ರಕ್ಷಣಾ ಸಚಿವಾಲಯ

ಕೊರೊನಾ ವೈರಸ್ (COVID-19) ವಿರುದ್ಧದ ಹೋರಾಟಕ್ಕೆ ಬೆಂಬಲ ಮುಂದುವರಿಸಿದ ಭಾರತೀಯ ವಾಯುಪಡೆ

Posted On: 03 APR 2020 8:20PM by PIB Bengaluru

ಕೊರೊನಾ ವೈರಸ್ (COVID-19) ವಿರುದ್ಧದ ಹೋರಾಟಕ್ಕೆ ಬೆಂಬಲ ಮುಂದುವರಿಸಿದ ಭಾರತೀಯ ವಾಯುಪಡೆ

 

ನೊವೆಲ್ ಕೊರೊನಾವೈರಸ್ ನಿಗ್ರಹಿಸಲು ಭಾರತೀಯ ವಾಯುಪಡೆಯು ತನ್ನ ಬೆಂಬಲವನ್ನು ಮುಂದುವರಿಸಿದೆ. ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಪೂರಕ ಏಜೆನ್ಸಿಗಳನ್ನು ಸಜ್ಜುಗೊಳಿಸಲು ವೈದ್ಯಕೀಯ ಸರಬರಾಜುಗಳನ್ನು ಸಾಗಿಸಲಾಗುತ್ತಿದೆ.

ಭಾರತೀಯ ವಾಯುಪಡೆಯು ಕಳೆದ ಎರಡು ದಿನಗಳಲ್ಲಿ, ಅಗತ್ಯ ವೈದ್ಯಕೀಯ ಸರಬರಾಜು ಮತ್ತು ಸರಕುಗಳನ್ನು ನೋಡಲ್ ಪಾಯಿಂಟ್ಗಳಿಂದ ಈಶಾನ್ಯ ಪ್ರದೇಶದ ಗುವಾಹಟಿ, ದಿಬ್ರುಗಢ, ಮೋಹನ್ಬಾರಿ ಮತ್ತು ಮಧ್ಯ ಭಾರತದ ಪ್ರಯಾಗರಾಜ್, ಗೋರಖ್ಪುರ, ಬರೇಲಿ ಮತ್ತು ಆಗ್ರಾ ಹಾಗೂ ಕೇಂದ್ರಾಡಳಿತ  ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ಗಳಿಗೆ ಸಾಗಿಸಿದೆ.

ಇದಲ್ಲದೆ, ಐಎಎಫ್ 'ಆಪರೇಷನ್ ಸಂಜೀವನಿ' ಯಡಿಯಲ್ಲಿ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಮಾಲ್ಡೀವ್ಸ್‌ನ ಮಾಲೆಗೆ 02 ಏಪ್ರಿಲ್ 2020 ರಂದು ಸಾಗಿಸಿತು. ಭಾರತ ಮಾಲ್ಡೀವ್ಸ್ ಗೆ ಪ್ರಮುಖ ವೈದ್ಯಕೀಯ ಸರಬರಾಜು ಮೂಲವಾಗಿದೆ. ಆದರೆ COVID-19 ಲಾಕ್‌ಡೌನ್ ನಂತರ ಭಾರತದೊಂದಿಗಿನ ಸಂಪರ್ಕ ಕಡಿತದಿಂದಾಗಿ ಅಗತ್ಯ ವೈದ್ಯಕೀಯ ಸರಬರಾಜುಗಳ ಕೊರತೆಯನ್ನು ಎದುರಿಸಿದೆ. MEA, HQ IDS, MoH & FW ಮತ್ತು ಇತರ ಹಲವಾರು ಸರ್ಕಾರಿ ಸಂಸ್ಥೆಗಳ ಸಕ್ರಿಯ ಬೆಂಬಲ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ.

ದೇಶಾದ್ಯಂತ ಐಎಎಫ್ ವಾಯುನೆಲೆಗಳಲ್ಲಿ ಸೃಷ್ಟಿಸಲಾಗಿರುವ ಕ್ವಾರಂಟೈನ್ ಸೌಲಭ್ಯಗಳ ಸನ್ನದ್ಧವಾಗಿವೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಷ್ಟ್ರವನ್ನು ಬೆಂಬಲಿಸುವ ಎಲ್ಲಾ ಅಗತ್ಯಗಳನ್ನು ಪೂರೈಸಲು ಐಎಎಫ್ ಸದಾ ಸಿದ್ಧವಾಗಿದೆ ಮತ್ತು ಸಜ್ಜಾಗಿದೆ.


(Release ID: 1610994) Visitor Counter : 204