ನಾಗರೀಕ ವಿಮಾನಯಾನ ಸಚಿವಾಲಯ
ಲೈಫ್ಲೈನ್ ಉಡಾನ್ ವಿಮಾನಯಾನಗಳು 1 ಲಕ್ಷ ಕಿ.ಮೀ.ಗಿಂತಲೂ ಅಧಿಕ ವೈಮಾನಿಕ ದೂರ ಕ್ರಮಿಸಿವೆ
Posted On:
03 APR 2020 8:45PM by PIB Bengaluru
ಲೈಫ್ಲೈನ್ ಉಡಾನ್ ವಿಮಾನಯಾನಗಳು 1 ಲಕ್ಷ ಕಿ.ಮೀ.ಗಿಂತಲೂ ಅಧಿಕ ವೈಮಾನಿಕ ದೂರ ಕ್ರಮಿಸಿವೆ
ಲೈಫ್ ಲೈನ್ ಉಡಾನ್ ಅಡಿಯಲ್ಲಿ 97 ವಿಮಾನಯಾನಗಳನ್ನು ಏರ್ ಇಂಡಿಯಾ, ಅಲೈಯನ್ಸ್ ಏರ್, ಭಾರತೀಯ ವಾಯು ಸೇನೆ (ಐಎಎಫ್), ಪವನ್ ಹನ್ಸ್ ಮತ್ತು ಖಾಸಗಿ ವಾಹಕಗಳು ನಿರ್ವಹಿಸುತ್ತಿವೆ. ಇವುಗಳಲ್ಲಿ 71 ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಸಾಗಿಸಿರುವ ಸರಕು ಸುಮಾರು 119 ಟನ್. ಇಲ್ಲಿಯವರೆಗೆ ಲೈಫ್ಲೈನ್ ಉಡಾನ್ ವಿಮಾನಯಾನಗಳು ಕ್ರಮಿಸಿರುವ ವೈಮಾನಿಕ ದೂರವು 1 ಲಕ್ಷ ಕಿ.ಮೀ.
ಸರಕುಗಳು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಕೋರಲಾದ ಕೋವಿಡ್-19 ಸಂಬಂಧಿತ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ಗಳು, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಮುಖಗವಸುಗಳು, ಕೈಗವಸುಗಳು, ಎಚ್ ಎಲ್ ಎಲ್ ಮತ್ತು ಐಸಿಎಂಆರ್ ನ ಇತರ ವಸ್ತುಗಳು ಹಾಗು ಮತ್ತು ಅಂಚೆ ಪ್ಯಾಕೆಟ್ಗಳನ್ನು ಹೊಂದಿದ್ದವು.
ಲೈಫ್ಲೈನ್ ಉಡಾನ್ ವಿಮಾನಯಾನಗಳ ದಿನಾಂಕವಾರು ಮಾಹಿತಿಯು ಹೀಗಿದೆ:
ಕ್ರಮ
ಸಂಖ್ಯೆ.
|
ದಿನಾಂಕ
|
ಏರ್ ಇಂಡಿಯಾ
|
ಆಲೈಯನ್ಸ
|
ಐಎಎಫ್
|
ಇಂಡಿಗೋ
|
ಸ್ಪೈಸ್ ಜೆಟ್
|
ಒಟ್ಟು ವಿಮಾನಯಾನ
|
1
|
26.3.2020
|
02
|
-
|
-
|
-
|
02
|
04
|
2
|
27.3.2020
|
04
|
09
|
01
|
-
|
--
|
14
|
3
|
28.3.2020
|
04
|
08
|
-
|
06
|
--
|
18
|
4
|
29.3.2020
|
04
|
10
|
06
|
--
|
--
|
20
|
5
|
30.3.2020
|
04
|
-
|
03
|
--
|
--
|
07
|
6
|
31.3.2020
|
09
|
02
|
01
|
|
--
|
12
|
7
|
01.4.2020
|
03
|
03
|
04
|
--
|
-
|
10
|
8
|
02.4.2020
|
04
|
05
|
03
|
|
|
12
|
|
ಒಟ್ಟು
|
34
|
37
|
18
|
06
|
02
|
97
|
ಲೈಫ್ ಲೈನ್ ಉಡಾನ್ ವಿಮಾನಯಾನಗಳು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಸರಕು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಲೈಫ್ಲೈನ್ ಉಡಾನ್ ವಿಮಾನಯಾನಗಳು ಈ ಹಬ್ಗಳನ್ನು ಗುವಾಹಟಿ, ದಿಬ್ರುಗರ್, ಅಗರ್ತಲಾ, ಐಜ್ವಾಲ್, ದಿಮಾಪುರ, ಇಂಫಾಲ್, ಕೊಯಂಬತ್ತೂರು, ತಿರುವನಂತಪುರ, ಭುವನೇಶ್ವರ, ರಾಯ್ಪುರ, ರಾಂಚಿ, ಪೋರ್ಟ್ ಬ್ಲೇರ್ ಮತ್ತು ಗೋವಾ ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಈಶಾನ್ಯ ಪ್ರದೇಶ (ಎನ್ಇಆರ್), ದ್ವೀಪ ಪ್ರದೇಶಗಳು ಮತ್ತು ಬೆಟ್ಟಗಳ ಮೇಲಿರುವ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಲಡಾಖ್, ದಿಮಾಪುರ, ಇಂಫಾಲ್, ಗುವಾಹಟಿ ಮತ್ತು ಪೋರ್ಟ್ ಬ್ಲೇರ್ಗಳಿಗೆ ಕೊನೆಯ ಹಂತದವರೆಗಿನ ವಿತರಣೆಗಾಗಿ ನಾಗರಿಕ ವಾಯುಯಾನ ಇಲಾಖೆ, ಏರ್ ಇಂಡಿಯಾ ಮತ್ತು ಐಎಎಫ್ ನಿಕಟವಾಗಿ ಸಹಕರಿಸಿದೆ.
ಸರಕುಗಳ ಬಹುಪಾಲು ಮುಖಗವಸುಗಳು, ಕೈಗವಸುಗಳು ಮತ್ತು ಇತರ ಉಪಭೋಗ್ಯ ವಸ್ತುಗಳನ್ನು ಒಳಗೊಂಡಿರುವ ಕಡಿಮೆ-ತೂಕದ ಮತ್ತು ಬೃಹತ್ ಪ್ಯಾಕೇಜ್ಗಳನ್ನು ಒಳಗೊಂಡಿವೆ; ಪ್ರತಿ ಟನ್ ವಸ್ತುಗಳಿಗೆ ಹೆಚ್ಚಿನ ಸರಕು ಸ್ಥಳಾವಕಾಶ ಬೇಕಾಗುತ್ತದೆ. ಸರಿಯಾದ ಕಾಳಜಿ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಪ್ರಯಾಣಿಕರ ಆಸನದ ಸ್ಥಳ ಮತ್ತು ಓವರ್ಹೆಡ್ ಕ್ಯಾಬಿನ್ಗಳಲ್ಲಿ ಸರಕುಗಳನ್ನು ಸಂಗ್ರಹಿಸಲು ವಿಶೇಷ ಅನುಮತಿ ಪಡೆದುಕೊಳ್ಳಲಾಗಿದೆ.
ಸ್ಪೈಸ್ ಜೆಟ್ 24 ಮಾರ್ಚ್ 31, 2020 ರ ಅವಧಿಯಲ್ಲಿ 103 ಸರಕು ವಿಮಾನಯಾನಗಳಲ್ಲಿ 142,000 ಕಿ.ಮೀ.ಗಿಂತಲೂ ಹೆಚ್ಚು ದೂರದಷ್ಟು ಮತ್ತು 800 ಟನ್ ಗಳಷ್ಟು ಸರಕುಗಳನ್ನು ಸಾಗಿಸಿತು. ಈ 103 ವಿಮಾನಯಾನಗಳಲ್ಲಿ 32 ಅಂತರರಾಷ್ಟ್ರೀಯ ತಾಣಗಳಾಗಿವೆ. 30 ರಿಂದ 20 ಮಾರ್ಚ್ 31 ರವರೆಗೆ ಬ್ಲೂ ಡಾರ್ಟ್ 32 ದೇಶೀಯ ಸರಕು ವಿಮಾನಯಾನಗಳನ್ನು 30,800 ಕಿ.ಮೀ ದೂರದಲ್ಲಿ ಮತ್ತು 464 ಟನ್ ಸರಕುಗಳನ್ನು ಸಾಗಿಸಿತು. ದೇಶೀಯ ಸರಕು ನಿರ್ವಾಹಕರಾದ ಸ್ಪೈಸ್ ಜೆಟ್ ಮತ್ತು ಬ್ಲೂ ಡಾರ್ಟ್ ಸರಕು ವಿಮಾನಯಾನಗಳನ್ನು ವಾಣಿಜ್ಯದ ಆಧಾರದ ಮೇಲೆ ನಿರ್ವಹಿಸುತ್ತಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಮಹತ್ವದ ವೈದ್ಯಕೀಯ ಸರಬರಾಜುಗಾಗಿ ಭಾರತ ಮತ್ತು ಚೀನಾ ನಡುವೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲು ನಾಗರಿಕ ವಿಮಾನಯಾನ ಇಲಾಖೆ ಮತ್ತು ಏರ್ ಇಂಡಿಯಾ ಸಂಸ್ಥೆಯು ಚೀನಾದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿವೆ. ವೈದ್ಯಕೀಯ ವಾಯು-ಸರಕುಗಳನ್ನು ಭಾರತದ ದೂರದ ಮೂಲೆಗಳಿಗೆ ಅತ್ಯಂತ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದಲ್ಲಿ ಸಾಗಿಸುವ ಮೂಲಕ ನಾಗರಿಕ ವಿಮಾನಯಾನ ಇಲಾಖೆ ಮತ್ತು ವಾಯುಯಾನ ಉದ್ಯಮವು ಕೋವಿಡ್-19ರ ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಧೃಡಸಂಕಲ್ಪ ಮಾಡಿವೆ.
***
(Release ID: 1611139)
Visitor Counter : 127