ಕೃಷಿ ಸಚಿವಾಲಯ

ಮಣ್ಣು ಆರೋಗ್ಯ ಕಾರ್ಡ್ ಆಧಾರಿತ ಸಮಗ್ರ ಮಣ್ಣು ಪೋಷಕಾಂಶ ನಿರ್ವಹಣೆ ಕುರಿತು ರೈತರ ಆಂದೋಲನಕ್ಕೆ ಕೇಂದ್ರ ಕೃಷಿ ಸಚಿವರ ಕರೆ

Posted On: 06 MAY 2020 7:09PM by PIB Bengaluru

ಮಣ್ಣು ಆರೋಗ್ಯ ಕಾರ್ಡ್ ಆಧಾರಿತ ಸಮಗ್ರ ಮಣ್ಣು ಪೋಷಕಾಂಶ ನಿರ್ವಹಣೆ ಕುರಿತು ರೈತರ ಆಂದೋಲನಕ್ಕೆ ಕೇಂದ್ರ ಕೃಷಿ ಸಚಿವರ ಕರೆ

ಜೈವಿಕ ಮತ್ತು ಸಾವಯವ ರಸಗೊಬ್ಬರ ಬಳಕೆ ಹೆಚ್ಚಿಸಲು ಮತ್ತು ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಲು ಆಂದೋಲನ ಮಾದರಿಯ ಜಾಗೃತಿ ಪ್ರಚಾರಾಂದೋಲನಗಳನ್ನು ನಡೆಸಿ: ಶ್ರೀ ನರೇಂದ್ರ ಸಿಂಗ್ ತೋಮರ್

 

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಸಮಗ್ರ ಮಣ್ಣು ಪೋಷಕಾಂಶ ನಿರ್ವಹಣೆಯನ್ನು ರೈತರ ಆಂದೋಲನವನ್ನಾಗಿ ಮಾಡುವಂತೆ ಕರೆ ನೀಡಿದ್ದಾರೆ. ಇಂದಿಲ್ಲಿ ಮಣ್ಣು ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದ ಅವರು ಈಗ ಚಾಲ್ತಿಯಲ್ಲಿರುವ ಜಾಗೃತಿ ಆಂದೋಲನ ಮಾದರಿಯ ಜೈವಿಕ ಮತ್ತು ಸಾವಯವ ರಸಗೊಬ್ಬರ ಬಳಕೆಯನ್ನು ಹೆಚ್ಚಿಸುವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣವನ್ನು ಕಡಿಮೆ ಮಾಡುವ ಕಾರ್ಯಕ್ರಮಗಳು ಕಡ್ಡಾಯವಾಗಿ ಮಣ್ಣು ಆರೋಗ್ಯ ಕಾರ್ಡಿನ ಶಿಫಾರಸುಗಳನ್ನು ಆಧರಿಸಿರಬೇಕು ಎಂದೂ ನಿರ್ದೇಶನ ನೀಡಿದರು.

2020-21 ರಲ್ಲಿ ಕಾರ್ಯಕ್ರಮದ ಪ್ರಮುಖ ಗಮನ ದೇಶದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯ 1 ಲಕ್ಷಕ್ಕೂ ಅಧಿಕ ಗ್ರಾಮಗಳ ರೈತರಿಗಾಗಿ ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳ ಮೇಲಿದೆ. ಗ್ರಾಮ ಮಟ್ಟದಲ್ಲಿ ಕೃಷಿ ಶಿಕ್ಷಣ ಪಡೆದ ಯುವಕರು, ಮಹಿಳಾ ಸ್ವಸಹಾಯ ಗುಂಪುಗಳು , ಎಫ್.ಪಿ.. ಗಳು ಮತ್ತಿತರರು ಮಣ್ಣು ಆರೋಗ್ಯ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕುರಿತು ಸಚಿವರು ಚಿಂತನೆಯನ್ನು ಮುಂದಿಟ್ಟರಲ್ಲದೆ, ಎಸ್.ಎಚ್.ಸಿ. ಯೋಜನೆಯು ಸೂಕ್ತ ಕೌಶಲ್ಯ ಅಭಿವೃದ್ದಿಯ ಬಳಿಕ ಉದ್ಯೋಗ ಸೃಷ್ಟಿಯತ್ತ ಗಮನ ಕೊಡುತ್ತದೆ ಎಂದೂ ಹೇಳಿದರು.

ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ರಸಗೊಬ್ಬರಗಳನ್ನು ವಿವೇಚನೆಯಿಂದ ಬಳಸುವ ಆಧಾರದಲ್ಲಿ ಮಣ್ಣು ಪರೀಕ್ಷೆಯನ್ನು ಮಾಡುವುದಕ್ಕೆ ಸಮಗ್ರ ಪ್ರಚಾರಾಂದೋಲನವನ್ನು ಮತ್ತು ಭಾರತೀಯ ಪ್ರಾಕೃತಿಕ ಕೃಷಿ ಪದಾತಿ (ಬಿ.ಪಿ.ಕೆ.ಪಿ.) ಸಹಿತ ಸುರಕ್ಷಿತ ಪೋಷಕಾಂಶಯುಕ್ತ ಆಹಾರ ಉತ್ತೇಜಿಸುವುದಕ್ಕಾಗಿ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ದಿ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳೊಂದಿಗೆ ಸಾವಯವ ಕೃಷಿಯನ್ನು ಉತ್ತೇಜಿಸಲು ಕಾರ್ಯಕ್ರಮಗಳನ್ನು ಸಂಘಟಿಸಲಿದೆ.

ಎಸ್.ಎಚ್.ಸಿ. ಯೋಜನೆಯಲ್ಲಿ ಮಣ್ಣು ಆರೋಗ್ಯ ಕಾರ್ಡುಗಳನ್ನು ಎಲ್ಲಾ ರೈತರಿಗೆ 2 ವರ್ಷಗಳಿಗೆ ಒಮ್ಮೆ ಒದಗಿಸಲಾಗುತ್ತದೆ. ಪ್ರಧಾನ ಮಂತ್ರಿ ಶ್ರೀನರೇಂದ್ರ ಮೋದಿ ಅವರು 2015 ಫೆಬ್ರವರಿ 19 ರಂದು ರಾಜಸ್ಥಾನದ ಸೂರತ್ ಘರ್ ನಲ್ಲಿ ಇದಕ್ಕೆ ಚಾಲನೆ ನೀಡಿದ್ದರು. ಕಾರ್ಡುಗಳು ರೈತರಿಗೆ ಅವರ ಮಣ್ಣಿನ ಪೋಷಕಾಂಶಗಳ ಪ್ರಮಾಣವನ್ನು , ಸ್ಥಾನಮಾನವನ್ನು ಕುರಿತ ಮಾಹಿತಿಯನ್ನು ಒದಗಿಸುತ್ತವೆ. ಜತೆಗೆ ಮಣ್ಣಿನ ಆರೋಗ್ಯ ವೃದ್ಧಿಸಲು ಹಾಗು ಅದರ ಫಲವತ್ತತೆಯನ್ನು ಹೆಚ್ಚಿಸಲು ಪೋಷಕಾಂಶಗಳ ಸೂಕ್ತ ಪ್ರಮಾಣವನ್ನು ನಿರ್ಧರಿಸಿ ಶಿಫಾರಸುಗಳನ್ನು ಮಾಡುತ್ತವೆ.

ಮಣ್ಣಿನ ರಾಸಾಯನಿಕ , ಭೌತಿಕ ಮತ್ತು ಜೈವಿಕ ಆರೋಗ್ಯವನ್ನೊಳಗೊಂಡ ಮಣ್ಣಿನ ಆರೋಗ್ಯ ಹಾಳಾಗುವುದರಿಂದ ಭಾರತದಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಳುವುದಕ್ಕೆ ಕಾರಣಗಳೆಂದು ಪರಿಗಣಿಸಲಾಗಿದೆ.

ಮಣ್ಣಿನ ಆರೋಗ್ಯ ಕಾರ್ಡ್ ಆರು ಬೆಳೆಗಳಿಗೆ ಸಾವಯವ ಗೊಬ್ಬರ ಸಹಿತ ಎರಡು ಆವರ್ತನಗಳ ರಸಗೊಬ್ಬರಗಳನ್ನು ಶಿಫಾರಸು ಮಾಡುತ್ತದೆ. ರೈತರು ಕೇಳಿಕೆಯ ಮೇರೆಗೆ ಹೆಚ್ಚುವರಿ ಬೆಳೆಗಳಿಗೂ ಶಿಫಾರಸುಗಳನ್ನು ಪಡೆಯಬಹುದು. ಮತ್ತು ಅವರ ಕಾರ್ಡುಗಳನ್ನು ಎಸ್.ಎಚ್.ಸಿ. ಪೋರ್ಟಲಿನಿಂದ ಮುದ್ರಿಸಿಕೊಳ್ಳಬಹುದು. ಎಸ್.ಎಚ್.ಸಿ. ಪೋರ್ಟಲ್ ಎರಡೂ ಆವರ್ತನಗಳ ರೈತರ ದತ್ತಾಂಶವನ್ನು ಹೊಂದಿದ್ದು ಅದು 21 ಭಾಷೆಗಳಲ್ಲಿ ರೈತರ ಉಪಯೋಗಕ್ಕಾಗಿ ಲಭ್ಯವಿದೆ. ರಾಷ್ಟ್ರೀಯ ಉತ್ಪಾದಕತಾ ಮಂಡಳಿ (ಎನ್.ಪಿ.ಸಿ.) ಯು 2017 ರಲ್ಲಿ ಕೈಗೊಂಡ ಅಧ್ಯಯನವು ಎಸ್.ಎಚ್.ಸಿ. ಯೋಜನೆಯು ಸುಸ್ಥಿರ ಕೃಷಿಯನ್ನು ಉತ್ತೇಜಿಸಿದೆ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣವನ್ನು 8-10% ಕಡಿಮೆ ಮಾಡಿದೆ ಎಂಬುದನ್ನು ಪತ್ತೆ ಹಚ್ಚಿದೆ. ಇದರ ಜೊತೆಗೆ ಬೆಳೆ ಪ್ರಮಾಣದಲ್ಲಿ 5-6% ಹೆಚ್ಚಳವೂ ವರದಿಯಾಗಿದೆ. ಮಣ್ಣು ಆರೋಗ್ಯ ಕಾರ್ಡ್ ಗಳಲ್ಲಿ ಲಭ್ಯ ಇರುವ ಶಿಫಾರಸುಗಳ ಅನ್ವಯ ರಸಗೊಬ್ಬರಗಳು ಮತ್ತು ಕಿರು ಪೋಷಕಾಂಶಗಳನ್ನು ಬಳಸುವುದರಿಂದ ಇದು ಸಾಧ್ಯವಾಗಿದೆ.

***



(Release ID: 1622049) Visitor Counter : 291