ಪ್ರವಾಸೋದ್ಯಮ ಸಚಿವಾಲಯ

‘ಸ್ಟ್ರಾಂಡೆಡ್ ಇನ್ ಇಂಡಿಯಾ’ಪೋರ್ಟಲ್ ಮೂಲಕ ಏಪ್ರಿಲ್ 9 ರವರೆಗೆ 1194 ಪ್ರವಾಸಿಗರಿಗೆ ನೆರವು

Posted On: 10 APR 2020 6:04PM by PIB Bengaluru

ಸ್ಟ್ರಾಂಡೆಡ್ ಇನ್ ಇಂಡಿಯಾಪೋರ್ಟಲ್ ಮೂಲಕ ಏಪ್ರಿಲ್ 9 ರವರೆಗೆ 1194 ಪ್ರವಾಸಿಗರಿಗೆ ನೆರವು

 

ಪ್ರವಾಸೋದ್ಯಮ ಸಚಿವಾಲಯದ ಸ್ಟ್ರಾಂಡೆಡ್ ಇನ್ ಇಂಡಿಯಾ ಪೋರ್ಟಲ್ ಪ್ರವಾಸಿಗರಿಗೆ ನೀಡುತ್ತಿರುವ ನೆರವನ್ನು ಮುಂದುವರೆಸಿದೆ. ಏಪ್ರಿಲ್ 9 ರವರೆಗೆ ನೆರವು ಪಡೆದ ಪ್ರವಾಸಿಗರ ಸಂಖ್ಯೆ 1194. ಹೆಚ್ಚುವರಿಯಾಗಿ ಪ್ರವಾಸೋದ್ಯಮ ಸಚಿವಾಲಯದ ಟೋಲ್ ಫ್ರೀ ಸಹಾಯವಾಣಿ 1363, ಮಾರ್ಚ್ 22 ರಿಂದ ಏಪ್ರಿಲ್ 9 ರವರೆಗೆ 779 ಕರೆಗಳನ್ನು ಸ್ವೀಕರಿಸಿದೆ.

ಇದರೊಂದಿಗೆ, ಸಚಿವಾಲಯದ ಅಧಿಕಾರಿಗಳು ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮದೊಂದಿಗೆ ದಿನವಿಡೀ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ಗಳಿಂದಾಗಿ ಮತ್ತು ಯಾವುದೇ ಪ್ರಯಾಣ ಸಾಧ್ಯವಾಗದ ಕಾರಣ, ಉದ್ಯಮವು ತೀವ್ರವಾಗಿ ಹೊಡೆತಕ್ಕೆ ಒಳಗಾಗಿದೆ ಎಂಬುದು ಸತ್ಯ. ಆದ್ದರಿಂದ ಇದು ಮುಂದಿನ ಹಾದಿಯ ಬಗ್ಗೆ ಮೌಲ್ಯಮಾಪನ, ಆತ್ಮಾವಲೋಕನ ಮತ್ತು ಯೋಚಿಸುವ ಸಮಯ. ಅಡ್ವೆಂಚರ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ ವೆಬ್ನಾರ್ನಲ್ಲಿ ಪ್ರವಾಸೋದ್ಯಮ ಸಚಿವಾಲಯದ ಮಹಾನಿರ್ದೇಶಕಿ ಶ್ರೀಮತಿ ಮೀನಾಕ್ಷಿ ಶರ್ಮಾ ಅವರು ಸಾಂಕ್ರಾಮಿಕ ರೋಗ ನಿಗ್ರಹದ ಆದ್ಯತೆಯ ಅಗತ್ಯತೆಯ ಬಗ್ಗೆ ಮಾತನಾಡಿದರು. ನಾಗರಿಕರ ಅಗತ್ಯತೆಗಳ ಬಗ್ಗೆ ಸರ್ಕಾರ ಸೂಕ್ಷ್ಮವಾಗಿದೆ ಮತ್ತು ಸಂಕಷ್ಟ ಸಮಯದಲ್ಲಿ ಅವರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಶಿಬಿರಗಳನ್ನು ಹೇಗೆ ಸ್ವಚ್ಛಗೊಳಿಸುವುದು, ಚಾರಣ ವಸತಿಗೃಹಗಳನ್ನು ಹೇಗೆ ನಡೆಸುವುದು ಮತ್ತು ಅಂತಹ ಸಂಬಂಧಿತ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ನೀಡುವಂತೆ ಸಂಘವು ಸಚಿವಾಲಯಕ್ಕೆ ವಿನಂತಿಸಿತು. ಮಾರ್ಗಸೂಚಿಗಳ ಅಗತ್ಯವನ್ನು ಶ್ರೀಮತಿ ಶರ್ಮಾ ಒಪ್ಪಿದರು. ನಾವು ಕ್ರಮೇಣ ಕೋವಿಡ್-19 ಪ್ರಭಾವದಿಂದ ಹೊರಬರುವಾಗ ವಲಯಕ್ಕೆ ದೇಶೀಯ ಪ್ರವಾಸೋದ್ಯಮದ ಸಾಮರ್ಥ್ಯ ಮತ್ತು ಸಂಭಾವ್ಯ ಪ್ರಯಾಣಿಕರ ಪ್ರಮಾಣವನ್ನು ಗ್ರಹಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮವು ಹೊಂದಿರುವ ಪ್ರಭಾವ ಕುರಿತು ಅವರು ಒತ್ತಿಹೇಳಿದರು.

ಇದೇ ರೀತಿಯ ವೆಬ್ನಾರ್ಗಳನ್ನು ಎಫ್ಐಸಿಸಿಐ ಮತ್ತು ಇತರ ಪ್ರವಾಸೋದ್ಯಮ ಸಂಬಂಧಿತ ಸಂಸ್ಥೆಗಳು ಆಯೋಜಿಸುತ್ತಿವೆ. ಪ್ರತಿ ವೇದಿಕೆಯಲ್ಲಿ ಇನ್ಕ್ರೆಡಿಬಲ್ ಇಂಡಿಯಾದ ಪ್ರಚಾರಕ್ಕಾಗಿ ಮಾರ್ಗಸೂಚಿಯ ವಿಚಾರಗಳನ್ನು ಸಕ್ರಿಯವಾಗಿ ಚರ್ಚಿಸಲಾಗುತ್ತಿದೆ. ವೆಬ್ನಾರ್ಗಳ ಜನಪ್ರಿಯತೆಯು ಉದ್ಯಮ ಮತ್ತು ನಾಗರಿಕರು ಪರಿಸ್ಥಿತಿಯಿಂದ ಹೊರಬರಲು ಬಹಳ ಸಕಾರಾತ್ಮಕವಾಗಿ ಮತ್ತು ಒಟ್ಟಾಗಿ ಕೆಲಸ ಮಾಡಲು ಉತ್ಸುಕರಾಗಿರುವುದನ್ನು ತೋರಿಸುತ್ತಿದೆ.

***


(Release ID: 1613056) Visitor Counter : 173