ಸಂಸ್ಕೃತಿ ಸಚಿವಾಲಯ
ಕೊರೊನಾ ಯೋಧರಿಗೆ ಗೌರವ ಸೂಚಿಸಲು ಕೆಂಪು ಕೋಟೆ, ಕುತುಬ್ ಮಿನಾರ್ ಹಾಗು ಹೂಮಾಯೂನ್ ಸಮಾಧಿ ವಿಶೇಷ ರೀತಿಯಲ್ಲಿ ಬೆಳಗುತ್ತಿವೆ
Posted On:
18 APR 2020 9:30PM by PIB Bengaluru
ಕೊರೊನಾ ಯೋಧರಿಗೆ ಗೌರವ ಸೂಚಿಸಲು ಕೆಂಪು ಕೋಟೆ, ಕುತುಬ್ ಮಿನಾರ್ ಹಾಗು ಹೂಮಾಯೂನ್ ಸಮಾಧಿ ವಿಶೇಷ ರೀತಿಯಲ್ಲಿ ಬೆಳಗುತ್ತಿವೆ
ವಿಶ್ವ ಪರಂಪರೆ ದಿನದಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ ಭಾರತದ ಪುರಾತತ್ವ ಶಾಸ್ತ್ರೀಯ ದೆಹಲಿ ವಲಯ
ಭಾರತದ ಪುರಾತತ್ವ ಶಾಸ್ತ್ರೀಯ ದೆಹಲಿ ವಲಯ ವಿಶ್ವ ಪರಂಪರೆ ದಿನದಂದು ದೆಹಲಿಯಲ್ಲಿ ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಹೂಮಾಯೂನ್ ಸಮಾಧಿ ವಿಶೇಷ ರೀತಿಯಲ್ಲಿ ಬೆಳಗುವ ಮೂಲಕ ಕೊರೊನಾ ಯೋಧರಿಗೆ ಗೌರವ ಸೂಚಿಸಿದರು. ಇದರ ಜೊತೆಗೆ ಎ ಎಸ್ ಐ ದೆಹಲಿ ವಲಯದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಸ್ಮಾರಕಗಳನ್ನು ಮತ್ತು ತಮ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಗೌರವಿಸಲು ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಪ್ರಮಾಣ ವಚನ ಬೋಧಿಸಲಾಯಿತು.

ಈ ವಿಡಿಯೋ ಕಾನ್ಫೆರೆನ್ಸಿಂಗ್ ನಲ್ಲಿ ಸಿ ಎಸ್ ಹೆಚ್ ಪಿ ಪಬ್ಲಿಕ್ ಶಾಲೆ, ಪ್ರತಾಪ್ ವಿಹಾರ್, ಗಾಜಿಯಾಬಾದ್ ಮತ್ತು ನೋಯ್ಡಾದ ಎ ಎಸ್ ಪಿ ಎ ಎಂ ಸ್ಕಾಟಿಶ್ ಶಾಲೆಯ ಮಕ್ಕಳು ತಮ್ಮ ಶಿಕ್ಷಕರ ಜೊತೆಗೂಡಿ ಪ್ರಮಾಣವಚನ ಸ್ವೀಕರಿಸಿದರು. ಒಟ್ಟು 60 ಶಿಕ್ಷಕರು ಮತ್ತು 247 ಶಾಲಾ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ಸಿ ಎಸ್ ಹೆಚ್ ಪಿ ಪಬ್ಲಿಕ್ ಶಾಲೆ, ಪ್ರತಾಪ್ ವಿಹಾರ್, ಗಾಜಿಯಾಬಾದ್ ನ 9ನೇ, 10 ನೇ ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳು ಮತ್ತು ನೋಯ್ಡಾದ ಎ ಎಸ್ ಪಿ ಎ ಎಂ ಸ್ಕಾಟಿಶ್ ಶಾಲೆಯ ವರ್ಗ 1 ಎ ಮತ್ತು 1 ಬಿ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪ್ರಮಾಣವಚನ ಸ್ವೀಕರಿಸಿದರು.

ಮಾನವಕುಲಕ್ಕೆ ಕೊರೊನಾ ಯೋಧರು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಎ ಎಸ್ ಐ ದೆಹಲಿ ವಲಯ ಮೂರೂ ಸ್ಮಾರಕಗಳನ್ನು ಒಂದು ವಿಶೇಷ ರೀತಿಯಲ್ಲಿ ಬೆಳಗಿಸಿದರು. ಕೆಂಪು ಕೋಟೆಯಲ್ಲಿ ‘ಹಮ್ ಜೀತೆಂಗೆ’ ಎಂಬ ಸಂದೇಶದೊಂದಿಗೆ ಮೇಣದ ಬತ್ತಿಗಳನ್ನು ಭಾರತದ ನಕ್ಷೆಯ ರೂಪದಲ್ಲಿ ಜೋಡಿಸಿ ಬೆಳಗಿಸಲಾಯಿತು.

ಕುತುಬ್ ಮಿನಾರ್ ನಲ್ಲಿ ‘ಸ್ಟೇ ಹೋಂ ಸ್ಟೇ ಸೇಫ್’ ಎಂಬ ಸಂದೇಶದೊಂದಿಗೆ ಮನೆಯ ಆಕಾರದಲ್ಲಿ ದೀಪಗಳನ್ನು ಜೋಡಿಸಲಾಗಿತ್ತು

ಹುಮಾಯೂನ್ ಸಮಾಧಿಯಲ್ಲಿ ಸಾಮಾನ್ಯ ಬೆಳಗುವಿಕೆ ಜೊತೆಗೆ 41 ಮೇಣದ ಬತ್ತಿಗಳನ್ನು ಹೆಚ್ಚುವರಿಯಾಗಿ ಬೆಳಗಿಸಲಾಯಿತು. ಇದು ಕೊರೊನಾ ವಿರುದ್ಧದ ನಮ್ಮ ಹೋರಾಟದಲ್ಲಿ ಕೈಗೊಳ್ಳಲಾದ 41 ದಿನಗಳ ಲಾಕ್ ಡೌನ್ ಅನ್ನು ಸೂಚಿಸುತ್ತದೆ.
***
(Release ID: 1616083)