ರಕ್ಷಣಾ ಸಚಿವಾಲಯ

ಅರುಣಾಚಲ ಪ್ರದೇಶದ ಆಯಕಟ್ಟಿನ ಜಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ದಾಖಲೆಯ ಅವಧಿಯಲ್ಲಿ ಸೇತುವೆ ನಿರ್ಮಿಸಿದ ಬಿ ಆರ್ ಒ

Posted On: 20 APR 2020 6:48PM by PIB Bengaluru

ಅರುಣಾಚಲ ಪ್ರದೇಶದ ಆಯಕಟ್ಟಿನ ಜಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ದಾಖಲೆಯ ಅವಧಿಯಲ್ಲಿ ಸೇತುವೆ ನಿರ್ಮಿಸಿದ

ಬಿ ಆರ್ ಒ

 

ದೇಶವ್ಯಾಪಿ ಲಾಕ್ ಡೌನ್ ಇದ್ದರೂ ಸಹ ಗಡಿ ರಸ್ತೆಗಳ ಸಂಸ್ಥೆ (ಬಿ ಆರ್ ಒ), ಸುಬಾನ್ ಸಿರಿ ನದಿಗೆ ದಪೊರಿಜೊ ಸೇತುವೆಯನ್ನು ನಿರ್ಮಾಣ ಮಾಡಿದೆ. ಕೋವಿಡ್-19 ವಿರುದ್ಧ ಭಾರೀ ಮುಂಜಾಗ್ರತೆಯನ್ನು ಗಮನದಲ್ಲಿರಿಸಿಕೊಂಡು ಅರುಣಾಚಲ ಪ್ರದೇಶದ ಈ ಆಯಕಟ್ಟಿನ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿದೆ.

ದಪೊರಿಜೊ ನದಿ ಮೇಲಿನ ಈ ಸೇತುವೆ, ಭಾರತ ಮತ್ತು ಚೀನಾದ ನಡುವಿನ ಎಲ್ಎಸಿ ನಡುವೆ ಆಯಕಟ್ಟಿನ ಸಂಪರ್ಕ ಒದಗಿಸಲಿದೆ. ಎಲ್ಲ ಪೂರೈಕೆಗಳು, ಆಹಾರಧಾನ್ಯ, ನಿರ್ಮಾಣ ಸಾಮಗ್ರಿ ಮತ್ತು ಔಷಧಗಳು ಈ ಸೇತುವೆ ಮೂಲಕ ಹಾದು ಹೋಗಲಿವೆ. ಹಳೆಯ ಸೇತುವೆ ಬಿರುಕುಗಳನ್ನು ಬಿಟ್ಟಿತ್ತು, ಅದರ ಮೇಲೆ 1992ರ ಜುಲೈ 26ರಂದು ಪ್ರಯಾಣಿಕರ ಬಸ್ಸೊಂದು ಸೇತುವೆಯಿಂದ ಉರುಳಿ ಬಿದ್ದು, ಯಾರೊಬ್ಬರೂ ಬದುಕುಳಿಯದೇ ಭಾರಿ ಅನಾಹುತ ಸಂಭವಿಸಿತ್ತು. ಇದೀಗ ಡಿಜಿಆರ್ ಬಿ ಮತ್ತು ಸಿಇ ಅರುನಾನಕ್ ಅವರ ಮಧ್ಯ ಪ್ರವೇಶದಿಂದಾಗಿ ರಕ್ಷಣಾ ಸಚಿವಾಲಯ ಮತ್ತು ಅರುಣಾಚಲ ಪ್ರದೇಶದ ಸರ್ಕಾರದಿಂದ ಶೀಘ್ರವೇ ಅಗತ್ಯ ಅನುಮೋದನೆಗಳು ದೊರೆತವು. ಈ ಅತ್ಯಂತ ಕಷ್ಟಕರ ಮತ್ತು ಅಪಾಯಕರ ಕಾರ್ಯವನ್ನು ಕೋವಿಡ್-19ನ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ, ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.

ಈ ಸೇತುವೆ ನಿರ್ಮಾಣ ಕಾರ್ಯ 2020ರ ಮಾರ್ಚ್ 17ರಂದು 23 ಬಿಆರ್ ಟಿಎಫ್ ಸಿಬ್ಬಂದಿಯಿಂದ ಆರಂಭವಾಯಿತು. ಅಂತಿಮವಾಗಿ 27 ದಿನಗಳಲ್ಲಿ 2020ರ ಏಪ್ರಿಲ್ 14 ರಂದು ಸೇತುವೆ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿತು ಮತ್ತು ಎಲ್ಲ ಸುರಕ್ಷತಾ ಕ್ರಮಗಳನ್ನು ಪೂರೈಸಿತು. ಅದನ್ನು ಭಾರೀ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅದರ ಸಾಮರ್ಥ್ಯವನ್ನು 24 ಟನ್ ಗಳಿಂದ 40 ಟನ್ ಗೆ ಹೆಚ್ಚಳ ಮಾಡಲಾಯಿತು. ಮೇಲ್ಮೈ ಸುಬಾನ್ ಸಿರಿ ಜಿಲ್ಲೆಯ ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿ ಅಗತ್ಯತೆಗಳು ಹಾಗೂ ಸೇನಾ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಢು ಇದನ್ನು ನಿರ್ಮಿಸಲಾಗಿದೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೇತುವೆಯನ್ನು ಉದ್ಘಾಟಿಸಿದರು ಮತ್ತು ಇಂದಿನಿಂದ ಅದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಸುರಕ್ಷಿತ ಮತ್ತು ತ್ವರಿತವಾಗಿ ಸೇತುವೆ ನಿರ್ಮಾಣಗೊಂಡಿರುವುದು, ಬಿಆರ್ ಒ, ರಕ್ಷಣಾ ಸಚಿವಾಲಯ ಮತ್ತು ಅರುಣಾಚಲಪ್ರದೇಶ ಸರ್ಕಾರದ ನಡುವೆ ನಿರಂತರ ಸಮನ್ವಯ ಮತ್ತು ಸಹಕಾರವನ್ನು ಪ್ರತಿಬಿಂಬಿಸುತ್ತದೆ.

 

https://ci4.googleusercontent.com/proxy/YqKOYSEOb-2bkm8JwVHiG0RCF2Zmv9TYMprJ_CbIq8oDlsTBfgqBvYITfu1yQHpb7ke8ZOe8NyPGgeAhR3deDYrQG8akIoNFL2GO5acQyePXa4c=s0-d-e1-ft#https://static.pib.gov.in/WriteReadData/userfiles/image/PIC16JZK.jpg

https://ci6.googleusercontent.com/proxy/vuVxdgm4YuiI1pzZOhv53sPgb4HAObLctIafHf6Mdo_gQfXFun3tbXhATPyX5bIAWJRmn0NiWXJqSQj7kteBV_0HNpyH8z8rqALxdxU_sAU0nss=s0-d-e1-ft#https://static.pib.gov.in/WriteReadData/userfiles/image/PIC22KQY.jpg

***


(Release ID: 1616551) Visitor Counter : 245