ಹಣಕಾಸು ಸಚಿವಾಲಯ

ವಿಶ್ವ ಬ್ಯಾಂಕ್ – ಐಎಂಎಫ್ ನ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

प्रविष्टि तिथि: 17 APR 2020 7:44PM by PIB Bengaluru

ವಿಶ್ವ ಬ್ಯಾಂಕ್ – ಐಎಂಎಫ್ ನ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೋವಿಡ್-19 ಎದುರಿಸಲು ಬಡವರು ಮತ್ತು ದುರ್ಬಲ ವರ್ಗದವರಿಗೆ ಸಾಮಾಜಿಕ ಬೆಂಬಲ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡ ಹಣಕಾಸು ಸಚಿವರು; ಸಾಂಸ್ಥಿಕ ಮತ್ತು ನಿಯಂತ್ರಣ ಪಾಲನೆ ವಿಚಾರದಲ್ಲಿ ಸಂಸ್ಥೆಗಳಿಗೆ ಹಲವು ಪರಿಹಾರ ಕ್ರಮ

 

https://ci6.googleusercontent.com/proxy/FET12P6GiL4ujQ0aTwOngmRIKCQzgxNOg8h1FUzj6Lgz9KoqbJ1QVY7nMdd1HgPpA31Vi_iGrn1vFPy7KQgmsGeGrmsjT5uhztX-36GfnfSf_MVKdOMG=s0-d-e1-ft#https://static.pib.gov.in/WriteReadData/userfiles/image/image001UE8L.jpg

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು, ಅಭಿವೃದ್ಧಿ ಸಮಿತಿಯ 101ನೇ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕೋವಿಡ್-19 ತುರ್ತು ಪರಿಸ್ಥಿತಿಗೆ ಸ್ಪಂದಿಸುವ ವಿಶ್ವ ಬ್ಯಾಂಕ್ ನ ಸಮಿತಿಯ ವಿವರ ಮತ್ತು ಕೋವಿಡ್-19 ಸಾಲ ಉಪಕ್ರಮ ಐಡಿಎ ರಾಷ್ಟ್ರಗಳ ಬೆಂಬಲ ಕ್ರಿಯೆಗೆ ಅಂತಾರಾಷ್ಟ್ರೀಯ ಸಹಕಾರ, ಮತ್ತಿತರ ವಿಚಾರಗಳು ಸಭೆಯ ಪ್ರಮುಖ ಚರ್ಚಾ ವಿಷಯಗಳಾಗಿದ್ದವು.

ಈ ವಿಚಾರ ಗೋಷ್ಠಿಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಭಾರತದಲ್ಲಿ ಜನಸಂಖ್ಯಾ ಗಾತ್ರವನ್ನು ಗಮನಿಸಿದರೆ ಭಾರತ, ಕೋವಿಡ್-19ನ ಪ್ರಮುಖ ಹಾಟ್ ಸ್ಪಾಟ್ ತಾಣವಾಗಬೇಕಿತ್ತು. ಆದರೆ ಸರ್ಕಾರ ಅದ್ಯಾವುದಕ್ಕೂ ಅವಕಾಶ ನೀಡದೆ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ವ್ಯಾಪಕ ಪ್ರಯತ್ನಗಳನ್ನು ಆರಂಭಿಸಿತು. ಅವುಗಳಲ್ಲಿ ಪ್ರಮುಖ ಕ್ರಮಗಳೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪ್ರಯಾಣ ನಿರ್ಬಂಧ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮನೆಗಳಿಂದಲೇ ದುಡಿಯಲು ಮತ್ತು ಮನೆಗಳಲ್ಲೇ ವಾಸ್ತವ್ಯವಿರಲು ಅವಕಾಶ ಹಾಗೂ ನೇರ ಆರೋಗ್ಯ ಮಧ್ಯ ಪ್ರವೇಶದ ಮೂಲಕ ಸೋಂಕು ಪರೀಕ್ಷೆ ತಪಾಸಣೆ ಮತ್ತು ಚಿಕಿತ್ಸಾ ಪದ್ಧತಿ ಸಾಮರ್ಥ್ಯವೃದ್ಧಿಯಿಂದಾಗಿ ಸಾಂಕ್ರಾಮಿಕದ ಪರಿಣಾಮ ನಿಯಂತ್ರಿಸಲು ಸಹಕಾರಿಯಾಯಿತು ಎಂದರು.

ಸರ್ಕಾರ ಆರೋಗ್ಯ ಕಾರ್ಯಕರ್ತರಿಗೆ ಸುಮಾರು 23 ಬಿಲಿಯನ್ ಡಾಲರ್ ಉಚಿತ ಆರೋಗ್ಯ ವಿಮೆ ಸೌಲಭ್ಯ, ನಗದು ವರ್ಗಾವಣೆ, ಉಚಿತ ಆಹಾರ ಮತ್ತು ಅನಿಲ ವಿತರಣೆ ಮತ್ತು ತೊಂದರೆಗೀಡಾದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕ್ರಮಗಳು ಘೋಷಣೆ ಮಾಡಿರುವುದನ್ನು ಹಣಕಾಸು ಸಚಿವರು ವಿವರಿಸಿದರು. ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ವಿಶೇಷವಾಗಿ ಎಸ್ಎಂಇ ಸಂಸ್ಥೆಗಳಿಗೆ ಆರ್ಥಿಕ ಅವಕಾಶಗಳಿಂದ ಇದ್ದಕ್ಕಿದ್ದಂತೆ ಆದ ನಷ್ಟವನ್ನು ಭರಿಸಲು ಸರ್ಕಾರ ಆದಾಯ ತೆರಿಗೆ, ಜಿಎಸ್ ಟಿ, ಸೀಮಾಸುಂಕ ಹಣಕಾಸು ಸೇವೆಗಳು ಮತ್ತು ಕಾರ್ಪೊರೇಟ್ ವ್ಯವಹಾರಗಳು ಸೇರಿದಂತೆ ಸಾಂಸ್ಥಿಕ ಮತ್ತು ನಿಯಂತ್ರಣ ನಿಯಮ ಪಾಲನೆಯಲ್ಲಿ ಪರಿಹಾರಗಳನ್ನು ನೀಡಿದೆ. ಕೇಂದ್ರ ಬ್ಯಾಂಕ್ ಕೂಡ ಉದ್ದಿಮೆಗಳಿಗೆ ಹೆಚ್ಚು ಅವಕಾಶ ಮಾಡಿಕೊಟ್ಟಿದೆ. ನಿಯಂತ್ರಕರು(ರೆಗ್ಯುಲೇಟರ್ ಗಳು) ಮಾರುಕಟ್ಟೆ ಏರಿಳಿತಗಳನ್ನು ತಪ್ಪಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ. ಸರ್ಕಾರ ಸಂಬಂಧಿಸಿದವರೊಂದಿಗೆ ನಿರಂತರವಾಗಿ ಕಾರ್ಯೋನ್ಮುಖವಾಗಿದ್ದು, ಮಾನವೀಯತೆಯ ಆಧಾರದಲ್ಲಿ ಹೆಚ್ಚಿನ ನೆರವು ಮತ್ತು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಜಾಗತಿಕ ಸಮುದಾಯದ ಜವಾಬ್ದಾರಿಯುತ ಪ್ರಜೆಗಳಾಗಿರುವ ನಾವು ಅಗತ್ಯ ರಾಷ್ಟ್ರಗಳಿಗೆ ಗಂಭೀರ ಔಷಧಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದೇವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದರು ಮತ್ತು ಅಗತ್ಯಬಿದ್ದರೆ ನಾವು ಆ ಕೆಲಸವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು. ಕೋವಿಡ್-19ಗೆ ಪ್ರತಿ ಸ್ಪಂದಿಸುವ ಸೌಕರ್ಯವನ್ನು ಅತ್ಯಂತ ತ್ವರಿತವಾಗಿ ವಿಶ್ವ ಬ್ಯಾಂಕ್ ನ ಗುಂಪು ಪರಿಣಾಮಕಾರಿಯಾಗಿ ಹೊರತಂದಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

***


(रिलीज़ आईडी: 1615547) आगंतुक पटल : 210
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Punjabi , Gujarati , Tamil , Telugu