ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೋವಿಡ್-19: ಸ್ಮಾರ್ಟ್ ಸಿಟಿಗಳಲ್ಲಿ ಸಾರ್ವಜನಿಕ ಸ್ಥಳಗಳ ಸೋಂಕುನಿವಾರಣೆ ಕ್ರಮ

Posted On: 09 APR 2020 5:00PM by PIB Bengaluru

ಕೋವಿಡ್-19: ಸ್ಮಾರ್ಟ್ ಸಿಟಿಗಳಲ್ಲಿ ಸಾರ್ವಜನಿಕ ಸ್ಥಳಗಳ ಸೋಂಕುನಿವಾರಣೆ ಕ್ರಮ

 

ಸಾರ್ವಜನಿಕ ಸ್ಥಳಗಳು (ಬೀದಿಗಳು, ಮಾರುಕಟ್ಟೆಗಳು, ಶಾಪಿಂಗ್ ಸ್ಥಳಗಳು, ಸಮುದಾಯ ಕೇಂದ್ರಗಳು, ಉದ್ಯಾನವನಗಳು, ಆಟದ ಮೈದಾನಗಳು ಮತ್ತು ವಸತಿ ಪ್ರದೇಶಗಳಲ್ಲಿನ ನೆರೆಹೊರೆಯ ಸ್ಥಳಗಳು ಸೇರಿದಂತೆ) ಸಮುದಾಯಗಳ ಸಾಮಾಜಿಕ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಕೊರೊನಾ ವೈರಸ್ ಕಾಯಿಲೆ 2019 (ಕೋವಿಡ್-19) ಯು ನಾವೆಲ್ ಕೊರೊನಾ ವೈರಸ್ (SARS-CoV-2) ನಿಂದ ಉಂಟಾಗುವ ತೀವ್ರವಾದ ಉಸಿರಾಟದ ಖಾಯಿಲೆಯಾಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಸೋಂಕಿತರ ಉಸಿರಾಟದಲ್ಲಿರುವ  ಹನಿಗಳು, ಭಾದಿತರೊಂದಿಗೆ ನೇರ ಸಂಪರ್ಕ ಮತ್ತು ಕಲುಷಿತ ಮೇಲ್ಭಾಗಗಳು/ ವಸ್ತುಗಳ ಮೂಲಕ ಹರಡುತ್ತದೆ.   ವಿವಿಧ ಅವಧಿಯವರೆಗೆ ವೈರಸ್ ಪರಿಸರದ ಮೇಲ್ಭಾಗಗಳಲ್ಲಿ ಉಳಿದುಕೊಂಡಿದ್ದರೂ, ರಾಸಾಯನಿಕ ಸೋಂಕುನಿವಾರಕಗಳಿಂದ ಇದು ಸುಲಭವಾಗಿ ನಿಷ್ಕ್ರಿಯಗೊಳ್ಳುತ್ತದೆ.

ಕೋವಿಡ್-19 ಹರಡುವಿಕೆಯನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಲ್ಪಟ್ಟಾಗಿನಿಂದ, ಭಾರತದ ನಗರಗಳು, ನಗರಗಳನ್ನು ಸ್ವಚ್ಛಗೊಳಿಸುವಲ್ಲಿ ಮಹತ್ವದ ಪ್ರಯತ್ನಗಳನ್ನು ಮಾಡುತ್ತಿವೆ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳನ್ನು ಸ್ಥಳೀಯ ವೈರಸ್ ಹರಡುವಿಕೆಯ ಅಪಾಯಕಾರಿ ಪ್ರದೇಶಗಳೆಂದು ಪರಿಗಣಿಸಲಾಗಿದೆ. ಮಾರ್ಚ್ 25, 2020 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದಾಗಿನಿಂದ, ನಗರಗಳು ಬಸ್ / ರೈಲ್ವೆ ನಿಲ್ದಾಣಗಳು, ಬೀದಿಗಳು, ಮಾರುಕಟ್ಟೆಗಳು, ಆಸ್ಪತ್ರೆ ಆವರಣಗಳು, ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಸೋಂಕುರಹಿತಗೊಳಿಸಲು ಹಲವಾರು ವಿಧಾನಗಳನ್ನು ಅನುಸರಿಸುತ್ತಿವೆ.

https://static.pib.gov.in/WriteReadData/userfiles/image/image001R9KM.jpg

ನಗರಾಡಳಿತವು ಅಗ್ನಿಶಾಮಕದಳಗಳೊಂದಿಗೆ ಕೈಜೋಡಿಸಿ ಅಗ್ನಿಶಾಮಕ ವಾಹನ ಮತ್ತು ವಾಟರ್ ವಾಶ್ ಪಂಪ್ ಇತ್ಯಾದಿಗಳನ್ನು ಬಳಸಿ ಸೋಂಕುನಿವಾರಕಗಳನ್ನು ಸಿಂಪಡಿಸುವ ಮೂಲಕ ನಗರದ ಎಲ್ಲಾ ಬೀದಿಗಳನ್ನು ಸ್ವಚ್ಛಗೊಳಿಸಿವೆ.

 https://ci5.googleusercontent.com/proxy/wQt8NmT35F6Rn-8wY2LS477hUlVy2iisjuhv5RoKBFZfdx1nAXYryG9Uz6Atee80fMlIcr6i081cdJcsHvDfy57ogHDB7ReoXXGk0m16Z8UVRQJuV2zl=s0-d-e1-ft#https://static.pib.gov.in/WriteReadData/userfiles/image/image002TE6I.jpg

https://ci5.googleusercontent.com/proxy/D2-bv1aKAlJgrTkZQUiL-FFFAblq5nItNWUwc6DaQ4G7gSfrXIN_zUv7_55RWpErX5yyxCrAhiJ6A8Z41MI4VOL-OxKL83zkwLMwKAl3SS8qXQUaKH4T=s0-d-e1-ft#https://static.pib.gov.in/WriteReadData/userfiles/image/image003YAXV.jpg

ಮಹಾನಗರಪಾಲಿಕೆಯ ಕೆಲಸಗಾರರು ಬೆಂಗಳೂರಿನಲ್ಲಿ ಕೋವಿಡ್-19 ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸೋಂಕುನಿವಾರಕವನ್ನು ಸಿಂಪಡಿಸುತ್ತಿರುವರು

ಮತ್ತೊಂದು ನಗರದಲ್ಲಿ ಸೋಂಕುನಿವಾರಕವನ್ನು ಸಿಂಪಡಿಸುತ್ತಿರುವುದು

 

ತಾಜಾ ತರಕಾರಿಗಳಂತಹ ಅಗತ್ಯ ಸಾಮಗ್ರಿಗಳ ಲಭ್ಯತೆಗೆ ಅನುಕೂಲವಾಗುವಂತೆ ನಗರಗಳಲ್ಲಿ ಕೃಷಿ ಮಾರುಕಟ್ಟೆಗಳನ್ನು ಪುನರಾರಂಭಿಸಲಾಯಿತು ಮತ್ತು ಸ್ಥಳಗಳನ್ನು ಶುಚಿಯಾಗಿ ಮತ್ತು ಸುರಕ್ಷಿತವಾಗಿಡಲು ನಗರಾಡಳಿತಗಳು ಕ್ರಮ ಕೈಗೊಂಡಿವೆ.  ತರಕಾರಿ ಮಾರುಕಟ್ಟೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಕೈ ತೊಳೆಯುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ನಗರಗಳು ಸೋಡಿಯಂ ಹೈಪೋಕ್ಲೋರೈಟ್  ಬಳಸಿ ಸಾರ್ವಜನಿಕ ಸ್ಥಳಗಳ ಸೋಂಕುನಿವಾರಣೆಗಾಗಿ ಹೊಸ ವಿಧಾನಗಳನ್ನು ಬಳಸುತ್ತಿವೆ, ಉದಾಹರಣೆಗೆ ತಿರುಪ್ಪೂರ್ ಇತ್ತೀಚೆಗೆ ಸೋಂಕುನಿವಾರಕ ಸುರಂಗವನ್ನು ಪ್ರಾರಂಭಿಸಿದೆ,  ಇದನ್ನೇ ಅನುಸರಿಸಿ ಈಗ ಹಲವಾರು ನಗರಗಳು ತಮ್ಮ ಕೃಷಿ / ತರಕಾರಿ ಮಾರುಕಟ್ಟೆಗಳಲ್ಲಿ ಪ್ರಾರಂಭಿಸಲಾಗಿದೆ.  ಇದೇ ಮಾದರಿಯಲ್ಲಿ, ಅಗತ್ಯ ಸೇವೆಗಳನ್ನು ಒದಗಿಸಲು ವಿವಿಧ ಸಂಸ್ಥೆಗಳಿಗೆ ಸೋಂಕುನಿವಾರಕ  ಕೊಠಡಿಗಳ ಜವಾಬ್ದಾರಿಗಳನ್ನು ನೀಡಲಾಗಿದೆ.

https://ci5.googleusercontent.com/proxy/FfF1Aoh65DWmMCzEtsBNphcAl_-afcG-oM-X53Y1LhB3RAo9Cmm5DsuU87oOOPIM1lw_qoNIhsiQbqu1AYfFQiHxdA1NotzK2rlmZ3sJmPn89I3CQ7x9=s0-d-e1-ft#https://static.pib.gov.in/WriteReadData/userfiles/image/image004D5N3.gif

ಸಾರ್ವಜನಿಕ ಬೀದಿಗಳ ಸೋಂಕುನಿವಾರಕಗಳ ದಕ್ಷ ವ್ಯಾಪ್ತಿಗಾಗಿ, ರಾಜ್ ಕೋಟ್  ಮತ್ತು ಸೂರತ್ ನಗರಗಳು  ಹೈ ಕ್ಲಿಯರೆನ್ಸ್  ಬೂಮ್ ಸಿಂಪಡಿಸುವ ಯಂತ್ರಗಳನ್ನು ಅಳವಡಿಸಿಕೊಂಡಿವೆ.

https://ci6.googleusercontent.com/proxy/o08wbPMLrxpj89WYpm9fNv7vA_H8WyGygdRXgyoJ7u5F18iXtctFMJiYIX-1jxq4V70Fj5RVibcbC9rY-50HEmv0p7VBJxBt7ACmSJD54ZYKEIKxFPhf=s0-d-e1-ft#https://static.pib.gov.in/WriteReadData/userfiles/image/image005KH6K.jpg

ಸ್ಮಾರ್ಟ್ ನಗರಗಳಾದ ಚೆನ್ನೈ, ಬೆಂಗಳೂರು, ರಾಯ್ ಪುರ್ ಮತ್ತು ಗುವಾಹಟಿಯು ಮನುಷ್ಯರು ಪ್ರವೇಶಿಸಲಾಗದ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಸೋಂಕುರಹಿತಗೊಳಿಸಲು ಡ್ರೋನ್ ಗಳಂತಹ ತಂತ್ರಜ್ಞಾನ ಪರಿಹಾರಗಳನ್ನು ಬಳಸಲು ತಮ್ಮನ್ನು ಸಿದ್ಧಪಡಿಸಿಕೊಂಡಿವೆ.

ಸ್ಮಾರ್ಟ್ ನಗರಗಳು ಅಳವಡಿಸಿಕೊಂಡ ಕೆಲವು ಪ್ರಮುಖ ಕ್ರಮಗಳು:

ನಗರ

ಉಪಕ್ರಮಗಳು

ಗುವಾಹಾಟಿ

 ನೈರ್ಮಲ್ಯ ಚಟುವಟಿಕೆಗಳನ್ನು ನಗರದಾದ್ಯಂತ ನಡೆಸಲಾಗುತ್ತದೆ. ಯಾವುದೇ ರೀತಿಯ ಸೋಂಕಿನಿಂದ ಸುರಕ್ಷಿತವಾಗಿರಲು ನಗರದ ಎಲ್ಲಾ ಕಡೆಗಳಲ್ಲಿ ಸೋಂಕುನಿವಾರಕವನ್ನು ಸಿಂಪಡಿಸಲಾಗುತ್ತಿದೆ.  1,200 ಕಾರ್ಮಿಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ, ಮನೆ ಬಾಗಿಲಿಗೆ ಕಸ ಸಂಗ್ರಹಣೆಯನ್ನು ಬೆಳಿಗ್ಗೆ ನಡೆಸಲಾಗುವುದು, ಸೋಂಕುನಿವಾರಕಗಳನ್ನು ಸಿಂಪಡಿಸಲು ಸೂರ್ಯಾಸ್ತದ  ನಂತರ ನಗರದಾದ್ಯಂತ ಪೌರ ಕಾರ್ಮಿಕರನ್ನು ನಿಯೋಜಿಸಲಾಗುವುದು.

ಮುಜಾಫರ್ ಪುರ್

ಸೋಂಕುನಿವಾರಕ ಸಿಂಪಡಿಸುವಿಕೆ - ಫಾಗಿಂಗ್, ಆಂಟಿ-ಲಾರ್ವಾ ಸ್ಪ್ರೇ ಮತ್ತು ಸೋಂಕುನಿವಾರಕ ಸಿಂಪಡಣೆಯನ್ನು ಬಳಸಿಕೊಂಡು ಇಡೀ ನಗರದ ನೈರ್ಮಲ್ಯೀಕರಣ ಕಾರ್ಯ ನಡೆಯುತ್ತಿದೆ.

ಪಾಟ್ನಾ

ನಗರ ಸಭೆಯು  (ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್) 24 ಮಾರ್ಚ್ 2020 ರಿಂದ ಜೆಟ್ಟಿಂಗ್ ಯಂತ್ರಗಳನ್ನು ಬಳಸಿಕೊಂಡು ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳು ಸೋಂಕುನಿವಾರಕವಾಗಿರುವುದನ್ನು ಖಚಿತಪಡಿಸಿದೆ. ಬ್ಯಾಂಕುಗಳು, ಆಸ್ಪತ್ರೆಗಳು ಮುಂತಾದ ಎಲ್ಲಾ ಸಾರ್ವಜನಿಕರು ಉಪಯೋಗಿಸುವ ಕಟ್ಟಡಗಳ ನೈರ್ಮಲ್ಯೀಕರಣವನ್ನು ಕೈಗೊಳ್ಳಲಾಗಿದೆ. ಬಿಹಾರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಪಾಟ್ನಾ ಮುನ್ಸಿಪಲ್ ಕಾರ್ಪೋರೇಶನ್ ಸ್ವಚ್ಛಗೊಳಿಸಿತು. ಕೊರೊನಾ ವೈರಸ್ ಹರಡುವಿಕೆಯ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಧರ್ಮಶಾಲಾ

ಸಾರ್ವಜನಿಕ ಸ್ಥಳಗಳ ಸಮಗ್ರ ಸೋಂಕುನಿವಾರಣೆಗಾಗಿ ಸೋಡಿಯಂ ಹೈಪೋಕ್ಲೋರೈಟ್ (ಬ್ಲೀಚ್) ದ್ರಾವಣವನ್ನು ಸಿಂಪಡಿಸಲು ಅಗ್ನಿಶಾಮಕ ವಾಹನಗಳನ್ನು ಬಳಸಲಾಯಿತು.

ಧರ್ಮಶಾಲಾ

ಮೆಕ್ಲಿಯೋಡ್ ಗಂಜ್ನ ಸಂಪೂರ್ಣ ನಿರ್ಬಂಧಿತ ಪ್ರದೇಶದಲ್ಲಿ ಅಗತ್ಯ ಸರಕುಗಳ ವಿತರಣೆಗೆ   ತೊಡಗಿರುವ ಎಲ್ಲಾ ಸರಕು ವಾಹನಗಳು, ಅವುಗಳನ್ನು ನಿರ್ಗಮನ ಸ್ಥಳಗಳಲ್ಲಿ ಧರ್ಮಶಾಲಾ ನಗರಸಭೆಯು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿದೆ.

ಜಮ್ಮು

ಜಮ್ಮು ನಗರದ ಪ್ರಮುಖ ಸ್ಥಳಗಳನ್ನು ಯುದ್ಧೋಪಾದಿಯಲ್ಲಿ  ಸ್ವಚ್ಛಗೊಳಿಸುವುದು. ನೈರ್ಮಲ್ಯೀಕರಣದ ಕಾರ್ಯದಲ್ಲಿ   ಸ್ಪ್ರೇ ಪಂಪ್‌ಗಳು ಮತ್ತು ಸೋಡಿಯಂ ಹೈಪೋಕ್ಲೋರೈಟ್ ಅನ್ನು ಎಲ್ಲಾ 75 ಕೌನ್ಸಿಲರ್‌ಗಳಿಗೆ ಪ್ರತಿಯೊಂದು ವಾರ್ಡಿನಲ್ಲಿ ಸಿಂಪಡಿಸಲು ಕಳುಹಿಸಲಾಗಿದೆ.

ರಾಂಚಿ

ಫಾಗಿಂಗ್ ಯಂತ್ರಗಳನ್ನು ಬಳಸಿಕೊಂಡು ಇಡೀ ನಗರದ ನೈರ್ಮಲ್ಯೀಕರಣಕ್ಕೆ 1% ಹೈಪೋಕ್ಲೋರೈಟ್ ದ್ರಾವಣವನ್ನು ಬಳಸಲಾಗುತ್ತದೆ.

ಕವರಟ್ಟಿ

ಎಲ್ಲಾ ಚಟುವಟಿಕೆಗಳನ್ನು ಕೇಂದ್ರಾಡಳಿತ ಪ್ರದೇಶದ ಆಡಳಿತವು  ಮತ್ತು ಆಯಾ ಆರೋಗ್ಯ ಇಲಾಖೆಯು ನಡೆಸುತ್ತಿದೆ. ನಗರವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ನೈರ್ಮಲ್ಯೀಕರಣ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ

ಶಿಲ್ಲೊಂಗ್

ನಿಯಮಿತವಾಗಿ ಸಿಂಪಡಿಸುವಿಕೆ ಮತ್ತು ಜಾಗೃತಿ ಅಭಿಯಾನದ ಮೂಲಕ ನಗರದ ನೈರ್ಮಲ್ಯೀಕರಣವು ನಗರ ಪೊಲೀಸರ ಕಟ್ಟುನಿಟ್ಟಿನ ಮೇಲ್ವಿಚಾರಣೆಯೊಂದಿಗೆ ನಡೆಯುತ್ತದೆ. ಲಾಕ್‌ ಡೌನ್ ಹೊರಡಿಸಲಾಗಿದೆ ಮತ್ತು ಕರ್ಫ್ಯೂ ಹೊರಡಿಸಿ ಸಾರ್ವಜನಿಕ ಸ್ಥಳಗಳಲ್ಲಿ 5 ಅಥವಾ ಹೆಚ್ಚಿನ ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ

ಐಜಾವ್ಲ್

 ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳ ಸುರಕ್ಷತೆಗಾಗಿ, ಆವರಣದ ಮುಖ್ಯ ದ್ವಾರದಲ್ಲಿ ಕೈ ತೊಳೆಯುವ ಬೇಸಿನ್ ಅನ್ನು ಇಡಲಾಗಿದೆ.

ಕೊಹಿಮಾ

ನಗರವನ್ನು ಸ್ವಚ್ಛಗೊಳಿಸಲು ರಸ್ತೆ ಸ್ವಚ್ಛಗೊಳಿಸುವ ವಾಹನಗಳ ಬಳಕೆ

ಭುಬನೇಶ್ವರ್

ಕೆಲವು ಬಿಎಸ್ ಸಿಎಲ್ ಅಧಿಕಾರಿಗಳು ಭುಬನೇಶ್ವರ್ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಪ್ರತಿಯೊಂದು ನಗರದ ಸೌಲಭ್ಯಗಳು ಮತ್ತು ವಸ್ತುಗಳ ಶುದ್ಧೀಕರಣ ಮತ್ತು ಶುಚಿಗೊಳಿಸುವಿಕೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಅಮೃತ್ ಸರ್

 ನಿರ್ದಿಷ್ಟಪಡಿಸಿದಂತೆ ರಾಸಾಯನಿಕಗಳನ್ನು ಬಳಸಿ ಇಡೀ ನಗರದ ನೈರ್ಮಲ್ಯೀಕರಣ ನಡೆಯುತ್ತಿದೆ. ಅಂತಹ ದ್ರವೌಷಧ ಸ್ಪ್ರೇಗಳಿಗೆ ಅಗ್ನಿಶಾಮಕ ದಳದ ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ.

ಚೆನ್ನೈ

ಸೋಂಕುನಿವಾರಕದ ಪ್ರಕ್ರಿಯೆಯಲ್ಲಿ ಡ್ರೋನ್ ಗಳ ಬಳಕೆ.

ಕೊಯಂಬತ್ತೂರು

ಸಾರ್ವಜನಿಕ ಸ್ಥಳಗಳನ್ನು  ಕ್ರಿಮಿರಹಿತಗೊಳಿಸು ಡ್ರೋನ್ ಗಳನ್ನು ಬಳಸಲಾಗುತ್ತದೆ

ಮಧುರೈ

 ಪ್ರಮುಖ ಸ್ಥಳಗಳಲ್ಲಿ ಕೈ ತೊಳೆಯಲು ವಾಶ್ ಬೇಸಿನ್‌ಗಳೊಂದಿಗೆ ಸಾರ್ವಜನಿಕ ನಲ್ಲಿಗಳನ್ನು ಒದಗಿಸಿರುವ ಸಂಖ್ಯೆ - 30. ಮಧುರೈ ನಗರ ಮುನ್ಸಿಪಲ್ ಕಾರ್ಪೋರೇಶನ್ ಸಿದ್ಧಪಡಿಸಿದ ಹ್ಯಾಂಡ್ ಸ್ಯಾನಿಟೈಜರ್ ಅನ್ನು   ಸಾರ್ವಜನಿಕರು ಮತ್ತು ಅಧಿಕಾರಿಗಳು ಸರ್ಕಾರಿ ಕಚೇರಿಯನ್ನು ಪ್ರವೇಶಿಸುವಾಗ ಉಪಯೋಗಿಸಲಾಗುತ್ತದೆ

 ಮಧುರೈ

ಪ್ರತಿದಿನ ಎರಡು ಬಾರಿ, ಏಳು ಜೆಟ್ ರೋಡ್ಡಿಂಗ್ ಯಂತ್ರಗಳನ್ನು ಬಳಸಿಕೊಂಡು ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು, ಶಾಲೆಗಳು, ರಸ್ತೆಗಳಲ್ಲಿ 5% ಲೈಜೋಲ್ ಹೊಂದಿರುವ ದ್ರವವನ್ನು ಉಪಯೋಗಿಸಲಾಗುತ್ತದೆ. ಮಧುರೈ ಕಾರ್ಪೊರೇಶನ್ ನ 100 ವಾರ್ಡ್ ಗಳನ್ನು ಒಳಗೊಂಡ ಬೀದಿಗಳಲ್ಲಿ 5% ಲೈಜೋಲ್ ದ್ರಾವಣವನ್ನು ಸೇರಿಸಿ 100 ಸಂಖ್ಯೆಯ ಹ್ಯಾಂಡ್ ಸ್ಪ್ರೇಯರ್ ಗಳನ್ನು ಬಳಸಲಾಗುತ್ತಿದೆ.

ತಂಜಾವೂರು

ಜೆಟ್ ರೋಡ್ಡಿಂಗ್ ಯಂತ್ರವನ್ನು ದೊಡ್ಡ ಬೀದಿಗಳಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ಬಳಸಿ ಸೋಂಕುನಿವಾರಕ ವಾಹನವಾಗಿ ಬಳಸಲಾಗುತ್ತಿದೆ. ಅದೇ ರೀತಿ ವಾಟರ್ ವಾಶ್ ಪಂಪ್ ಗಳನ್ನು ಸಣ್ಣ ಬೀದಿಗಳಲ್ಲಿ ಬಳಸಲಾಗುತ್ತಿದೆ

ತಂಜಾವೂರು

ಅಗ್ನಿಶಾಮಕ ಸೇವಾ ದಳಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದು, ಸೋಂಕುನಿವಾರಕ ಕಾರ್ಯಗಳಿಗಾಗಿ ಅವರ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು

ವೆಲ್ಲೋರ್

ನಗರದ ಎಲ್ಲಾ ಪ್ರವೇಶ ಸ್ಥಳಗಳನ್ನು ನಿಯಂತ್ರಿಸಲಾಗುತ್ತದೆ ಮತ್ತು ಪ್ರತ್ಯೇಕ ಪರಿಶೀಲನೆ ಮತ್ತು ಸ್ವಚ್ಛ ಗೊಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

 ತಿರುಪ್ಪೂರು

ಪ್ರಮುಖ ಸ್ಥಳಗಳಲ್ಲಿ ಸರಿಯಾದ ಸಾಮಾಜಿಕ ಅಂತರದೊಂದಿಗೆ ಕೈ ತೊಳೆಯುವ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ಗ್ರೇಟರ್ ವಾರಂಗಲ್

ಇಡೀ ನಗರದ ನೈರ್ಮಲ್ಯೀಕರಣ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ಇಲಾಖೆಗಳ ಸೇವೆಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಎಲ್ಲಾ ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸ್ವತಃ ಇದನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಕರೀಂ ನಗರ್

ಟ್ರಾಕ್ಟರ್ ನಲ್ಲಿ ಜೋಡಿಸಿದ  ಜೆಟ್ ಗಳಿಂದ ಮತ್ತು ಬ್ಲೀಚಿಂಗ್ ಪೌಡರ್ ಅನ್ನು ರಾಸಾಯನಿಕವಾಗಿ ಬಳಸಿ ಇಡೀ ನಗರದ ನೈರ್ಮಲ್ಯೀಕರಣ ಕಾರ್ಯ ನಡೆಯುತ್ತಿದೆ.

 

ನಗರ

ಉಪಕ್ರಮ

 ಅಗರ್ತಲಾ

ಇಡೀ ನಗರವನ್ನು ಸ್ವಚ್ಛ ಗೊಳಿಸಲಾಗಿದೆ.   1% ಹೈಪೋಕ್ಲೋರೈಟ್ ಸ್ಪ್ರೇ ಬಳಸಿ, ಪ್ರತಿದಿನ ರಾತ್ರಿ 10 ರಿಂದ 06 ರವರೆಗೆ  ರಸ್ತೆಬದಿಗಳು, ಅಂಗಡಿಗಳು, ಆಸ್ಪತ್ರೆಗಳು, ಎಟಿಎಂಗಳು, ಅಂತರರಾಷ್ಟ್ರೀಯ  ಚೆಕ್ ಪೋಸ್ಟ್ ಇತ್ಯಾದಿಗಳಲ್ಲಿ 3000 ಲೀಟರ್ ಸಾಂಕ್ರಾಮಿಕ ನಿವಾರಕವನ್ನು ಉಪಯೋಗಿಸಲಾಗಿದೆ. ಉದ್ದೇಶಕ್ಕಾಗಿ ಕವರ್ ಡ್ರೈನ್ ಕ್ಲೀನಿಂಗ್ಗಾಗಿ ಸಾಮಾನ್ಯವಾಗಿ ಬಳಸುವ ನಮ್ಮ  ಸಕ್ಶನ್  ಜೆಟ್ಟಿಂಗ್ ಯಂತ್ರಗಳನ್ನು ನಗರಸಭೆಯು  ಮಾರ್ಪಡಿಸಿದೆ

ಲಕ್ನೋ

 ಎಲ್ಲಾ ವಾರ್ಡ್ಗಳ ಫಾಗ್ಗಿಂಗ್ ಮತ್ತು ನೈರ್ಮಲ್ಯ ಕಾರ್ಯಗಳು , ನಾಗರಿಕರಿಗೆ ಮಹತ್ವದ ಸಂದೇಶಗಳ ಪ್ರಸಾರಕ್ಕಾಗಿ  ಘನತ್ಯಾಜ್ಯ ವಾಹನಗಳನ್ನು ಬಳಸಲಾಗುತ್ತಿದೆ

ಅಲಿಘಡ್

 ಇಡೀ ನಗರದ ನೈರ್ಮಲ್ಯ / ಫಾಗ್ಗಿಂಗಾಗಿ ಈಗ ಇರುವ ವಾಹನಗಳ ಮಾರ್ಪಾಡು. ಎಲ್ಲಾ ಸಾರ್ವಜನಿಕ ಸ್ಥಳಗಳ ಬೃಹತ್ ಸೋಂಕುನಿವಾರಕ ಕಾರ್ಯ  - ರಸ್ತೆಬದಿ, ಅಂಗಡಿಗಳು, ಆಸ್ಪತ್ರೆಗಳು, ಎಟಿಎಂ ಇತ್ಯಾದಿ.

ಬರೇಲಿ

ದಿನಕ್ಕೆ ಎರಡು ಬಾರಿ ನಗರವನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಮೊರಾದಾಬಾದ್

ಒಳಬರುವ ಪ್ರಯಾಣಿಕರ ಮನೆ ಮತ್ತು ಸ್ಥಳದ ನೈರ್ಮಲ್ಯೀಕರಣ, ಇಡೀ ನಗರದ ಫಾಗಿಂಗ್ ಅನ್ನು ನಿಮಯಮಿತವಾಗಿ ಮಾಡಲಾಗುತ್ತಿದೆ.

ಮೊರಾದಾಬಾದ್

ವಿಶೇಷ್ ಸಫಾಯ್ ಅಭಿಯಾನ್ ಕಾರ್ಯಕ್ರಮವನ್ನು ಇಡೀ ಕಾರ್ಯಕ್ರಮದ ಶುಚಿತ್ವಕ್ಕಾಗಿ ಹಮ್ಮಿಕೊಳ್ಳಲಾಗಿದೆ

ಸಹಾರನ್ ಪುರ್

ಸೋಂಕುನಿವಾರಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಿಂಪಡಿಸಲು ಆರು ಭಾರೀ ವಾಹನಗಳು ಮತ್ತು 100 ಕ್ಕೂ ಹೆಚ್ಚು ಕೈಯಲ್ಲಿ  ನಡೆಸುವ ಯಂತ್ರಗಳನ್ನು ನಿಯೋಜಿಸಲಾಗಿದೆ.

ತಿರುಪ್ಪೂರ್

 ಕೋವಿಡ್-19 ವಿರುದ್ಧ ಹೋರಾಡಲು ತಿರುಪ್ಪೂರ್ ವಿಶಿಷ್ಟವಾದ ಸೋಂಕುನಿವಾರಕ ಸುರಂಗವನ್ನುಹೊಂದಿದೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಯುವ ವಿಭಾಗವಾದ ಯಂಗ್ ಇಂಡಿಯನ್ಸ್ ಸಹಯೋಗದೊಂದಿಗೆ ಸುರಂಗವನ್ನು ಜಿಲ್ಲಾಡಳಿತ ಸ್ಥಾಪಿಸಿತು. ಕೊರೊನಾ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ತಿರುಪ್ಪೂರು ಜಿಲ್ಲಾಡಳಿತದ ಪ್ರಯತ್ನಗಳ ಒಂದು ಭಾಗವೇಸೋಂಕುನಿವಾರಕ ಸುರಂಗ’. ಮಾರುಕಟ್ಟೆಗೆ ಪ್ರವೇಶಿಸಿವು ಜನರಿಗೆ ತಮ್ಮ ಕೈಗಳನ್ನು ತೊಳೆದು ಮತ್ತು ಮೂರು ನಾಲ್ಕು ಸೆಕೆಂಡುಗಳ ಕಾಲಸೋಂಕುನಿವಾರಕ ಸುರಂಗ  ಮೂಲಕ ನಡೆಯಲು ಕೇಳಲಾಗುತ್ತದೆ, ಸಮಯದಲ್ಲಿ ಅವರ  ಮೇಲೆ ರಕ್ಷಣಾತ್ಮಕ ವಸ್ತುವನ್ನು ಸಿಂಪಡಿಸಲಾಗುತ್ತದೆ. ಒಮ್ಮೆ ಅವರುಸೋಂಕುನಿವಾರಕ ಸುರಂಗದಿಂದ ಹೊರಬಂದ ನಂತರ, ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ..

ರಾಜ್ ಕೋಟ್

ಸಾರ್ವಜನಿಕ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳ ಸೋಂಕುನಿವಾರಣೆಗಾಗಿ ರಾಜ್ಕೋಟ್ ಹೈ-ಕ್ಲಿಯರೆನ್ಸ್ ಬೂಮ್ ಸ್ಪ್ರೇಯರ್ಗಳನ್ನು ಬಳಸುತ್ತದೆ. ರಾಜ್ಕೋಟ್ ರಸ್ತೆಗಳು ಮತ್ತು ಬೀದಿಗಳಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ರಾಜ್ಕೋಟ್ ಮುನ್ಸಿಪಲ್ ಕಾರ್ಪೋರೇಶನ್ ನಾಲ್ಕು ಹೈ ಕ್ಲಿಯರೆನ್ಸ್ ಬೂಮ್ ಸ್ಪ್ರೇಯರ್ಗಳನ್ನು (ಕೃಷಿ ಕ್ಷೇತ್ರಗಳಲ್ಲಿ ಬಳಸಲಾಗುವ) ಬಳಸುತ್ತಿದೆ. ನಾವು ಶೀಘ್ರದಲ್ಲೇ ಅಂತಹ 14 ಯಂತ್ರಗಳನ್ನು ಹೊಂದಲಿದ್ದೇವೆ. ಹೀಗೆ ನಗರದ ಎಲ್ಲಾ 18 ವಾರ್ಡ್ಗಳನ್ನು ಒಳಗೊಂಡಿದೆ.

 

***


(Release ID: 1613086) Visitor Counter : 305