ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸರಕಾರಿ ಸಿಬ್ಬಂದಿಗಳಿಗೆ ನಿವೃತ್ತಿ ವಯೋಮಿತಿ ಇಳಿಕೆ ಇಲ್ಲ, ಸುಳ್ಳು ಮಾಹಿತಿ ಭೇದಿಸಿದ ಪಿ ಐ ಬಿ

ಪ್ರಕಟಣಾ ದಿನಾಂಕ: 26 APR 2020 10:00PM by PIB Bengaluru

ಕೇಂದ್ರ ಸರಕಾರಿ ಸಿಬ್ಬಂದಿಗಳಿಗೆ ನಿವೃತ್ತಿ ವಯೋಮಿತಿ ಇಳಿಕೆ ಇಲ್ಲ, ಸುಳ್ಳು ಮಾಹಿತಿ ಭೇದಿಸಿದ ಪಿ ಐ ಬಿ

 

ಪ್ರೆಸ್ ಇನಫಾರ್ಮೇಶನ್ ಬ್ಯೂರೋದ ವಸ್ತು ಸ್ಥಿತಿ ಶೋಧ ಘಟಕವು ಇಂದು ಕೇಂದ್ರ ಸರಕಾರವು ಕೇಂದ್ರ ಸರಕಾರಿ ಸಿಬ್ಬಂದಿಗಳ ನಿವೃತ್ತಿ ವಯಸ್ಸನ್ನು ಇಳಿಸುವ ಯಾವುದೇ ಚಿಂತನೆ ಹೊಂದಿಲ್ಲ ಎಂದು ಸ್ಪಷ್ಟ ಪಡಿಸಿದೆ. ವೆಬ್ ಪೋರ್ಟಲೊಂದರಲ್ಲಿ ಬಂದಿರುವ ಲೇಖನವೊಂದು ಭಾರತ ಸರಕಾರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ಇಳಿಸುವ ಸಾಧ್ಯತೆ ಇದೆ ಎಂಬುದಾಗಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಬಂದಿದೆ.

https://twitter.com/PIBFactCheck/status/1254266971777953793?s=20

ಇನ್ನೊಂದು ಟ್ವೀಟೊಂದರಲ್ಲಿ ಪಿ..ಬಿ. ವಸ್ತು ಸ್ಥಿತಿ ಶೋಧ ವಿಭಾಗವು ಇಂದು ವ್ಯಾಟ್ಸಾಪ್ ನಲ್ಲಿ ವೇತನದಾರರು 18 % ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇರಿಸಬೇಕೆಂಬ ಕಾಯ್ದೆಯನ್ನು ಸರಕಾರ ಜಾರಿಗೆ ತರಲಿದೆ ಎಂಬುದಾಗಿ ಹರಡುತ್ತಿದ್ದ ಸುದ್ದಿಯನ್ನು ಸುಳ್ಳು ಎಂದು ಹೇಳಿದೆ. ಸರಕಾರವು ಇಂತಹ ಯಾವುದೇ ಕಾನೂನು ತರುವ ಬಗ್ಗೆ ಪರಿಶೀಲನೆ ನಡೆಸುತ್ತಿಲ್ಲ ಎಂದು ಟ್ವೀಟ್ ನಲ್ಲಿ ಸ್ಪಷ್ಟಪಡಿಸಲಾಗಿದ್ದು, ಪರಿಶೀಲನೆ ಮಾಡದೆ ಇಂತಹ ಸುಳ್ಳು ಸುದ್ದಿಳನ್ನು ಪಾರ್ವರ್ಡ್ ಮಾಡಬಾರದು ಎಂದೂ ಜನತೆಗೆ ಸಲಹೆ ಮಾಡಿದೆ.

https://twitter.com/PIBFactCheck/status/1254336404265435136?s=20

ಅಸ್ಸಾಂನ ಪಿ..ಬಿ. ವಸ್ತು ಸ್ಥಿತಿ ಶೋಧ ವಿಭಾಗವು ಮಣಿಪುರದಲ್ಲಿ ಪ್ರಕಟವಾದ ಕೊರೊನಾ ಬಿಕ್ಕಟ್ಟಿನ ನಡುವೆ ತಮೆಂಗ್ಲಾಂಗ್ ನಲ್ಲಿಯ ಜಿಲ್ಲಾ ಆಸ್ಪತ್ರೆ ಮೂಲಸೌಕರ್ಯಗಳಿಲ್ಲದೆ ಮತ್ತು ಅವಶ್ಯ ಸಲಕರಣೆಗಳಿಲ್ಲದೆ ಬಳಲುತ್ತಿದೆ ಎಂಬ ವರದಿಯ ಬಗ್ಗೆ ನಡೆಸಿದ ವಸ್ತು ಸ್ಥಿತಿ ಪರಿಶೀಲನೆಯಲ್ಲಿ ರಾಜ್ಯ ಸರಕಾರದ ಆರೋಗ್ಯ ಇಲಾಖೆಯು ಹೇಳಿಕೆಯನ್ನು ನಿರಾಕರಿಸಿದೆ.

https://twitter.com/PIB_Guwahati/status/1254076665954742272?s=20

ಹಿನ್ನೆಲೆ:

ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಹಿನ್ನೆಲೆಯಲ್ಲಿ ಮತ್ತು ಸುಪ್ರೀಂ ಕೋರ್ಟು ವ್ಯಕ್ತಪಡಿಸಿದ ಅಭಿಪ್ರಾಯಗಳ ಪ್ರಕಾರ , ಪಿ..ಬಿ.ಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ವದಂತಿಗಳ ಸತ್ಯಾ ಸತ್ಯತೆಯನ್ನು ಪರಿಶೀಲಿಸಲು ಪ್ರತ್ಯೇಕ ಘಟಕವನ್ನು ರೂಪಿಸಿದೆ. ಪಿ..ಬಿ. ಫ್ಯಾಕ್ಟ್ ಚೆಕ್ ( ಪಿ..ಬಿ. ವಸ್ತು ಸ್ಥಿತಿ ಶೋಧ ವಿಭಾಗ) ಟ್ವಿಟರ್ ನಲ್ಲಿಯ ಪರಿಶೀಲನಾ ಹ್ಯಾಂಡಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ಹರಡುವ ಸಂದೇಶಗಳ ಮೇಲೆ ನಿಗಾ ಇಡುತ್ತದೆ ಮತ್ತು ಸುಳ್ಳು ಸುದ್ದಿಗಳನ್ನು ಬೇಧಿಸಲು ಅದರ ವಿಷಯಗಳ ಸಮಗ್ರ ಪರಿಶೀಲನೆ ನಡೆಸುತ್ತದೆ. ಇದಲ್ಲದೆ ಪಿ..ಬಿ. ಇಂಡಿಯಾ ಹ್ಯಾಂಡಲ್ ಮತ್ತು ವಿವಿಧ ಪಿ..ಬಿ. ಪ್ರಾದೇಶಿಕ ಘಟಕಗಳ ಟ್ವಿಟರ್ ಹ್ಯಾಂಡಲ್ ಗಳು #PIBFactCheck ಹ್ಯಾಷ್ ಟ್ಯಾಗ್ ಬಳಸಿ ಟ್ವಿಟರ್ ಸಮುದಾಯದ ವ್ಯಾಪಕ ಪ್ರಯೋಜನಕ್ಕಾಗಿ ಟ್ವಿಟರ್ ನಲ್ಲಿಯ ಯಾವುದೇ ಸುದ್ದಿ ವಿಷಯದ ಬಗ್ಗೆ ಅಧಿಕೃತ ಮತ್ತು ಕರಾರುವಾಕ್ಕಾದ ಮಾಹಿತಿಯನ್ನು ಲಗತ್ತಿಸುತ್ತವೆ.

ಯಾವುದೇ ವ್ಯಕ್ತಿಯು ಸಾಮಾಜಿಕ ಮಾಧ್ಯಮದ ಯಾವುದೇ ಸಂದೇಶದ ಬಗ್ಗೆ , ಅದರ ಪಠ್ಯ, ಆಡಿಯೋ ಮತ್ತು ವೀಡಿಯೋ ಗಳನ್ನು ಪಿ..ಬಿ. ವಸ್ತು ಸ್ಥಿತಿ ಶೋಧಕ್ಕೆ ಅದರ ಕರಾರುವಾಕ್ಕುತನದ ಪರಿಶೀಲನೆಗಾಗಿ ಸಲ್ಲಿಸಬಹುದು . ಇದನ್ನು ಆನ್ ಲೈನ್ ನಲ್ಲಿ ಪೋರ್ಟಲ್ https://factcheck.pib.gov.in/ ಅಥವಾ ವ್ಯಾಟ್ಸಾಪ್ ಸಂಖ್ಯೆ . +918799711259 ರಲ್ಲಿ ಅಥವಾ -ಮೈಲ್ pibfactcheck[at]gmail[dot]com. ನಲ್ಲಿ ಸಲ್ಲಿಸಬಹುದು. ವಿವರಗಳು ಪಿ..ಬಿ. ಜಾಲತಾಣ : https://pib.gov.in ದಲ್ಲಿ ಲಭ್ಯ ಇವೆ.

Description: WhatsApp Image 2020-04-21 at 8.38.39 PM.jpeg

***


(ಪ್ರಕಟಣೆ ಐ.ಡಿ.: 1618648) ವಿಸಿಟರ್ ಕೌಂಟರ್ : 143
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Punjabi , Tamil , Telugu