ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 443 ವಿಮಾನಗಳ ಕಾರ್ಯನಿರ್ವಹಣೆ

Posted On: 04 MAY 2020 7:21PM by PIB Bengaluru

ಏರ್ ಇಂಡಿಯಾ, ಅಲೈಯನ್ಸ್ ಏರ್, ..ಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳಿಂದ
ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 443 ವಿಮಾನಗಳ ಕಾರ್ಯನಿರ್ವಹಣೆ

 

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 443 ವಿಮಾನಗಳನ್ನು ನಿರ್ವಹಿಸಿವೆ. ಈ ಪೈಕಿ 265 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ಗಳು ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸಿದ ಸರಕು ಸುಮಾರು 821.07 ಟನ್‌ಗಳಷ್ಟು ಮತ್ತು ಕ್ರಮಿಸಿದ ದೂರ 4,34,531 ಕಿ.ಮೀ ಆಗಿದೆ ಹಾಗೂ ಈಶಾನ್ಯ ರಾಜ್ಯಗಳ ಪ್ರದೇಶಗಳು, ದ್ವೀಪ ಪ್ರದೇಶಗಳು ಮತ್ತು ಬೆಟ್ಟದ ರಾಜ್ಯಗಳ ಮೇಲೆ ವಿಶೇಷ ಗಮನಹರಿಸಿ ಸರಕು ಸಾಗಾಟ ಮಾಡಲಾಗಿದೆ. ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ‘ಲೈಫ್‌ಲೈನ್ ಉಡಾನ್’ ವಿಮಾನ ಸೇವೆಗಳನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ನಿರ್ವಹಿಸುತ್ತಿದೆ.

ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ರಾಜ್ಯಗಳ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಪವನ್ ಹ್ಯಾನ್ಸ್ ಮೇ 3, 2020 ರವರೆಗೆ 7,729 ಕಿ.ಮೀ ದೂರವನ್ನು ಕ್ರಮಿಸಿ, ಸುಮಾರು 2.27 ಟನ್ ಸರಕುಗಳನ್ನು ಸಾಗಿಸಿದೆ.

ದೇಶದ ವಿವಿಧ ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರ ವಾಣಿಜ್ಯ ವಿಮಾನಯಾನಗಳು ಕೂಡಾ ಈ ಯೋಜನೆಯಡಿಯಲ್ಲಿ ಸರಕು ಸಾಗಿಸಲು ಹಾರಾಟ ನಡೆಸಿವೆ. ಸ್ಪೈಸ್ ಜೆಟ್ ಮಾರ್ಚ್ 24 ರಿಂದ ಮೇ 3, 2020 ರವರೆಗೆ 775 ಸರಕು ವಿಮಾನಗಳ ಮೂಲಕ 13,31,226 ಕಿ.ಮೀ ದೂರ ಕ್ರಮಿಸಿ, 5,617 ಟನ್ ಸರಕುಗಳನ್ನು ಸಾಗಿಸಿದೆ. ಈ ಪೈಕಿ 283 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಮಾರ್ಚ್ 25 ರಿಂದ ಮೇ 3,2020 ರವರೆಗೆ ಬ್ಲೂ ಡಾರ್ಟ್ 256 ಸರಕು ವಿಮಾನಗಳನ್ನು 2,83,358 ಕಿ.ಮೀ ದೂರಕ್ಕೆ 4,405 ಟನ್ ಸರಕುಗಳನ್ನು ಸಾಗಿಸಲು ಬಳಸಿದೆ. ಇವುಗಳಲ್ಲಿ 13 ಅಂತಾರಾಷ್ಟ್ರೀಯ ಸರಕು ವಿಮಾನಗಳಾಗಿವೆ. ಇಂಡಿಗೊ ಏಪ್ರಿಲ್ 3 ರಿಂದ ಮೇ 3,2020 ರವರೆಗೆ 88 ಸರಕು ಹಾರಾಟಗಳ ಮೂಲಕ 1,46, 547 ಕಿ.ಮೀ ದೂರ ಕ್ರಮಿಸಿ, ಸುಮಾರು 442 ಟನ್ ಸರಕುಗಳನ್ನು ಸಾಗಿಸಿದೆ ಮತ್ತು 33 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ಏಪ್ರಿಲ್ 19 ರಿಂದ ಮೇ 3, 2020 ರವರೆಗೆ ವಿಸ್ಟಾರ ತನ್ನ 28 ಸರಕು ವಿಮಾನಗಳ ಮೂಲಕ 28,590 ಕಿ.ಮೀ ದೂರ ಕ್ರಮಿಸಿ ಸುಮಾರು 139 ಟನ್ ಸರಕುಗಳನ್ನು ಸಾಗಿಸಿದೆ.

ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್-19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಏರ್ ಇಂಡಿಯಾ ತಂದ ವೈದ್ಯಕೀಯ ಸರಕುಗಳ ಪ್ರಮಾಣ 930 ಟನ್. ಬ್ಲೂ ಡಾರ್ಟ್ ಸರಕು ವಿಮಾನಗಳು ಏಪ್ರಿಲ್ 14 ರಿಂದ ಮೇ 3, 2020 ರವರೆಗೆ ಗುವಾಂಗ್‌ವು ಮತ್ತು ಶಾಂಘೈನಿಂದ ಸುಮಾರು 114 ಟನ್ ವೈದ್ಯಕೀಯ ಸರಬರಾಜಗಳನ್ನು ಮತ್ತು 3 ಮೇ 2020 ರವರೆಗೆ ಹಾಂಗ್ ಕಾಂಗ್‌ನಿಂದ 24 ಟನ್ ಗಳಷ್ಟು ವೈದ್ಯಕೀಯ ಸರಬರಾಜನ್ನು ಮೂಲಕ ಸಾಗಿಸಿವೆ. ಸ್ಪೈಸ್‌ಜೆಟ್ ಕೂಡಾ ತನ್ನ ಸರಕು ವಿಮಾನ ಮೂಲಕ ಮೇ 3, 2020 ರವರೆಗೆ 204 ಟನ್ ಗಳಷ್ಟು ವೈದ್ಯಕೀಯ ಸರಬರಾಜನ್ನು ಗುವಾಂಗ್‌ವು ಮತ್ತು ಶಾಂಘೈನಿಂದ ಹಾಗೂ 16 ಟನ್ ಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ ವಾಯುಯಾನ ಮೂಲಕ ಸಾಗಿಸಿದೆ.

***



(Release ID: 1621105) Visitor Counter : 155