ನೌಕಾ ಸಚಿವಾಲಯ
ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಶ್ರೀ ಮನ್ಸುಖ್ ಮಾಂಡವಿಯಾ ಬಂದರುಗಳ ಪಾಲುದಾರರರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದರು
Posted On:
03 APR 2020 7:34PM by PIB Bengaluru
ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಶ್ರೀ ಮನ್ಸುಖ್ ಮಾಂಡವಿಯಾ ಬಂದರುಗಳ ಪಾಲುದಾರರರೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದರು
ಕೋವಿಡ್-19ರ ಹಾವಳಿಯಿಂದ ದೇಶದಲ್ಲಿ ಲಾಕ್ ಡೌನ್ ಇರುವ ಕಾರಣದಿಂದ ಬಂದರುಗಳ ಚಟುವಟಿಕೆಗಳ ಮೇಲೆ ಉಂಟಾಗುವ ಸವಾಲುಗಳು ಮತ್ತು ಕಳವಳಗಳನ್ನು ಪರಿಶೀಲಿಸಲು ಕೊರಿಯರ್ ಮತ್ತು ಸರಕು ಸೇವೆಗಳು, ದೇಶದ ವಿವಿಧ ಭಾಗಗಳ ಕಸ್ಟಮ್ ದಲ್ಲಾಳಿಗಳ ಸಂಘಗಳ ಪ್ರತಿನಿಧಿಗಳು, ಲಾಜಿಸ್ಟಿಕ್ ಸೇವಾ ಪೂರೈಕೆದಾರರು ಮತ್ತು ಇತರ ಬಂದರುಗಳ ಪಾಲುದಾರರೊಂದಿಗೆ ಬಂದರು ಸಚಿವ (ಸ್ವ ನಿ) ಶ್ರೀ ಮನ್ಸುಖ್ ಮಾಂಡವಿಯಾ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು ಸಭೆಯಲ್ಲಿ ಬಂದರು ಸಚಿವಾಲಯದ ಅಧಿಕಾರಿಗಳು ಮತ್ತು ಎಲ್ಲಾ ಪ್ರಮುಖ ಬಂದರುಗಳ ಅಧ್ಯಕ್ಷರು ಭಾಗವಹಿಸಿದ್ದರು.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀ ಮನ್ಸುಖ್ ಮಾಂಡವಿಯಾ ಸಂಬಂಧಪಟ್ಟ ಎಲ್ಲರ ಬೆಂಬಲ ಕೋರಿದರು. ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಬಂದರುಗಳು ಮತ್ತು ಬಂದರು ಕಾರ್ಯಾಚರಣೆಯ ಅವಕಾಶವಾಗಿ ಪರಿವರ್ತಿಸಲು ಸಹಕಾರಿ ಪ್ರಯತ್ನಗಳಿಗೆ ಅವರು ಕರೆ ನೀಡಿದರು, ಇದರಿಂದಾಗಿ ದೇಶದ ಪೂರೈಕೆ ಸರಪಳಿ ಸರಾಗವಾಗಿ ನಡೆಯುತ್ತದೆ. ಬಂದರುಗಳಲ್ಲಿ ದಟ್ಟಣೆ ನಿವಾರಣೆ, ನಿರ್ವಹಣೆ, ಕಾರ್ಮಿಕರ ಕಲ್ಯಾಣ ಮತ್ತು ಸುರಕ್ಷತೆ ಮತ್ತು ಸಂಬಂಧಪಟ್ಟವರು ಎದುರಿಸುತ್ತಿರುವ ಇತರ ಸವಾಲುಗಳ ಬಗ್ಗೆ ಸಲಹೆಗಳನ್ನು ಶ್ರೀ ಮಾಂಡವಿಯಾ ಸ್ವಾಗತಿಸಿದರು. ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಭವಿಷ್ಯದ ಸವಾಲುಗಳನ್ನು ನಿರ್ವಹಿಸಲು ಬಂದರು ಕಾರ್ಯಾಚರಣೆ ಮತ್ತು ಕಂಟೇನರ್ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯನ್ನು ಶ್ರೀ ಮಾಂಡವಿಯಾ ಒತ್ತಿ ಹೇಳಿದರು.
ಹೆಚ್ಚಿದ ಬಂದರು ಕಾರ್ಯಾಚರಣೆಯ ವೆಚ್ಚ, ವಿಲೇವಾರಿಯಾಗದೇ ಉಳಿದ ಸರಕುಗಳು, ಬಂದರು ದಟ್ಟಣೆ, ಕಾರ್ಮಿಕರ ಕೊರತೆ, ಕಾರ್ಮಿಕರು ಮತ್ತು ಟ್ರಕ್ ಚಾಲಕರ ಓಡಾಟ, ಸರಬರಾಜು ಸರಪಳಿ ಮತ್ತು ಲಾಕ್‌ಡೌನ್‌ನಿಂದ ಉಂಟಾಗುವ ಇತರ ತೊಂದರೆಗಳ ಬಗ್ಗೆ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದರು.
(Release ID: 1610982)