ಗೃಹ ವ್ಯವಹಾರಗಳ ಸಚಿವಾಲಯ
ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಹಾ ನಿರ್ದೇಶಕರುಗಳೊಂದಿಗೆ ಪರಿಶೀಲನಾ ಸಭೆ
Posted On:
08 MAY 2020 9:20PM by PIB Bengaluru
ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಹಾ ನಿರ್ದೇಶಕರುಗಳೊಂದಿಗೆ ಪರಿಶೀಲನಾ ಸಭೆ
ಸಿಎ.ಪಿ.ಎಫ್.ನ ಯೋಗಕ್ಷೇಮ ಮತ್ತು ಸುರಕ್ಷತೆ ಸರ್ಕಾರದ ಆದ್ಯತೆ: ಶ್ರೀ ಅಮಿತ್ ಶಾ
ಕೋವಿಡ್ ಯೋಧರಿಗೆ ಸೂಕ್ತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ನಿರ್ವಹಣೆ; ಮರಣದ ಪ್ರಕರಣಗಳಲ್ಲಿ ಸಕಾಲದಲ್ಲಿ ಬಾಕಿ ಪಾವತಿ ಖಾತ್ರಿ ಪಡಿಸಿ: ಗೃಹ ಸಚಿವರು
ಸಿಎಪಿಎಫ್ ಯೋಧರಿಗೆ ಸಮರ್ಪಿತ ಆಸ್ಪತ್ರೆ/ ಸೌಲಭ್ಯ ಸ್ಥಾಪನೆ: ಶ್ರೀ ಅಮಿತ್ ಶಾ
ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಚಿವ ಶ್ರೀ ಅಮಿತ್ ಶಾ ಇಂದು ಎಲ್ಲ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಹಾ ನಿರ್ದೇಶಕರುಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೋವಿಡ್ 19 ಸಂಕಷ್ಟ ಸಂದರ್ಭದಲ್ಲಿ ಪರಿಸ್ಥಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಸಿಎಪಿಎಫ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಕೋವಿಡ್ 19 ಪ್ರಸರಣದ ಬಗ್ಗೆ ಮಾತ್ರವೇ ಕಾಳಜಿ ವಹಿಸಿಲ್ಲ, ಜೊತೆಗೆ ಸಿಎಪಿಎಫ್ ನ ಸಂಪೂರ್ಣ ಸುರಕ್ಷತೆ, ಭದ್ರತೆ ಮತ್ತು ಕ್ಷೇಮವನ್ನು ಖಾತ್ರಿ ಪಡಿಸಲೂ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಶ್ರೀ ಶಾ ಹೇಳಿದರು. ಸಿಎಪಿಎಫ್ ನಲ್ಲಿ ಕೋವಿಡ್ 19ರಿಂದ ಬಾಧಿತರಾಗಿರುವ ಪ್ರತಿಯೊಬ್ಬ ಭದ್ರತಾ ಸಿಬ್ಬಂದಿಯ ಸ್ಥಿತಿ ಮತ್ತು ರೋಗಲಕ್ಷಣವಿರದ ಪ್ರಕರಣಗಳ ಕುರಿತಂತೆ ಗೃಹ ಸಚಿವರು ವಿಚಾರಿಸಿಕೊಂಡರು.
ಈ ಸಭೆಯ ವೇಳೆ, ಪ್ರತಿ ಸಿಎಪಿಎಫ್ ನಿಂದ ರೋಗವನ್ನು ನಿಯಂತ್ರಿಸಲು ಕೈಗೊಂಡಿರುವ ನಾವಿನ್ಯಪೂರ್ಣ ಕ್ರಮಗಳ ಕುರಿತಂತೆ ಚರ್ಚಿಸಲಾಯಿತು. ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮತ್ತು ತರಬೇತಿ ನೀಡುವುದು; ಮೆಸ್ ನಲ್ಲಿನ ವ್ಯವಸ್ಥೆಗಳನ್ನು ಬದಲಾಯಿಸುವುದು ಮತ್ತು ಬ್ಯಾರಕ್ಗಳಲ್ಲಿ ಉಳಿಯುವ ಸೌಲಭ್ಯಗಳು; ಆಯುಷ್ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು; ಮತ್ತು, ಭದ್ರತಾ ಸಿಬ್ಬಂದಿಯ ವಯಸ್ಸು ಮತ್ತು ಅವರ ಆರೋಗ್ಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಸಿಬ್ಬಂದಿ ನಿರ್ವಹಣೆಯನ್ನು ಖಾತರಿಪಡಿಸುವುದು ಸೇರಿದಂತೆ ವಿವಿಧ ಶ್ರೇಣಿಯ ಸಲಹೆಗಳು ಬಂದವು.
ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಿಎಪಿಎಫ್ ಯೋಧರ ಪ್ರಯತ್ನಗಳನ್ನು ಪ್ರಶಂಸಿಸಿದ ಶ್ರೀ ಶಾ, ಅವಘಡದ ಸಂದರ್ಭದಲ್ಲಿ ಪರಿಹಾರ, ವಿಮೆ ಸೇರಿದಂತೆ ಟರ್ಮಿನಲ್ ಬಾಕಿಗಳನ್ನು ಸಕಾಲದಲ್ಲಿ ಪಾವತಿಸುವಂತಹ ಪ್ರಮುಖ ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು; ಕೋವಿಡ್-19 ಬಾಧಿತ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಅವರೆಲ್ಲರಿಗೆ ಸಮರ್ಪಿತ ಆಸ್ಪತ್ರೆ / ಸೌಲಭ್ಯವನ್ನು ಸ್ಥಾಪಿಸುವುದು ಮತ್ತು ಪರಿಣಾಮಕಾರಿ ರೋಗ ಪತ್ತೆ ಮತ್ತು ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವುದು ಸೇರಿದಂತೆ ಅವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಸಿಎಪಿಎಫ್ಗಳಲ್ಲಿ ಉತ್ತಮ ರೂಢಿಗಳನ್ನು ವಿನಿಮಯಮಾಡಿಕೊಳ್ಳಬೇಕು ಮತ್ತು ಆರೋಗ್ಯ ಸಂಬಂಧಿತ ಮತ್ತು ನಿರ್ವಹಣಾ ಸಮಸ್ಯೆಗಳಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅಂದರೆ ನೈರ್ಮಲ್ಯೀಕರಣ ಮತ್ತು ಸಿಬ್ಬಂದಿಗಳಿಂದ ಸೂಕ್ತವಾದ ರಕ್ಷಣಾತ್ಮಕ ಸಾಧನಗಳ ಬಳಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.. ಸಭೆಯಲ್ಲಿ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ, ಶ್ರೀ ನಿತ್ಯಾನಂದ್ ರಾಯ್, ಸಿಎಪಿಎಫ್ಗಳ ಡಿಜಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
***
(Release ID: 1622405)
Visitor Counter : 183