ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಹರಡುವಿಕೆಯ ನಿರ್ದಿಷ್ಟ ಪ್ರದೇಶದ ತಂತ್ರಗಳು ಮತ್ತು ನಿರ್ಧಾರಗಳಿಗೆ ಸಹಾಯ ಮಾಡಲು ಸಂಯೋಜಿತ ಜಿಯೋಸ್ಪೇಷಿಯಲ್ ಪ್ಲಾಟ್‌ಫಾರ್ಮ್

Posted On: 15 APR 2020 7:23PM by PIB Bengaluru

ಕೋವಿಡ್-19 ಹರಡುವಿಕೆಯ ನಿರ್ದಿಷ್ಟ ಪ್ರದೇಶದ ತಂತ್ರಗಳು ಮತ್ತು ನಿರ್ಧಾರಗಳಿಗೆ ಸಹಾಯ ಮಾಡಲು ಸಂಯೋಜಿತ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್

ಮೊಬೈಲ್ ಅಪ್ಲಿಕೇಶನ್ ಆರೋಗ್ಯ ಸೇತುಮೊಬೈಲ್ ಅಪ್ಲಿಕೇಶನ್ಗೆ ಪೂರಕವಾಗಿರುತ್ತದೆ

 

ಪ್ರಸಕ್ತ ಕೋವಿಡ್-19 ಹರಡುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ಸಹಾಯ ಮಾಡಲು ಮತ್ತು ಚೇತರಿಕೆಯ ಹಂತದಲ್ಲಿ ಸಾಮಾಜಿಕ ಆರ್ಥಿಕ ಪರಿಣಾಮವನ್ನು ನಿಭಾಯಿಸಲು ನಿರ್ದಿಷ್ಟ ತಂತ್ರಗಳಿಗೆ ನೆರವಾಗಲು, ಲಭ್ಯವಿರುವ ನಿರ್ದಿಷ್ಟ ಸ್ಥಳದ ಮಾಹಿತಿಗೆ ಸಂಬಂಧಿಸಿದ ಜಿಯೋಸ್ಪೇಷಿಯಲ್ ದತ್ತಾಂಶಗಳು, ಮಾನದಂಡ ಆಧಾರಿತ ಸೇವೆಗಳು ಮತ್ತು ವಿಶ್ಲೇಷಣಾತ್ಮಕ ಪರಿಕರಗಳಿಂದ ಸಮಗ್ರ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್ ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಸಿದ್ಧಪಡಿಸಿದೆ. .

ವೇದಿಕೆಯು ಆರಂಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾರ್ವಜನಿಕ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ತರುವಾಯ ಆರೋಗ್ಯ, ಸಾಮಾಜಿಕ ಆರ್ಥಿಕ ಸಂಕಷ್ಟ ಮತ್ತು ಜೀವನೋಪಾಯದ ಸವಾಲುಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ನಾಗರಿಕರು ಮತ್ತು ಸಂಸ್ಥೆಗಳಿಗೆ ಅಗತ್ಯವಾದ ಭೌಗೋಳಿಕ ಮಾಹಿತಿಯ ನೆರವನ್ನು ಒದಗಿಸುತ್ತದೆ.

ಮೊಬೈಲ್ ಆ್ಯಪ್ ಸಹ್ಯೋಗ್, ಹಾಗೆಯೇ ಸರ್ವೆ ಆಫ್ ಇಂಡಿಯಾ (ಎಸ್ ) ಸಿದ್ಧಪಡಿಸಿದ ಮತ್ತು ನಿರ್ವಹಿಸುವ ವೆಬ್ ಪೋರ್ಟಲ್ (https://indiamaps.gov.in/soiapp/ ) ಅನ್ನು ಸಮುದಾಯದ ಮೂಲಕ ಕೋವಿಡ್-19 ನಿರ್ದಿಷ್ಟ ಜಿಯೋಸ್ಪೇಷಿಯಲ್ ಡೇಟಾಸೆಟ್ಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ ಇದರಿಂದ ಸಾಂಕ್ರಾಮಿಕ ರೋಗವನ್ನು ಭಾರತ ಸರ್ಕಾರವು ಎದುರಿಸುವ ಚಟುವಟಿಕೆಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಭಾರತದ ಸರ್ಕಾರದ ಕಾರ್ಯತಂತ್ರದ ಪ್ರಕಾರ ಅಗತ್ಯವಿರುವ ಮಾಹಿತಿ ಮಾನದಂಡಗಳು ಮತ್ತು ದೊಡ್ಡ ಸಾಂಕ್ರಾಮಿಕ ಹರಡುವುದನ್ನು ಹತೋಟಿಕೆ ತರುವ ಯೋಜನೆಗಳನ್ನು ಸಹ್ಯೋಗ್ ್ಯಪ್ ನಲ್ಲಿ ಸೇರಿಸಲಾಗಿದೆ.

ಸಂಪರ್ಕಿತ ವ್ಯಕ್ತಿಗಳ ಪತ್ತೆಹಚ್ಚುವಿಕೆ, ಸಾರ್ವಜನಿಕ ಜಾಗೃತಿ ಮತ್ತು ಸ್ವಯಂ-ಮೌಲ್ಯಮಾಪನದ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಪ್ರಾರಂಭಿಸಿರುವ ಆರೊಗ್ಯ ಸೇತುಮೊಬೈಲ್ ಆ್ಯಪ್ ಗೆ ಮೊಬೈಲ್ ಆ್ಯಪ್ ಪೂರಕವಾಗಿರುತ್ತದೆ. ಮಧ್ಯಪ್ರದೇಶ, ಒಡಿಶಾ, ಪಂಜಾಬ್, ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿನ ರಾಜ್ಯ ಪ್ರಾದೇಶಿಕ ದತ್ತಾಂಶ ಮೂಲಸೌಕರ್ಯ (ಎಸ್ಎಸ್ಡಿಐ) ಸಂಬಂಧಿತ ಆರೋಗ್ಯ ದತ್ತಾಂಶಗಳ ಸಂಯೋಜನೆಗಾಗಿ ರಾಜ್ಯ ಜಿಯೋಪೋರ್ಟಲ್ಗಳ ಮೂಲಕ ಆಯಾ ರಾಜ್ಯಗಳಲ್ಲಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸುವದಕ್ಕಾಗಿ ಮಾನದಂಡ ಆಧಾರಿತ ಜಿಯೋಸ್ಪೇಷಿಯಲ್ ಡೇಟಾ ಸೇವೆಗಳನ್ನು ಒದಗಿಸುತ್ತಿದೆ.

ಸಂಯೋಜಿತ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್ , ಕೋವಿಡ್-19 ಹರಡುವಿಕೆಯಿಂದ ಉಂಟಾದ ರಾಷ್ಟ್ರದ ಆರೋಗ್ಯ ತುರ್ತುಸ್ಥಿತಿಯ ನಿರ್ವಹಣೆಯನ್ನು ಬಲಪಡಿಸುತ್ತದೆ ಮತ್ತು ಮಾನವ, ವೈದ್ಯಕೀಯ, ತಾಂತ್ರಿಕ, ಮೂಲಸೌಕರ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಡುವಿನ ಪ್ರಾದೇಶಿಕ ದತ್ತಾಂಶ, ಮಾಹಿತಿ ಮತ್ತು ಸಂಪರ್ಕವನ್ನು ಸರಾಗವಾಗಿ ಒದಗಿಸುವ ಮೂಲಕ ಸಾಮಾಜಿಕ ಆರ್ಥಿಕ ಚೇತರಿಕೆಯ ಪ್ರಕ್ರಿಯೆಗೆ ನೆರವಾಗುತ್ತದೆ.

"ನಿರ್ಧಾರ ತೆಗೆದುಕೊಳ್ಳುವಿಕೆ, ಆಡಳಿತ ಮತ್ತು ಅಭಿವೃದ್ಧಿಗೆ ಜಿಯೋಸ್ಪೇಷಿಯಲ್ ಡೇಟಾದೊಂದಿಗೆ ಜನಸಂಖ್ಯಾ ಮಾಹಿತಿಯ ಸಂಯೋಜನೆ ಅತ್ಯಗತ್ಯ. ಕೋವಿಡ್-19 ಹರಡುವಿಕೆಯ ಸಂದರ್ಭದಲ್ಲಿ, ಪ್ರಯತ್ನವು ಆರೋಗ್ಯ ಸೇತುವಿನಂಥ ಪ್ಲಾಟ್ಫಾರ್ಮ್ಗಳಿಗೆ ವಿಶೇಷ ಡಿಜಿಟಲ್ ರೀತಿಯಲ್ಲಿ ಸಾಧ್ಯವಾಗಿಸಲಿದೆ" ಎಂದು ಡಿ ಎಸ್ ಟಿ ಕಾರ್ಯದರ್ಶಿಯಾದ ಪ್ರೊಫೆಸರ್ ಅಶುತೋಷ್ ಶರ್ಮಾ ರವರು ಹೇಳಿದರು.

ಜಿಯೋಸ್ಪೇಷಿಯಲ್ ಮಾಹಿತಿಯನ್ನು ಸಂಯೋಜಿಸುವಲ್ಲಿ ಡಿಎಸ್ ಟಿಯ ಪ್ರಯತ್ನಗಳು ಸಾಂಕ್ರಾಮಿಕ ರೋಗಗಳಂತಹ ಬಿಕ್ಕಟ್ಟನ್ನು ಎದುರಿಸಲು ತೆಗೆದುಕೊಳ್ಳುವ ನಿರ್ಧಾರಗಳನ್ನು ಮತ್ತು ಅವುಗಳ ಬಗ್ಗೆ ದೇಶದೆಲ್ಲೆಡೆ ತಿಳಿಸಲು ದೇಶಕ್ಕೆ ಸಹಾಯ ಮಾಡುತ್ತದೆ.

(ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಸಕಿಸಿ : ರ್ವೇಯರ್ ಜನರಲ್ (ತಾಂತ್ರಿಕ), ಸರ್ವೇಯರ್ ಜನರಲ್ ಆಫೀಸ್, ಸರ್ವೇ ಆಫ್ ಇಂಡಿಯಾ ಡೆಹ್ರಾಡೂನ್ -248001 ; 0135-2746805 ; Pankaj.mishra.soi[at]gov[dot]in ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ)

***



(Release ID: 1614952) Visitor Counter : 226