ್ ಉದ್ಯಮದ ಎನ್ಪಿಕೆ ರಸಗೊಬ್ಬರಗಳ ಮಾರಾಟದಲ್ಲಿ ಶೇ 35 ರಷ್ಟು ಹೆಚ್ಚಳ
Posted On:
09 MAY 2020 4:03PM by PIB Bengaluru
ಕೋವಿಡ್ -19 ಸಾಂಕ್ರಾಮಿಕವು ಒಡ್ಡಿದ ಹಲವಾರು ಸವಾಲುಗಳ ನಡುವೆಯೂ, ಆರ್ಸಿಎಫ್ ಉದ್ಯಮದ ಎನ್ಪಿಕೆ ರಸಗೊಬ್ಬರಗಳ ಮಾರಾಟದಲ್ಲಿ ಶೇ 35 ರಷ್ಟು ಹೆಚ್ಚಳ
ಕೋವಿಡ್-19 ಲಾಕ್ಡೌನ್ನಿಂದ ಉಂಟಾದ ಅಗಾಧವಾದ ಸಾಗಾಣಿಕೆ ಮತ್ತು ಇತರ ಸಮಸ್ಯೆಗಳ ನಡುವೆಯೂ, ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ದಿಮೆಯಾದ ರಾಷ್ಟ್ರಿಯ ಕೆಮಿಕಲ್ಸ್ ಫ್ರೆಟಿಲೈಜರ್ಸ್ ಲಿಮಿಟೆಡ್, (ಆರ್ಸಿಎಫ್) ತನ್ನ ಅನುಕರಣನೀಯ ಕಾರ್ಯಕ್ಷಮತೆಯಿಂದ 2019 ರ ಏಪ್ರಿಲ್ ಗೆ ಹೋಲಿಸಿದರೆ 2020 ರ ಏಪ್ರಿಲ್ ತಿಂಗಳಲ್ಲಿ ಎನ್ಪಿಕೆ ರಸಗೊಬ್ಬರಗಳು ಸುಫಲಾ ಮಾರಾಟದಲ್ಲಿ 35.47 ರಷ್ಟು ಹೆಚ್ಚಳವನ್ನು ದಾಖಲಿಸಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡರು ಆರ್ಸಿಎಫ್ಗೆ ಕೃಷಿ ಪೋಷಕಾಂಶಗಳ ಅಗತ್ಯತೆಗಳನ್ನು ಪೂರೈಸುವ ಆಸಕ್ತಿಯನ್ನು ತೋರಿಸಿದ್ದನ್ನು ಅಭಿನಂದಿಸಿದರು, ಇದರಿಂದ ರೈತರು ಹೆಚ್ಚಿನ ಇಳುವರಿಯ ಲಾಭವನ್ನು ಪಡೆಯುತ್ತಾರೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಘೋಷಿಸಲಾದ ಲಾಕ್ಡೌನ್ ತೊಂದರೆಗಳನ್ನು ನಿವಾರಿಸಲು ಭಾರತೀಯ ರೈತರಿಗೆ ಸಹಾಯ ಮಾಡಲು ತಮ್ಮ ಸಚಿವಾಲಯದ ಅಡಿಯಲ್ಲಿ ವಿವಿಧ ಗೊಬ್ಬರದ ಸಾರ್ವಜನಿಕ ವಲಯದ ಉದ್ದಿಮೆಗಳು ಶ್ರಮಿಸುತ್ತಿವೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಬಿತ್ತನೆ ಋತುವಿನಲ್ಲಿ ಅಗತ್ಯ ರಸಗೊಬ್ಬರಗಳ ಉತ್ಪಾದನೆ, ಸಾಗಣೆ ಮತ್ತು ವಿತರಣೆಗೆ ಅನುಕೂಲವಾಗುವಂತೆ ಅವರು ತಮ್ಮ ರಸಗೊಬ್ಬರ ಇಲಾಖೆಯಲ್ಲದೆ, ಕೃಷಿ ಸಚಿವಾಲಯಗಳು , ಕೇಂದ್ರದಲ್ಲಿನ ಇತರ ಸಂಬಂಧಿತ ಇಲಾಖೆಗಳು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಶ್ರೀ ಗೌಡರು ಹೇಳಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಈ ಸಂಕಷ್ಟದ ಸಮಯದಲ್ಲಿ, ಮಹಾರಾಷ್ಟ್ರದ ಕೃಷಿ ಇಲಾಖೆಯ ಸಹಾಯದಿಂದ ಆರ್ಸಿಎಫ್, ರೈತರಿಗೆ ರಸಗೊಬ್ಬರಗಳನ್ನು ನಿರಂತರವಾಗಿ ಪೂರೈಸುವುದನ್ನು ಖಾತ್ರಿಪಡಿಸುತ್ತದೆ ಎಂದು ಆರ್ಸಿಎಫ್ನ ಸಿಎಂಡಿ ಎಸ್ಸಿ ಮುಡ್ಜೆರಿಕರ್ ಟ್ಟಿಟ್ಟರ್ ನಲ್ಲಿ ತಿಳಿಸಿದ್ದಾರೆ. ರೈತರ ಸುರಕ್ಷತೆಗಾಗಿ ಕೃಷಿಯ ಗಡಿಯಲ್ಲಿ ರಸಗೊಬ್ಬರಗಳನ್ನು ತಲುಪಿಸಲಾಗುತ್ತಿದೆ. ಇದರ ಹೊರತಾಗಿ ಆರ್ಸಿಎಫ್ನ ಟ್ರೊಂಬೆ ಘಟಕವು ಶಕ್ತಿಯ ದಕ್ಷತೆಯಲ್ಲಿ 6.178 ಎಂಕೆಎಲ್ / ಎಂಟಿ ಯಷ್ಟು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಆರ್ಸಿಎಫ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಲ್ಲಿ ದೃಢವಾದ ನಂಬಿಕೆಯ ಭಾಗವಾಗಿ ಅಗತ್ಯವಿರುವವರಿಗೆ ಮತ್ತು ಸಮಾಜದ ಸಾಮಾನ್ಯ ಹಿತದೃಷ್ಟಿಯಿಂದ, ಪಿಎಂ ಕೇರ್ಸ್ ಫಂಡ್ಗೆ 83.56 ಲಕ್ಷ ಮತ್ತು ಮಹಾರಾಷ್ಟ್ರ ಸಿಎಮ್ಆರ್ಎಫ್ಗೆ 83.50 ಲಕ್ಷ ದೇಣಿಗೆ ನೀಡಿದೆ. ಅದರ ಉದ್ಯೋಗಿಗಳು ಸಹ ಮುಂದೆ ಬಂದಿದ್ದಾರೆ ಮತ್ತು ಇದೇ ಉದ್ದೇಶಕ್ಕಾಗಿ ಒಂದು ದಿನದ ಸಂಬಳವನ್ನು ದೇಣಿಗೆ ನೀಡಿದರು. ಇದು ಈಗಾಗಲೇ ಸಿಎಸ್ಆರ್ ಮೂಲಕ ಆರ್ಸಿಎಫ್ ನೀಡಿದ 50 ಲಕ್ಷ ರೂಪಾಯಿಗಳ ದೇಣಿಗೆಯ ಜೊತೆಗೆ ನೀಡಿರುವ ಹೆಚ್ಚುವರಿ ದೇಣಿಗೆಯಾಗಿದೆ.
ಆರ್ಸಿಎಫ್ "ಮಿನಿ ರತ್ನ" ಉದ್ದಮಿಗಳಲ್ಲೊಂದಾಗಿದ್ದು, ಇದು ದೇಶದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕಗಳ ಪ್ರಮುಖ ಉತ್ಪಾದಕ ಸಂಸ್ಥೆಯಾಗಿದೆ. ಇದು ಯೂರಿಯಾ, ಕಾಂಪ್ಲೆಕ್ಸ್ ರಸಗೊಬ್ಬರಗಳು, ಜೈವಿಕ ಗೊಬ್ಬರಗಳು, ಸೂಕ್ಷ್ಮ ಪೋಷಕಾಂಶಗಳು, ನೀರಿನಲ್ಲಿ ಕರಗುವ ರಸಗೊಬ್ಬರಗಳು, ಮಣ್ಣಿನ ಕಂಡಿಷನರ್ಗಳು ಮತ್ತು ವ್ಯಾಪಕವಾದ ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುತ್ತದೆ. ಕಂಪನಿಯು ಗ್ರಾಮೀಣ ಭಾರತದಲ್ಲಿ "ಉಜ್ವಾಲಾ" (ಯೂರಿಯಾ) ಮತ್ತು "ಸುಫಾಲಾ" (ಸಂಕೀರ್ಣ ರಸಗೊಬ್ಬರಗಳು) ಬ್ರಾಂಡ್ಗಳಿಂದ ಜನಪ್ರಿಯವಾಗಿದೆ, ಇದು ಹೆಚ್ಚಿನ ಬ್ರಾಂಡ್ ಜನಪ್ರಿಯತೆಯನ್ನು ಹೊಂದಿದೆ. ರಸಗೊಬ್ಬರ ಉತ್ಪನ್ನಗಳಲ್ಲದೆ, ಬಣ್ಣಗಳು, ದ್ರಾವಕಗಳು, ಚರ್ಮ, ಔಷಧಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಆರ್ಸಿಎಫ್ ಹೆಚ್ಚಿನ ಸಂಖ್ಯೆಯ ಕೈಗಾರಿಕಾ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ.
***
(Release ID: 1622589)
Visitor Counter : 212
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Odia
,
Tamil
,
Telugu